ಅಪರಾಧ

ಪ್ರೀತಿ ನಿರಾಕರಿಸಿದ ಯುವತಿಯ ಮನೆಗೆ ಪೆಟ್ರೋಲ್ ಬಾಂಬ್ ಎಸೆದ ಪಾಗಲ್ ಪ್ರೇಮಿ

ಕೊಯಮತ್ತೂರು: ತನ್ನ ಪ್ರೀತಿಯನ್ನು ಯುವತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಮನೆಗೆ ಪಾಗಲ್ ಪ್ರೇಮಿ ಪೆಟ್ರೋಲ್ ಬಾಂಬ್ ಎಸೆದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಯುವಕ ಪೆಟ್ರೋಲ್ ಬಾಂಬ್ ಎಸೆದ ದೃಶ್ಯಗಳು ಸಿಸಿ‌ಟಿವಿ‌ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ‌ಸಾಕಷ್ಟು ವೈರಲ್ ಆಗಿದೆ. ತೊಂಡಾಮುತ್ತೂರು ಎಂಬಲ್ಲಿ ಯುವಕ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆತನ ಪ್ರೀತಿಯನ್ನು ಯುವತಿ ಒಪ್ಪಿಕೊಂಡಿಲ್ಲ. ಇದೇ ಸಿಟ್ಟಿನಲ್ಲಿ ಯುವತಿಯ ಮನೆಗೆ ಆತ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬಾಂಬ್ […]

ಪ್ರೀತಿ ನಿರಾಕರಿಸಿದ ಯುವತಿಯ ಮನೆಗೆ ಪೆಟ್ರೋಲ್ ಬಾಂಬ್ ಎಸೆದ ಪಾಗಲ್ ಪ್ರೇಮಿ Read More »

ರೌಡಿ ಶೀಟರ್‌ ಆರೀಫ್ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ತೊಕ್ಕೊಟ್ಟು ಫ್ಲೈಓವರ್ ಮೇಲೆ ಬರ್ಬರವಾಗಿ ಕೊಲೆಯಾಗಿರುವ ಆರಿಫ್‌ ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ರೌಡಿ ಶೀಟರ್‌ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2026ರ ಮಾರ್ಚ್ 27ರಂದು ಮುಂಜಾನೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದ ಆರೀಫ್‌ನನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಕೆಡವಿದ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಕೃತ್ಯಕ್ಕೆ ಬಳಸಿದ್ದ ಕಾರನ್ನು

ರೌಡಿ ಶೀಟರ್‌ ಆರೀಫ್ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಮೂರಿನಕಟ್ಟೆ ಧ್ವಂಸ ವಿವಾದ : ಭಟ್ಕಳ ಬೂದಿ ಮುಚ್ಚಿದ ಕೆಂಡ

ನಿಷೇಧಾಜ್ಞೆ, ಪೊಲೀಸರ ಸರ್ಪಗಾವಲಿನ ಮಧ್ಯೆ ಜನಜೀವನ ಕಾರವಾರ: ಕೋಮು ಹಿಂಸಾಚಾರದ ಕರಾಳ ಇತಿಹಾಸ ಹೊಂದಿರುವ ಭಟ್ಕಳ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ. ಹಿಂದುಗಳ ಪವಿತ್ರ ಮೂರಿನಕಟ್ಟೆ ಧ್ವಂಸ ಮಾಡಿದ ಹಿನ್ನೆಲೆ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂದಂತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ಶಹರ ಹಾಗೂ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಮದ್ಯದಂಗಡಿಗಳನ್ನು ಬಂದ್ ಮಾಡಲುಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ. ಗಲಾಟೆ ತಣ್ಣಗಾಗದ ಕಾರಣ 3 ದಿನಗಳ ಕಾಲ ಅಂದರೆ ಮೇ

ಮೂರಿನಕಟ್ಟೆ ಧ್ವಂಸ ವಿವಾದ : ಭಟ್ಕಳ ಬೂದಿ ಮುಚ್ಚಿದ ಕೆಂಡ Read More »

