ದಕ್ಷಿಣ ಕನ್ನಡ

ಮಾ.11 : ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ | ನಿರ್ದೇಶಕ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಎಸ್‍.ಎನ್‍.ಮನ್ಮಥ ನಾಮಪತ್ರ ಸಲ್ಲಿಕೆ

ಸುಳ್ಯ:  ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯ ನಿರ್ದೇಶಕ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ಮನ್ಮಥ ಅವರು ಶನಿವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.  ಮಾ.11 ರಂದು ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಶಶಿಕುಮಾ‌ರ್ ರೈ ಬಾಲ್ಯೂಟ್ಟು, ರಾಜಕೀಯ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರಾದ ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಶ್ರೀನಾಥ್ ರೈ ಬಾಳಿಲ, ಬಾಲಕೃಷ್ಣ ಕೀಲಾಡಿ, ಸತೀಶ್ ಕೆಮ್ಮನಬಳ್ಳಿ, […]

ಮಾ.11 : ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ | ನಿರ್ದೇಶಕ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಎಸ್‍.ಎನ್‍.ಮನ್ಮಥ ನಾಮಪತ್ರ ಸಲ್ಲಿಕೆ Read More »

ದ್ವಿಚಕ್ರ ವಾಹನ ಕಳವು : ಪ್ರಕರಣ ದಾಖಲು

ಬೆಳ್ತಂಗಡಿ: ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಬೇಕರಿಯೊಂದರ ಸಮೀಪದ ಹೊಂಡಾ ಯೂನಿಕಾರ್ನ್‍ ದ್ವಿಚಕ್ರ ವಾಹನವನ್ನು ಉಜಿರೆಯ ರಾಜು ಎಂಬವರು ನಿಲ್ಲಿಸಿದ್ದರು. ಒಂದು ಗಂಟೆ ಬಳಿಕ ಬಂದು ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ. ಸುತ್ತಮುತ್ತಲು ಹುಡುಕಾಡಿದರೂ ಎಲ್ಲೂ ಸಿಗದಿದ್ದ ಹಿನ್ನಲೆಯಲ್ಲಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ದ್ವಿಚಕ್ರ ವಾಹನ ಕಳವು : ಪ್ರಕರಣ ದಾಖಲು Read More »

ಬಸ್-ಬೈಕ್ ಡಿಕ್ಕಿ | ವಿದ್ಯಾರ್ಥಿ ಸಿನಾನ್ ಮೃತ್ಯು

ಮಂಗಳೂರು: ಬೈಕ್ ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸಮೀಪದ ಜಲಾಲಿಯಾ ನಗರದ ನಿವಾಸಿ ಸಿನಾನ್ (21) ಮೃತಪಟ್ಟ ವಿದ್ಯಾರ್ಥಿ. ಸಿನಾನ್ ಮಂಗಳೂರಿನ ಯೆನಪೋಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಪಾರ್ಟ್ ಟೈಮ್ ನಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು, ಈ ಮೂಲಕ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಫುಡ್ ಡೆಲಿವರಿ ಮಾಡಲು ತನ್ನ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಖಾಸಗಿ

ಬಸ್-ಬೈಕ್ ಡಿಕ್ಕಿ | ವಿದ್ಯಾರ್ಥಿ ಸಿನಾನ್ ಮೃತ್ಯು Read More »

ಉದಯವಾಣಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನ

ಮಂಗಳೂರು: ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ನವಭಾರತ ಪತ್ರಿಕೆಯಿಂದ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಉದಯವಾಣಿ ಪತ್ರಿಕೆಯ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ಮುಖ್ಯ ವರದಿಗಾರರಾಗಿ, ಸ್ಥಾನೀಯ ಸಂಪಾದಕರಾಗಿದ್ದುಕೊಂಡು 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.

ಉದಯವಾಣಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನ Read More »

ಹಲವಾರು ಸವಾಲುಗಳನ್ನು ಎದುರಿಸಿ ಬಿಜೆಪಿ ಗೆಲುವು ಸಾಧಿಸಿದೆ | ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಲಿದೆ : ನಳಿನ್ ಕುಮಾರ್ ಕಟೀಲ್‍

