ಅಪರಾಧ

ಬಿಜೆಪಿ ಕಾರ್ಯಕರ್ತೆಯನ್ನು ‌ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ಈ ಬಗ್ಗೆ ಮಹಾನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ಹೇಳಿದ್ದೇನು ಗೊತ್ತಾ? ಹುಬ್ಬಳ್ಳಿ: ಪೊಲೀಸರು ಬಂಧಿಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪೊಲೀಸರು ಬಂಧಿತ ಬಿಜೆಪಿ ಕಾರ್ಯಕರ್ತೆ ಸುಜಾತಾ ಹುಂಡಿ ಅವರ ಬಟ್ಟೆ ಬಿಚ್ಚಿಸಿ, ಹಲ್ಲೆ ನಡೆಸಿಲ್ಲ. ಬದಲಾಗಿ ಪೊಲೀಸ್ ವ್ಯಾನಿನಲ್ಲಿ ಬಂಧಿಸಿ ಕರೆದೊಯ್ಯುವ ಸಂದರ್ಭದಲ್ಲಿ ಆಕೆಯೇ ಮಹಿಳಾ ಪೊಲೀಸ್ ಸಿಬ್ಬಂದಿ ಒಬ್ಬರ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದು […]

ಬಿಜೆಪಿ ಕಾರ್ಯಕರ್ತೆಯನ್ನು ‌ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ Read More »

ನಮಾಜ್‌ಗೆ ತೆರಳಿದ್ದ ಮಸೀದಿಯಲ್ಲೇ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಸಾವು

ಮಹಾರಾಷ್ಟ್ರ: ಮಸೀದಿಯಲ್ಲಿ ನಮಾಜ್ ಸಲ್ಲಿಸಲು ತೆರಳಿ ಇದ್ದ ವೇಳೆ ಚಾಕುವಿನಿಂದ ಇರಿತಕ್ಕೆ ಒಳಗಾಗಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಉಪಾಧ್ಯಕ್ಷ ಹಿದಾಯತುಲ್ಲಾ ಪಟೇಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರಕರಣದ ಆರೋಪಿ ಪೊಲೀಸರ ಬಂಧನದಲ್ಲಿದ್ದಾನೆ. ಅಕೋಟ್ ತಾಲೂಕಿನ ಮೊಹಲಾ ಗ್ರಾಮದ ಮಸೀದಿಗೆ ಹಿದಾಯತುಲ್ಲಾ ಅವರು ನಮಾಜ್ ಸಲ್ಲಿಸಲು ಮಧ್ಯಾಹ್ನ ಸುಮಾರು 1.30 ಕ್ಕೆ ತೆರಳಿದ್ದರು. ಈ ವೇಳೆ ಹಳೆ ವೈಷಮ್ಯದಿಂದ ‌ಆರೋಪಿ ಅವರಿಗೆ ಚಾಕು ಇರಿದಿದ್ದ. ಈ ಘಟನೆಯಲ್ಲಿ ಅವರ ಕತ್ತು, ಎದೆಗೆ ತೀವ್ರ ಪ್ರಮಾಣದಲ್ಲಿ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ,

ನಮಾಜ್‌ಗೆ ತೆರಳಿದ್ದ ಮಸೀದಿಯಲ್ಲೇ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಸಾವು Read More »

