ದೇಶ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ

ಉಚಿತ ವಿದ್ಯುತ್‌ ಗ್ಯಾರಂಟಿ ಕೈ ಬಿಡುವಂತೆ ಜನರಿಗೆ ಮನವಿ ಶಿಮ್ಲಾ: ಕರ್ನಾಟಕದಂತೆ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ ಈಗ ದಿವಾಳಿಯಂಚಿಗೆ ತಲುಪಿದ್ದು, ಆರ್ಥಿಕ ಸ್ಥಿತಿಯ ಚೇತರಿಕೆಗಾಗಿ ಗ್ಯಾರಂಟಿಗಳನ್ನು ಹಿಂದೆಗೆದುಕೊಳ್ಳಲು ಪ್ರಾರಂಭಿಸಿದೆ. ಮೊದಲ ಹಂತವಾಗಿ ರಾಜ್ಯದಲ್ಲಿ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಶುರುವಾಗಿದೆ. ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಸ್ವತಃ ತನ್ನ ಐದು ವಿದ್ಯುತ್‌ ಸಂಪರ್ಕಗಳ ಸಬ್ಸಿಡಿಯನ್ನು ವಾಪಸು ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಹಣ ಉಳಿಸುವ […]

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ Read More »

ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ

ಹಾಸನ : ಮನಸಾರೆ ಪ್ರೀತಿಸಿದ ಪ್ರಿಯಕನನ್ನು ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ನಡೆದಿದೆ. ಚಾಕುವಿನಿಂದ ಇರಿತಕ್ಕೊಳಗಾದವ 25 ವರ್ಷದ ಮನು ಕುಮಾರ್ ಸ್ಥಿತಿ ಗಂಭೀರವಾಗಿದೆ. ಹಾಸನದ ತಾಲೂಕಿನ ಎ ಗುಡುಗನ ಹಳ್ಳಿ ಗ್ರಾಮದ ಮನುಕುಮಾರ್ ಮತ್ತು ಭವಾನಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನಸ್ತಾಪ ಮೂಡಿದ್ದರಿಂದ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಹೋಟೆಲ್‍ ಹೋಗಿದ್ದ ಮನುವಿಗೆ ಭವಾನಿ ಪದೇ ಪದೇ ಫೋನ್‍ ಮಾಡುತ್ತಿದ್ದಳು.

ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ Read More »

ಹೋಟೆಲ್‌ ಕೊಠಡಿಯಲ್ಲಿ ತಾಯಿ, ನಾಲ್ವರು ಸಹೋದರಿಯರನ್ನು ಸಾಯಿಸಿದ ಯುವಕ

ಲಖನೌ : ಯುವಕನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹೋಟೆಲಿನ ಕೊಠಡಿಯಲ್ಲಿ ಕೂಡಿ ಹಾಕಿ ಸಾಯಿಸಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಲಖನೌನ ನಾಕಾ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಒಂದೇ ಕುಟುಂಬದ ಐವರ ಮೃತದೇಹಗಳು ಕೊಲೆಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಲಖನೌದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ ತಿಳಿಸಿದ್ದಾರೆ. ಆರೋಪಿಯನ್ನು ಆರ್ಷದ್ (24) ಎಂದು ಗುರುತಿಸಲಾಗಿದೆ. ತನ್ನ ತಾಯಿ ಮತ್ತು ನಾಲ್ವರು

ಹೋಟೆಲ್‌ ಕೊಠಡಿಯಲ್ಲಿ ತಾಯಿ, ನಾಲ್ವರು ಸಹೋದರಿಯರನ್ನು ಸಾಯಿಸಿದ ಯುವಕ Read More »

ದೇವಸ್ಥಾನ ಪ್ರವೇಶಿಸುವಾಗ ಅಂಗಿ ಕಳಚಿಡುವ ಪದ್ಧತಿಗೆ ಶ್ರೀಗಳ ಆಕ್ಷೇಪ

ಇಂಥ ನಿಯಮಗಳು ಅನಿಷ್ಟ ಎಂದು ಹೇಳಿದ ಸ್ವಾಮೀಜಿ ತಿರುವನಂತಪುರಂ: ದೇವಸ್ಥಾನದೊಳಗೆ ಪ್ರವೇಶಿಸುವಾಗ ಪುರುಷರು ಅಂಗಿ ಕಳಚಿಡುವ ಪದ್ಧತೆ ಅನಿಷ್ಟಕಾರಕ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಕೇರಳ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಲೂ ಪುರುಷರು ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯಲು ಅಂಗಿ ಕಳಚಿ ಒಳಗೆ ಹೋಗಬೇಕೆಂಬ ನಿಯಮ ಆಚರಣೆಯಲ್ಲಿದೆ. ಈ ಸಂಪ್ರದಾಯ ನಿಲ್ಲಿಸಬೇಕು ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ. ಸಮಾಜ ಸುಧಾರಕ ನಾರಾಯಣ ಗುರು ಸ್ಥಾಪಿಸಿದ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ

ದೇವಸ್ಥಾನ ಪ್ರವೇಶಿಸುವಾಗ ಅಂಗಿ ಕಳಚಿಡುವ ಪದ್ಧತಿಗೆ ಶ್ರೀಗಳ ಆಕ್ಷೇಪ Read More »

