ದೇಶ

ಭಾರತದ ಜೊತೆ ಆಡಲು ಮೂರು ಬೇಡಿಕೆ ಮುಂದಿಟ್ಟ ಪಾಕಿಸ್ತಾನ

ಬಾಂಗ್ಲಾದೇಶವನ್ನು ಬೆಂಬಲಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿರುವ ಪಾಕ್‌ ದುಬೈ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಜೊತೆ ಆಡುವುದಿಲ್ಲ ಎಂದು ಹೇಳಿ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಈಗ ತನ್ನ ನಿಲುವು ಬದಲಿಸಲು ಮುಂದಾಗಿದೆ. ಭಾರತದ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯವಾಡಲು ಭಾರಿ ಹೈಡ್ರಾಮಾ ನಡೆಸುತ್ತಿರುವ ಪಾಕಿಸ್ತಾನ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದೆ ಮೂರು ಮಹತ್ವದ ಬೇಡಿಕೆ ಮುಂದಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಫೆ.15 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಭಾರತದ ವಿರುದ್ಧ ನಿಗದಿಯಾಗಿದ್ದ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಪಾಕಿಸ್ತಾನ […]

ಭಾರತದ ಜೊತೆ ಆಡಲು ಮೂರು ಬೇಡಿಕೆ ಮುಂದಿಟ್ಟ ಪಾಕಿಸ್ತಾನ Read More »

ಟಿ20 ವಿಶ್ವಕಪ್‌ : ಅನನುಭವಿ ಅಮೆರಿಕ ಎದುರು ತಿಣುಕಾಡಿದ ಭಾರತ

ಮೊದಲ ಪಂದ್ಯದಲ್ಲೇ ಬ್ಯಾಟಿಂಗ್‌ ಬಂಡವಾಳ ಬಯಲು; ಪ್ರಯಾಸದ ಜಯ ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಮೆರಿಕ ನಡುವಿನ 2026ರ ಟಿ20 ವಿಶ್ವಕಪ್ ಮೊದಲ ದಿನದ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಜಯ ದಾಖಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಗಿಳಿದಿರುವ ಭಾರತ ಗೆಲುವಿನ ಶುಭಾರಂಭ ಮಾಡಿದೆ. ಕ್ರಿಕೆಟಿನಲ್ಲಿನ್ನೂ ಅಂಬೆಗಾಲಿಡುತ್ತಿರುವ ಅಮೆರಿಕ ತಂಡವನ್ನು ಭಾರತ ಸೋಲಿಸಿದೆ. ಈ ಪಂದ್ಯದಲ್ಲಿ ದುರ್ಬಲ ತಂಡದ ಎದುರು ಭಾರತ ದಾಖಲೆಗಳ ಮೇಲೆ ದಾಖಲೆ ಬರೆಯಬಹುದು ಎಂಬ ನಿರೀಕ್ಷೆ

ಟಿ20 ವಿಶ್ವಕಪ್‌ : ಅನನುಭವಿ ಅಮೆರಿಕ ಎದುರು ತಿಣುಕಾಡಿದ ಭಾರತ Read More »

ಭಾರತದ ಸುಂಕ ಕಡಿತ ಒಪ್ಪಂದಕ್ಕೆ ಟ್ರಂಪ್‌ ಅಂಕಿತ

ಭಾರತ-ಅಮೆರಿಕ 500 ಶತಕೋಟಿ ಡಾಲರ್‌ ವ್ಯಾಪಾರ ಒಪ್ಪಂದ ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಬಿದ್ದಿದೆ. ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ಸುಂಕ ಕಡಿತಗೊಳಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಅಮೆರಿಕ ಮತ್ತು ಭಾರತದ ನಡುವೆ 500 ಶತಕೋಟಿ ಡಾಲರ್‌ ಒಪ್ಪಂದವಾಗಿದ್ದು, ಈ ಹಿನ್ನೆಲೆ ಭಾರತದ ಮೇಲಿನ ಮೂಲ ಸುಂಕವನ್ನು 25% ನಿಂದ 15%ಗೆ ಇಳಿಕೆ ಮಾಡಲಾಗಿತ್ತು. ಇದೀಗ

