ಅಂಬಿಕಾದಲ್ಲಿ ಧಾರ್ಮಿಕ ಶಿಕ್ಷಣ ತರಗತಿಗಳ ಉದ್ಘಾಟನೆ | ಆಧುನಿಕ ಶಿಕ್ಷಣದೊಂದಿಗೆ ಧರ್ಮದ ಜ್ಞಾನವೂ ಅಗತ್ಯ : ಬಾಲಚಂದ್ರ ನಟ್ಟೋಜ
ಪುತ್ತೂರು: ಆಧುನಿಕ ಶಿಕ್ಷಣದ ಜೊತೆಗೆ ಸನಾತನ ಧರ್ಮದ ಜ್ಞಾನವೂ ಸಿಕ್ಕಿದಾಗ ಶಿಕ್ಷಣ ವ್ಯವಸ್ಥೆಗೆ ನ್ಯಾಯ ಕೊಟ್ಟಂತಾಗುತ್ತದೆ. ರಸಾಯನಶಾಸ್ತ್ರ, ಭೌತಶಾಸ್ತ್ರದಂತಹ ವಿಷಯಗಳ ಜತೆಗೆ ಧರ್ಮ ಶಿಕ್ಷಣವನ್ನೂ ಕೊಟ್ಟಾಗ ನಿಜವಾದ ಶಿಕ್ಷಣ ಸಾಕಾರಗೊಳ್ಳುತ್ತದೆ. ಧರ್ಮದ ಜೊತೆಗೆ ಜಾಗೃತಿಯನ್ನೂ ಮೂಡಿಸುವುದು ಅಗತ್ಯ ಎಂದು ಪುಣೆಯ ದೀಪಕ್ ಫರ್ಟಿಲೈಝರ್ಸ್ ಆಂಡ್ ಕೆಮಿಕಲ್ಸ್‌ನ ವಿಶ್ರಾಂತ ಜನರಲ್ ಮ್ಯಾನೇಜರ್ ಬಾಲಚಂದ್ರ ನಟ್ಟೋಜ ಹೇಳಿದರು. ಅವರು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆರಂಭಿಸಲಾದ ಧಾರ್ಮಿಕ ಶಿಕ್ಷಣ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.ಪರಪೀಡನೆ ಮಾಡದೆ ಪರೋಪಕಾರ ಮಾಡುತ್ತಾ ಮುಕ್ತಿಯತ್ತ […]