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಾಮೆಂಟ್: ದೂರು ದಾಖಲು

ಪುತ್ತೂರು: ಸಾಮಾಜಿಕ ಜಾಲತಾಣ ಇನ್ ಸ್ ಟೀ ಗ್ರಾಂ ‌ಗೆ ಅಪ್‌ಲೋಡ್ ಮಾಡಿದ ಫೋಟೋಗೆ ಮಾನ ಹಾನಿಕರ ಕಾಮೆಂಟ್ ಹಾಕಲಾಗಿದೆ ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಯ್ಯರು ಗ್ರಾಮದ ಮಾಡಾವು ಬಾಲ್ತಿಕುಮೇರು ನಿವಾಸಿ ಅನಿವಾಶ್ ಬಿ.ಡಿ. ಮತ್ತು ಮೇಘಾ ಸಿ.ಕೆ. ದಂಪತಿಯ ಫೋಟೋ ಅವರ ಮೇಘಾ ಸಿ.ಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ ಮಾನಹಾನಿಕರ ‌ಕಾಮೆಂಟ್ ಹಾಕಿರುವುದಾಗಿ ದೂರು ದಾಖಲಾಗಿರುವುದಾಗಿದೆ. ಈ ಫೋಟೋ ಕುರಿತು ‘ದೀಕ್ಷೀಶ್ 405’ ಎಂಬ

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಾಮೆಂಟ್: ದೂರು ದಾಖಲು Read More »

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

ಹಾಸನದಿಂದ ಬಂದು ಕೂಳೂರಿನಲ್ಲಿ ನದಿಗೆ ಹಾರಲು ಮುಂದಾಗಿದ್ದ ಕೃಷಿಕ ಮಂಗಳೂರು: ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಣಂಬೂರು ಪೊಲೀಸರು ಸಮಯ ಪ್ರಜ್ಞೆಯಿಂದ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಗ್ರಾಮದ ನಿವಾಸಿಯಾಗಿರುವ ಕೃಷಿಕನೊಬ್ಬ ಆರೋಗ್ಯ ಸಮಸ್ಯೆ ಹಾಗೂ ಹಣಕಾಸಿನ ತೊಂದರೆಯಿಂದ ಮನನೊಂದು ಮೇ 22ರಂದು ಬೆಳಗ್ಗೆ ಮನೆಯಿಂದ ಯಾರಿಗೂ ತಿಳಿಸದೇ ಹೊರಟು ಮಂಗಳೂರಿಗೆ ಬಂದಿದ್ದರು. ಮೊಬೈಲ್ ಫೋನ್ ಮಾತ್ರ

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು Read More »

ಖರ್ಜೂರ ವ್ಯಾಪಾರ ಹೆಸರಿನಲ್ಲಿ ಅಳಿಯನಿಂದಲೇ ಮಾವನಿಗೆ 15.81 ಲಕ್ಷ ರೂ. ವಂಚನೆ

ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಮಾವನಿಗೆ ಪಂಗನಾಮ ಹಾಕಿದ ಅಳಿಯ ಉಡುಪಿ: ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 15.81 ಲಕ್ಷ ರೂ. ಪಡೆದು ವಂಚನೆ ಎಸಗಿರುವ ಆರೋಪದಡಿ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್ ಅಜೀಜ್ (50) ನೀಡಿದ ದೂರಿನಂತೆ, ಅವರ ಅಳಿಯನಾದ ಮೊಹಮ್ಮದ್ ಶರ್ಪದ್ದೀನ್ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದು, 2023ರ ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಖರ್ಜೂರ

ಖರ್ಜೂರ ವ್ಯಾಪಾರ ಹೆಸರಿನಲ್ಲಿ ಅಳಿಯನಿಂದಲೇ ಮಾವನಿಗೆ 15.81 ಲಕ್ಷ ರೂ. ವಂಚನೆ Read More »

