ರಾಜ್ಯ

ಲಿಫ್ಟ್‌, ಜನರೇಟರ್‌ ರಿನೀವಲ್‌ ಶುಲ್ಕ ಹೆಚ್ಚಳಕ್ಕೆ ಚಿಂತನೆ

ಜನರಿಗೆ ಇನ್ನೊಂದು ಬೆಲೆ ಏರಿಕೆಯ ಬರೆ ಬೆಂಗಳೂರು: ಹಾಲು ಮತ್ತು ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಜನರಿಗೆ ಇನ್ನೊಂದು ಬೆಲೆ ಏರಿಕೆಯ ಬರೆ ಹಾಕಲು ಸರಕಾರ ಚಿಂತಿಸುತ್ತಿದೆ. ಇಂಧನ ಇಲಾಖೆಯ ಅಡಿಯಲ್ಲಿ ಬರುವ ಡಿಪಾರ್ಟ್‌ಮೆಂಟ್‌ ಆಫ್‌ ಇಲೆಕ್ಟ್ರಿಕಕಲ್‌ ಇನ್‌ಸ್ಪೆಕ್ಟರೇಟ್‌ ಈಗ ವಾರ್ಷಿಕ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡುತ್ತಿದೆ. ಈ ಹಿಂದೆ ಮೂರು ಮಹಡಿಯ ಮನೆಗೆ ಲಿಫ್ಟ್ ಹಾಕಿಸಿಕೊಂಡಿದ್ದರೆ ಆ ಮನೆಯನ್ನು ಪರಿಶೀಲನೆ ಮಾಡಿ ರಿನೀವಲ್ ಮಾಡಲು 800ರಿಂದ 1000 ರೂ. ಶುಲ್ಕ ತೆಗೆದುಕೊಳುತ್ತಿದ್ದ […]

ಲಿಫ್ಟ್‌, ಜನರೇಟರ್‌ ರಿನೀವಲ್‌ ಶುಲ್ಕ ಹೆಚ್ಚಳಕ್ಕೆ ಚಿಂತನೆ Read More »

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು

ಹೈದಾರಾಬಾದ್: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯಲ್ಲಾರೆಡ್ಡಿ ತಾಲೂಕಿನ ವೆಂಕಟಾಪುರ ಬಳಿ ಯುಗಾದಿ ದಿನವಾದ ಇಂದು ನಡೆದಿದೆ. ತಾಯಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಮೀಪದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು Read More »

ಪುತ್ತೂರು: ಬೆಲೆ ಏರಿಕೆಯ ಬಿಸಿಯ ನಡುವೆ ಬೀಡಿ ಕಾರ್ಮಿಕರ ವೇತನ ಇಳಿಕೆ ಮಾಡಿ ಆದೇಶ ಮಾಡಿದ ರಾಜ್ಯ ಸರಕಾರದ ನಡೆ ಖಂಡನೀಯ — ಸಿಐಟಿಯು

ಪುತ್ತೂರು: ಬೀಡಿಕಾರ್ಮಿಕರ ಕನಿಷ್ಟ ವೇತನವನ್ನು ಹಿಮ್ಮುಖವಾಗಿ 315 ರಿಂದ 270  ಕ್ಕೆ ಇಳಿಸಿ ಹೊಸ ಆದೇಶ ಮಾಡಿದ ರಾಜ್ಯ ಸರಕಾರದ ನಡೆಯನ್ನು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ (ಸಿಐಟಿಯು) ಅಧ್ಯಕ್ಷ, ನ್ಯಾಯವಾದಿ ಪಿ.ಕೆ.ಸತೀಶನ್ ಮತ್ತು ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್‌ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿರುವ ಸುಮಾರು 7 ಲಕ್ಷ ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ಅನ್ಯಾಯ ಮಾಡುತ್ತಿದೆ. ಈ ಹಿಂದೆ ಬೀಡಿ ಉದ್ಯಮದಲ್ಲಿನ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ಕನಿಷ್ಟ ವೇತನ

ಪುತ್ತೂರು: ಬೆಲೆ ಏರಿಕೆಯ ಬಿಸಿಯ ನಡುವೆ ಬೀಡಿ ಕಾರ್ಮಿಕರ ವೇತನ ಇಳಿಕೆ ಮಾಡಿ ಆದೇಶ ಮಾಡಿದ ರಾಜ್ಯ ಸರಕಾರದ ನಡೆ ಖಂಡನೀಯ — ಸಿಐಟಿಯು Read More »

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ

ಸಾಯಿಸಲು ರೌಡಿಶೀಟರ್‌ಗೆ 70 ಲ.ರೂ. ಸುಪಾರಿ ನೀಡಿದ್ದಾರೆ ಎಂದು ಆರೋಪ ತುಮಕೂರು: ಸದನದಲ್ಲಿ ಹನಿಟ್ರ್ಯಾಪ್‌ ಬಾಂಬ್‌ ಸಿಡಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಅವರು ತನ್ನ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ತುಮಕೂರಿನಲ್ಲಿ ದೂರು ದಾಖಲಿಸಿದ್ದಾರೆ. ರಾಜೇಂದ್ರ ನೀಡಿದ ದೂರಿನ ಪ್ರಕಾರ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಇತರ ಆರೋಪಿಗಳು.

