ಅಪರಾಧ

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ

ಕಾರ್ಕಳ : ಕೋಳಿ ಅಂಕದ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ಮಾರಾಮಾರಿಗೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ರಾತ್ರಿ […]

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ Read More »

ರೌಡಿ ಶೀಟರ್ ಆರಿಫ್ ಕೊಲೆ ಆರೋಪಿಗಳು ಬಳಸಿದ ಕಾರು ಪತ್ತೆ

ತೊಕ್ಕೊಟ್ಟು: ಇಲ್ಲಿನ ಫ್ಲೈ ಓವರ್ ಮೇಲೆ ಇಂದು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಆರಿಫ್ ಯಾನೆ ಟ್ಯಾಬ್ಲೆಟ್ ಆರಿಫ್‌ನ ಕೊಲೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ಬಳಸಿದ್ದ ಕಾರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಿಫ್‌ನನ್ನು ಬೈಕಿನಿಂದ ಕೆಡವಿ ಕೊಲೆಗೈದ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಆ ಕಾರು ಬಂಟ್ವಾಳದ ಬುಡೋಳಿ ಎಂಬಲ್ಲಿ ಪತ್ತೆಯಾಗಿದೆ. ಆರಿಫ್ ಹತ್ಯೆಯ ಬಳಿಕ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಬುಡೋಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಾರೊಂದು ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.

ರೌಡಿ ಶೀಟರ್ ಆರಿಫ್ ಕೊಲೆ ಆರೋಪಿಗಳು ಬಳಸಿದ ಕಾರು ಪತ್ತೆ Read More »

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಹತ್ಯೆ

ತೊಕ್ಕೊಟ್ಟು ಫ್ಲೈ ಓವರ್‌ನಲ್ಲಿ ನಸುಕಿನ ಹೊತ್ತು ಬರ್ಬರ ಕೊಲೆ ಮಂಗಳೂರು: ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ನೆತ್ತರು ಹರಿದಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಫೈಓವರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಅಲಿಯಾಸ್‌ ಟಾಬ್ಲೆಟ್ ಆರಿಫ್ (40) ಕೊಲೆಯಾದ ರೌಡಶೀಟರ್. ಆತನ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ಯಾವುದೇ ಪ್ರಕರಣಗಳು ಇರಲಿಲ್ಲ ಎಂದು ತಿಳಿದುಬಂದಿದೆ. 2022ರಲ್ಲಿ ಆತನನ್ನು ಕೊಲೆ ಮಾಡುವ ಯತ್ನ ಉಚ್ಚಿಲದ ಬಳಿ ನಡೆದಿತ್ತು. ಈ ಸಂಬಂಧ

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಹತ್ಯೆ Read More »

ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ್ದ ಪ್ರೊಫೆಸರ್‌ ಅಬ್ದುಲ್ಲ ಅರೆಸ್ಟ್‌

ಕ್ಲಾಸ್‌ನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ್ದ ಅಸಿಸ್ಟೆಂಟ್ ಪ್ರೊಫೆಸರ್‌ ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕೋಲೆಟ್ ಕೊಟ್ಟು ಲವ್ ಪ್ರಪೋಸ್ ಮಾಡಿದ ಅಸಿಸ್ಟೆಂಟ್ ಪ್ರೊಫೆಸರ್‌ನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪ್ರೋಫೆಸರ್ ಅಬ್ದುಲ್ ವಿರುದ್ಧ ನೆಲಮಂಗಲದ ಖಾಸಗಿ ಕಾಲೇಜು ಆಡಳಿತ ಮಂಡಳಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರೊಫೆಸರ್ ವಿರುದ್ಧ ಕ್ರೈಂ ನಂಬರ್ 79, ಬಿಎನ್‌ಎಸ್ ಆಕ್ಟ್ 74, 75, 329 (3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ

ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ್ದ ಪ್ರೊಫೆಸರ್‌ ಅಬ್ದುಲ್ಲ ಅರೆಸ್ಟ್‌ Read More »

ತೃತೀಯಲಿಂಗಿ ಜೊತೆ ಬಂಗಲೆಯಲ್ಲಿ ಸಿಕ್ಕಿಬಿದ್ದ ಸಚಿವ

ವಿಡಿಯೋ ವೈರಲ್‌ ಆಗಿ ಆಡಳಿತ ಪಕ್ಷಕ್ಕೆ ಮುಜುಗರ ತಂದ ಪ್ರಕರಣ ಮುಂಬೈ : ಸಚಿವರೊಬ್ಬರು ತೃತೀಯಲಿಂಗಿ ಜತೆ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನರಹರಿ ಜಿರ್ವಾಲ್ ತಮ್ಮ ಬಂಗಲೆಯಲ್ಲಿ ಟ್ರಾನ್ಸ್​ಜೆಂಡರ್ ಜತೆ ಇದ್ದ ವಿಡಿಯೋ ವೈರಲ್ ಆಗಿದೆ. ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಎರಡು ತಿಂಗಳಲ್ಲಿ ನರಹರಿ ಜಿರ್ವಾಲ್‌ ಹುಟ್ಟು ಹಾಕಿದ ಎರಡನೇ ವಿವಾದವಿದು. ಸಚಿವಾಲಯದಲ್ಲಿ 35 ಸಾವಿರ ರೂ.

