ಪುತ್ತೂರು

ಬೈಕ್‌ ಪಲ್ಟಿಯಾಗಿ ಗಾಯಗೊಂಡಿದ್ದ ಯುವಕ ಸಾವು

ಪುತ್ತೂರು : ಬೈಕ್ ಪಲ್ಟಿಯಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹಿರೇಬಂಡಾಡಿ ನಿವಾಸಿ ಲಿಖಿತ್ ರೈ ಎಂಬ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಏಪ್ರಿಲ್ 22ರ ಸಂಜೆ ಕೊಯಿಲ-ಹಿರೇಬಂಡಾಡಿ ರಸ್ತೆಯ ಶಾಖಾಪುರ ಎಂಬಲ್ಲಿ ಲಿಖಿತ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿತ್ತು. ಈ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಾರ್ವಜನಿಕರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ ಕೆಲವು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಲಿಖಿತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. […]

ಬೈಕ್‌ ಪಲ್ಟಿಯಾಗಿ ಗಾಯಗೊಂಡಿದ್ದ ಯುವಕ ಸಾವು Read More »

ಸೋಣಂದೂರಿನ ವ್ಯಕ್ತಿ ನಾಪತ್ತೆ

ಉಪ್ಪಿನಂಗಡಿ: ಕಡಬದ ಶಿರಾಡಿಯ ಸೋಣಂದೂರಿನ 44 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ತಡವಾಗಿ ವರದಿಯಾಗಿದೆ. ನಾಪತ್ತೆಯಾದವರನ್ನು ಜಗದೀಶ್ ಎಸ್. ಎಸ್. ಎಂದು ಗುರುತಿಸಲಾಗಿದೆ. ಸೋಣಂದೂರಿನಲ್ಲಿ ಪ್ರತ್ಯೇಕ ಮನೆಯಲ್ಲಿ ಇವರು ವಾಸವಾಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಇವರ ಪತ್ನಿ ಮತ್ತು ಮಕ್ಕಳು ಹಾಸನದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಂದೆಯ ಮನೆಯಲ್ಲಿ ಪ್ರತಿನಿತ್ಯ ಅವರು ಊಟ, ಚಹಾ ಸೇವನೆಗೆ ಹೋಗುತ್ತಿದ್ದರು. ಎ. 6 ರಂದು ಬೆಳಗ್ಗೆ 9 ಗಂಟೆಯ ವರೆಗೆ ಮನೆಯಲ್ಲಿ ಇದ್ದ ಅವರು, ಗಂಟೆ 10.30 ಆದರೂ

ಸೋಣಂದೂರಿನ ವ್ಯಕ್ತಿ ನಾಪತ್ತೆ Read More »

ಮನೆಯಿಂದ ನಗ – ನಗದು ಲೂಟಿ: ಮನೆ ಕೆಲಸಕ್ಕಿದ್ದ ಮಹಿಳೆಯ ಮೇಲೆ ಸಂಶಯ

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ಮನೆಯೊಂದರಿಂದ ‌ಸುಮಾರು 3.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೇಲೆ ಕಳ್ಳತನದ ಸಂದೇಹ ಬಂದಿದೆ. ಎಪಿಎಂಸಿ ರಸ್ತೆಯ ಮಹಾಲಿಂಗೇಶ್ವರ ನಿಲಯದ ಕೆ. ಎಸ್. ಮಹಾದೇವಸ್ವಾಮಿ ಅವರು ಮನೆ ಕೆಲಸಕ್ಕೆ ಮೈಸೂರಿನ ಮಹಿಳೆಯನ್ನು ಕಳೆದ ಜನವರಿ ತಿಂಗಳಿನಲ್ಲಿ ಕರೆದುಕೊಂಡು ಬಂದಿದ್ದರು. ಜ. 2 – 25 ರ ವರೆಗೆ ಮನೆಗೆಲಸ ಮಾಡಿದ್ದ ಆಕೆ ಬಳಿಕ ಕೆಲಸ

ಮನೆಯಿಂದ ನಗ – ನಗದು ಲೂಟಿ: ಮನೆ ಕೆಲಸಕ್ಕಿದ್ದ ಮಹಿಳೆಯ ಮೇಲೆ ಸಂಶಯ Read More »

ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ

ಪುತ್ತೂರು: ಲೋಕ ಕಲ್ಯಾಣಕ್ಕಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಎ. 27 ರಂದು ವಿಶೇಷ ಸಿಯಾಳಾಭಿಷೇಕ ಸೇವೆ ನಡೆಯಲಿದೆ. ಶ್ರೀ ದೇವರಿಗೆ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ವರೆಗೆ ಸೀಯಾಳಾಭಿಷೇಕ ನಡೆಯಲಿದೆ. ಈ ಪುಣ್ಯ ಕಾರ್ಯಕ್ಕೆ ಶ್ರೀ ದೇವರಿಗೆ ಎಳನೀರು ಸಮರ್ಪಣೆ ಮಾಡುವ ಭಕ್ತರು ಆನದಿನ 9.30 ಕ್ಕೆ ಮುಂಚಿತವಾಗಿ ದೇವಾಲಯದ ಒಳಗೆ ಸಮರ್ಪಿಸುವಂತೆ ಮನವಿ ಮಾಡಲಾಗಿದೆ. ಈ ಮಹತ್ಕಾರ್ಯದಲ್ಲಿ ಹೆಚ್ಚಿನ ಭಕ್ತಬಾಂಧವರು ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವ್ಯವಸ್ಥಾಪನಾ ಮಂಡಳಿ ವಿನಂತಿಸಿಕೊಂಡಿದೆ.

ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ Read More »

ಕರಾಯ ಬ್ರಹ್ಮಕಲಶದಲ್ಲಿ ಕರಂಡಕಾಸುರ ಕಾಳಗ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಸಂಯೋಜನೆಯಲ್ಲಿ ಶ್ರೀ ಮಹಾಭಾರತ ಸರಣಿಯ 113 ನೇ ತಾಳಮದ್ದಳೆ ಕರಂಡಕಾಸುರ ಕಾಳಗ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ದೇವಿ ಪ್ರಸಾದ ಆಚಾರ್ಯ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ್ತ ಪಾಂಗಣ್ಣಾಯ ಸಹಕರಿಸಿದರು. ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ದಿನೇಶ್ ಭಟ್ ಬಳೆಂಜ (ಅರ್ಜುನ), ಶ್ರುತಿ ವಿಸ್ಮಿತ್ (ಶುಕತುಂಡ), ಅಂಬಾ ಪ್ರಸಾದ್ ಪಾತಾಳ (ಕಲುಷಗಾಮಿನಿ),

ಕರಾಯ ಬ್ರಹ್ಮಕಲಶದಲ್ಲಿ ಕರಂಡಕಾಸುರ ಕಾಳಗ ತಾಳಮದ್ದಳೆ Read More »

ಅಕ್ಷಯ್ ಕಲ್ಲೇಗ ಹತ್ಯೆ: 1 ಮತ್ತು 2 ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

ಪುತ್ತೂರು: ಕಲ್ಲೇಗ ‌ಟೈಗರ್ಸ್ ಹುಲಿ ವೇಷ ತಂಡದ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಹತ್ಯೆ ಮಾಡಿದ 1 ಮತ್ತು 2 ನೇ ಆರೋಪಿಗಳಿಗೆ ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿ ಆದೇಶ ನೀಡಿದೆ. ನವೆಂಬರ್ 6, 2023 ರಂದು ರಾತ್ರಿ ವೇಳೆ ನೆಹರೂ ನಗರದಲ್ಲಿ ಅಕ್ಷಯ್ ಕಲ್ಲೇಗನ ಮೇಲೆ ಭೀಕರ ಹಲ್ಲೆ ನಡೆಸಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣದ 1 ನೇ ಆರೋಪಿ ಪಡೀಲಿನ ಮನೀಶ್, 2 ನೇ ಆರೋಪಿ ಕೃಷ್ಣನಗರದ ‌ಚೇತನ್

ಅಕ್ಷಯ್ ಕಲ್ಲೇಗ ಹತ್ಯೆ: 1 ಮತ್ತು 2 ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್ Read More »

