ದಕ್ಷಿಣ ಕನ್ನಡ

ನಾಳೆ (ಮೇ1) : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಮಳೆಗಾಗಿ ವಿಶೇಷ ಪೂಜೆ

ಪುತ್ತೂರು: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶೀಘ್ರ ಮಳೆಗಾಗಿ ವಿಶೇಷ ಪೂಜೆ ಮೇ1 ರಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 12 ಕಾಯಿ ಗಣಪತಿ ಹವನ, ಆಶ್ಲೇಷ ಬಲಿ, ಶತ ರುದ್ರಾಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ ಸೇವೆಗಳೊಂದಿಗೆ ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸೀಯಾಳ ಅಭಿಷೇಕ ಹಾಗೂ ಶತರುದ್ರ ಅಭಿಷೇಕ ಸೇವೆಗೆ ಸೀಯಾಳ ಅಗತ್ಯವಿದ್ದು ಆದಷ್ಟು ಸೀಯಾಳವನ್ನು ಇಂದು (ಏ.30) ದೇವಳಕ್ಕೆ […]

ನಾಳೆ (ಮೇ1) : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಮಳೆಗಾಗಿ ವಿಶೇಷ ಪೂಜೆ Read More »

ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮರಥ ನಿರ್ಮಾಣ | ವೀಳ್ಯ ಪ್ರದಾನ

ಸುಳ್ಯ:  ಶ್ರೀ ಚನ್ನಕೇಶವ ದೇವರಿಗೆ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆ ಡಾ.ಕೆ.ವಿ ಚಿದಾನಂದ ರವರು ಸಮರ್ಪಿಸುವ ನೂತನ ಬ್ರಹ್ಮ ರಥ ನಿರ್ಮಾಣಕ್ಕೆ ವೀಳ್ಯ ಪ್ರದಾನ ಮಾಡಲಾಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿ ರಥ ಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ ರಿಗೆ ವೀಳ್ಯಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಹರಪ್ರಸಾದ ತುದಿಯಡ್ಕ. ಡಾ .ಕೆ.ವಿ ಚಿದಾನಂದ ದಂಪತಿ, ಲಿಂಗಪ್ಫ ಗೌಡ ಕೇರ್ಪಳ, ಡಾ.ಲೀಲಾಧರ, ಹರಿರಾಯ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮರಥ ನಿರ್ಮಾಣ | ವೀಳ್ಯ ಪ್ರದಾನ Read More »

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಸಭಾ ಕಾರ್ಯಕ್ರಮ ಉದ್ಘಾಟನೆ

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಜಿಯವರು ದ್ವೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮಿಜಿ ದಿವ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಸಭಾ ಕಾರ್ಯಕ್ರಮ ಉದ್ಘಾಟನೆ Read More »

ಲೋಕಸಭೆ ಚುನಾವಣೆ : ದ.ಕ. ಶೇ.72.30, ಉಡುಪಿ ಶೇ.72.69 ಮತ ಚಲಾವಣೆ | ಎಲ್ಲೆಡೆ ಶಾಂತಿಯುತ ಮತದಾನ

ಪುತ್ತೂರು:  ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನವಾಗಿದೆ. ರಾಜ್ಯದಲ್ಲಿ ಶೇ.64.57 ಮತ ಚಲಾವಣೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿದಿತ್ತು. ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು- ಶೇ.72.69, ದಕ್ಷಿಣ ಕನ್ನಡ-ಶೇ.72.30, ಹಾಸನ-ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ-ಶೇ.71.85, ಚಾಮರಾಜನಗರ- ಶೇ.69.86, ಚಿತ್ರದುರ್ಗ-ಶೇ.67.52, ಮೈಸೂರು-ಶೇ.67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು

ಲೋಕಸಭೆ ಚುನಾವಣೆ : ದ.ಕ. ಶೇ.72.30, ಉಡುಪಿ ಶೇ.72.69 ಮತ ಚಲಾವಣೆ | ಎಲ್ಲೆಡೆ ಶಾಂತಿಯುತ ಮತದಾನ Read More »

