ದಕ್ಷಿಣ ಕನ್ನಡ

ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸ್ವಸ್ಥಿಕ್ ಎ.ಕೆ. ಇನ್‍ಸ್ಪೈರ್ ಅವಾರ್ಡ್‍ ಗೆ ಆಯ್ಕೆ

ಕಡಬ: ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ  ಸ್ವಸ್ತಿಕ್ ಎ.ಕೆ. ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್‍ಸ್ಪೈರ್  ಅವಾರ್ಡ್‍ ಗೆ ಆಯ್ಕೆಯಾಗಿದ್ದಾರೆ. 8ನೇ ತರಗತಿಯಲ್ಲಿ ಓದುತ್ತಿರುವ ಸ್ವಸ್ತಿಕ್ ಕುಶಾಲಪ್ಪ ಅಂಬುಲ ಹಾಗೂ ಜಯಪ್ರಭಾ ದಂಪತಿ ಪುತ್ರ. ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಸಹಕಾರದಲ್ಲಿ ವಿಜ್ಞಾನ ಶಿಕ್ಷಕಿ ಜ್ಯೋತಿ ಬಿ. ಮಾರ್ಗದರ್ಶನ ನೀಡಿದ್ದರು.

ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸ್ವಸ್ಥಿಕ್ ಎ.ಕೆ. ಇನ್‍ಸ್ಪೈರ್ ಅವಾರ್ಡ್‍ ಗೆ ಆಯ್ಕೆ Read More »

ಯುವಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ | ಪಾರು ಮಾಡಿದ ಸ್ಥಳೀಯರು

ಬಂಟ್ವಾಳ: ಪುತ್ತೂರಿನ ಯುವಕನೋರ್ವ ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಆನಂದ ಎಂಬವರ ಪುತ್ರ ನಿಶ್ಚಿತ್ (25) ಆತ್ಮಹತ್ಯೆಗೆ ಯತ್ನಿಸಿದಾತ. ಪದವೀಧರನಾಗಿದ್ದರೂ ನಿರುದ್ಯೋಗಿಯಾಗಿರುವ ಆತ ಸೂಕ್ತ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಸೋಮವಾರ ದ್ವಿಚಕ್ರದಲ್ಲಿ ಬಂದಾತ ನದಿಗೆ ಹಾರುವ ಸಿದ್ಧತೆಯಲ್ಲಿದ್ದಾಗ ಸ್ಥಳೀಯ ನಿವಾಸಿಗಳಾದ  ಹನೀಫ್, ಸಲ್ಮಾನ್ ಫಾರಿಸ್, ಇರ್ಫಾನ್ ಖಲೀಲ್, ನೌಫಲ್, ತಸ್ಲಿಂ, ಮುಖ್ತಾರ್, ಪಿ.ಎಂ.ಆರೀಫ್ ಎಂಬವರು ಗಮನಿಸಿ ಆತ್ಮಹತ್ಯೆ ಯತ್ನವನ್ನು ಮೊಟಕುಗೊಳಿಸಿ ಪಾರು ಮಾಡಿದ್ದಾರೆ. ಬಳಿಕ

ಯುವಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ | ಪಾರು ಮಾಡಿದ ಸ್ಥಳೀಯರು Read More »

ಬಸ್-ಬೈಕ್ ಡಿಕ್ಕಿ | ಬೈಕ್ ಸವಾರ ಗಂಭೀರ

ಕಡಬ: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಮರ್ದಾಳದಲ್ಲಿ ಸೋಮವಾರ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಮಣಿಭಾಂಡದ ಮೆಕ್ಯಾನಿಕ್ ವಾಸು ಗಾಯಗೊಂಡ ಬೈಕ್ ಸವಾರ. ಕೆಎಸ್‍ ಆರ್‍ ಟಿಸಿ ಬಸ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‍ ಗೆ ಡಿಕ್ಕಿ ಹೊಡೆದಿದೆ. ಎನ್ನಲಾಗಿದೆ. ಗಂಭೀರ ಗಾಯಗೊಂಡ ಬೈಕ್‍ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಸ್-ಬೈಕ್ ಡಿಕ್ಕಿ | ಬೈಕ್ ಸವಾರ ಗಂಭೀರ Read More »

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಾದಂಬರಿಕಾರ ಕೆ. ಟಿ. ಗಟ್ಟಿ ನಿಧನ

ಮಂಗಳೂರು: ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ, ಹಿರಿಯ ಸಾಹಿತಿ  ಕೆ. ಟಿ. ಗಟ್ಟಿ (86) ನಿಧನ ರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಅದರಲ್ಲೂ ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಅವರು ಮೂಲತಃ ಕಾಸರಗೋಡಿನ ಕೂಡ್ಲುವಿನಲ್ಲಿ 1938 ರಲ್ಲಿ ಜನಿಸಿದ್ದರು. 1957 ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರಾದ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಳಿಯೊಡನೆ ಊರೂರು ಸುತ್ತುತ್ತಿದ್ದು, ಸಿಕ್ಕಿದ ಪುಸ್ತಕಗಳನ್ನು ಮನೆಗೆ