ತೃತೀಯಲಿಂಗಿ ಜೊತೆ ಬಂಗಲೆಯಲ್ಲಿ ಸಿಕ್ಕಿಬಿದ್ದ ಸಚಿವ Read More »

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ

ಸುಳ್ಯ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಪಿಕಪ್ ಚಾಲಕ ಕೇರಳ ಮೂಲದ ಇಸಾಕ್ (40), ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಎಂಬವರು ಗೋವುಗಳನ್ನು ಅಮರಮುಡ್ನೂರಿನಿಂದ ಖರೀದಿಸಿ, ಅನುಮತಿ ಪಡೆಯದೆ ವಧೆ ಮಾಡುವ ಸಲುವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸುಳ್ಯ ಪೊಲೀಸರು ಪಿಕಪ್

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ Read More »

ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ

ಬಂಟ್ವಾಳ: ಕೆಲಸಕ್ಕೆಂದು ತೆರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಅರಳ ಗ್ರಾಮದ ಮುಲಾರಪಟ್ಟದಲ್ಲಿ ನಡೆದಿದೆ. ಮುಲ್ಲಾರಪಟ್ಟ ಆಝಾದ್ ನಗರದನಿವಾಸಿ ಅಬ್ದುಲ್ ರಶೀದ್‌ರವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ. ಪಿಯುಸಿ ಮುಗಿಸಿ ಕಂಪ್ಯೂಟರ್ ತರಬೇತಿ ಪಡೆದಿದ್ದು, ಬಿ.ಸಿ.ರೋಡ್ ನ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡಿತ್ತಿದ್ದರು. ಎಂದಿನಂತೆ ಮಾ.24ರಂದು ಕೆಲಸಕ್ಕೆಂದು ತೆರಳಿದ ಫಾತಿವiತ್ ಇಪ್ರಾ ಸಂಜೆಯಾದರು ಮನೆಗೆ ಬಾರದಿರುವುದನ್ನು ಕಂಡು ಗಾಬರಿಗೊಂಡ ಪೋಷಕರು ಆಕೆ ಕೆಲಸ ಮಾಡುವ ಸೈಬರ್ ಸೆಂಟರ್ ನ ಮಾಲೀಕ ಮನ್ನೂರ್ ಅವರ

ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ Read More »

ಆನ್‌ಲೈನ್ ಗೇಮಿಂಗ್ ಹುಚ್ಚು: ವೈದ್ಯಕೀಯ ವಿದ್ಯಾರ್ಥಿಯ ಹಣವೂ ಹೋಯ್ತು, ಜೀವವೂ ಹೋಯ್ತು

ಬೀದರ್: ಆನ್‌ಲೈನ್ ಗೇಮ್ಸ್ ಹುಚ್ಚಿಗೆ ಹಣ ಕಳಕೊಂಡ ನೋವಿನಲ್ಲಿ ‌ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ. ಮೃತನನ್ನು ಅಂತಿಮ ವರ್ಷದ ವೈದ್ಯಕೀಯ ಪದವಿ ಓದುತ್ತಿದ್ದ ಅನಿಷ್ಕಾರ್ ‌ಚೌಹಾಣ್ ಎಂದು ಗುರುತಿಸಲಾಗಿದೆ. ಕಲ್ಬುರ್ಗಿಯ ಚಿಂಚೋಳಿ ತಾಲೂಕಿನ ಸಲಗರ್ ಗ್ರಾಮದ ಯುವಕ ಈತ. ಆನ್‌ಲೈನ್ ಗೇಮ್ಸ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದು ಕಾಲೇಜಿನ ವಸತಿ ಗೃಹದಲ್ಲೇ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾನೆ. ಅನಿಷ್ಕಾರ್ ತನ್ನ ಸ್ನೇಹಿತನಿಂದಲೂ ‌ಸುಮಾರು ಎಪ್ಪತ್ತು ಸಾವಿರ ರೂ.

ಆನ್‌ಲೈನ್ ಗೇಮಿಂಗ್ ಹುಚ್ಚು: ವೈದ್ಯಕೀಯ ವಿದ್ಯಾರ್ಥಿಯ ಹಣವೂ ಹೋಯ್ತು, ಜೀವವೂ ಹೋಯ್ತು Read More »

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಶ್ರಫ್ ಬಂಧನ

ಬಂಟ್ವಾಳ: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ‌ವಾರಂಟ್ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ‌ವೀರಕಂಬ ನಿವಾಸಿ ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಈತ ಅ.ಕ್ರ :117/2019 ಹಾಗೂ ಅ.ಕ್ರ :111/2020 ಪ್ರಕರಣಗಳಿಗೆ ಸಂಬಂಧಿಸಿದಂತೆ, ಬಂಟ್ವಾಳ ACJ & JMFC ನ್ಯಾಯಾಲಯಕ್ಕೆ ಹಲವು ಬಾರಿ ಹಾಜರಾಗದೇ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಹತ್ತಕ್ಕೂ ಹೆಚ್ಚು ಬಾರಿ ವಾರಂಟ್ ಸಹ ಜಾರಿಯಾಗಿತ್ತು. ಸದ್ಯ ಬಂಟ್ವಾಳ ನಗರ ಪೊಲೀಸ್ ಠಾಣೆಯ ASI ಸುಜು ಹಾಗೂ

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಶ್ರಫ್ ಬಂಧನ Read More »

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಂದರ್

ಬೆಳ್ತಂಗಡಿ: ಸುಮಾರು ಐದು‌‌ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ‌ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯೊಬ್ಬನನ್ನು ಕೊನೆಗೂ ವೇಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಈತ ಉಡುಪಿ ಜಿಲ್ಲೆಯ ಕಾಪು ಪ್ರದೇಶದವನು ಎಂದು ತಿಳಿದು ಬಂದಿದೆ. ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದ್ದು, ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಂದರ್ Read More »

error: Content is protected !!
Scroll to Top