ಪುತ್ತೂರು

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸ್ವಚ್ಚ ಪುತ್ತೂರು ಕಾರ್ಯಕ್ರಮದ  ಅಂಗವಾಗಿ ಕಾರ್ಮಿಕ ದಿನಾಚರಣೆ ಮೇ 1 ರಂದು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಸಭಾಂಗಣದಲ್ಲಿ ಜರಗಲಿರುವುದು. ಕಾರ್ಯಕ್ರಮದಲ್ಲಿ  ಪೌರಕಾರ್ಮಿಕರಿಗೆ ಹಾಗೂ ನಗರಸಭೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಗೌರವಾರ್ಪಣೆ  ಕಾರ್ಯಕ್ರಮ ಜರಗಲಿದೆ. ಸ್ವಚ್ಚ ಪುತ್ತೂರು ಯೋಜನೆಯಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿರುವುದರಿಂದ  ಈ ಯೋಜನೆಯ ಭಾಗೀದಾರರು  ಎಂಬ ನೆಲೆಯಲ್ಲಿ ನಗರಸಭೆಗೆ ಸಂಬಂಧಿಸಿದವರನ್ನು ಗೌರವಿಸಲು ಈ […]

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ Read More »

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ ನೀಡಲಾಗಿದೆ. ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿದೆ. ಸಂಸ್ಕ್ರತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಜನರು  ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ. ಏಕೆಂದರೆ ಇದು ಕುಟುಂಬಕ್ಕೆ ಸಮೃದ್ದಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ. ಆದ್ದರಿಂದ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ Read More »

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ಸಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪ ನಡೆದಿದೆ. ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಬೈಕ್ ಇದಾಗಿದ್ದು, ಮೃತ ಸವಾರನ ಕುರಿತು ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು Read More »

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು

ಪುತ್ತೂರು: ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ ಸಿ ಕಾಲನಿಯಿಂದ ವರದಿಯಾಗಿದೆ. ರಬ್ಬರ್ ಟ್ಯಾಪಿಂಗ್ ಗೆ ತೆರಳಿದ ಅರ್ತಿಯಡ್ಕದ ಮಹಿಳೆಯೋರ್ವರ ಮೇಲೆ ಎ.29 ರಂದು ಮುಂಜಾನೆ ಆನೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು Read More »

ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ – ಬಲರಾಮ ಆಚಾರ್ಯ | ಫಿಲೋಕಾರ್ನಿವಾಲ್- 2025 ಪಿಜಿಫೆಸ್ಟ್ ಉದ್ಘಾಟನೆ

ಪುತ್ತೂರು: ಪುತ್ತೂರು ಸಂತ ಫಿಲೋಮಿನ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿಭಾಗಗಳ ಫೆಸ್ಟ್ “ಫಿಲೋಕಾರ್ನಿವಾಲ್ 2025” ಸೋಮವಾರ ಉದ್ಘಾಟನೆಗೊಂಡಿತು. ಜಿ..ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ಎಂಡಿ ಬಲರಾಮ ಆಚಾರ್ಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕೌಶಲ್ಯಗಳು ಬಹುಮುಖ್ಯವಾಗಿದ್ದು ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆಯ ಅಗತ್ಯವಿದೆ.  ವಿದ್ಯಾರ್ಥಿಗಳು ಕೇವಲ ತರಗತಿ ಚಟುವಟಿಗಳಲ್ಲಿ ಮಾತ್ರ ತೊಡಗಿಕೊಳ್ಳದೆ ಇಂತಹ ಫೆಸ್ಟ್ ಗಳನ್ನು ಆಯೋಜನೆ ಮಾಡಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಪ್ರತಿಯೊಬ್ಬರಲ್ಲೂ ಕೌಶಲ್ಯಗಳ ಅಭಿವೃದ್ಧಿ ಸಾಧ್ಯ

ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ – ಬಲರಾಮ ಆಚಾರ್ಯ | ಫಿಲೋಕಾರ್ನಿವಾಲ್- 2025 ಪಿಜಿಫೆಸ್ಟ್ ಉದ್ಘಾಟನೆ Read More »

ನಿಯಂತ್ರಣ ತಪ್ಪಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ಪುತ್ತೂರು: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ನೆಕ್ಕಿಲಾಡಿಯಲ್ಲಿ ಈ ಘಟನೆ ನಡೆದಿದ್ದು, ಪರಿಣಾಮ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ವಿದ್ಯುತ್ ಕಂಬಕ್ಕೆ ಮತ್ತು ಲಾರಿಗೆ ಹಾನಿಯಾಗಿದೆ.