ಮಗು ಕರುಣಿಸಿದ ಪ್ರಕರಣ : ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ. ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದ ನ್ಯಾಯಾಲಯ ಬೆಂಗಳೂರು: ಪುತ್ತೂರಿನ ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ ಜೀವನಾಂಶ ಪಾವತಿಸಲು ಹೈಕೋರ್ಟ್‌ ಆದೇಶಿಸಿ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ. ಆರೋಪಿಯ ದೈಹಿಕ ಸಂಪರ್ಕದಿಂದ ಯುವತಿಗೆ ಮಗುವಾಗಿದೆ. 10 ತಿಂಗಳ ಮಗು, ತಾಯಿಯನ್ನು ಅನಾಥವನ್ನಾಗಿಸುವುದು ಬೇಡ. ಹೀಗಾಗಿ ಮುಂದಿನ ಆದೇಶದವರೆಗೂ ಮಗು ಹಾಗೂ ತಾಯಿಗೆ ಮಾಸಿಕ 75 ಸಾವಿರ ರೂಪಾಯಿ ಪಾವತಿಸುವಂತೆ ಅರ್ಜಿದಾರ ಕೃಷ್ಣ ಜೆ. ರಾವ್​ಗೆ

ಮಗು ಕರುಣಿಸಿದ ಪ್ರಕರಣ : ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ. ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ Read More »

ನಿಯಂತ್ರಣಕ್ಕೆ ಸಿಗದ ಬೈಕ್: ಗುಂಡಿಗೆ ಬಿದ್ದು ಸವಾರ ಸಾವು

ಉಪ್ಪಿನಂಗಡಿ: ಬೈಕ್ ನಿಯಂತ್ರಣಕ್ಕೆ ಸಿಗದ ಪರಿಣಾಮ ಸವಾರನೊಬ್ಬ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಹಿರೇಬಂಡಾಡಿ ನಿವಾಸಿ ಲಿಖಿತ್ ಎಂಬವರೇ ‌ಮೃತ ದುರ್ದೈವಿ. ಲಿಖಿತ್ ಅವರು ಬೈಕ್‌ನ ನಿಯಂತ್ರಣ ಕಳೆದುಕೊಂಡು ಗುಂಡಿಗೆ ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿದೆ.

ನಿಯಂತ್ರಣಕ್ಕೆ ಸಿಗದ ಬೈಕ್: ಗುಂಡಿಗೆ ಬಿದ್ದು ಸವಾರ ಸಾವು Read More »

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ, 16 ಡಿಸ್ಟಿಂಕ್ಷನ್

ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 26 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು: ಅಯಿಷತ್ ಇಹ್‌ಶಾನ-602 (ಕಲಂಬಿ ಪಲ್ಲತ್ತಾರು ಅಬ್ಬಾಸ್ ಮತ್ತು ರೆಹನತ್ ದೇಂಬಲೆ ಇವರ ಮಗಳು), ಶಝ ಫಾತಿಮ ಪಿ – 600 (ಉಮ್ಮರ್ ಶಾಫಿ ಪಿ. ಮತ್ತು ಫಾತಿಮತ್ ಶಹರ್ ಬಾನ್ ಪಿ.

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ, 16 ಡಿಸ್ಟಿಂಕ್ಷನ್ Read More »

ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಜನರಿಂದ ಹಲ್ಲೆ: ದೂರು ದಾಖಲು

ಪುತ್ತೂರು: ಏಳು ಜನರ ಗುಂಪೊಂದು ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಸರ್ಕಾರಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿ ಆದಿಲ್ ಹುಸೈನ್ (21) ಎಂದು ಗುರುತಿಸಲಾಗಿದೆ. ಈ ಹಿಂದೆ ನಡೆದಿದ್ದ ಜಗಳವೊಂದನ್ನು ಬಿಡಿಸಿದ್ದಕ್ಕೆ ‌ಪ್ರತಿಕಾರವಾಗಿ ಈತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಎ. 22 ರಂದು ತನ್ನ ಗೆಳೆಯರಿಬ್ಬರ ಜೊತೆಗೆ ಪುತ್ತೂರು ಬಸ್‌ಸ್ಟಾಂಡ್‌ನಲ್ಲಿ ‌ಟಿ ಕುಡಿಯುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ.

ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಜನರಿಂದ ಹಲ್ಲೆ: ದೂರು ದಾಖಲು Read More »

error: Content is protected !!
Scroll to Top