ಪುತ್ತೂರು

ಉಪ್ಪಿನಂಗಡಿ ಜಾತ್ರೆ ಸಂದರ್ಭದಲ್ಲೇ ನದಿಗೆ ಹಾರಿದ ಕುಖ್ಯಾತ ಆರೋಪಿ | ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆರೋಪಿ | ಭಕ್ತರಲ್ಲಿ ಆತಂಕ

ಉಪ್ಪಿನಂಗಡಿ: ಮಖೆ ಜಾತ್ರೆ ಸಡಗರದಲ್ಲಿದ್ದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಯುವಕನೋರ್ವ ನದಿಗೆ ಹಾರಿರುವ ಕುರಿತು ಸುದ್ದಿಯಾಗುತ್ತಿದ್ದಂತೆ ಆತಂಕ ಸೃಷ್ಟಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ ದೇಗುಲದ ರಥೋತ್ಸವ ನಡೆಯುತ್ತಿದ್ದಂತೆಯೇ ಪೊಲೀಸರು ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳದತ್ತ ಧಾವಿಸುತ್ತಿರುವುದು ಕಂಡು ಬಂದಿತ್ತು. ಜತೆಗೆ ಭಕ್ತರು ಕೂಡ ಅತ್ತ ಧಾವಿಸತೊಡಗಿದರು. ಈ ವೇಳೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂದಿಗೆ ಈ ಬೆಳವಣಿಗೆ ಬಗ್ಗೆ, ಕುತೂಹಲ ಮೂಡಿ ವಿಚಾರಿಸತೊಡಗಿದರು. ಆದರೆ ನದಿಗೆ […]

ಉಪ್ಪಿನಂಗಡಿ ಜಾತ್ರೆ ಸಂದರ್ಭದಲ್ಲೇ ನದಿಗೆ ಹಾರಿದ ಕುಖ್ಯಾತ ಆರೋಪಿ | ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆರೋಪಿ | ಭಕ್ತರಲ್ಲಿ ಆತಂಕ Read More »

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

ಪುತ್ತೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರಿ ಸಂಘ. ನಿ. ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪುತ್ತೂರು  ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ  ಪುತ್ತೂರು  ಗ್ರಾಮಾಂತರ ಮಂಡಲದ ಹಾಗೂ ನಗರಮಂಡಲದ ಅಧ್ಯಕ್ಷರುಗಳು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು, ಕಾರ್ಯಕರ್ತರು  ಉಪಸ್ಥಿತರಿದ್ದರು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ Read More »

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಅಷ್ಠಮಿ ಒಂದನೇ ಮಖೆ ಜಾತ್ರೆ | ದರ್ಶನ ಬಲಿ ಉತ್ಸವ

ಉಪ್ಪಿನಂಗಡಿ :  ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಅಷ್ಠಮಿ ಒಂದನೇ ಮಖೆ ಜಾತ್ರೆಯ ಪ್ರಯುಕ್ತ ಗುರುವಾರದಂದು ರಾತ್ರಿ ಭಕ್ತಿ ಸಡಗರದ ರಥೋತ್ಸವವು ಜರಗಿತು. ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು, ಬಲಿ ಉತ್ಸವವು ಜರುಗಿತು. ಬಳಿಕ ಶ್ರೀ ದೇವರು ರಥಾರೂಢರಾಗಿ ರಥ ಬೀದಿಯಲ್ಲಿ ರಥೋತ್ಸವವು ನಡೆಯಿತು. ಬಳಿಕ ಬಲಿ ಉತ್ಸವ ಜರುಗಿ ಮಹಾಪೂಜೆ ನಡೆಯಿತು. ಶುಕ್ರವಾರ ನಸುಕಿನಿಂದಲೇ ನದಿ ಸಂಗಮ ಸ್ಥಳದಲ್ಲಿ ಮಖೆ ತೀರ್ಥ ಸ್ನಾನವು ನೂರಾರು ಭಕ್ತರಿಂದ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಅಷ್ಠಮಿ ಒಂದನೇ ಮಖೆ ಜಾತ್ರೆ | ದರ್ಶನ ಬಲಿ ಉತ್ಸವ Read More »

ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ | ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪಾಧ್ಯಕ್ಷರಾಗಿ ಹರೀಶ್ ಗೌಡ ಗುಮ್ಮಟೆಗದ್ದೆ ಆಯ್ಕೆ

ಪುತ್ತೂರು: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತೀಯೊಳಗಿನ ಜಿದ್ದಾಜಿದ್ದಿನ ಹೋರಾಟದ ನಡುವೆ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ನಿರ್ದೇಶಕ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಾಗೂ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಳ್ಯೊಟ್ಟು ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಹರೀಶ್ ಗೌಡ ಗುಮ್ಮಟೆಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ

ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ | ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪಾಧ್ಯಕ್ಷರಾಗಿ ಹರೀಶ್ ಗೌಡ ಗುಮ್ಮಟೆಗದ್ದೆ ಆಯ್ಕೆ Read More »

