ದೇಶ

ಮಾನವ ಕಲ್ಯಾಣಕ್ಕೆ ಕೃತಕ ಬುದ್ಧಿಮತ್ತೆ ಬಳಕೆ : ನರೇಂದ್ರ ಮೋದಿ ಪ್ರತಿಪಾದನೆ

AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ MANAV ಸೂತ್ರ ತಿಳಿಸಿದ ಪ್ರಧಾನಿ ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಉಪಯೋಗಿಸುವುದು ಭಾರತದ ಗುರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಇಂದು ನಡೆದ AI ಇಂಪ್ಯಾಕ್ಟ್‌ ಶೃಂಗಸಭೆ 2026ನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಭವಿಷ್ಯದ AI ನೀಲನಕ್ಷೆಯನ್ನು ಸಭೆಯ ಮುಂದೆ ಬಿಚ್ಚಿಟ್ಟರು. ವಿಶ್ವದ ಯುವಕರು AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಮತ್ತು ಅದರ ಮಾಲೀಕತ್ವವನ್ನು ಪಡೆದುಕೊಳ್ಳುತ್ತಿರುವ ವೇಗ ನಿಜಕ್ಕೂ ಶ್ಲಾಘನೀಯ. ಭಾರತದಲ್ಲಿ ಆಯೋಜಿಸಿರುವ […]

ಮಾನವ ಕಲ್ಯಾಣಕ್ಕೆ ಕೃತಕ ಬುದ್ಧಿಮತ್ತೆ ಬಳಕೆ : ನರೇಂದ್ರ ಮೋದಿ ಪ್ರತಿಪಾದನೆ Read More »

ಟಿ20 ವಿಶ್ವಕಪ್‌ : ಸಂಭ್ರಮಕ್ಕಿಂತ ಕಳವಳ ಹುಟ್ಟಿಸಿದ ನಾಲ್ಕನೇ ಗೆಲುವು

ದುರ್ಬಲ ನೆದರ್ಲ್ಯಾಂಡ್ಸ್ ವಿರುದ್ಧ ಬರೀ 17 ರನ್‌ಗಳಿಂದ ಗೆದ್ದ ಟೀಂ ಇಂಡಿಯಾ ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್​ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೀ 17 ರನ್​ಗಳಿಂದ ಗೆದ್ದಿರುವುದು ಕ್ರಿಕೆಟ್‌ ಪ್ರೇಮಿಗಳಲ್ಲಿ ಆತಂಕವುಂಟು ಮಾಡಿದೆ. ನೆದರ್ಲ್ಯಾಂಡ್ಸ್‌ನಂಥ ದುರ್ಬಲ ತಂಡದ ಎದುರು ಚಾಂಪಿಯನ್‌ ತಂಡವೊಂದು ಆಡುವ ಆಟ ಇದಾಗಿರಲಿಲ್ಲ. ಭಾರತ ಸತತ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಅಜೇಯ ಓಟವನ್ನೇನೋ ಮುಂದವರೆಸಿದೆ. ಇನ್ನಿರುವುದು ಸೂಪರ್‌ 8ರ ಘಟ್ಟದ

ಟಿ20 ವಿಶ್ವಕಪ್‌ : ಸಂಭ್ರಮಕ್ಕಿಂತ ಕಳವಳ ಹುಟ್ಟಿಸಿದ ನಾಲ್ಕನೇ ಗೆಲುವು Read More »

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ : 9 ನ್ಯಾಯಾಧೀಶರ ಪೀಠದಲ್ಲಿ ಅಂತಿಮ ವಿಚಾರಣೆ

ಸಂವಿಧಾನ ಪೀಠದಲ್ಲಿ ಏ.22ರೊಳಗೆ ಮುಕ್ತಾಯವಾಗಲಿರುವ ವಿಚಾರಣೆ ನವದೆಹಲಿ: ಶಬರಿಮಲೆ ದೇಗುಲವೂ ಸೇರಿ ಕೆಲ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸುವ ತಾರತಮ್ಯ ಕುರಿತಾದ ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿ ಆದೇಶಿಸಿದೆ. ಈ ಸಾಂವಿಧಾನಿಕ ಪೀಠ ಏ.7ರಿಂದ ಅರ್ಜಿಗಳ ವಿಚಾರಣೆ ಆರಂಭಿಸಿ ಏ.22ರೊಳಗೆ ಮುಕ್ತಾಯಗೊಳಿಸಲಿದೆ. ಪುನರ್‌ ಪರಿಶೀಲನೆಯನ್ನು ಬೆಂಬಲಿಸುವವರ ಅರ್ಜಿ ಏ.7ರಿಂದ ಏ.9ರ ನಡುವೆ ವಿಚಾರಣೆಗೆ ಬರಲಿದೆ. ಆ ಬಳಿಕ ಏ.14ರಿಂದ ಏ.16ರವರೆಗೆ ತೀರ್ಪಿನ ಪುನರ್‌ ಪರಿಶೀಲನಾ ಅರ್ಜಿಗಳ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ : 9 ನ್ಯಾಯಾಧೀಶರ ಪೀಠದಲ್ಲಿ ಅಂತಿಮ ವಿಚಾರಣೆ Read More »

