ಮೂರು ದಿನಗಳ ಯೋಗ ಪ್ರಶಿಕ್ಷಣ ಶಿಬಿರ ಯೋಗ-ಜೀವನ-ದರ್ಶನ-2023 ಸಮಾರೋಪ | ಮೂರು ವಿಭಾಗಗಳಲ್ಲಿ ನಡೆದ ಯೋಗ ಪ್ರಶಿಕ್ಷಣ ಶಿಬಿರ
ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ. ನೇತ್ರಾವತಿ ವಲಯ, ಪುತ್ತೂರು, ದ.ಕ.ಜಿಲ್ಲೆ. ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಪೌಂಡೇಶನ್ ಆಶ್ರಯದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಮೂರು ವಿಭಾಗಗಳಲ್ಲಿ ಉದ್ಘಾಟನೆಗೊಂಡಿದ್ದ ಯೋಗ-ಜೀವನ-ದರ್ಶನ-2023 ಯೋಗ ಪ್ರಶಿಕ್ಷಣ ಶಿಬಿರವು ಭಾನುವಾರ ಸಮಾರೋಪಗೊಂಡಿತು. ಸಾಮಾನ್ಯ ಯೋಗ ಪ್ರಶಿಕ್ಷಣ ಶಿಬಿರವನ್ನು ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ ಉದ್ಘಾಟಿಸಿದರು. ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಭಟ್ […]