ಪತ್ನಿಗೆ ಪತಿ ಹಾಗೂ ಇತರ ಮೂವರಿಂದ ಹಲ್ಲೆ ನಡೆಸಿ ಜೀವ ಬೆದರಿಕೆ | ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಪತ್ನಿಯ ಮೇಲೆ ಆಕೆಯ ಪತಿ ಹಾಗೂ ಇತರ ಮೂವರು ಸೇರಿಕೊಂಡು ಹಲ್ಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೊಡಿಪ್ಪಾಡಿಯ ಎಚ್.ಅಮೀನಾ ಅವರು ಈ ಬಗ್ಗೆ ದೂರು ನೀಡಿದ್ದು, ತನ್ನ ಪತಿ ಕೆ.ಎಂ. ಅಬ್ದುಲ್ಲಾ, ಝಾರಾ, ಗಝಾಲಿ ಹಾಗೂ ರೈಸ್ ಎಂಬವರು ಹಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ತನ್ನ ಮನೆಗೆ ಪ್ರವೇಶಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಮನೆಯ ಸಾಮಾನುಗಳನ್ನು ಬೀಸಾಡಿದ್ದಾರೆ. ಮನೆಯಿಂದ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಮಾನಭಂಗಕ್ಕೆ

ಪತ್ನಿಗೆ ಪತಿ ಹಾಗೂ ಇತರ ಮೂವರಿಂದ ಹಲ್ಲೆ ನಡೆಸಿ ಜೀವ ಬೆದರಿಕೆ | ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು Read More »

ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ ಸಿನಿಮಾ “ಭಾವ ತೀರ ಯಾನ” ಬಿಡುಗಡೆ | ಕಲಾ ಆರಾಧಕ ಮನಸ್ಸಿನಿಂದ ಸಮಾಜಕ್ಕೆ ನೀಡುವ ಕೊಡುಗೆ ಎಲ್ಲರ ಗಮನ ಸೆಳೆಯುತ್ತದೆ : ವಸಂತಲಕ್ಷ್ಮೀ ಶಶಿಧರ್

ಪುತ್ತೂರು: ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ, ನೋಡುಗರನ್ನು ಪ್ರೇಮ ಪ್ರೀತಿ ಭಾವನೆಗಳ ತೀರದುದ್ದಕ್ಕೂ ಕರೆದೊಯ್ಯುವ ವಿಶಿಷ್ಟ ಕಾಂಬಿನೇಷನ್‍ ಉಳ್ಳ ಸಿನಿಮಾ ““ಭಾವ ತೀರ ಯಾನ” ಪುತ್ತೂರಿನ ಜಿಎಲ್‍ ಒನ್ ಮಾಲ್‍ ನ ಭಾರತ್ ಸಿನಿಮಾಸ್‍ ನಲ್ಲಿ ಶುಕ್ರವಾರ ಸಂಜೆ ಬಿಡುಗಡೆಗೊಂಡಿತು. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟರ್ನ್‍ ನ “ಭಾವ ತೀರ ಯಾನ” ಬಿಡುಗಡೆ ಸಮಾರಂಭವನ್ನು ಚಲನಚಿತ್ರ ಮತ್ತು ಧಾರವಾಹಿಗಳ ಅಭಿನೇತ್ರಿ ವಸಂತಲಕ್ಷ್ಮೀ ಶಶಿಧರ್ ದೀಪ ಬೆಳಗಿಸಿ

ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ ಸಿನಿಮಾ “ಭಾವ ತೀರ ಯಾನ” ಬಿಡುಗಡೆ | ಕಲಾ ಆರಾಧಕ ಮನಸ್ಸಿನಿಂದ ಸಮಾಜಕ್ಕೆ ನೀಡುವ ಕೊಡುಗೆ ಎಲ್ಲರ ಗಮನ ಸೆಳೆಯುತ್ತದೆ : ವಸಂತಲಕ್ಷ್ಮೀ ಶಶಿಧರ್ Read More »

ವಾಜಪೇಯಿ ಜನ್ಮಶಯಾಬ್ದಿ ವರ್ಷಾಚರಣೆ ಪ್ರಯುಕ್ತ ಸನ್ಮಾನ ಕಾರ್ಯಕ್ರಮ | ಹಿರಿಯ ಬಿಜೆಪಿ ಮುಖಂಡ ಸುರೇಶ್‍ ಆಳ್ವರಿಗೆ ಸನ್ಮಾನ

ಪುತ್ತೂರು: ಮಾಜಿ ಪ್ರಧಾನಿ ವಾಜಪೇಯಿ ಜನ್ಮಶತಾಬ್ದಿ ವರ್ಷಚಾರಣೆ ಸಂದರ್ಭ ವಾಜಪೇಯಿ  ಜತೆ ಸಂಪರ್ಕ ಇರಿಸಿಕೊಂಡ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಹಿರಿಯ ಬಿಜೆಪಿ ಮುಖಂಡ ಸುರೇಶ್ ಆಳ್ವ ಅವರನ್ನು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿರಿಯರಾದ ಬಾಲಕೃಷ್ಣ ರೈ ಮುಗೆರೋಡಿ, ಚಣಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ ನಿತೀಶ್ ಕುಮಾರ್ ಶಾಂತಿವನ, ಯುವರಾಜ್‍

