ಅಪರಾಧ

ಉಡುಪಿ : 20 ಲ.ರೂ. ಮಾದಕ ವಸ್ತು, ಕಾರು ವಶ

ಉಡುಪಿ : ಹೊಸ ವರ್ಷಾಚರಣೆ ಸಂದರ್ಭದ ಪಾರ್ಟಿಗಳಲ್ಲಿ ಮಾರಾಟ ಮಾಡಲು ಕರಾವಳಿಗೆ ತಂದಿದ್ದ ಅಪಾರ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೆ ಸೇತುವೆ ಬಳಿ ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರಿಂದ ಮಾದಕ ವಸ್ತು ಮತ್ತು ಕಾರಿನ ಸಹಿತ 20,11,900 ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಟೆ ಗ್ರಾಮದ ಕಟಪಾಡಿ ಕಾಪು ನಿವಾಸಿ […]

ಉಡುಪಿ : 20 ಲ.ರೂ. ಮಾದಕ ವಸ್ತು, ಕಾರು ವಶ Read More »

ಆತ್ಮಹತ್ಯೆಗೆ ಯತ್ನಿಸಿದವ ನೇಣಿನ ಹಗ್ಗ ತುಂಡಾಗಿ ಬಿದ್ದು ಸಾವು

ಮಣಿಪಾಲ : ನೇಣು ಹಾಕಿಕೊಂಡು ಆತ್ನಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬರು ನೇಣಿನ ಹಗ್ಗ ತುಂಡಾಗಿ ಬಿದ್ದು ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ಸೋಮವಾರ ಸಂಭವಿಸಿದೆ. ಮಣಿಪಾಲದ ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯ ಎಫ್.ಜೆ.ಎ.ಫೆರ್ನಾಂಡಿಸ್ ಎಂಬವರ ಮಗ ಮೆಲ್ರಾಯ್(55) ವಿಚಿತ್ರ ರೀತಿಯಲ್ಲಿ ಸಾವಿಗೀಡಾದ ವ್ಯಕ್ತಿ. ಇವರು ಮನೆಯ ಮೊದಲ ಅಂತಸ್ತಿನ ಮೇಲ್ಛಾವಣೆಯ ಕಬ್ಬಿಣದ ಅಡ್ಡಪಟ್ಟಿಗೆ ನೇಣು ಬೀಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೇಣು ಕುಣಿಕೆಯಲ್ಲಿ ಉಸಿರುಕಟ್ಟಿ ನರಳಾಡುತ್ತಿದ್ದಾಗ ಅವರ ದೇಹದ ಭಾರಕ್ಕೆ ನೇಣಿನ ಹಗ್ಗ ತುಂಡಾಗಿದೆ. ಪರಿಣಾಮ ಮೆಲ್ರಾಯ್ ಸುಮಾರು 20

ಆತ್ಮಹತ್ಯೆಗೆ ಯತ್ನಿಸಿದವ ನೇಣಿನ ಹಗ್ಗ ತುಂಡಾಗಿ ಬಿದ್ದು ಸಾವು Read More »

ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟ : ಸಾವಿನ ಸಂಖ್ಯೆ 8ಕ್ಕೇರಿಕೆ

ಹುಬ್ಬಳ್ಳಿ: ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟಿಸಿ ಗಂಭೀರವಾಗಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ವ್ರತಧಾರಿಗಳ ಪೈಕಿ ಇನ್ನಿಬ್ಬರು ಕೊನೆಯುಸಿರೆಳೆಯುವುದರೊಂದಿಗೆ ಸಾವಿನ ಸಂಖ್ಯೆ 8ಕ್ಕೇರಿದೆ. ಈ ಅವಘಡದಲ್ಲಿ ಈಗ ಒಬ್ಬ ಗಾಯಾಳು ಮಾತ್ರ ಬಾಕಿ ಉಳಿದಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಳಗಳು ತಿಳಿಸಿವೆ. ಪ್ರಕಾಶ ಬಾರಕೇರ (42) ಎಂಬವರು ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ತೇಜಸ್ವರ್ (27)​​ ಎಂಬವರು ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ವ್ರತಧಾರಿಗಳ ಸಾವಾಗಿದ್ದು,

ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟ : ಸಾವಿನ ಸಂಖ್ಯೆ 8ಕ್ಕೇರಿಕೆ Read More »

ಪುತ್ತೂರು ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದ ಪೈಪ್‍ ಲೈನ್‍ |ಪೈಪ್‍ಗೆ ಕಾಲು ಸಿಲುಕಿ ಮಹಿಳೆ ಒದ್ದಾಟ