ಭಟ್ಕಳದಲ್ಲಿ ಮುರಿನ ಕಟ್ಟೆ ವಿವಾದ : ಮುಸ್ಲಿಮರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ

ಹೆದ್ದಾರಿ ವಿಸ್ತರಣೆಗಾಗಿ ತೆರವುಗೊಂಡಿದ್ದ ಧಾರ್ಮಿಕ ಮಹತ್ವದ ಮುರಿನ ಕಟ್ಟೆ ನಿರ್ಮಾಣ ವಿವಾದ ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಧಾರ್ಮಿಕ ಮಹತ್ವ ಇರುವ ಮುರಿನ ಕಟ್ಟೆ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರಿವಿವಾದ ಸೃಷ್ಟಿಯಾಗಿ ಕೋಮುಸೂಕ್ಷ್ಮ ಪರಿಸ್ಥಿತಿ ನೆಲೆಸಿದೆ. ಮುಸ್ಲಿಂ ಸಂಘಟನೆಯೊಂದರ ಪ್ರಮುಖರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಉದ್ವಿಗ್ನ ಘಟನೆ ಭಾನುವಾರ ರಾತ್ರಿ ನಡೆದಿದೆ. ಭಟ್ಕಳದ ಜಾಗಟೆ ಕಟ್ಟೆ ಎಂಬಲ್ಲಿದ್ದ ಐತಿಹಾಸಿಕ ಮುರಿನ ಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಇತ್ತೀಚೆಗೆ ಹಿಂದೂ

ಭಟ್ಕಳದಲ್ಲಿ ಮುರಿನ ಕಟ್ಟೆ ವಿವಾದ : ಮುಸ್ಲಿಮರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ Read More »

ವೃದ್ಧೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 24 ಕೋ. ರೂ. ಲೂಟಿ

ಆಸ್ತಿ ಮಾರಿದ ಹಣ ಇರುವುದು ತಿಳಿದು ವೃದ್ಧೆಯನ್ನು ಬೆದರಿಸಿದ ಸೈಬರ್‌ ವಂಚಕರು ಬೆಂಗಳೂರು: ಮನಿ ಲಾಂಡರಿಂಗ್ ಬೆದರಿಕೆಯೊಡ್ಡಿ ವೃದ್ಧೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿದ ಸೈಬರ್ ವಂಚಕರು ಬರೋಬ್ಬರಿ 24 ಕೋಟಿ ರೂ. ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಎಂಬವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಆಸ್ತಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಮನಿ

ವೃದ್ಧೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 24 ಕೋ. ರೂ. ಲೂಟಿ Read More »

7 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಉಪ್ಪಿನಂಗಡಿ : ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಠಾಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿಯಾಗಿರುವ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ ಯಾನೆ ಬೋಜ ಅಕ್ರಂ ಬಂಧಿತ ಆರೋಪಿ. ಪೊಲೀಸರು ಆರೋಪಿಯನ್ನು ಮಂಗಳೂರಿನ ಪಣಂಬೂರಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೊಪಿಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ

7 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ವೈಟ್‌ ಹೌಸ್‌ ಬಳಿ ಗುಂಡಿನ ದಾಳಿ : ಟ್ರಂಪ್‌ ಸೇಫ್‌

ಬಂದೂಕುಧಾರಿಯನ್ನು ಹೊಡೆದುರುಳಿದ ಭದ್ರತಾ ಸಿಬ್ಬಂದಿ ವಾಷಿಂಗ್‌ಟನ್ : ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್​ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು. ​ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದು. ಅಮೆರಿಕದ ಭದ್ರತಾ ಪಡೆಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಮೆರಿಕದ ಸೀಕ್ರೆಟ್ ಸರ್ವಿಸ್ ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಂಜೆ ಸುಮಾರು 6

ವೈಟ್‌ ಹೌಸ್‌ ಬಳಿ ಗುಂಡಿನ ದಾಳಿ : ಟ್ರಂಪ್‌ ಸೇಫ್‌ Read More »

error: Content is protected !!
Scroll to Top