ವಾಜಪೇಯಿ ಜನ್ಮಶಯಾಬ್ದಿ ವರ್ಷಾಚರಣೆ ಪ್ರಯುಕ್ತ ಸನ್ಮಾನ ಕಾರ್ಯಕ್ರಮ | ಹಿರಿಯ ಬಿಜೆಪಿ ಮುಖಂಡ ಸುರೇಶ್‍ ಆಳ್ವರಿಗೆ ಸನ್ಮಾನ Read More »

ಶ್ರೀಮತಿ  ಯಮುನಾ ರಾಮಣ್ಣ ಗೌಡ ಹೇಮಳ ನಿಧನ |ಕೆಮ್ಮಲೆ  ನಾಗ ಬ್ರಹ್ಮ ದೇವಸ್ಥಾನಕ್ಕೆ ಜಾಗ ವನ್ನು ದಾನವಾಗಿ ನೀಡಿದ ಕೊಡುಗೈ ದಾನಿ

ಎಣ್ಮೂರು ಗ್ರಾಮದ ಹೇಮಳ ಭ್ರಮರಾಂಭಿಕಾ ನಿಲಯದ ದಿ. ರಾಮಣ್ಣ ಗೌಡರ ಪತ್ನಿ ಶ್ರೀಮತಿ ಯಮುನಾ ಫೆ. 18ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನಕ್ಕೆ ಜಾಗವನ್ನು ದಾನವಾಗಿ ನೀಡಿದ ಕೊಡುಗೈ ದಾನಿ  ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ ಹೇಮಳರ ಮನೆಯಲ್ಲಿ ವಾಸವಾಗಿದ್ದರು. ಮೃತರು ಪುತ್ರಿ ಕಾವ್ಯ ಬಾಲಕೃಷ್ಣ ಗೌಡ ಕುರ್ಮಕೋಡಿ ಶ್ರೀ ರಾಮ್ ಇಂಡಸ್ತ್ರಿ ಬೆಳ್ಳಾರೆ, ಮೊಮ್ಮಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಶ್ರೀಮತಿ  ಯಮುನಾ ರಾಮಣ್ಣ ಗೌಡ ಹೇಮಳ ನಿಧನ |ಕೆಮ್ಮಲೆ  ನಾಗ ಬ್ರಹ್ಮ ದೇವಸ್ಥಾನಕ್ಕೆ ಜಾಗ ವನ್ನು ದಾನವಾಗಿ ನೀಡಿದ ಕೊಡುಗೈ ದಾನಿ Read More »

ಹಿಂದೂ ಧಾರ್ಮಿಕ ಶಿಕ್ಷಣ ಪ್ರತೀ ಹಿಂದುವಿನ ಮನೆಯಿಂದ ಆಗಬೇಕು : ಯು.ಪೂವಪ್ಪ | ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ

ಪುತ್ತೂರು: ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಸಭಾಭವನದಲ್ಲಿ ಗುರುವಾರ ಸಂಜೆ ಉದ್ಘಾಟನೆಗೊಂಡಿತು. ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಆಡಳಿತಾಧಿಕಾರಿ ಯು.ಪೂವಪ್ಪ ದೀಪ ಬೆಳಗಿಸಿ ಧಾರ್ಮಿಕ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಶಿಕ್ಷಣ ಪ್ರತೀ ಹಿಂದೂವಿನ ಮನೆಯಿಂದ ಆಗಬೇಕು. ದುರಾದೃಷ್ಟವಶಾತ್ ಸರಿಯಾದ ಬೋಧನೆಯ ಕೊರತೆಯಿಂದ ಧಾರ್ಮಿಕ ಶಿಕ್ಷಣ ಪಡೆಯುವಲ್ಲಿ ವಿಫಲವಾಗಿದ್ದೇವೆ. ಮಕ್ಕಳಲ್ಲಿ ಅತಿಯಾದ ಮೊಬೈಲ್‍ಚಟವೂ ಇದಕ್ಕೆ ಒಂದು ಕಾರಣವಾಗಿದೆ.

ಹಿಂದೂ ಧಾರ್ಮಿಕ ಶಿಕ್ಷಣ ಪ್ರತೀ ಹಿಂದುವಿನ ಮನೆಯಿಂದ ಆಗಬೇಕು : ಯು.ಪೂವಪ್ಪ | ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ Read More »

ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ | ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತ, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಬಗ್ಗೆ ಮಾಹಿತಿ

ಪುತ್ತೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪುತ್ತೂರು ನಗರಸಭೆಯ ನೆಕ್ಕಿಲ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಘಟಕ ಮತ್ತು ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಘಟಕಗಳ  ಅಧ್ಯಯನಕ್ಕೆ ಫೆ.20 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತರಾದ  ಮಧು ಎಸ್ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಘಟಕದ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಮತ್ತು

ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ | ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತ, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಬಗ್ಗೆ ಮಾಹಿತಿ Read More »

error: Content is protected !!
Scroll to Top