ಮಂಗಳವಾರ ಕಂಕಣ ಸೂರ್ಯ ಗ್ರಹಣ

ಎಷ್ಟು ಹೊತ್ತಿಗೆ ಗ್ರಹಣ, ಎಲ್ಲೆಲ್ಲಿ ಗೋಚರ? ನವದೆಹಲಿ: 2026ರ ಮೊದಲ ಸೂರ್ಯ ಗ್ರಹಣ ಮಂಗಳವಾರ (ಫೆ.17) ಗೋಚರವಾಗಲಿದೆ. ಇದನ್ನ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಮಂಗಳವಾರ ಮಧ್ಯಾಹ್ನ 3.26ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7.57ಕ್ಕೆ ಕೊನೆಗೊಳ್ಳಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96%ರಷ್ಟನ್ನು ಚಂದ್ರ ಆವರಿಸಲಿದೆ. ಆದ್ರೆ ಈ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕದ ಕೆಲವು ಭಾಗಗಳು, ಟಾಂಜಾನಿಯಾ,

ಮಂಗಳವಾರ ಕಂಕಣ ಸೂರ್ಯ ಗ್ರಹಣ Read More »

400 ಕೋ. ರೂ. ದರೋಡೆ ಕಟ್ಟುಕಥೆ!

ಬೆಳಗಾವಿಯ ಘಾಟಿಯಲ್ಲಿ ಇಂಥ ಘಟನೆಯೇ ನಡೆದಿಲ್ಲ ಎಂದು ತನಿಖೆಯಿಂದ ಸಾಬೀತು ಬೆಳಗಾವಿ : ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಈಗ ದಿಢೀರ್‌ ತಿರುವು ಪಡೆದುಕೊಂಡಿದ್ದು, ಇಡೀ ಘಟನೆಯೇ ಸುಳ್ಳು ಎನ್ನುವ ಮಾಹಿತಿ ಹೊರಬಿದ್ದಿದೆ. ಘಟನೆ ಕಟ್ಟುಕಥೆ ಎಂಬ ಅನುಮಾನಕ್ಕೆ ಬಲವಾದ ಪುರಾವೆ ಸಿಕ್ಕಿದೆ. ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ

400 ಕೋ. ರೂ. ದರೋಡೆ ಕಟ್ಟುಕಥೆ! Read More »

ಪಂದ್ಯ ಮುಗಿಯುವ ಮೊದಲೇ ಸ್ಟೇಡಿಯಂನಿಂದ ಕಾಲ್ಕಿತ್ತ ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ

ಅಧ್ಯಕ್ಷ ಮೊಹ್ಸಿನ್ ನಖ್ವಿ ತರಾತರಿಯಿಂದ ಕಾರಿನತ್ತ ಧಾವಿಸುವ ವಿಡಿಯೋ ವೈರಲ್‌ ಕೊಲಂಬೊ: ಇಲ್ಲಿ ನಡೆದ ಟಿ20 ವಿಶ್ವಕಪ್‌ ಮ್ಯಾಚ್‌ನಲ್ಲಿ ಭಾರತದ ಎದುರು ಸೋತ ಪಾಕಿಸ್ತಾನ ಮಾಮೂಲಿಯಂತೆ ವಿಪರೀತ ಟ್ರೋಲ್‌ಗೆ ಗುರಿಯಾಗಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನಿಯರು ಕೂಡ ಪಾಕಿಸ್ತಾನ ತಂಡವನ್ನು ನಾನಾ ರೀತಿಯಲ್ಲಿ ಲೇವಡಿ ಮಾಡುತ್ತಿದ್ದಾರೆ. ಗ್ರೇಟೆಸ್ಟ್ ರೈವಲ್ರಿ ಎಂದು ಹೇಳಿಕೊಂಡರೂ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ತಂಡದ ಕಡೆಯಿಂದ ಯಾವುದೇ ರೀತಿಯ ಪೈಪೋಟಿ ಕಂಡು ಬರುತ್ತಿಲ್ಲ. ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ 61 ರನ್‌ಗಳ

ಪಂದ್ಯ ಮುಗಿಯುವ ಮೊದಲೇ ಸ್ಟೇಡಿಯಂನಿಂದ ಕಾಲ್ಕಿತ್ತ ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ Read More »

