ದಕ್ಷಿಣ ಕನ್ನಡ

ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು

ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಕೆಳಗೆ ಬಿದ್ದು ಬೆಂಗಳೂರಿನ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಬೆಂಗಳೂರು ಸುಂಕದಕಟ್ಟೆಯ ಮಂಜುನಾಥ ಮೃತಪಟ್ಟವರು. ಮಂಜುನಾಥ ಅವರು ಪತ್ನಿ ಜೊತೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದು, ಬಸ್ಸು ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತಲುಪುವಾಗ ಬಸ್ಸಿನ ಚಾಲಕ ನಿರ್ಲಕ್ಷತೆ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಬಸ್ಸಿನ ನಿರ್ವಾಹಕ ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೇ ಇದ್ದುದರಿಂದ ಮಂಜುನಾಥ ಅವರು ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಖಾಸಗಿ […]

ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು Read More »

ಆಕ್ಸಿಜನ್ ಕೊರತೆ : ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು

ಕೇಪು: ಆಕ್ಸಿಜನ್ ಸಿಗದೆ ಬಾವಿಗೆ ರಿಂಗ್ ಹಾಕಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ಇಂದು ನಡೆದಿದೆ. ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ (40) ಮತ್ತು ಮಲಾರ್ ನಿವಾಸಿ ಆಲಿ(24) ಮೃತಪಟ್ಟ ಕಾರ್ಮಿಕರು. ಸುಮಾರು 30 ಫೀಟ್ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದ.

ಆಕ್ಸಿಜನ್ ಕೊರತೆ : ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು Read More »

ಕೇರಳದಲ್ಲಿ ಹಕ್ಕಿ ಜ್ವರ | ದಕ್ಷಿಣ ಕನ್ನಡ ಜಿಲ್ಲೆ- ಕೇರಳದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ

ಮಂಗಳೂರು : ಕೇರಳದ ಅಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳದ ಗಡಿ ಭಾಗಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ. ತಲಪಾಡಿ, ಜಾಲ್ಸೂರು ಮತ್ತು ಸಾರಡ್ಕದಲ್ಲಿ ವಿಶೇಷ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಈ ಚೆಕ್ ಪೋಸ್ಟ್‌ಗಳಲ್ಲಿ ಕೋಳಿ ಉತ್ಪನ್ನಗಳನ್ನು ಕೇರಳಕ್ಕೆ ತಲುಪಿಸಿದ ನಂತರ ದಕ್ಷಿಣ ಕನ್ನಡಕ್ಕೆ ಹಿಂದಿರುಗುವ ವಾಹನಗಳನ್ನು ಸ್ಯಾನಿಸೈಟಸ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಮಂಗಳೂರಿನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಕೇರಳದ ಅಲಪ್ಪುಳ

ಕೇರಳದಲ್ಲಿ ಹಕ್ಕಿ ಜ್ವರ | ದಕ್ಷಿಣ ಕನ್ನಡ ಜಿಲ್ಲೆ- ಕೇರಳದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ Read More »

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ | ಮೂರು ದಿನಗಳ ಕಾಲ ನಡೆಯಿತು ವಿವಿಧ ವೈದಿಕ ಕಾರ್ಯಕ್ರಮಗಳು

ಬೆಳ್ತಂಗಡಿ: ತಾಲೂಕಿನ ದೇವರಗುಡ್ಡೆ ಭಟ್ರಬೈಲು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶಿಲಾನ್ಯಾಸ, ಭೂಖನನಾದಿ ಸಪ್ತಶುದ್ಧಿ, ದ್ವಾದಶಮೂರ್ತಿ ಆರಾಧನೆ ಹಾಗೂ ಗೋಪೂಜೆ ಏ.19, 20 ಹಾಗೂ 22 ರಂದು ಮೂರು ದಿನಗಳ ಕಾಲ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಏ.19 ರಂದು ಸಂಜೆ 7 ಗಂಟೆಗೆ ಸುದರ್ಶನ ಹೋಮ ನಡೆಯಿತು. ಏ.20 ಶನಿವಾರ ಬೆಳಿಗ್ಗೆ 8 ರಿಂದ ಸಪ್ತಶುದ್ಧಿ, ಗಣಹೋಮ, ಗೋಪೂಜೆ, ದ್ವಾದಶಮೂರ್ತಿ ಆರಾಧನೆ, ಮಧ್ಯಾಹ್ನ 12.30 ಕ್ಕೆ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ | ಮೂರು ದಿನಗಳ ಕಾಲ ನಡೆಯಿತು ವಿವಿಧ ವೈದಿಕ ಕಾರ್ಯಕ್ರಮಗಳು Read More »

