ದೇಶ

ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಸ್ಥಗಿತ ಮಾಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರ್ಕಾರದ ನಡೆಯನ್ನು ‌ಪ್ರಶ್ನೆ ಮಾಡಿ 16 ಜನರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಐ‌. ಅರುಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಹಾಗೆಯೇ ಮುಂದಿನ ವಿಚಾರಣೆಯ ವರೆಗೂ ಅರ್ಜಿದಾರರ ಜನೌಷಧ ಕೇಂದ್ರ ಸ್ಥಗಿತ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಈ ಸಂಬಂಧ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದು, […]

ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಮಧ್ಯಂತರ ಆದೇಶ Read More »

ಶಾಲಾ ವ್ಯಾನಿಗೆ ರೈಲು ಡಿಕ್ಕಿ : ಇಬ್ಬರು ಮಕ್ಕಳು ಸಾವು; ಮೂವರಿಗೆ ಗಂಭೀರ ಗಾಯ

ರೈಲು ಬರುತ್ತಿರುವುದನ್ನು ನೋಡಿಯೂ ದಾಟುವ ಸಾಹಸ ಮಾಡಿದಾಗ ದುರಂತ ಚೆನ್ನೈ : ಲೆವೆಲ್‌ ಕ್ರಾಸಿಂಗ್‌ನಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡ್ಡಲೂರು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆಮಕ್ಕಳನ್ನು ಹತ್ತಿಸಿಕೊಂಡು ಶಾಲೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಡ್ಡಲೂರು ಸಮೀಪ ಸೆಮ್ಮನಕೊಪ್ಪಂ ಎಂಬಲ್ಲಿ ಲೆವೆಲ್‌ ಕ್ರಾಸಿಂಗ್‌ನ್ನು ಶಾಲಾ ವ್ಯಾನ್‌ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್‌ ಪೂರ್ತಿ ಜಖಂಗೊಂಡಿದೆ. ಈ ಸಂದರ್ಭದಲ್ಲಿ

ಶಾಲಾ ವ್ಯಾನಿಗೆ ರೈಲು ಡಿಕ್ಕಿ : ಇಬ್ಬರು ಮಕ್ಕಳು ಸಾವು; ಮೂವರಿಗೆ ಗಂಭೀರ ಗಾಯ Read More »

ಎತ್ತಿಹೊಳೆ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗಿಲ್ಲ ಅನುಮತಿ

ಈಗಾಗಲೇ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಅರಣ್ಯ ನಾಶವಾಗಿದೆ ಎಂದ ಪರಿಸರ ಸಚಿವಾಲಯ ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ತಿರಸ್ಕರಿಸಿದೆ. ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರ

ಎತ್ತಿಹೊಳೆ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗಿಲ್ಲ ಅನುಮತಿ Read More »

ಮಾಟ ಮಾಡಿದ ಅನುಮಾನದಲ್ಲಿ ಒಂದೇ ಕುಟುಂಬದ ಐವರ ಜೀವಂತ ದಹನ

ಭೀಕರ ಕೃತ್ಯ ಎಸಗಿದ ಬಳಿಕ ಗ್ರಾಮಕ್ಕೆ ಗ್ರಾಮವೇ ಪಲಾಯನ ಪಾಟ್ನಾ: ಮಾಟ ಮಂತ್ರ ಮಾಡಿದ ಅನುಮಾನದಲ್ಲಿ ಒಂದೇ ಕುಟುಂಬದ ಐವರು ಸದಸ್ಯರನ್ನು ಕ್ರೂರವಾಗಿ ಥಳಿಸಿ ನಂತರ ಜೀವಂತವಾಗಿ ಸುಟ್ಟುಹಾಕಿದ ಘಟನೆ ಬಿಹಾರದ ಪೂರ್ನಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಟೆಟ್ಗಾಮಾ ಎಂಬ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ಭೀಕರ ಕೊಲೆ ಸುತ್ತಮುತ್ತಲೂ ಆಘಾತ ಸೃಷ್ಟಿಸಿದೆ. ಕೃತ್ಯ ಎಸಗಿದ ಎಲ್ಲ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಈ ಭಯಾನಕ ಘಟನೆಯು 4 ದಿನಗಳ ಹಿಂದೆ ಗ್ರಾಮದಲ್ಲಿ ನಡೆದಿದೆ.

