ಅಮರ ಸುಳ್ಯ ಸಂಗ್ರಾಮ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ | ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ : ಕೆ. ವಿ. ಹೇಮನಾಥ
ಸುಳ್ಯ: ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ. ಅನೇಕ ರಾಜರುಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಆದರೆ ಸುಳ್ಯದಲ್ಲಿ ನಡೆದಂತಹ ಅಮರ ಸುಳ್ಯ ಸಂಗ್ರಾಮ ನಡೆದಿರುವುದು ರೈತರು ಮತ್ತು ರಾಜರುಗಳ ನಡುವೆ ಎನ್ನುವುದೇ ಈ ಸಂಗ್ರಾಮದ ವಿಶೇಷ ಎಂದು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಕೆ ವಿ ಹೇಮನಾಥ್ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಡಾ. ವಿಜಯ ಪೂಣಚ್ಚ ತಂಬಂಡ ವಿರಚಿತ ಕೃತಿ, “ಅಮರಸುಳ್ಯ ಸಂಗ್ರಾಮ […]