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಾದಂಬರಿಕಾರ ಕೆ. ಟಿ. ಗಟ್ಟಿ ನಿಧನ Read More »

ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಕಾರ್ಯಾಗಾರ ಆತಂಕದ ವಿಷಯ : ನಳಿನ್ ಕುಮಾರ್ ಕಟೀಲ್

ಮಂಗಳೂರು:  ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲು  ಕಾರ್ಯಾಗಾರ ನಡೆಸುವುದಾಗಿ ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದ್ದು, ಇದರ ಉದ್ದೇಶ ಏನು ? ಕಾರ್ಯಾಗಾರ ನಡೆಸುವವರು ಯಾರು ? ಎನ್ನುವ ಆತಂಕ ಸಹಜವಾಗಿಯೇ ಜನರಲ್ಲಿ ಮೂಡಿದೆ ಎಂದು ಸಂಸ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಜೆಟ್ ಭಾಷಣದಲ್ಲಿ ಸಾಮಾನ್ಯವಾಗಿ ಅರ್ಥಿಕ ಸಂಪನ್ಮೂಲ ಕ್ರೋಡೀಕರಣ ಮತ್ತು ಅಭಿವೃದ್ದಿ ಯೋಜನೆಗಳಿಗೆ ಹಣ ಹಂಚಿಕೆ ಬಗ್ಗೆ ರಾಜ್ಯದ ಜನತೆಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ದ್ವೇಷದ

ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಕಾರ್ಯಾಗಾರ ಆತಂಕದ ವಿಷಯ : ನಳಿನ್ ಕುಮಾರ್ ಕಟೀಲ್ Read More »

ಜೆಬಿಎಫ್ ಉದ್ಯೋಗಿಗಳಿಗೆ ಜಿಎಂಪಿಎಲ್ (ಗೇಲ್-ಇಂಡಿಯಾ) ನಲ್ಲಿ ಶೀಘ್ರದಲ್ಲೇ ಖಾಯಂ ಉದ್ಯೋಗ | ಕೇಂದ್ರ ಪೆಟ್ರೋಲಿಯಂ ಸಚಿವರ ಭರವಸೆ

ಮಂಗಳೂರು: ನವದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪೂರಿಯವರನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರು ಭೇಟಿಯಾಗಿ ಮಂಗಳೂರಿನ ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜೆಬಿಎಫ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವರಿಗೆ ನೇರವಾಗಿ ಖಾಯಂ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿದರು. ಜೆಬಿಎಫ್ ಉದ್ಯೋಗಿಗಳ ಬೇಡಿಕೆಯನ್ನು ಸಚಿವರಿಗೆ ವಿವರವಾಗಿ ಮನವರಿಕೆ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿಯೇ ಸಕರಾತ್ಮಕ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಬಂಟ್ವಾಳ

ಜೆಬಿಎಫ್ ಉದ್ಯೋಗಿಗಳಿಗೆ ಜಿಎಂಪಿಎಲ್ (ಗೇಲ್-ಇಂಡಿಯಾ) ನಲ್ಲಿ ಶೀಘ್ರದಲ್ಲೇ ಖಾಯಂ ಉದ್ಯೋಗ | ಕೇಂದ್ರ ಪೆಟ್ರೋಲಿಯಂ ಸಚಿವರ ಭರವಸೆ Read More »

ದ.ಕ.ಜಿಲ್ಲೆಯ ಲೋಕಸಭಾ ಚುನಾವಣೆಗೆ ಮೂವರ ಹೆಸರು ಪಟ್ಟಿಯಲ್ಲಿ | ಯಾರಿಗೆ ಸೀಟು ಒಲಿಯಲಿದೆ : ಕಾದು ನೋಡಬೇಕಾಗಿದೆ | ದ.ಕ. ವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಶತಪ್ರಯತ್ನ

ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡದಿಂದ ಮೂವರು ಹೆಸರು ಈಗಾಗಲೇ ಕೇಳಿ ಬರುತ್ತಿದ್ದು, ಹಿರಿಯ ಮುಖಂಡ ಮಾಜಿ ಸಚಿವ ಬಿ. ರಮಾನಾಥ ರೈ, ಯುವ ಮುಖಂಡ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಯುವ ಕಾಂಗ್ರೆಸ್ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಿರಣ್ ಗೌಡ ಬುಡ್ಲೆಗುತ್ತು. ಈ ಮೂವರಲ್ಲಿ ಒಬ್ಬರನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ. ಜಿಲ್ಲೆಯ 8 ವಿದಾನಸಭಾ ಕ್ಷೇತ್ರದ ಬ್ಲಾಕ್ ಗಳು ರಮಾನಾಥ ರೈ ಹೆಸರನ್ನು ಶಿಫಾರಸ್ಸು ಮಾಡಿ

