ದಕ್ಷಿಣ ಕನ್ನಡ

ಕೇರಳದಲ್ಲಿ ಮೆದುಳು ತಿನ್ನುವ ಸೋಂಕು l ಮುಂಜಾಗೃತಾ ಕ್ರಮವಾಗಿ ದ.ಕ.ದಲ್ಲಿ ಹೈ ಅಲರ್ಟ್

ಮಂಗಳೂರು: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಮೀಬಾ ಸೋಂಕು ಲಕ್ಷಣ ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ನೇಗ್ಲೇರಿಯಾ ಪೌಲೇರಿ ಹೆಸರಿನ ಅಪರೂಪ, ಅಪಾಯಕಾರಿ ಸೂಕ್ಷ್ಮಾಣು ಜೀವಿ ಮೆದುಳು ತಿನ್ನುವ ಅಮೀಬಾ ಆಗಿದೆ. ಮಳೆ ನೀರು, ಕಲುಷಿತ ನೀರಿನ ಹೊಂಡಗಳಲ್ಲಿ ಈಜುವಾಗ ಎಚ್ಚರವಹಿಸುವ ಅಗತ್ಯವಿದೆ. ಕಲುಷಿತ ನೀರಿನಲ್ಲಿ ಈಜುವಾಗ ಈ […]

ಕೇರಳದಲ್ಲಿ ಮೆದುಳು ತಿನ್ನುವ ಸೋಂಕು l ಮುಂಜಾಗೃತಾ ಕ್ರಮವಾಗಿ ದ.ಕ.ದಲ್ಲಿ ಹೈ ಅಲರ್ಟ್ Read More »

ಕಾಣಿಯೂರು ದಿ ಪವರ್ ಪ್ಲಸ್ ಸಂಸ್ಥೆಯ ರಾಧಾಕೃಷ್ಣ ಗೌಡರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಿಂದ ಸೇವಾ ರತ್ನ ಪ್ರಶಸ್ತಿ

ಕಡಬ : ತಾಲೂಕಿನ ಕಾಣಿಯೂರು ಏಲಡ್ಕ ರಜತ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ದಿ ಪವರ್ ಪ್ಲಸ್ ಸೋಲಾರ್ ಸಂಸ್ಥೆಯ ರಾಧಾಕೃಷ್ಣ ಗೌಡರಿಗೆ ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಸೇವಾ ರತ್ನ ನೀಡಿ ಪುರಸ್ಕರಿಸಲಾಗಿದೆ. ಜು.5 ರಂದು ಮಂಗಳೂರು ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ಮ್ಯಾನೇಜರ್ ಪೂಜಿತ್, ಜಗದೀಶ್‍ ಬೆಳ್ಳಾರೆ, ತಾರನಾಥ ಪುತ್ತೂರು ಉಪಸ್ಥಿತರಿದ್ದರು.

ಕಾಣಿಯೂರು ದಿ ಪವರ್ ಪ್ಲಸ್ ಸಂಸ್ಥೆಯ ರಾಧಾಕೃಷ್ಣ ಗೌಡರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಿಂದ ಸೇವಾ ರತ್ನ ಪ್ರಶಸ್ತಿ Read More »

ಪಾದಚಾರಿ ಲಾರಿ ಚಾಲಕರಿಬ್ಬರಿಗೆ ಕಾರು ಡಿಕ್ಕಿ : ಗಂಭೀರ ಗಾಯ

ನೆಲ್ಯಾಡಿ: ಚಹಾ ಕುಡಿದು ಲಾರಿಯತ್ತ ಬರುತ್ತಿದ್ದ ಇಬ್ಬರು ಲಾರಿ ಚಾಲಕರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು- ಮಂಗಳೂರು ನಡುವೆ ನೆಲ್ಯಾಡಿ ಸಮೀಪದ ಕೋಲ್ಪೆಯಲ್ಲಿ ನಡೆದಿದೆ. ಸಕಲೇಶಪುರ ಮೂಲದ ಲಾರಿ ಚಾಲಕರಾದ ವಿನಯ ಕುಮಾರ್ ಹಾಗೂ ಮಂಜ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಲ್ಪೆಯಲ್ಲಿ ಲಾರಿ ನಿಲ್ಲಿಸಿ ಪಕ್ಕದ ಕ್ಯಾಂಟಿನ್ ವೊಂದರಲ್ಲಿ ಚಹಾ ಕುಡಿದು ಲಾರಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ

