ಕಾಂಗ್ರೆಸ್ ನಲ್ಲಿ ಇಲ್ಲದ ಜಾತಿ ರಾಜಕಾರಣ ಬಿಜೆಪಿಯಲ್ಲಿ ಯಾಕೆ ? | ಸಂಘಟನೆಯಲ್ಲಿ ಹಿರಿಯರ ಅಭಿಪ್ರಾಯದ ಪಾತ್ರ ಮಹತ್ವ| ಹಿಂದುತ್ವ ಮತ್ತು ಬಿಜೆಪಿ ಎಂದು ಹೇಳಿ ಪಕ್ಷೇತರವಾಗಿ ನಿಂತು ಮೂರನೆಯವನಿಗೇ ಲಾಭ ಮಾಡಿಕೊಡುವರೇ ?
ಪುತ್ತೂರು: ಬಿಜೆಪಿ ಪಕ್ಷದ ಅಭ್ಯರ್ಥಿ ಜಾತಿ ಅಧಾರಿತ ಎನ್ನುವ ಮತ್ತು ಚರ್ಚಿಸುವ ಜನತೆ ಮತ್ತೊಮ್ಮೆ ಪುತ್ತೂರಿನ ರಾಜಕೀಯದ ಕುರಿತು ಯೋಚಿಸಬೇಕಾದ ಅಗತ್ಯವಿದೆ. ಕಳೆದ ಹಲವಾರು ವರ್ಷಗಳ ಪುತ್ತೂರಿನ ರಾಜಕೀಯದ ಮಟ್ಟಿಗೆ ಪುತ್ತೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಲ್ಲಿಯ ತನಕ ಅಯ್ಕೆಯಾದವರು ಯಾರು ಎಂಬುದನ್ನು ಯೋಚಿಸಬೇಕಾಗಿದೆ. ಸುಧಾಕರ ಶೆಟ್ಟಿ, ಬೊಂಡಾಲ ಜಗನ್ನಾಥ ಶೆಟ್ಟಿ, ಶಕುಂತಲಾ ಶೆಟ್ಟಿ, ಅಶೋಕ್ ರೈ. ಹೀಗಿದ್ದೂ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭ್ಯರ್ಥಿ ಬಗ್ಗೆ ಯಾರೂ ಜಾತಿ ರಾಜಕರಣದ ಕುರಿತು ಹೇಳಲ್ಲ, ಯಾರೂ ಮತ ವಿಭಾಜನೆ […]