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ Read More »

ಸೈಬರ್‌ ವಂಚಕರ ಕಿರುಕುಳದಿಂದ ವೃದ್ಧ ದಂಪತಿ ಆತ್ಮಹತ್ಯೆ

ಹಣ ಕೊಟ್ಟರೂ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ ವಂಚಕರು ಬೆಂಗಳೂರು: ಸೈಬರ್‌ ವಂಚಕರ ಕಾಟ ತಾಳಲಾರದೆ ವೃದ್ಧ ದಂಪತಿ ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಆತ್ಮಹತ್ಯೆಗೆ ಶರಣಾದ ದಂಪತಿ. ಆತ್ಮಹತ್ಯೆಗೆ ಮುನ್ನ ದಂಪತಿ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಸೈಬರ್‌ ವಂಚನೆಯ ಮಾಹಿತಿ ನೀಡಿದ್ದಾರೆ.ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ

ಸೈಬರ್‌ ವಂಚಕರ ಕಿರುಕುಳದಿಂದ ವೃದ್ಧ ದಂಪತಿ ಆತ್ಮಹತ್ಯೆ Read More »

ಮಂಗಳೂರು : ವಧಿಸಲು ಸಾಗಿಸುತ್ತಿದ್ದ 25 ಗೋವುಗಳ ರಕ್ಷಣೆ

ಬಜಪೆ ಸಮೀಪ ಬಜರಂಗ ದಳ ಕಾರ್ಯಕರ್ತರ ಸಾಹಸಮಯ ಕಾರ್ಯಾಚರಣೆ ಮಂಗಳೂರು : ವಧಿಸುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 25 ಜಾನುವಾರುಗಳನ್ನು ಬಜರಂಗ ದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ನಗರದ ಹೊರವಲಯದ ಬಜಪೆ ಸೂರಲ್ಪಾಡಿಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಮೂಡುಬಿದಿರೆಯತ್ತ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಪಿಕಪ್‌ ಗೂಡ್ಸ್ ವಾಹನದಲ್ಲಿ ಕಾಲುಗಳನ್ನು ಕಟ್ಟಿ ಅಮಾನುಷವಾಗಿ 25 ಗೋವುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಗೋವುಗಳ

ಮಂಗಳೂರು : ವಧಿಸಲು ಸಾಗಿಸುತ್ತಿದ್ದ 25 ಗೋವುಗಳ ರಕ್ಷಣೆ Read More »

ಪತ್ನಿಯನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಪಲಾಯನ ಮಾಡಿದ್ದ ಪತಿ ಪುಣೆಯಲ್ಲಿ ಸೆರೆ

ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಬರ್ಬರ ಹತ್ಯೆ ಬೆಂಗಳೂರು: ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿಸಿ ಪಲಾಯನ ಮಾಡಿದ್ದ ಪತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ. ಹುಳಿಮಾವು ಬಳಿಯ ನಿವಾಸವೊಂದರಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿತ್ತು, 32 ವರ್ಷದ ಗೌರಿ ಅನಿಲ್ ಸಂಬೇಕರ್ ಅವರನ್ನು ಆಕೆಯ ಪತಿ ಮಹಾರಾಷ್ಟ್ರ ಮೂಲದ ರಾಕೇಶ್ ಕೊಲೆ ಮಾಡಿ ಹೆಣವನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಬಳಿಕ ಹೆಂಡತಿಯ ತಾಯಿಗೆ ಫೋನ್‌ ಮಾಡಿ ತಿಳಿಸಿ ಪಲಾಯನ ಮಾಡಿದ್ದ. ಈ ಮಾದರಿಯ

ಪತ್ನಿಯನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಪಲಾಯನ ಮಾಡಿದ್ದ ಪತಿ ಪುಣೆಯಲ್ಲಿ ಸೆರೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಇನ್ನೋರ್ವ ಆರೋಪಿ ಸೆರೆ