ಮಹಾಕುಂಭಮೇಳ : ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು

ಜನವರಿ 18, ಫೆಬ್ರವರಿ 15ರಂದು ವಿಶೇಷ ರೈಲು ಮಂಗಳೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ.14ರಿಂದ ಪ್ರಾರಂಭವಾಗಲಿರುವ ಮಹಾಕುಂಭಮೇಳಕ್ಕೆ ಮಂಗಳೂರಿನಿಂದಲೂ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.ಮಹಾಕುಂಭಮೇಳಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ದೇಶದ ಮೂಲೆ ಮೂಲೆಯಿಂದ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪ್ರಯಾಗ್‌ರಾಜ್, ವಾರಣಾಸಿಗೆ ವಿಶೇಷ ರೈಲುಗಳು ಸಂಪರ್ಕ ಕಲ್ಪಿಸಲಿವೆ. ಮಂಗಳೂರಿನಿಂದ ಕೂಡ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ಸೆಂಟ್ರಲ್‌ನಿಂದ ವಾರಣಾಸಿಗೆ ವಿಶೇಷ ರೈಲು ಸಂಚರಿಸಲಿದೆ. ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು ಜನವರಿ 18 ಮತ್ತು ಫೆಬ್ರವರಿ 15ರಂದು

ಮಹಾಕುಂಭಮೇಳ : ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ

ಹೊಸದಿಲ್ಲಿ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಸು ಇಳಿಸುವ ಮೂಲಕ ತೈಲ ಕಂಪನಿಗಳು ಜನತೆಗೆ ಹೊಸ ವರ್ಷದ ಗಿಫ್ಟ್‌ ನೀಡಿವೆ. ಕಳೆದ ವರ್ಷವಿಡೀ ನಿರಂತರ ಏರಿಕೆ ಕಂಡಿದ್ದ ಎಲ್‌ಪಿಜಿ ಸಿಲಿಂಡರ್‌ ದರ ಹೊಸ ವರ್ಷದ ಮೊದಲ ದಿನವೇ ತುಸು ಇಳಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್ ಬೆಲೆ 14.50 ರೂಪಾಯಿಯಷ್ಟು ಇಳಿಕೆ ಕಂಡಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ ಬೆಲೆ ಪರಿಷ್ಕರಣೆ ಮಾಡುತ್ತವೆ.

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ Read More »

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.ಟ್ವಿಟರ್‌ನಲ್ಲಿ ಶೂಭಾಶಯ ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2025ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಈ ಸಂದರ್ಭದಲ್ಲಿ ಭಾರತ ಮತ್ತು ವಿಶ್ವಕ್ಕೆ ಉಜ್ವಲ, ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ಎಲ್ಲರಿಗೂ

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ Read More »

ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ

ಕರ್ನಾಟಕದ ಸಿಎಂ ಬಳಿ ಎಷ್ಟು ಸಂಪತ್ತು ಇದೆ ಗೊತ್ತೇ? ಹೊಸದಿಲ್ಲಿ: ದೇಶದ ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೂರನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಿರಿವಂತ ಸಿಎಂಗಳ ಸಾಲಿನಲ್ಲಿ ಮೊದಲ ಹಾಗೂ ಅರುಣಾಚಲ ಪ್ರದೇಶದ ಪೆಮಾ ಖಂಡು ಎರಡನೇ ಸ್ಥಾನದಲ್ಲಿದ್ದಾರೆ. ಚಂದ್ರಬಾಬು ನಾಯ್ಡು 931 ಕೋಟಿ ರೂ. ಹಾಗೂ ಪೆಮಾ

ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ Read More »

ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು

ಸೋತು ಸುಣ್ಣವಾದ ಟೀಂ ಇಂಡಿಯಾ ಹೋರಾಟ 155 ರನ್‌ಗಳಿಗೆ ಮುಕ್ತಾಯ ಮೆಲ್ಬೋರ್ನ್​: ಮೆಲ್ಬೋರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತವನ್ನು ಬಗ್ಗುಬಡಿದು ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಯಾಮ್​ ಕೊನ್​ಸ್ಟಾಸ್ (60), ಉಸ್ಮಾನ್ ಖ್ವಾಜಾ (57), ಮಾರ್ನಸ್

ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು Read More »

ಹೊಸ ವರ್ಷಾಚರಣೆ ವಿರುದ್ಧ ಮುಸ್ಲಿಂ ಜಮಾತ್‌ ಫತ್ವಾ

ಯುವಕ-ಯುವತಿಯರು ಹೊಸ ವರ್ಷದ ನೆಪದಲ್ಲಿ ಮೋಜು ಮಾಡದಂತೆ ಸೂಚನೆ ಹೊಸದಿಲ್ಲಿ: ಇಡೀ ಜಗತ್ತು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದರೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಮುಸ್ಲಿಮರು ಹೊಸವರ್ಷಾಚರಣೆ ಸಂಭ್ರಮ ಮಾಡಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೊಸ ವರ್ಷಾಚರಣೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿರುವುದರಿಂದ ನೈಜ ಮುಸ್ಲಿಮರು ಇಂಥ ಸಂಭ್ರಮಗಳಲ್ಲಿ ಭಾಗಿಯಾಗಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಮುಸ್ಲಿಮರು ಹೊಸವರ್ಷಾಚರಣೆಯ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುವ ಬದಲು ತಮ್ಮ ನಂಬಿಕೆಗೆ

ಹೊಸ ವರ್ಷಾಚರಣೆ ವಿರುದ್ಧ ಮುಸ್ಲಿಂ ಜಮಾತ್‌ ಫತ್ವಾ Read More »

error: Content is protected !!
Scroll to Top