ಭಾರತದ ಸುಂಕ ಕಡಿತ ಒಪ್ಪಂದಕ್ಕೆ ಟ್ರಂಪ್‌ ಅಂಕಿತ Read More »

ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ

ಮೊದಲ ದಿನ ಭಾರತ-ಅಮೆರಿಕ ಮುಖಾಮುಖಿ ಮುಂಬೈ: ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಇಂದಿನಿಂದ ಶುರುವಾಗುತ್ತಿದೆ. ಭಾರತದ 5 ಹಾಗೂ ಶ್ರೀಲಂಕಾದ 3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಭಾರತ ತಂಡ ಸೇರಿದಂತೆ ಎಲ್ಲಾ 20 ತಂಡಗಳು ಈ ಮೆಗಾ ಟೂರ್ನಮೆಂಟ್‌ಗಾಗಿ ತಯಾರಿ ಪೂರ್ಣಗೊಳಿಸಿ ಅಖಾಡಕ್ಕಿಳಿಯಲು ಸಜ್ಜಾಗಿವೆ. ಈಗಾಗಲೇ ಎರಡು ಬಾರಿ ಟ್ರೋಫಿ ಗೆದ್ದಿರುವ ಭಾರತ ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. ಇದಕ್ಕೆ

ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ Read More »

ತಿರುಪತಿ ಲಡ್ಡುಗೆ ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್‌ ಬಳಕೆ : ಚಂದ್ರಬಾಬು ನಾಯ್ಡು ಆರೋಪ

ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದ ಸಿಎಂ ಹೈದರಾಬಾದ್ : ಜಗತ್​ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಇನ್ನೂ ಮುಗಿದಿಲ್ಲ. ಸ್ನಾನಗೃಹ, ಶೌಚಗೃಹ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಕಲಬೆರಕೆ ಮಾಡಿರುವ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿನ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ

ತಿರುಪತಿ ಲಡ್ಡುಗೆ ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್‌ ಬಳಕೆ : ಚಂದ್ರಬಾಬು ನಾಯ್ಡು ಆರೋಪ Read More »

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್‌ ಯಾದವ್‌ ತಿಹಾರ್‌ ಜೈಲುಪಾಲು

ಕೇಸಿನಲ್ಲಿ ರಿಲೀಫ್‌ ನೀಡಲು ನಿರಾಕರಿಸಿದ ನ್ಯಾಯಾಲಯ ನವದೆಹಲಿ: ಬಾಲಿವುಡ್‌ನ ಹಾಸ್ಯ ನಟ ರಾಜ್​ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದಾರೆ. ಪ್ರಕರಣದಲ್ಲಿ ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಅವರು ಜೈಲಿಗೆ ಹೋಗಿದ್ದು, ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ. ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್​​ಪಾಲ್ ವಿರುದ್ಧ

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್‌ ಯಾದವ್‌ ತಿಹಾರ್‌ ಜೈಲುಪಾಲು Read More »

ರಾಹುಲ್ ಗಾಂಧಿ ಪರ ರಾಜ್ಯಸಭೆಯಲ್ಲಿ ಖರ್ಗೆ ಬ್ಯಾಟಿಂಗ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡುವುದಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ಈ ವಿಷಯ ಮೇಲ್ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು. ರಾಹುಲ್ ಗಾಂಧಿಗೆ ನರವಣೆ ಅವರ ಪುಸ್ತಕ ಉಲ್ಲೇಖಿಸಲು ಬಿಡುತ್ತಿಲ್ಲ. ಚೀನಾ ವಿಚಾರ ಎತ್ತಿದರೆ ಕೇಂದ್ರ ಸರ್ಕಾರಕ್ಕೆ ತುರಿಸುತ್ತದೆ ಎಂದರು. ಇದಕ್ಕೆ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ವಿರೋಧ ವ್ಯಕ್ತಪಡಿಸಿದ್ದು, ಲೋಕಸಭೆಯ ಸಂಗತಿಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುವುದು ನಿಯಮ ಬಾಹಿರ ಎಂದು ಹೇಳಿದರು. ಹೀಗಿದ್ದರೂ ಮಾತು ಮುಂದುವರಿಸಿದ ಖರ್ಗೆ, ಸಂಸತ್ತು