ಟಿ20 ವಿಶ್ವಕಪ್‌ : ಭಾರತದ ಬೌಲಿಂಗ್‌ಗೆ ಪಾಕಿಸ್ತಾನ ಧೂಳೀಪಟ

61 ರನ್‌ಗಳ ಗೆಲುವಿನೊಂದಿಗೆ ಸೂಪರ್‌ 8ಕ್ಕೆ ಟೀಮ್‌ ಇಂಡಿಯಾ ಎಂಟ್ರಿ ಕೊಲಂಬೊ: ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ವಿಭಾಗದಲ್ಲಿ ಪಾರಮ್ಯ ಮೆರೆದ ಭಾರತ 61 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ಇತಿಹಾಸ ನಿರ್ಮಿಸಿದೆ. ದಾಖಲೆಯ ಜಯದೊಂದಿಗೆ ಗ್ರೂಪ್‌ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಟೀಂ ಇಂಡಿಯಾ ಸೂಪರ್‌ 8 ಹಂತವನ್ನು ಪ್ರವೇಶಿಸಿದೆ. ಗೆಲ್ಲಲು 176 ರನ್‌ಗಳ ಕಠಿಣ ಗುರಿ ಪಡೆದ ಪಾಕಿಸ್ತಾನ 18

ಟಿ20 ವಿಶ್ವಕಪ್‌ : ಭಾರತದ ಬೌಲಿಂಗ್‌ಗೆ ಪಾಕಿಸ್ತಾನ ಧೂಳೀಪಟ Read More »

ಟಿ20 ವಿಶ್ವಕಪ್‌ : ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ

ಬದ್ಧ ಎದುರಾಳಿಗಳನ್ನು ಸೋಲಿಸಲು ಸಜ್ಜಾಗಿರುವ ಉಭಯ ತಂಡ ಕೊಲಂಬೊ : ಟಿ20 ವಿಶ್ವಕಪ್‌ನಲ್ಲಿ ಇಂದಿನ ಹೈ ವೋಲ್ಟೇಜ್‌ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಹಣಾಹಣಿಗೆ ಭಾರತ ತಂಡ ಸಿದ್ಧವಾಗಿದೆ. ಈ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್​ 11ನಲ್ಲಿ ಬದಲಾವಣೆಯಾಗುವುದು ಖಚಿತ. ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಆಡುವ ಸಾಧ್ಯತೆ ಇದೆ. ಇತ್ತ ಪಾಕಿಸ್ತಾನ ಕೂಡ ಕಳೆದೆರಡು ಪಂದ್ಯಗಳಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು.

ಟಿ20 ವಿಶ್ವಕಪ್‌ : ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ Read More »

ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಕ್ರಿಕೆಟ್‌ ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದ ಮುನ್ಸೂಚನೆ ಕೊಲಂಬೊ: ಹಲವು ಅಡ್ಡಿಗಳ ಬಳಿಕ ಕೊನೆಗೂ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿಕೊಂಡಿದೆ. ಭಾನುವಾರ ಶ್ರೀಲಂಕಾದಲ್ಲಿ ನಡೆಯಲಿರುವ ಈ ಹೈ ವೋಲ್ಟೇಜ್‌ ಪಂದ್ಯವನ್ನು ನೋಡಲು ಕ್ರಿಕೆಟ್‌ ಅಭಿಮಾನಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ಅವರ ಕುತೂಹಲಕ್ಕೆ ತಣ್ಣೀರು ಎರಚುವ ಸುದ್ದಿಯ್ನು ಹವಾಮಾನ ಇಲಾಖೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಭಾನುವಾರ ನಡೆಯುವ ರಣರೋಚಕ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ Read More »

ಸೇವಾ ತೀರ್ಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಪ್ರಧಾನಮಂತ್ರಿ ಕಚೇರಿ ಸೇವಾತೀರ್ಥವನ್ನು ಉದ್ಘಾಟಿಸಿದ್ದಾರೆ. ಈ ಕಚೇರಿಯ್ನನು ಆಧುನಿಕ, ಪರಿಸರಸ್ನೇಹಿ, ಸುರಕ್ಷಿತ, ದಕ್ಷ ಮತ್ತು ನಾಗರಿಕ ಕೇಂದ್ರಿತ ಆಡಳಿತ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಸಈ ಹೆಸರಿನ ಕೆಳಗೆ ನಾಗರಿಕ ದೇವೋ ಭವ (ಪ್ರಜೆಗಳೇ ದೇವರು) ಎಂದು ಕೂಡ ಬರೆಯಲಾಗಿದೆ. ಅನೇಕ ದಶಕಗಳ ಕಾಲ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ಅನೇಕ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ಹಲವು ಪ್ರತ್ಯೇಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಕಾರ್ಯಾಚರಣೆಯಲ್ಲಿ ಸಮನ್ವಯ

ಸೇವಾ ತೀರ್ಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ Read More »

error: Content is protected !!
Scroll to Top