ಬಳ್ಳಾರಿ ಬ್ಯಾನರ್‌ ಗಲಾಟೆ : ಐಜಿ ವರ್ತಿಕಾ ಕಟಿಯಾರ್ ವರ್ಗಾವಣೆ

ಇನ್ನೋರ್ವ ಉನ್ನತ ಪೊಲೀಸ್‌ ಅಧಿಕಾರಿಯ ತಲೆದಂಡ ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಬ್ಯಾನರ್‌ ವಿಚಾರವಾಗಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಉನ್ನತ ಅಧಿಕಾರಿಯ ತಲೆ ದಂಡವಾಗಿದೆ.‌ ಎಸ್ಪಿ ಪವನ್‌ ನೆಜ್ಜೂರು ಅವರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ ಪೊಲೀಸ್‌ ಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಳ್ಳಾರಿ ವಲಯಕ್ಕೆ ನೂತನ ಐಜಿ ಆಗಿ ಹರ್ಷ ಗುಪ್ತಾ ಹಾಗೂ ನೂತನ ಎಸ್ಪಿ ಆಗಿ ಡಾ.ಸುಮನ್ ಡಿ ಪೆನ್ನೇಕರ್

ಬಳ್ಳಾರಿ ಬ್ಯಾನರ್‌ ಗಲಾಟೆ : ಐಜಿ ವರ್ತಿಕಾ ಕಟಿಯಾರ್ ವರ್ಗಾವಣೆ Read More »

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಹೊಸಕೋಟೆ: ವ್ಯಕ್ತಿಯ ಮೃತ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ತಾಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ. ಮಂಜುನಾಥ್ (44) ಎಂಬವರೇ ಮೃತ ವ್ಯಕ್ತಿ. ಮಹಿಳೆಯೊಬ್ಬರು ನಾಪತ್ತೆಯಾದ ಪ್ರಕರಣದಲ್ಲಿ ಪೊಲೀಸರು ಇವರಿಗೆ ಕಿರುಕುಳ ನೀಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಅವರ ಶವ ತೋಟದ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಶ್ವಿನಿ ಎಂಬ ಮಹಿಳೆ ತೋಟದ ಕೆಲಸಕ್ಕೆ ಬರುತ್ತಿದ್ದು, ಅವರು ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪೊಲೀಸರು ಮಂಜುನಾಥ ಅವರನ್ನು ವಿಚಾರಣೆ ನಡೆಸಿದ್ದರು. ಮಹಿಳೆಯ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪೊಲೀಸರು

ಬಂಧನಕ್ಕೆ ಪ್ರತಿರೋಧ ತೋರಿದಾಗ ಥಳಿಸಿದ ವಿಡಿಯೋ ವೈರಲ್‌ ಬೆಂಗಳೂರು: ಇಲ್ಲಿನ ಕೇಶ್ವಾಪುರ ಠಾಣೆಯ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆಯ ಮೇಲೆ ದರ್ಪ ಮೆರೆದಿದ್ದಾರೆ ಎನ್ನಲಾಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪ್ರತಿರೋಧ ತೋರಿದ ಮಹಿಳೆಯ ಬಟ್ಟೆ ಬಿಚ್ಚಿ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪೊಲೀಸರು Read More »

ಉಡುಪಿ ಪರ್ಯಾಯದ ಹೊರೆಕಾಣಿಕೆ ಬಗ್ಗೆ ಕಮೆಂಟ್‌ ಹಾಕಿದ ಯುವಕ ಸೆರೆ

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಬಂಧಿಸಿದ ಪೊಲೀಸರು ಕಾರ್ಕಳ: ಈ ಬಾರಿಯ ಶೀರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು

ಉಡುಪಿ ಪರ್ಯಾಯದ ಹೊರೆಕಾಣಿಕೆ ಬಗ್ಗೆ ಕಮೆಂಟ್‌ ಹಾಕಿದ ಯುವಕ ಸೆರೆ Read More »