ರಾಜ್ಯದ ಇತರೆಡೆಗಳಿಗೂ ಹರಡಿದೆ ಚಿನ್ನ ಕಳ್ಳ ಸಾಗಾಟ ಜಾಲ ಬೆಂಗಳೂರು: ಕನ್ನಡದ ನಟಿ ರನ್ಯಾ ರಾವ್‌ ಮುಖ್ಯ ಆರೋಪಿಯಾಗಿರುವ ಗೋಲ್ಡ್‌ ಸ್ಮಗ್ಲಿಂಗ್‌ ಕೇಸಿಗೆ ಸಂಬಂಧಪಟ್ಟು ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಬಳ್ಳಾರಿ ಮೂಲದ ಸಾಹಿಲ್ ಜೈನ್ ಸೆರೆಯಾಗಿರುವ ಆರೋಪಿ. ರನ್ಯಾ ರಾವ್ ಜೊತೆಗೆ ವಾಟ್ಸಾಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಮೇಲೆ ತನಿಖಾಧಿಕಾರಿಗಳು ಕಣ್ಣಿಟ್ಟಿದ್ದರು. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಮಳಿಗೆ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಇನ್ನೋರ್ವ ಆರೋಪಿ ಸೆರೆ Read More »

ಯತ್ನಾಳ ಉಚ್ಚಾಟನೆಯಿಂದ ಆಗುವ ಪರಿಣಾಮ ಏನು?

ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ ಪರ-ವಿರೋಧ ಚರ್ಚೆ ಬೆಂಗಳೂರು : ಫಯರ್‌ಬ್ರಾಂಡ್‌ ನಾಯಕ ಎಂದು ಗುರುತಿಸಿಕೊಂಡಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ಬಿಜೆಪಿ ಹೈಕಮಾಂಡ್‌ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಹೊರಿಸಿ ಆರು ವರ್ಷದ ಮಟ್ಟಿಗೆ ಉಚ್ಚಾಟಿಸಿದ ಸಾಧಕ ಬಾಧಕಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ.ಉರಿ ನಾಲಗೆಯ ಯತ್ನಾಳ ಹಿಂದುತ್ವದ ಕಟ್ಟಾ ಪ್ರತಿಪಾದಕರಾಗಿದ್ದರು. ಎದುರಾಳಿಗಳನ್ನು ಮುಲಾಜಿಲ್ಲದೆ ಕಟುಶಬ್ದಗಳಲ್ಲಿ ಟೀಕಿಸುತ್ತಿದ್ದರು. ಇಂಥ ಟೀಕೆಗಳಿಂದ ಅವರು ಲೆಕ್ಕವಿಲ್ಲದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ ಇದಕ್ಕೆಲ್ಲ ಎದೆಗುಂದುವ ವ್ಯಕ್ತಿತ್ವ ಅವರದ್ದಲ್ಲ. ಅವರ

ಯತ್ನಾಳ ಉಚ್ಚಾಟನೆಯಿಂದ ಆಗುವ ಪರಿಣಾಮ ಏನು? Read More »

ಸಾವಿರ ಕುತೂಹಲ ಹುಟ್ಟುಹಾಕಿದ ಸಾಹುಕಾರ್‌ ನಡೆ

ಕುಮಾರಸ್ವಾಮಿ, ದೇವೇಗೌಡ ಭೇಟಿಯ ಹಿಂದಿನ ಮರ್ಮವೇನು? ಬೆಂಗಳೂರು: ಹನಿಟ್ರ್ಯಾಪ್‌ ಪ್ರಕರಣ ಬಯಲಾದ ಬಳಿಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ. ಅದರಲ್ಲೂ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಹುಕಾರ್‌ ಎಂದೇ ಅರಿಯಲ್ಪಡುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದಿಲ್ಲಿಗೆ ಹೋದ ಬಳಿಕ ನಡೆದಿರುವ ವಿದ್ಯಮಾನಗಳು ಸಾವಿರ ಕುತೂಹಲ ಹುಟ್ಟಿಸಿವೆ. ಹನಿಟ್ರ್ಯಾಪ್‌ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್‌ ಬಹಳ ಹಗುರವಾಗಿ ಪರಿಗಣಿಸಿರುವುದರಿಂದ ಕೆರಳಿರುವ ಸತೀಶ್‌ ಜಾರಕಿಹೊಳಿ ಹೈಕಮಾಂಡ್​ಗೆ ದೂರು ನೀಡುತ್ತೇನೆ ಎಂದು ದೆಹಲಿಗೆ

ಸಾವಿರ ಕುತೂಹಲ ಹುಟ್ಟುಹಾಕಿದ ಸಾಹುಕಾರ್‌ ನಡೆ Read More »

error: Content is protected !!
Scroll to Top