ಈ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪೋಲಿಂಗ್ ಏಜೆಂಟೇ ಇಲ್ಲ | ಯಾವ ಮತಗಟ್ಟೆ ? ಇಲ್ಲಿದೆ ಡಿಟೈಲ್ಸ್

ಎಣ್ಮೂರು: ಎಣ್ಮೂರು ಗ್ರಾಮದ ಹೇಮಳ ಶಾಲಾ ಮತದಾನ ಕೇಂದ್ರದಲ್ಲಿ ಮತದಾನ ಕೇಂದ್ರದ ಒಳಗಾಗಲೀ, ಹೊರಗಾಗಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಇಲ್ಲದಿರುವ ಕುರಿತು ವರದಿಯಾಗಿದೆ. ಮತದಾನ ಕೇಂದ್ರದೊಳಗೆ ಪೋಲಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕಾದರೆ ಆ ಮತದಾನ ಕೇಂದ್ರಕ್ಕೆ ಒಳಪಟ್ಟ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಆಗಬೇಕು. ಈ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಯಾರೂ ಕಾರ್ಯಕರ್ತರಿರದಿರುವ ಕಾರಣ ಕಾಂಗ್ರೆಸ್‌ಗೆ ಪೋಲಿಂಗ್ ಏಜೆಂಟ್ ಇಲ್ಲ. ಅದಲ್ಲದೆ ಮತದಾನ ಕೇಂದ್ರಕ್ಕಿಂತ 100 ಮೀಟರ್ ಅಂತರದಲ್ಲಿ ಪಕ್ಷ ಕಾರ್ಯಕರ್ತರು ಕುಳಿತು ಮತದಾರರಿಗೆ ಮಾಹಿತಿ ನೀಡಬಹುದಾದರೂ ಅಲ್ಲಿ

ಈ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪೋಲಿಂಗ್ ಏಜೆಂಟೇ ಇಲ್ಲ | ಯಾವ ಮತಗಟ್ಟೆ ? ಇಲ್ಲಿದೆ ಡಿಟೈಲ್ಸ್ Read More »

ಲೋಕಸಭಾ ಚುನಾವಣೆ: ಸುಳ್ಯ ದಲ್ಲಿ 3 ಗಂಟೆ ವೇಳೆಗೆ 64.46%  ಮತದಾನ

ಸುಳ್ಯ : ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರು ಶೇ.64.46 ಮತದಾನವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 233 ಬೂತ್ ಗಳಲ್ಲಿ ಮತದಾನ ನಡೆಯುತ್ತಿದೆ.  ಒಟ್ಟು 2 ಲಕ್ಷದ 8 ಸಾವಿರದ 853 ಮಂದಿ ಮತದಾರರಿದ್ದಾರೆ.

ಲೋಕಸಭಾ ಚುನಾವಣೆ: ಸುಳ್ಯ ದಲ್ಲಿ 3 ಗಂಟೆ ವೇಳೆಗೆ 64.46%  ಮತದಾನ Read More »

ಏ.26 -30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಳ

ಮಂಗಳೂರು: ಬೇಸಿಗೆಯ ತಾಪಮಾನ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಏ.26ರಿಂದ 30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆರೆಂಜ್ ಅಲರ್ಟ್ ಹೊರಡಿಸಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ  ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ. ಕಲಬುರ್ಗಿ, ವಿಜಯಪುರ, ಯಾದಗಿರಿ,

ಏ.26 -30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಳ Read More »