ದ.ಕ.ಜಿಲ್ಲೆಯ ಲೋಕಸಭಾ ಚುನಾವಣೆಗೆ ಮೂವರ ಹೆಸರು ಪಟ್ಟಿಯಲ್ಲಿ | ಯಾರಿಗೆ ಸೀಟು ಒಲಿಯಲಿದೆ : ಕಾದು ನೋಡಬೇಕಾಗಿದೆ | ದ.ಕ. ವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಶತಪ್ರಯತ್ನ Read More »

ಫೆ.21-22 : ಕೋಡಿಯಡ್ಕ ತರವಾಡು ಕುಟುಂಬ ದೈವಗಳ ಧರ್ಮ ನಡಾವಳಿ

ಸುಳ್ಯ: ಕೋಡಿಯಡ್ಕ ಕುಟುಂಬದ ದೈವಗಳ ಧರ್ಮ ನಡಾವಳಿಯು ಫೆ.21 ರಿಂದ 22 ರವರೆಗೆ ನಡೆಯಲಿದೆ. ಧರ್ಮ ನಡಾವಳಿಯ ಅಂಗವಾಗಿ ಫೆ.21 ರಂದು ಬೆಳಿಗ್ಗೆ 8 ಕ್ಕೆ ಗಣಹೋಮ, ಮಧ್ಯಾಹ್ನ 11 ಕ್ಕೆ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ 6.30 ಕ್ಕೆ ಧರ್ಮದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8 ಕ್ಕೆ ಜಾವತೆ ದೈವದ ನೇಮ, ರಾತ್ರಿ 9 ಕ್ಕೆ ಅನ್ನಸಂತರ್ಪಣೆ, ರಾತ್ರಿ 10 ಕ್ಕೆ ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ನೇಮ ನಡೆಯಲಿದೆ.

ಫೆ.21-22 : ಕೋಡಿಯಡ್ಕ ತರವಾಡು ಕುಟುಂಬ ದೈವಗಳ ಧರ್ಮ ನಡಾವಳಿ Read More »

ಬೈಕ್‍ ನಲ್ಲಿ ತೆರಳುತ್ತಿದ್ದ ಯುವಕನ ಇರಿದು ಕೊಲೆಗೆ ಯತ್ನ! ಓರ್ವ ಆರೋಪಿ ಬಂಧನ

ಉಳ್ಳಾಲ: ಯುವಕನೊಬ್ಬ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಬೈಕ್‍ ತಡೆದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ಮೂಲಕ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಕುಂಪಲ ನಿವಾಸಿ ಮಹಮ್ಮದ್ ಆರೀಫ್‍ (29) ಇರಿತಕ್ಕೊಳಗಾಗಿದ್ದು, ಆರೋಪಿ ಮುಝಮ್ಮಿಲ್ ಎಂಬಾತನನ್ನು ಬಂಧಿಸಲಾಗಿದೆ. ಕುಂಪಲದಿಂದ-ಕೊಲ್ಯ ಕಡೆಗೆ ಬೈಕ್ ನಲ್ಲಿ ಧಾವಿಸುತ್ತಿದ್ದ ಮುಝಮ್ಮಿಲ್ ಮತ್ತು ನಿಸಾರ್ ಎಂಬ ಇಬ್ಬರು ಆರೀಫ್ ನನ್ನು ಕೊಲ್ಯ ಎಂಬಲ್ಲಿ ತಡೆದಿದ್ದಾರೆ. ಆರೋಪಿಗಳು ಆರೀಫ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದಾರೆ.

ಬೈಕ್‍ ನಲ್ಲಿ ತೆರಳುತ್ತಿದ್ದ ಯುವಕನ ಇರಿದು ಕೊಲೆಗೆ ಯತ್ನ! ಓರ್ವ ಆರೋಪಿ ಬಂಧನ Read More »

ಫೆ.16-21: ಮಾಣಿಲಬೀಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಬಂಟ್ವಾಳ: ತಾಲೂಕಿನ ವಿಟ್ಲ ಮಾಣಿಲಬೀಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದಿನಿಂದ ಫೆ.21 ರ ವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ವಿಷ್ಣುಮೂರ್ತಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರಾಡಳಿತ ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.16-21: ಮಾಣಿಲಬೀಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

error: Content is protected !!
Scroll to Top