ರಾಹುಲ್ ಗಾಂಧಿ ಪರ ರಾಜ್ಯಸಭೆಯಲ್ಲಿ ಖರ್ಗೆ ಬ್ಯಾಟಿಂಗ್ Read More »

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ

ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಭಾರತದ ಜೊತೆ ಆಡದಿರಲು ನಿರ್ಧಾರ ಇಸ್ಲಾಮಾಬಾದ್‌ : ಮುಂಬರುವ ಶನಿವಾರದಿಂದ ಪ್ರಾರಂಭವಾಗಲಿರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15ರಂದು ಭಾರತ–ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ. ಪಾಕಿಸ್ತಾನದ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ Read More »

ಒಂಬತ್ತನೇ ಮಹಡಿಯಿಂದ ಜಿಗಿದು ಮೂವರು ಹದಿಹರೆಯದ ಸಹೋದರಿಯರು ಆತ್ಮಹತ್ಯೆ

ಗೇಮಿಂಗ್‌ app ವ್ಯಸನದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಲಖನೌ : ಮೂವರು ಹದಿಹರೆಯದ ಸಹೋದರಿಯರು ವಸತಿ ಸಂಕೀರ್ಣದ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ನಗರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಈ ಬಾಲಕಿಯರು ಕೊರಿಯಾ ಮೂಲದ ಗೇಮ್‌ appನ ವ್ಯಸನಿಗಳಾಗಿದ್ದರು. ಅವರ ಆತ್ಮಹತ್ಯೆಗೆ ಇದೇ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಮ್ಮಿ, ಪಾಪಾ ಸಾರಿ ಎಂದು ಡೆತ್‌ನೋಟ್‌ ಬರೆದಿಟ್ಟು ಮೂವರು ಸಹೋದರಿಯರು ಏಕಕಾಲದಲ್ಲಿ ತಮ್ಮ ಮನೆಯಿದ್ದ ವಸತಿ ಸಂಕೀರ್ಣದ

ಒಂಬತ್ತನೇ ಮಹಡಿಯಿಂದ ಜಿಗಿದು ಮೂವರು ಹದಿಹರೆಯದ ಸಹೋದರಿಯರು ಆತ್ಮಹತ್ಯೆ Read More »

ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಅಪಘಾತ

ಎರಡೂ ವಿಮಾನಗಳ ರೆಕ್ಕೆಗಳಿಗೆ ಹಾನಿ ಮುಂಬೈ : ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಎರಡು ಪ್ರಯಾಣಿಕ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ. ಇದೊಂದು ಗಂಭೀರವಾದ ನಿರ್ವಹಣಾ ಲೋಪ ಎಂದು ಪರಿಗಣಿಸಲಾಗಿದೆ. ಘಟನೆ ಸಂಭವಿಸುವ ಸಂದರ್ಭದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು. ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಕೊಯಂಬತ್ತೂರಿಗೆ ಹಿಂದಿರುಗಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಹಾಗೂ ಹೈದರಾಬಾದ್‌ನಿಂದ ಆಗಮಿಸಿದ ಬಳಿಕ ನಿಲುಗಡೆ ಸ್ಥಳಕ್ಕೆ ಚಲಿಸುತ್ತಿದ್ದ ಇಂಡಿಗೋ ವಿಮಾನದ ನಡುವೆ ಢಿಕ್ಕಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಅಪಘಾತ Read More »

error: Content is protected !!
Scroll to Top