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ

ಸುಳ್ಯ: ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಬೈಲಿನಲ್ಲಿ ಇಂದು ಸಂಜೆ ಬೀಸಿದ ಭಾರಿ ಗಾಳಿಗೆ ಅಡಕೆ ಮರಗಳು ಧರೆಗುರುಳಿ ಅಪಾರ ನಷ್ಟ ಉಂಟಾಗಿದೆ. ಇಂದು ಸಂಜೆ ಅಜ್ಜಾವರದ ಮೇನಾಲದ ವ್ಯಾಪ್ತಿಯಲ್ಲಿ ಮತ್ತು ಮೇದಿನಡ್ಕ, ಪಡ್ಡಂಬೈಲು ಭಾಗದಲ್ಲಿ ಮಾತ್ರ ಭಾರಿ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಕೂಡ ಹಾನಿಯಾಗಿದೆ. ಇಂದು ರಾತ್ರಿ ಅಜ್ಜಾವರ ವ್ಯಾಪ್ತಿಯಲ್ಲಿನ ಜನತೆ ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. .

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ Read More »

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪ್ರಧಾನಿಯಿಂದ ಪತ್ರದ ಮೂಲಕ ಮೆಚ್ಚುಗೆ ಮಾತುಗಳು

ಮಂಗಳೂರು : ಭಾರತೀಯ ಭೂ ಸೇನೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಹೆಸರಾಗಿರುವ “ಗೂರ್ಖಾ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಲ್ಲದೆ, ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆ ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪತ್ರದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಜನರ ಆಶೀರ್ವಾದ ಪಡೆದು ನೀವು

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪ್ರಧಾನಿಯಿಂದ ಪತ್ರದ ಮೂಲಕ ಮೆಚ್ಚುಗೆ ಮಾತುಗಳು Read More »

“ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳದಲ್ಲಿ ಅಪರೂಪದ ಸಂಕಲ್ಪಕ್ಕೆ ಸಿದ್ಧತೆ | ಶಿವನ ಪ್ರೀತ್ಯರ್ಥ ಅತಿರುದ್ರ ಮಹಾಯಾಗ ಸೇವೆ ಕೈಗೊಳ್ಳಲು ಆನ್ಲೈನ್ ನೋಂದಣಿಗೂ ಅವಕಾಶ

ಕುಲ್ಕುಂದ: ಅದು ಜಗತ್ತಿನ ಬೇರೆಲ್ಲೂ ಇಲ್ಲದ ಅತ್ಯಂತ ಅಪರೂಪದ ಮಹಾಶಿವನ ಆಲಯ. ಹಣೆಯ ಮೇಲೆ ಶಿವಲಿಂಗವನ್ನು ಹೊತ್ತ ನಂದಿಯ ರೂಪದ ವಿಗ್ರಹಕ್ಕೆ ಆರಾಧನೆ ನಡೆಯುವ ಏಕೈಕ ದೇವಸ್ಥಾನ. ಅರ್ಥಾತ್ ಬಸವನ ರೂಪದ ಮಹಾದೇವನೇ ಅಲ್ಲಿನ ಆರಾಧ್ಯ ಮೂರ್ತಿ. ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವುಳ್ಳ, ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಲ್ಕುಂದ ‘’ಬಸವನಮೂಲ’’ ಎಂದೇ ಪ್ರಸಿದ್ಧಿಯಾಗಿರುವ ಬಸವೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಅತಿ ಪ್ರಿಯ ಎನ್ನಲಾದ ಸಾಮೂಹಿಕ ಅತಿರುದ್ರ ಮಹಾಯಾಗ ನಡೆಸಲು

“ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳದಲ್ಲಿ ಅಪರೂಪದ ಸಂಕಲ್ಪಕ್ಕೆ ಸಿದ್ಧತೆ | ಶಿವನ ಪ್ರೀತ್ಯರ್ಥ ಅತಿರುದ್ರ ಮಹಾಯಾಗ ಸೇವೆ ಕೈಗೊಳ್ಳಲು ಆನ್ಲೈನ್ ನೋಂದಣಿಗೂ ಅವಕಾಶ Read More »