ಪಾದಚಾರಿ ಲಾರಿ ಚಾಲಕರಿಬ್ಬರಿಗೆ ಕಾರು ಡಿಕ್ಕಿ : ಗಂಭೀರ ಗಾಯ Read More »

ಶರತ್ ಮಡಿವಾಳ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ ಕ್ಯಾ.ಬ್ರಿಜೇಶ್ ಚೌಟ

ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‍.ಎಸ್‍.ಎಸ್‍ ಸ್ವಯಂ ಸೇವಕ ಶರತ್ ಮಡಿವಾಳ ಸ್ಮಾರಕಕ್ಕೆ ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು. ತಾಯಿ ಭಾರತೀಯ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟು ವೀರ ಮರಣಹೊಂದಿದ ಸ್ವಯಂಸೇವಕ ಶರತ್ ಮಡಿವಾಳ ಅವರ ಬಲಿದಾನ ದಿನದ ಸ್ಮರಣಾರ್ಥವಾಗಿ ಸಜಿಪ ಕಂದೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶರತ್ ಮಡಿವಾಳ ಕುಟುಂಬಸ್ಥರು ಉಪಸ್ಥಿತರಿದ್ದರು.

ಶರತ್ ಮಡಿವಾಳ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ ಕ್ಯಾ.ಬ್ರಿಜೇಶ್ ಚೌಟ Read More »

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ l ನದಿಯಲ್ಲಿ ಸಿಲುಕಿ ಸಹಾಯಕ್ಕೆ ಅಂಗಲಾಚಿದ

ಕಡಬ:  ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ನದಿಗೆ ಹಾರಿದ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುಳಿಕುಕ್ಕು ಸೇತುವೆಯಲ್ಲಿ ಸೋಮವಾರ ನಡೆದಿದೆ. ನಿರಂತರ ಮಳೆಗೆ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ಪುಳಿಕುಕ್ಕು ಸೇತುವೆ ಮತ್ತು ರೈಲು ಸೇತುವೆ ಮದ್ಯ ಭಾಗದಲ್ಲಿರುವ ಪೊದೆಯೊಂದರಲ್ಲಿ ಸಿಲುಕಿಕೊಂಡು ರಕ್ಷಣೆಗಾಗಿ ಕೂಗಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾತ್ರಿಯಿಂದಲೇ ಕೂಗಾಡುವ ಧ್ವನಿ ಕೇಳುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಬ್ಯಾಗ್ ಸೇತುವೆ ಪಕ್ಕ ಪತ್ತೆಯಾಗಿದೆ ಎನ್ನಲಾಗುತ್ತಿದ್ದು ನದಿಯಿಂದ ಕೆಳಕ್ಕೆ ಹಾರಿದ್ದಾನೆ ಅಥವಾ ಇನ್ಯಾವುದಾದರೂ ಘಟನೆ ನಡೆಯಿತೆ ಎಂಬ

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ l ನದಿಯಲ್ಲಿ ಸಿಲುಕಿ ಸಹಾಯಕ್ಕೆ ಅಂಗಲಾಚಿದ Read More »

ಭಾರೀ ಮಳೆ : ಮಂಗಳೂರು ತಾಲೂಕಿನ ಶಾಲಾ, ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು.8 ಸೋಮವಾರ ರಜೆ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ತಾಲೂಕಿನ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಸಂಭಾವ್ಯ ಅಪಾಯ ಸಂಭವಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನದಿ, ಸಮುದ್ರ ದಡಗಳಿಗೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಲಾಗಿದೆ.