ಮಂಗಳೂರು: ಪ್ರಜಾಪ್ರಭುತ್ವ ದೇಶವಾಗಿರುವುದರಿಂದ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಪ್ರತೀ ಚುನಾವಣೆ ಬಂದಾಗ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಎಲ್ಲಾ ಸವಾಲುಗಳನ್ನು ಎದುರಿಸಿ ಬಿಜೆಪಿ ಗೆಲುವು ಸಾಧಿಸಿದೆ. ಹಾಗೆಯೇ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವಿ ಸಾಧಿಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಪುತ್ತಿಲ ಪರಿವಾರ ಅಧಿಕೃತ ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿದ ಅವರು, ಪುತ್ತಿಲ ಪರಿವಾರ ಸ್ವತಂತ್ರ ಸಂಸ್ಥೆಯಾಗಿದ್ದು, ತೀರ್ಮಾನ

ಹಲವಾರು ಸವಾಲುಗಳನ್ನು ಎದುರಿಸಿ ಬಿಜೆಪಿ ಗೆಲುವು ಸಾಧಿಸಿದೆ | ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಲಿದೆ : ನಳಿನ್ ಕುಮಾರ್ ಕಟೀಲ್‍ Read More »

ಯುವತಿ ಪ್ರಮೀಳಾ ನಾಪತ್ತೆ !

ಕಾರ್ಕಳ: ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದಲ್ಲಿ ಮನೆಯಿಂದ ಹೊರಗೆ ಹೋದ ಯುವತಿಯೋರ್ವಳು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ಅಸಲ್ ಜಡ್ಡು ನಿವಾಸಿ ಪ್ರಮೀಳಾ (24) ನಾಪತ್ತೆಯಾದ ಯುವತಿ. ಫೆ.24 ರಂದು ಮನೆಯಿಂದ ಹೊರಗೆ ಹೋದ ಯುವತಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುವ ಪ್ರಮೀಳಾ ಕನ್ನಡ, ತುಳು, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08253-271100, ಪೊಲೀಸ್ ಉಪನಿರೀಕ್ಷಕರು

ಯುವತಿ ಪ್ರಮೀಳಾ ನಾಪತ್ತೆ ! Read More »

ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ | ಕಾರ್ಯದರ್ಶಿಯಾಗಿ ಪುತ್ತೂರಿನ ಯಶಸ್ವಿನಿ ಶಾಸ್ತ್ರಿ

ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ. ಅಧ್ಯಕ್ಷರಾಗಿ ಡಾ.ಮಂಜುಳಾ ಎ. ರಾವ್, ಉಪಾಧ್ಯಕ್ಷರುಗಳಾಗಿ ವಿಜಯಾ ಆರಂಬೋಡಿ, ಬಬಿತಾ ರವೀಂದ್ರ, ವಜ್ರಾಕ್ಷಿ ಶೆಟ್ಟಿ, ಗುಣಪತಿ ಕೊಳ್ಳಂತಡ್ಕ, ಕಮಲಾಕ್ಷಿ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸಂದ್ಯಾ ವೆಂಕಟೇಶ್‍, ಲಖಿತಾ ಆರ್‍. ಶೆಟ್ಟಿ, ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪುತ್ತೂರಿನ ಯಶಸ್ವಿನಿ ಶಾಸ್ತ್ರಿ, ಜಾಹ್ನವಿ ಕಾಂಚೋಡು, ಪೂರ್ಣಿಮಾ ಶೆಟ್ಟಿ, ಅಮಿತಾ ಕುಶಾಲಪ್ಪ ಗೌಡ, ಸುಮ ಶೆಟ್ಟಿ, ಕೋಶಾಧಿಕಾರಿಯಾಗಿ ಸುಮನ್ ಶರಣ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.

ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ | ಕಾರ್ಯದರ್ಶಿಯಾಗಿ ಪುತ್ತೂರಿನ ಯಶಸ್ವಿನಿ ಶಾಸ್ತ್ರಿ Read More »

ಮೇಲಿನ ಮುಕ್ಕೂರು : ಸ್ಥಳ ಸಾನಿಧ್ಯ ಅಭಿವೃದ್ಧಿ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ | ಪೆರುವೋಡಿ ಜಾತ್ರೆ ವೇಳೆ ಮೇಲಿನ ಮುಕ್ಕೂರಿನಿಂದ ದೈವಗಳ ಭಂಡಾರ ಬಂದು ಶ್ರೀ ರಕ್ತೇಶ್ವರಿ-ಶ್ರೀಉಳ್ಳಾಕುಲು ದೈವಕ್ಕೆ ನೇಮ ನೀಡಬೇಕು..! | ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಬೆಳಕಿಗೆ ಬಂತು ಅನಾದಿ ಕಾಲದ ಆಚರಣೆ