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಮೃತ್ಯು

ಕಾರವಾರ: ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾದ ನಝೀರ್ ಅಹ್ಮದ್ (40),  ರೇಷಾ ಉನ್ನಿಸಾ (38), ಇಫ್ರಾ ಅಹ್ಮದ್ (15), ಅಬೀದ್ ಅಹ್ಮದ್(12), ಅಲ್ಲೀಯಾ ಅಹ್ಮದ್ (10) ಹಾಗೂ ಮೋಹಿನ್ (6)  ಮೃತಪಟ್ಟ ಒಂದೇ ಕುಟುಂಬದವರು. ಮೃತರು ಪ್ರವಾಸಕ್ಕೆ ತೆರಳಿದ್ದಾಗ ಅಹ್ಮದ್ ಕುಟುಂಬ ಊಟ ಮಾಡಿ ಕಾಳಿ ನದಿ ದಡದಲ್ಲಿ ವಿಶ್ರಾಂತಿ

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಮೃತ್ಯು Read More »

ವಿಳಂಬವಾಗಿ ಟಿಕೇಟ್ ನೀಡಿದ ವಿಚಾರ : ಪ್ರಯಾಣಿಕನ ಜತೆ ಅನುಚಿತವಾಗಿ ವರ್ತಿಸಿದ ಬಸ್ ಕಂಡಕ್ಟರ್

ಸುಬ್ರಹ್ಮಣ್ಯ: ಬಸ್ ಕಂಡಕ್ಟರ್ ಓರ್ವರು ವಿಳಂಬವಾಗಿ ಟಿಕೆಟ್ ನೀಡಿದ ಪರಿಣಾಮ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದು ಕಂಡಕ್ಟರ್ ಅನುಚಿತ ವರ್ತನೆ ತೋರಿದ ಘಟನೆ ಪಂಜದಿಂದ ವರದಿಯಾಗಿದೆ. ಪುತ್ತೂರು-ಕಾಣಿಯೂರು- ಸುಬ್ರಹ್ಮಣ್ಯ ಬಸ್ ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಬಾಳಿಲದ ಶೀನ ಎಂಬವರು ಸುಬ್ರಹ್ಮಣ್ಯಕ್ಕೆ ತೆರಳುವ ಸಲುವಾಗಿ ಪಂಜದಲ್ಲಿ ಮಂಬಾಗಿಲಿನಿಂದ ಬಸ್ ಏರಿದ್ದರು. ಬಸ್ ಹಿಂಬದಿ ಕುಳಿತ್ತಿದ್ದ ಕಂಡಕ್ಟರ್ ಹಲವು ಹೊತ್ತಾದರೂ ಬಾರದಿರುವುದನ್ನು ಗಮನಿಸಿ ಪ್ರಯಾಣಿಕ ಟಿಕೆಟ್ ನೀಡುವಂತೆ ಕರೆದು ತಿಳಿಸಿದ್ದರು. ಇದರಿಂದ ಕುಪಿತಗೊಂಡ

ವಿಳಂಬವಾಗಿ ಟಿಕೇಟ್ ನೀಡಿದ ವಿಚಾರ : ಪ್ರಯಾಣಿಕನ ಜತೆ ಅನುಚಿತವಾಗಿ ವರ್ತಿಸಿದ ಬಸ್ ಕಂಡಕ್ಟರ್ Read More »

ನದಿಗೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

ಬಂಟ್ವಾಳ : ನೇತ್ರಾವತಿ ನದಿಗೆ ಈಜಲು ಹೋದ ಬಾಲಕನೋರ್ವ ನೀರುಪಾಲಾದ ಘಟನೆ ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ಎಂಬಲ್ಲಿ ಶನಿವಾರ ಸಂಜೆ ವೇಳೆಗೆ ಸಂಭವಿಸಿದೆ. ಸ್ಥಳೀಯ ನಿವಾಸಿ ಸಹೀರ್ ಎಂಬವರ ಪುತ್ರ ಸುಹೈಲ್ (13) ನೀರುಪಾಲಾದ ಬಾಲಕ. ಕೆಮ್ಮನ್ ಪಳಿಕೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, 7 ನೇ ತರಗತಿ ತೇರ್ಗಡೆ ಹೊಂದಿದ್ದ ಸುಹೈಲ್‍ ತನ್ನ ಮನೆ ಸಮೀಪದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಸ್ನೇಹಿತರ ಜೊತೆಗೆ ಪಕ್ಕದ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದು ಆ ವೇಳೆ ಈ ಘಟನೆ ನಡೆದಿದೆ

ನದಿಗೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು Read More »

error: Content is protected !!
Scroll to Top