ಅಪರಾಧ

ವಿಟ್ಲದ ಲಾರಿ ಚಾಲಕ ಲಿಯೋ ಡಿ’ಸೋಜಾ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ : ಲಾರಿ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಮುಳಿಯ ತಾಳಿಪಡ್ಡು ನಿವಾಸಿ ಲಾರಿ ಚಾಲಕ ಲಿಯೋ ಡಿಸೋಜ (45) ಆತ್ಮಹತ್ಯೆ ಮಾಡಿಕೊಂಡವರು. ಅವಿವಾಹಿತರಾಗಿದ್ದ ಲಿಯೋ ಅವರು ಅಣ್ಣನ ಜೊತೆ ವಾಸವಿದ್ದರು. ರಾತ್ರಿ  ಊಟದ ಬಳಿಕ ಕೋಣೆಗೆ ತೆರಳಿದ್ದ ಲಿಯೋ ಅವರು ಬಾಗಿಲು ತೆರೆಯದ ಹಿನ್ನಲೆ ಒಳಗೆ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣಗಳು ತಿಳಿದು […]

ವಿಟ್ಲದ ಲಾರಿ ಚಾಲಕ ಲಿಯೋ ಡಿ’ಸೋಜಾ ನೇಣು ಬಿಗಿದು ಆತ್ಮಹತ್ಯೆ Read More »

ಬೆಂಕಿ ಅವಘಡ : 60 ಬೈಕ್‌ಗಳು ಸುಟ್ಟು ಕರಕಲು

ಶೋರೂಮ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತ ಬೆಂಗಳೂರು: ಯಮಹಾ ಬೈಕ್ ಶೋರೂಂ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ 60ಕ್ಕೂ ಹೆಚ್ಚು ಬೈಕ್‍ಗಳು ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನ ಮಹದೇವಪುರದ ಬಿ.ನಾರಾಯಣಪುರದಲ್ಲಿ ನಡೆದಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. 7 ಗಂಟೆಗೆ ಶೋರೂಂನ ಸಿಬ್ಬಂದಿ ಮನೆಗೆ ತೆರಳಿದ್ದರು. ಅವಘಡದಿಂದ ಶೋರೂಂನಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮವಾಗಿವೆ. ಅಲ್ಲದೇ ಶೋ ರೂಂ ಹಿಂಬದಿಯಲ್ಲಿರುವ ಸರ್ವೀಸ್ ಸೆಂಟರ್‌ಗೆ ಸಹ ಬೆಂಕಿ ತಗುಲಿದೆ. ತಕ್ಷಣ

ಬೆಂಕಿ ಅವಘಡ : 60 ಬೈಕ್‌ಗಳು ಸುಟ್ಟು ಕರಕಲು Read More »

ಜನಜಂಗುಳಿಯ ಮೇಲೆ ಪಿಕಪ್‌ ಟ್ರಕ್‌ ನುಗ್ಗಿಸಿ 15 ಜನರ ಹತ್ಯೆ

ಹೊಸವರ್ಷಾಚರಣೆ ಸಂಭ್ರಮದಲ್ಲಿದ್ದ ಜನರ ಹತ್ಯಾಕಾಂಡ ವಾಷಿಂಗ್ಟನ್‌ : ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕದ ನ್ಯೂ ಓರ್ಲಿಯನ್ಸ್‌ ನಗರದಲ್ಲಿ ಜನಸಂದಣಿ ಮೇಲೆ ಪಿಕಪ್‌ ಟ್ರಕ್ ನುಗ್ಗಿಸಿ ಕನಿಷ್ಠ 15 ಮಂದಿಯನ್ನು ಸಾಯಿಸಲಾಗಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಪಿಕಪ್‌ ಟ್ರಕ್‌ ಚಲಾಯಿಸಿಕೊಂಡು ಬಂದು ಜನಜಂಗುಳಿಯ

ಜನಜಂಗುಳಿಯ ಮೇಲೆ ಪಿಕಪ್‌ ಟ್ರಕ್‌ ನುಗ್ಗಿಸಿ 15 ಜನರ ಹತ್ಯೆ Read More »

ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ

ಹಾಸನ : ಮನಸಾರೆ ಪ್ರೀತಿಸಿದ ಪ್ರಿಯಕನನ್ನು ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ನಡೆದಿದೆ. ಚಾಕುವಿನಿಂದ ಇರಿತಕ್ಕೊಳಗಾದವ 25 ವರ್ಷದ ಮನು ಕುಮಾರ್ ಸ್ಥಿತಿ ಗಂಭೀರವಾಗಿದೆ. ಹಾಸನದ ತಾಲೂಕಿನ ಎ ಗುಡುಗನ ಹಳ್ಳಿ ಗ್ರಾಮದ ಮನುಕುಮಾರ್ ಮತ್ತು ಭವಾನಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನಸ್ತಾಪ ಮೂಡಿದ್ದರಿಂದ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಹೋಟೆಲ್‍ ಹೋಗಿದ್ದ ಮನುವಿಗೆ ಭವಾನಿ ಪದೇ ಪದೇ ಫೋನ್‍ ಮಾಡುತ್ತಿದ್ದಳು.

ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ Read More »

ಹೋಟೆಲ್‌ ಕೊಠಡಿಯಲ್ಲಿ ತಾಯಿ, ನಾಲ್ವರು ಸಹೋದರಿಯರನ್ನು ಸಾಯಿಸಿದ ಯುವಕ

ಲಖನೌ : ಯುವಕನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹೋಟೆಲಿನ ಕೊಠಡಿಯಲ್ಲಿ ಕೂಡಿ ಹಾಕಿ ಸಾಯಿಸಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಲಖನೌನ ನಾಕಾ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಒಂದೇ ಕುಟುಂಬದ ಐವರ ಮೃತದೇಹಗಳು ಕೊಲೆಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಲಖನೌದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ ತಿಳಿಸಿದ್ದಾರೆ. ಆರೋಪಿಯನ್ನು ಆರ್ಷದ್ (24) ಎಂದು ಗುರುತಿಸಲಾಗಿದೆ. ತನ್ನ ತಾಯಿ ಮತ್ತು ನಾಲ್ವರು

ಹೋಟೆಲ್‌ ಕೊಠಡಿಯಲ್ಲಿ ತಾಯಿ, ನಾಲ್ವರು ಸಹೋದರಿಯರನ್ನು ಸಾಯಿಸಿದ ಯುವಕ Read More »

ಮೂವರು ಮಕ್ಕಳು, ಹೆಂಡತಿಯನ್ನು ಬಾವಿಗೆ ತಳ್ಳಿದ ಗಂಡ| ಆರೋಪಿಗೆ ಮರಣ ದಂಡನೆ ಶಿಕ್ಷೆ

ಮಂಗಳೂರು : ತನ್ನ ಮೂವರು ಮಕ್ಕಳನ್ನು ಹಾಗೂ ಪತ್ನಿಯನ್ನು ಬಾವಿಗೆ ದೂಡಿ ಹಾಕಿ ಕೊಲೆಗೈದ ಘಟನೆ ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ ನಡೆದಿದೆ. ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಸಂಜೆ 5:15ಕ್ಕೆ ಹಿತೇಶ್ ಶೆಟ್ಟಿಗಾ‌ರ್ ತನ್ನ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ (11), ದಕ್ಷಿತ್ (5) ಎಂಬವರನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಎಂಬವರನ್ನು ಬಾವಿಗೆ ದೂಡಿಹಾಕಿ ಕೊಲೆ ಮಾಡಿದ್ದಾನೆ. ಈ ಹಿನ್ನಲೆ ತನ್ನ ಮಕ್ಕಳನ್ನು

ಮೂವರು ಮಕ್ಕಳು, ಹೆಂಡತಿಯನ್ನು ಬಾವಿಗೆ ತಳ್ಳಿದ ಗಂಡ| ಆರೋಪಿಗೆ ಮರಣ ದಂಡನೆ ಶಿಕ್ಷೆ Read More »

ಉಡುಪಿ ಕೃಷ್ಣ ಮಠದಲ್ಲಿ ಅಯ್ಯಪ್ಪ ವ್ರತಧಾರಿಗಳ ಪುಂಡಾಟಿಕೆ : ಎಂಟು ಮಂದಿ ಬಂಧನ

ಮಠದ ಸಿಬ್ಬಂದಿ, ದಿವಾನ, ಕಾನ್‌ಸ್ಟೆಬಲ್‌ ಮೇಲೆ ಹಲ್ಲೆಗೆ ಯತ್ನ ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಂಟು ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಬಂಧಿಸಲಾಗಿದೆ. ಡಿ.29ರಂದು ರಾತ್ರಿ ಈ ಘಟನೆ ನಡೆದಿದ್ದು, ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತರು. ಶ್ರೀಕೃಷ್ಣ ಮಠದ ಒಳಗೆ ಹಾಗೂ ಹೊರಗೆ

ಉಡುಪಿ ಕೃಷ್ಣ ಮಠದಲ್ಲಿ ಅಯ್ಯಪ್ಪ ವ್ರತಧಾರಿಗಳ ಪುಂಡಾಟಿಕೆ : ಎಂಟು ಮಂದಿ ಬಂಧನ Read More »