ಮುಕ್ಕೂರು : ಅನಾದಿ ಕಾಲದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೆಯ ದಿನದಂದು ಮೇಲಿನ ಮುಕ್ಕೂರು ತರವಾಡಿನ ಭಂಡಾರದ ಮನೆಯಿಂದ ಅರಸು ದೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ದೈವ ಸಹಿತ ಪರಿವಾರ ದೈವದ ಭಂಡಾರವು ಪೆರುವೋಡಿ ಕ್ಷೇತ್ರಕ್ಕೆ ಬಂದು ದೈವ-ದೇವರ ಭೇಟಿ ನಂತರ ವಿಜೃಂಭಣೆಯ ನೇಮ ನಡೆಯುತಿತ್ತು ಎಂಬ ಅಂಶ ಮೇಲಿನ ಮುಕ್ಕೂರಿನಲ್ಲಿ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಿದೆ. ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಸ್ಥಳ

ಮೇಲಿನ ಮುಕ್ಕೂರು : ಸ್ಥಳ ಸಾನಿಧ್ಯ ಅಭಿವೃದ್ಧಿ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ | ಪೆರುವೋಡಿ ಜಾತ್ರೆ ವೇಳೆ ಮೇಲಿನ ಮುಕ್ಕೂರಿನಿಂದ ದೈವಗಳ ಭಂಡಾರ ಬಂದು ಶ್ರೀ ರಕ್ತೇಶ್ವರಿ-ಶ್ರೀಉಳ್ಳಾಕುಲು ದೈವಕ್ಕೆ ನೇಮ ನೀಡಬೇಕು..! | ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಬೆಳಕಿಗೆ ಬಂತು ಅನಾದಿ ಕಾಲದ ಆಚರಣೆ Read More »

ಪರೀಕ್ಷೆ ಮುಗಿಸಿ ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳ ಶವ ನದಿಯಲ್ಲಿ ಪತ್ತೆ !

ಸುರತ್ಕಲ್: ಸುರತ್ಕಲ್ ಖಾಸಗಿ ಅನುದಾನಿತ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆದ ಬಳಿಕ ಮನೆಗೆ ಮರಳದೆ ನಾಪತ್ತೆಯಾದ ಘಟನೆ ನಡೆದಿದ್ದು, ನಾಲ್ವರು ವಿದ್ಯಾರ್ಥಿಗಳ ಮೃತದೇಹ ಹಳೆಯಂಗಡಿ ಕೊಪ್ಪಳ ಅಣೆಕಟ್ಟ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದೆ. ಸುರತ್ಕಲ್ ಅಗರಮೇಲು ನಿವಾಸಿ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ರಾಘವೇಂದ್ರ (15), ಗುಡ್ಡಕೊಪ್ಪ ನಿವಾಸಿ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್ (15) ಮೃತಪಟ್ಟವರು. ಈ

ಪರೀಕ್ಷೆ ಮುಗಿಸಿ ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳ ಶವ ನದಿಯಲ್ಲಿ ಪತ್ತೆ ! Read More »

ಕಾಣಿಯೂರು ಜಾತ್ರೋತ್ಸವ | ಫೆ.26- ಮಾ.1 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಜಾತ್ರೋತ್ಸವ

ಕಾಣಿಯೂರು: ಕಡಬ ತಾಲೂಕಿನ ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಉಡುಪಿ ಶ್ರೀ ಕಾಣಿಯೂರು ಮಠದ ‘ಕಾಣಿಯೂರು ಜಾತ್ರೆ’ ಫೆ.26 ರಿಂದ ಆರಂಭಗೊಂಡಿದ್ದು, ಮಾ.1 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಆದೇಶದಂತೆ ನಡೆಯುವ ಜಾತ್ರೋತ್ಸವದ ಅಂಗವಾಗಿ ಫೆ.28 ಬುಧವಾರ ಬೆಳಿಗ್ಗೆ 7 ರಿಂದ ಮಲ್ಲಾರ ನೇಮ, ದೈಯರ ನೇಮ, ರಾತ್ರಿ 8 ರಿಂದ ಬಯ್ಯದ ಬಲಿ ನಡೆಯಲಿದೆ. ಫೆ.29 ಗುರುವಾರ ಮಧ್ಯಾಹ್ನ 12 ರಿಂದ

ಕಾಣಿಯೂರು ಜಾತ್ರೋತ್ಸವ | ಫೆ.26- ಮಾ.1 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಜಾತ್ರೋತ್ಸವ Read More »

error: Content is protected !!
Scroll to Top