ಬಳ್ಳಾರಿ ಬ್ಯಾನರ್‌ ದಳ್ಳುರಿ : ರಾಜಶೇಖರ್‌ ಅಂತ್ಯಸಂಸ್ಕಾರದ ಬಗ್ಗೆ ಅನುಮಾನ

ಶವ ಹೂಳುವ ಸಂಪ್ರದಾಯದವರು ದಹನ ಮಾಡಿದ್ದು ಏಕೆ ಎಂದು ಶ್ರೀರಾಮುಲು ಪ್ರಶ್ನೆ ಬಳ್ಳಾರಿ: ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅಂತ್ಯ ಸಂಸ್ಕಾರದ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ರಾಜಶೇಖರ ಮೃತದೇಹ ಸುಟ್ಟು ಹಾಕಿದ್ದಾರೆ ಎಂದಿರುವ ಶ್ರೀರಾಮುಲು ಹೆಚ್ಚುವರಿ ಎಸ್‌ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ರೆಡ್ಡಿ ಸಮುದಾಯದಲ್ಲಿ ಮೃತದೇಹ ಸುಡುವುದಿಲ್ಲ ಬದಲಾಗಿ ಹೂಳುವ ಸಂಪ್ರದಾಯವಿದೆ. ಆದರೆ ರಾಜಶೇಖರ್‌ ರೆಡ್ಡಿ ಶವವನ್ನು ಸುಟ್ಟಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ಹೇಳಿದ್ದಾರೆ.

ಬಳ್ಳಾರಿ ಬ್ಯಾನರ್‌ ದಳ್ಳುರಿ : ರಾಜಶೇಖರ್‌ ಅಂತ್ಯಸಂಸ್ಕಾರದ ಬಗ್ಗೆ ಅನುಮಾನ Read More »

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಕಾರು ಚಾಲಕನಿಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು

ಬೆಳಗಾವಿ: ಸಚಿವೆ ‌ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನಿಗೆ ಹಾಡು ಹಗಲೇ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾದ ಘಟನೆ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ. ಇರಿತಕ್ಕೊಳಗಾದವರನ್ನು ಬೆಳಗುಂದಿ ಗ್ರಾಮದ ಬಸವಂತ ಗಣಪತ ಕಡೋಲಕರ ಎಂದು ಗುರುತಿಸಲಾಗಿದೆ. ಅವರ ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿಲ್ಲ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಹಲ್ಲೆ

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಕಾರು ಚಾಲಕನಿಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು Read More »

ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ: ಆರೋಪಿಯ ವಿರುದ್ದ ದೂರು ದಾಖಲು

ಉಪ್ಪಿನಂಗಡಿ: ನೆಲ್ಯಾಡಿ ಸಮೀಪದ ಕಟ್ಟೆಮಜಲಿನಲ್ಲಿ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಪ್ರಯತ್ನ ನಡೆಸಿದ ಆರೋಪದಲ್ಲಿ ‌ಚಂದ್ರಶೇಖರ್ ಎಂಬವರ ‌ವಿರುದ್ಧ ಉಪ್ಪಿನಂಗಡಿ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿರುವುದಾಗಿದೆ. ನೇಮೋತ್ಸವ ಒಂದಕ್ಕೆ ಹೋಗಿದ್ದ ವೇಳೆ ಬಾಲಕಿಯ ಕೈ ಹಿಡಿದು ಆರೋಪಿ ಮಾನಭಂಗ ಮಾಡಲು ಪ್ರಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ: ಆರೋಪಿಯ ವಿರುದ್ದ ದೂರು ದಾಖಲು Read More »

ಆರ್‌ಎಸ್‌ಎಸ್‌ ಅವಹೇಳನ : ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್‌

ಆರ್‌ಎಸ್‌ಎಸ್‌ನವರು ವಿಷಕಾರಿಗಳು ಎಂದಿ ಅವಹೇಳನ ಮಾಡಿದ್ದ ಪ್ರಿಯಾಂಕ್‌ ಖರ್ಗೆ ಬೆಂಗಳೂರು : ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನಗರದ ನಿವಾಸಿ ಹಾಗೂ ಆರ್‌ಎಸ್‌ಎಸ್ ಸದಸ್ಯರಾದ ತೇಜಸ್

ಆರ್‌ಎಸ್‌ಎಸ್‌ ಅವಹೇಳನ : ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್‌ Read More »

error: Content is protected !!
Scroll to Top