ಕಾರ್ಯಕರ್ತನಿಗೆ ಜೀವ ಬೆದರಿಕೆ | ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ

ಪುತ್ತೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಕೀಂ ಕೂರ್ನಡ್ಕ ಎಂಬವರಿಗೆ ವಾಯ್ಸ್ ಮೆಸೇಜ್ ಮೂಲಕ ಜೀವ ಬೆದರಿಕೆ ಒಡ್ಡಿದ ಇಬ್ಬರು ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಲು ಪುತ್ತೂರು ನ್ಯಾಯಾಲಯ ಅನುಮತಿ ನೀಡಿದೆ. ಇತ್ತೀಚೆಗೆ ಹಕೀಂ ಕೂರ್ನಡ್ಕ ಅವರು ಶಾಸಕ ಅಶೋಕ್ ರೈ ಅವರ ಕಾರ್ಯ ವೈಖರಿ ಖಂಡಿಸಿ ಮಾಧ್ಯಮ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಮೂಲಕ ವ್ಯಕ್ತಿಗಳಿಬ್ಬರು ಹಕೀಂ ಅವರಿಗೆ ಜೀವ ಬೆದರಿಕೆ ಒಡ್ಡಿದ್ದರು. ಇದರ ವಿರುದ್ಧ ಹಕೀಂ ಅವರು ಪುತ್ತೂರು ಪೊಲೀಸ್

ಕಾರ್ಯಕರ್ತನಿಗೆ ಜೀವ ಬೆದರಿಕೆ | ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ Read More »

ಸಚಿವ ಪ್ರಿಯಾಂಕ್‌ ಖರ್ಗೆಗೆ ಡೆತ್‌ನೋಟ್‌ ಉರುಳು

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಬರೆದಿಟ್ಟ ಪತ್ರದಲ್ಲಿದೆ ಸ್ಫೋಟಕ ಮಾಹಿತಿ ಬೆಂಗಳೂರು : ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳುತ್ತಿದ್ದರೂ ಸಚಿನ್‌ ಪಾಂಚಾಲ್‌ ಬರೆದಿಟ್ಟಿದ್ದ ಆರು ಪುಟಗಳ ಡೆತ್‌ನೋಟ್‌ನಲ್ಲಿ ಹಲವು ಬಾರಿ ಪ್ರಿಯಾಂಕ್‌ ಖರ್ಗೆ ಹೆಸರು ಉಲ್ಲೇಖಿಸಲ್ಪಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಿಯಾಂಕ್‌ ಖರ್ಗೆಯ ಆಪ್ತ ರಾಜು ಕಪನೂರ್ (ಗುತ್ತಿಗೆದಾರನಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿ) ಈ ಪ್ರಕರಣದ ಪ್ರಮುಖ ಆರೋಪಿ ಎನ್ನುವುದನ್ನು

ಸಚಿವ ಪ್ರಿಯಾಂಕ್‌ ಖರ್ಗೆಗೆ ಡೆತ್‌ನೋಟ್‌ ಉರುಳು Read More »

ಹಿಂದು ಯುವಕನಿಗೆ ಮುಸ್ಲಿಂ ಯುವಕರಿಂದ  ಥಳಿತ | ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪ | ಎರಡು ಕಡೆಯಿಂದ ದೂರು ದಾಖಲು

ಬಂಟ್ವಾಳ : ಹಿಂದೂಯುವಕನಿಗೆ ಮುಸ್ಲಿಂ ಯುವಕರು ಸೇರಿ ಹೊಡೆದಿರುವ ಘಟನೆ ಡಿ.31 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತಮಜಲಿನಲ್ಲಿ ನಡೆದಿದೆ. ಘಟನೆಯ ಹಿನ್ನಲೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿ ದೂರನ್ನು ನೀಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಜಿಲ್ಲಾ ಎಸ್‌ಪಿ ಯತೀಶ್ ಅವರು ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ತನಿಖೆಯ ಕುರಿತು ಸಲಹೆ ನೀಡಿದ್ದಾರೆ. ಹಿಂದೂ ಯುವಕನಿಗೆ ಮುಸ್ಲಿಂ ಯುವಕರು ಹೊಡೆದಿದಲ್ಲದೆ ಅವಾಚ್ಯವಾದ ಶಬ್ದದಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿ ಬೆದರಿಕೆ ನೀಡಿದ

ಹಿಂದು ಯುವಕನಿಗೆ ಮುಸ್ಲಿಂ ಯುವಕರಿಂದ  ಥಳಿತ | ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪ | ಎರಡು ಕಡೆಯಿಂದ ದೂರು ದಾಖಲು Read More »

error: Content is protected !!
Scroll to Top