ಮಾಟ ಮಾಡಿದ ಅನುಮಾನದಲ್ಲಿ ಒಂದೇ ಕುಟುಂಬದ ಐವರ ಜೀವಂತ ದಹನ Read More »

ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ  ಸೇನಾ ವೈದ್ಯ

ಲಕ್ನೋ :  ಉತ್ತರ ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿ ನೋವಿನಲ್ಲಿ ನರಳಾಡುತಿದ್ದು , ಮೇಜರ್‌  ಡಾ. ರೋಹಿತ್‌ ಬಚ್‌ ವಾಲ ಎಂಬ  ಸೇನಾ ವೈದ್ಯ ಹೆರಿಗೆ ಮಾಡಿಸಿದ ಘಟನೆ ಶನಿವಾರ ನಡೆದಿದೆ . ಪನ್ವೇಲ್‌ – ಗೋರಖ್‌ ಪುರ ಎಕ್ಸ್‌ ಪ್ರೆಸ್ಸ್‌ ನಲ್ಲಿ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೋರ್ವರಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದು , ಝಾನ್ಸಿ ನಿಲ್ದಾಣದಲ್ಲಿ ಇಳಿದಿದ್ದಾರೆ . ಆಕೆಯ ಸ್ಥಿತಿ ಕಂಡು ರೈಲ್ವೆಯ ಮಹಿಳಾ ಸಿಬ್ಬಂದಿ ಸಹಾಯಕ್ಕೆ ಬಂದು ವೀಲ್‌ಚೇರ್‌ ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಓರ್ವ

ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ  ಸೇನಾ ವೈದ್ಯ Read More »

ಭಾಷೆಯ ವಿಷಯದಲ್ಲಿ ದೇಶವನ್ನು ಬೇರ್ಪಡಿಸುವುದು ಸಲ್ಲ: ಕಂಗನಾ ‌ರಾಣಾವತ್

ಭಾಷಾ ವಿಭಜನೆ ಜನರ ಮಧ್ಯೆ ಸಂವಹನಕ್ಕೆ ಅಡ್ಡಿ ಮಾಡುತ್ತದೆ ಮುಂಬೈ: ಭಾಷಾ ವಿಷಯದಲ್ಲಿ ನಾವು ಸಮಾಜವನ್ನು ಬೇರ್ಪಡಿಸಬಾರದು. ದೇಶದ ಏಕತೆಯನ್ನು ನಾವು ಕಾಪಾಡಬೇಕು ಎಂದು ಸಂಸದೆ ಕಂಗನಾ ರಾಣಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವನ್ನು ವಿಭಜಿಸುವ ಶಕ್ತಿಗಳಿಂದ ನಾವು ಅಂತರ ಕಾಪಾಡಿಕೊಳ್ಳಬೇಕು .ಭಾರತೀಯರು ವಿಭಿನ್ನ ಕ್ರಮಗಳ ಮೂಲಕ ಪರಸ್ಪರ ಸಂವಹನ ನಡೆಸಲು ಪ್ರಯತ್ನ ಪಡುತ್ತಾರೆ. ಭಾಷೆಗೆ ಸಂಬಂಧಿಸಿದ ಹಾಗೆ ಬೇರ್ಪಡಿಸಲು ಹೊರಟರೆ ಅದು ಅವರ ಪ್ರಯತ್ನಗಳಿಗೆ ಅಡ್ಡಿ ಮಾಡಿದ ಹಾಗಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಲ್ಲಿಗೆ ಪ್ರವಾಸೋದ್ಯಮಕ್ಕಾಗಿ ಹಲವಾರು

ಭಾಷೆಯ ವಿಷಯದಲ್ಲಿ ದೇಶವನ್ನು ಬೇರ್ಪಡಿಸುವುದು ಸಲ್ಲ: ಕಂಗನಾ ‌ರಾಣಾವತ್ Read More »

ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು

ಹಲವು ಕಾರಣಗಳಿಗೆ ವಿಶೇಷವಾಗಿದೆ ಶುಭಮನ್‌ ಗಿಲ್‌ ಪಡೆಯ ಟೆಸ್ಟ್‌ ಜಯ ಲಂಡನ್‌ : ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ದಕ್ಕಿದ ಅದ್ಭುತ ಗೆಲುವು ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಮುಖ್ಯವಾಗಿ ಸ್ಟಾರ್‌ ಆಟಗಾರರಿಲ್ಲದ, ಯುವ ಕ್ರಿಕೆಟಿಗರಿಂದಲೇ ತುಂಬಿದ ಟೀಂ ಇಂಡಿಯಾ ಹೊಸ ನಾಯಕನ ನೇತೃತ್ವದಲ್ಲಿ ಈ ಅದ್ಭುತ ಸಾಧನೆ ಮಾಡಿದೆ. ಇದಕ್ಕೂ ಮಿಗಿಲಾಗಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಸುಮಾರು ಆರು ದಶಕಗಳ ಕಾಯುವಿಕೆಯ ಬಳಿಕ ಭಾರತಕ್ಕೆ ಮೊದಲ ಗೆಲುವು ದಕ್ಕಿದೆ. ಶುಭ್‌ಮನ್ ಗಿಲ್

ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು Read More »

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು

ಕಳಪೆ ಹೆಲ್ಮೆಟ್‌ ತಯಾರಿ-ಮಾರಾಟ ವಿರುದ್ಧ ಕೇಂದ್ರ ಸರ್ಕಾರ ಅಭಿಯಾನ ನವದೆಹಲಿ: ದ್ವಿಚಕ್ರ ವಾಹನ ಸವಾರರೇ ಎಚ್ಚರ! ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕಡಿಮೆ ಕ್ರಯದ ಹೆಲ್ಮೆಟ್‌ ಖರೀದಿಸಿ ಪೊಲೀಸರ ಕಣ್ಣಿಗೆ ಮಣ್ಣೆರುತ್ತಿದ್ದೀರಾ? ನಿಮಗಿದೆ ಕೆಟ್ಟ ಸುದ್ದಿ. ಹೆಚ್ಚಿನವರು ಪೊಲೀಸರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರುವ ಕಡಿಮೆ ಕ್ರಯದ ಹೆಲ್ಮೆ ಧರಿಸುತ್ತಾರೆ. ಇಂಥ ಹೆಲ್ಮೆಟ್‌ ಅಸುರಕ್ಷಿತ ಎಂದಿರುವ ಕೇಂದ್ರ ಸರ್ಕಾರ ಕಳಪೆ ಹೆಲ್ಮೆಟ್‌ ತಯಾರಕರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆ. ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು Read More »

ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ

ಭಾರತದ ಜೊತೆಗೆ ಸ್ನೇಹ ಸಂಬಂಧ ಮರು ಸ್ಥಾಪಿಸಲು ಮಾಲ್ಡೀವ್ಸ್ ಪರದಾಟ ನವದೆಹಲಿ: ಕೆಲ‌ ಸಮಯಗಳ ಹಿಂದೆ ವಿನಾ ಕಾರಣ ಭಾರತದ ಜೊತೆಗೆ ಸಂಬಂಧ ಹಾಳು ಮಾಡಿಕೊಂಡಿದ್ದ ದ್ವೀಪ ರಾಷ್ಟ್ರ ಮಾಲ್ಡಿವ್ಸ್‌ ಈಗ ಮತ್ತೆ ಭಾರತದ ಜೊತೆಗೆ ಸ್ನೇಹ ಸಂಪಾದನೆ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಜುಲೈ 26 ರಂದು ನಡೆಯುವ ಅಲ್ಲಿನ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತದ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ

ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ Read More »

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಪಾಟ್ನಾ : ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರದಲ್ಲಿ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಪಾಟ್ನಾದ ಅವರ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪನಾಚೆ ಎಂಬ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಗೋಪಾಲ್ ಖೇಮ್ಕಾ ವಾಸವಾಗಿದ್ದರು. ಗುಂಡಿನ ದಾಳಿಗೆ ಖೇಮ್ಕಾ ಸ್ಥಳದಲ್ಲೇ ಪ್ರಾಣ

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ Read More »

error: Content is protected !!
Scroll to Top