ತಾಲೂಕು ದಂಢಾಧಿಕಾರಿಗಳಿಗೆ ಅವಾಚ್ಯ ಶಬ್ಧಗಳ ನಿಂದನೆ , ದೂರು ದಾಖಲು ಪ್ರಕರಣ ಇತ್ಯರ್ಥ

ಸುಳ್ಯ: ತಾಲೂಕು ದಂಢಾಧಿಕಾರಿಗಳಾದ ಜಿ ಮಂಜುನಾಥ್ ರವರಿಗೆ ಸಂಪಾಜೆ ಮೂಲದ ವ್ಯಕ್ತಿಯೋರ್ವರು ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪೋಲಿಸ್ ಇಲಾಖೆಗೆ ದೂರು ನೀಡಿ ಪ್ರಕರಣ ಠಾಣೆಯಲ್ಲೆ ಇತ್ಯರ್ಥವಾದ ಘಟನೆ ವರದಿಯಾಗಿದೆ.  ಸಂಪಾಜೆ ಮೂಲದ ಧೀರಜ್ ಎಂಬುವ ವ್ಯಕ್ತಿ ತಮ್ಮ ಜಮೀನಿನ ಕುರಿತಾದ ವಿಚಾರದಲ್ಲಿ ದೂರವಾಣಿ ಕರೆ ಮಾಡಿದ್ದು ಈ ಸಂದರ್ಭದಲ್ಲಿ ತಾಲೂಕು ದಂಢಾಧಿಕಾರಿಗಳು ಚುನಾವಣಾ ಕರ್ತವ್ಯದ  ಹಿನ್ನಲೆ ಸಭೆಯಲ್ಲಿ ಭಾಗವಹಿಸಿದ್ದರು. ತಾವು ಸಭೆಯಲ್ಲಿರುವುದಾಗಿ ದೂರವಾಣಿ ಕರೆದಾರರಿಗೆ ತಿಳಿಸಿದ್ದರು ನಿರಂತರವಾಗಿ ಹಲವಾರು ಭಾರಿ ಕರೆ ಮಾಡತೊಡಗಿದರು

ತಾಲೂಕು ದಂಢಾಧಿಕಾರಿಗಳಿಗೆ ಅವಾಚ್ಯ ಶಬ್ಧಗಳ ನಿಂದನೆ , ದೂರು ದಾಖಲು ಪ್ರಕರಣ ಇತ್ಯರ್ಥ Read More »

ದ.ಕ ಕ್ಷೇತ್ರದಲ್ಲಿ ಮೊದಲ 4 ಗಂಟೆಯ ವೇಳೆಗೆ ಶೇ 30.96  ಮತದಾನ

ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಮೊದಲ 4 ಗಂಟೆಯಲ್ಲಿ ಶೇ.30.96 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು 11 ಗಂಟೆಯ ವೇಳೆಗೆ ಶೇ.30.96 ಮತದಾರರು ಮತ ಚಲಾಯಿಸಿದ್ದಾರೆ. ಸುಳ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ. 35.05 ಮತದಾನ ಆಗಿದೆ. ಬೆಳ್ತಂಗಡಿ 32.39, ಮೂಡಬಿದ್ರೆ 27.46, ಮಂಗಳೂರು ಉತ್ತರ 30.39, ಮಂಗಳೂರು ದಕ್ಷಿಣ 26.54, ಮಂಗಳೂರು 31.63, ಬಂಟ್ವಾಳ 32.28, ಪುತ್ತೂರು 32.98 ಶೇಖಡಾ ಮತದಾನ ಆಗಿದೆ. ಸುಳ್ಯದಲ್ಲಿ 73,209 ಮಂದಿ ಮತ ಚಲಾಯಿಸಿ ಶೆ.35.05 ಮತದಾನ ಆಗಿದೆ.

ದ.ಕ ಕ್ಷೇತ್ರದಲ್ಲಿ ಮೊದಲ 4 ಗಂಟೆಯ ವೇಳೆಗೆ ಶೇ 30.96  ಮತದಾನ Read More »

ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ ಮತದಾನ ಮಾಡಿದರು. ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು ಮತ ಚಲಾಯಿಸಿದರು.

ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ Read More »

error: Content is protected !!
Scroll to Top