ನಿಯಂತ್ರಣ ತಪ್ಪಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ Read More »

ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಯ ಜಿಯೋ ಮ್ಯಾಪಿಂಗ್ ಗೆ ಸಿದ್ದತೆ | ಯಾವುದೇ ವೆಚ್ಚವನ್ನು ರಬ್ಬರ್ ಬೆಳೆಗಾರರಿಂದ ಸಂಗ್ರಹಿಸಬಾರದು : ದ.ಕ.ಜಿಲ್ಲಾ ಕೆಪಿಆರ್ ಎಸ್‍ ಆಗ್ರಹ

ಪುತ್ತೂರು: ಯೂರೋಪಿಯನ್ ಒಕ್ಕೂಟದ ಷರತ್ತುಗಳನ್ನು ಪಾಲಿಸಲು ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಯ ಜಿಯೋ ಮ್ಯಾಪಿಂಗ್ ಗೆ ಸಿದ್ದತೆ ನಡೆಸುತ್ತಿದ್ದು ,ಈ ಪ್ರಕ್ರಿಯೆಯ ಯಾವುದೇ ವೆಚ್ಚವನ್ನು ರಬ್ಬರ್ ಬೆಳೆಗಾರರಿಂದ ಸಂಗ್ರಹಿಸಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS )ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಬ್ಬರ್ ಮಂಡಳಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ. ಈ ಕುರಿತು ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರುಗಳಾದ ಕೆ.ಯಾಧವ ಶೆಟ್ಟಿ. ಕೃಷ್ಣಪ್ಪ ಸಾಲ್ಯಾನ್, ಬಿ.ಎಂ.ಭಟ್, ಲಕ್ಷ್ಮಣಗೌಡ, ಪಿ.ಕೆ.ಸತೀಶನ್ ಪುತ್ತೂರು, ಸದಾಶಿವ

ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಯ ಜಿಯೋ ಮ್ಯಾಪಿಂಗ್ ಗೆ ಸಿದ್ದತೆ | ಯಾವುದೇ ವೆಚ್ಚವನ್ನು ರಬ್ಬರ್ ಬೆಳೆಗಾರರಿಂದ ಸಂಗ್ರಹಿಸಬಾರದು : ದ.ಕ.ಜಿಲ್ಲಾ ಕೆಪಿಆರ್ ಎಸ್‍ ಆಗ್ರಹ Read More »

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ | ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಡಾ.ದೀಪಕ್‍ ರೈ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಪದೇ ಪದೇ ಆಗುತ್ತಿರುವ ತೊಂದರೆಯ ನಿಟ್ಟಿನಲ್ಲಿ  ಆಸ್ಪತ್ರೆಯ ಪ್ರಮುಖ ಬಾಗಿಲುಗಳನ್ನು ಮುಚ್ಚಲಾಗುವುದು. ಅಲ್ಲದೆ ನಾಲ್ವರು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಈ ಕುರಿತು ಇಂದಿನಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಏ.25 ಶುಕ್ರವಾರ ನಡೆದ ಘಟನೆಯ ಕುರಿತು ಸ್ಪಷ್ಟನೆ ನೀಡಿ, ಮುಖ್ಯವಾಗಿ ಹೆರಿಗೆ ವಾರ್ಡಿನಲ್ಲಿ ಗಂಡಸರಿಗೆ ಎಂಟ್ರಿ ಇಲ್ಲ. ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ಘಟನೆಗೆ ಕಾರಣರಾದವರಿಗೆ ಹೊರಗೆ ಹೋಗುವಂತೆ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ | ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಡಾ.ದೀಪಕ್‍ ರೈ Read More »

ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ನೇಮೋತ್ಸವ | ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ, ಹರಕೆ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28 ರಂದು ಪೂರ್ವಶಿಷ್ಟ ಸಂಪ್ರದಾಯದಂತೆ ನೆರವೇರಿತು. ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ನೇಮೋತ್ಸವ | ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ, ಹರಕೆ ಸಮರ್ಪಣೆ Read More »

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯದ, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಐಕ್ಯೂಸಿ ವಿಭಾಗದ ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏ.29 ಮಂಗಳವಾರ ಸಂಜೆ 3 ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಎನ್‍. ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಖ್ಯಾತ

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ Read More »

error: Content is protected !!
Scroll to Top