ಭಾರೀ ಮಳೆ : ಮಂಗಳೂರು ತಾಲೂಕಿನ ಶಾಲಾ, ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ Read More »

ಕೃಷಿಕ ಸಿ.ಕೆ.ನವೀನ್ ಚಾತುಬಾಯಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್‍ನಿಂದ ಕೃಷಿಕರತ್ನ ಪುರಸ್ಕಾರ

ಸುಳ್ಯ: ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿ ಅವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಕೊಡ ಮಾಡುವ ಕೃಷಿಕ ರತ್ನ ಪುರಸ್ಕಾರ ಜುಲೈ 5 ರಂದು ನೀಡಲಾಗಿದೆ. ಮಂಗಳೂರಿನ ರೀಜನಲ್ ಕಚೇರಿಯಲ್ಲಿ ಜು.5 ರಂದು ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಸೀನಿಯ‌ರ್ ಮ್ಯಾನೇಜರ್ ಸುಧಾಕರ್ ಶೆಟ್ಟಿ, ಮ್ಯಾನೇಜರ್ ಪೂಜಿಕ್, ಜಗದೀಶ್

ಕೃಷಿಕ ಸಿ.ಕೆ.ನವೀನ್ ಚಾತುಬಾಯಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್‍ನಿಂದ ಕೃಷಿಕರತ್ನ ಪುರಸ್ಕಾರ Read More »

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಗೆ ಚಿತ್ತಾರ ಸ್ಟಾರ್ ಅವಾರ್ಡ್

ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಗೆ ಚಿತ್ತಾರ ಸ್ಟಾರ್ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಾಯಿತು. ಅಯೋಧ್ಯೆಯ ಶ್ರೀರಾಮ ವಿಗ್ರಹದ ಶಿಲ್ಪಿ ಅರುಣಾ ಯೋಗಿರಾಜ್ ಅವರಿಂದ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್ ಕೆ., ಉಪಾಧ್ಯಕ್ಷ ಗಿರಿಧರ ಸ್ಕಂದ,, ಮುಖ್ಯ ಸಲಹೆಗಾರ ಯತೀಶ್ ಪ್ರಶಸ್ತಿ ಪಡೆದುಕೊಂಡರು

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಗೆ ಚಿತ್ತಾರ ಸ್ಟಾರ್ ಅವಾರ್ಡ್ Read More »

ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಗೆ ಸದಸ್ಯರ ನೇಮಕ

ನೆಲ್ಯಾಡಿ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಬಾಲಕೃಷ್ಣ ಬಾಣಜಾಲು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಮಲೆನಾಡು ಜನಹಿತ ಸಂಘಟನೆಯ ಕಿಶೋರ್ ಶಿರಾಡಿ ನೇಮಕಗೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಗೆ ಸದಸ್ಯರ ನೇಮಕ Read More »

ಚಿನ್ನಾಭರಣ ಕಳವು ಪ್ರಕರಣ : ಮೂವರ ಬಂಧನ

ಮಂಗಳೂರು: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ಶ್ರೇಯಸ್, ತೌಸಿಫ್, ಉರ್ವದ ಪೃಥ್ವಿರಾಜ್ ಬಂಧಿತ ಆರೋಪಿಗಳು. ಉಳ್ಳಾಲದಲ್ಲಿ ಕಳವು ಪ್ರಕರಣ ನಡೆದಿದ್ದು, ಮಂಗಳೂರಿನ ವಿವಿಧ ಜ್ಯುವೆಲ್ಲರಿಗೆ ಮಾರಾಟ ಮಾಡಿದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಶ್ರೇಯಸ್, ಪೃಥ್ವಿರಾಜ್ ಮತ್ತು ತೌಸಿಫ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜೂನ್ 28 ರಂದು ಉಳ್ಳಾಲ ಧರ್ಮನಗರದ ನಿವಾಸಿ ಶ್ರೀಧರ್ (65) ಎಂಬುವರು ತಮ್ಮ ಬೆಡ್‌ರೂಮ್ ಕಬೋರ್ಡ್‌ನಿಂದ ಸುಮಾರು 15 ಲಕ್ಷ ಮೌಲ್ಯದ ಮೌಲ್ಯದ ಚಿನ್ನಾಭರಣಗಳನ್ನು

ಚಿನ್ನಾಭರಣ ಕಳವು ಪ್ರಕರಣ : ಮೂವರ ಬಂಧನ Read More »

error: Content is protected !!
Scroll to Top