ಪುತ್ತೂರು : ಪುತ್ತೂರಿನ ಮುಖ್ಯರಸ್ತೆ ಬದಿಯಲ್ಲೇ ಇದ್ದಂತಹ ಪೈಪ್ ಒಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೈಪ್‍ ನಿಂದ ಕಾಲು ತೆಗೆಯಲು ಒದ್ದಾಡಿದ್ದ ಘಟನೆ ಸೋಮವಾರ ಸಂಜೆ ನಡೆಯಿತು. ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆಯಾಗಿದೆ. ಮುಖ್ಯ ರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿದ್ದು, ಅಲ್ಲಿದ್ದ ಪೈಪ್ ಲೈನ್ ಕಳೆವು ದಿನಗಳಿಂದ ತುಂಡಾಗಿ ಅಲ್ಲೆ ಬಿದ್ದಿತ್ತು ಎನ್ನಲಾಗಿತ್ತು. ತುಂಡಾಗಿ ಬಿದ್ದಿರುವ ಪೈಪ್‍ ಲೈನ್‍ಗಳನ್ನು ಗಮನಿಸದ

ಪುತ್ತೂರು ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದ ಪೈಪ್‍ ಲೈನ್‍ |ಪೈಪ್‍ಗೆ ಕಾಲು ಸಿಲುಕಿ ಮಹಿಳೆ ಒದ್ದಾಟ Read More »

ಹಿಂದು ಹೆಸರಿನಲ್ಲಿ ಯುವತಿಗೆ ವಂಚನೆ | ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ತೋರಿಸಿ ಯುವತಿಗೆ ಬೆದರಿಕೆ

ಮಧ್ಯಪ್ರದೇಶದ : ಮುಸ್ಲಿಂ ವ್ಯಕ್ತಿಯೋರ್ವ ಪ್ರದೀಪ್ ಸೋಲಂಕಿ ಎಂದು ಹಿಂದೂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದು ಮಾತ್ರವಲ್ಲದೆ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ. ಮೊಕ್ಸಿನ್ ಎಂಬ ಮುಸ್ಲಿಂ ಯುವಕ ತನ್ನ ಹೆಸರನ್ನು ಪ್ರದೀಪ್ ಎಂದು ಬದಲಾಯಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದಾನೆ. ಈತ  ಪ್ರದೀಪ್ ಸೋಲಂಕಿ ಎಂದು ಹೇಳಿಕೊಂಡು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆರೋಪಿ ಮೂರು ವರ್ಷಗಳಿಂದ ಆಕೆಗೆ ಲೈಂಗಿಕವಾಗಿ ಶೋಷಿಸುತ್ತಿದ್ದ. ಸಂತ್ರಸ್ತೆ ಕುಟುಂಬ ಸಮೇತ ಪೊಲೀಸ್ ಠಾಣೆಗೆ

ಹಿಂದು ಹೆಸರಿನಲ್ಲಿ ಯುವತಿಗೆ ವಂಚನೆ | ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ತೋರಿಸಿ ಯುವತಿಗೆ ಬೆದರಿಕೆ Read More »

ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌

ಹ್ಯಾಪಿ ನ್ಯೂ ಇಯರ್‌ ಸಂದೇಶ ಕಳುಹಿಸಿ ಹಣ ಲಪಟಾಯಿಸುವ ತಂತ್ರ ಬೆಂಗಳೂರು : ಅಮಾಯಕ ಜನರ ಬ್ಯಾಂಕ್‌ ಖಾತೆಗಳಿಂದ ಹಣ ಲಪಟಾಯಿಸಲು ನಾನಾ ತಂತ್ರಗಳನ್ನು ಬಳಸುತ್ತಿರುವ ಸೈಬರ್‌ ಕಳ್ಳರು ಈಗ ಕಂಡುಕೊಂಡಿರುವ ಹೊಸ ತಂತ್ರ ಹೊಸ ವರ್ಷದ ಶುಭಾಶಯ. ಹೊಸ ವರ್ಷವನ್ನು ಗಮನದಲ್ಲಿಟ್ಟುಕೊಂಡ ವಂಚಕರು ಈಗ ಜನರ ಖಾತೆಯನ್ನು ಖಾಲಿ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ವಾಟ್ಸಪ್‌, ಫೇಸ್‌ಬುಕ್‌ ಅಥವಾ ಟಿಲಿಗ್ರಾಂನಂಥ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಹೊಸ ವರ್ಷದ ಶುಭಾಶಯದ ಗ್ರೀಟಿಂಗ್‌ ಕಳುಹಿಸುತ್ತಾರೆ. ಇದನ್ನು ತೆರೆದ ಕೂಡಲೇ

ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌ Read More »

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು

ಹುಬ್ಬಳ್ಳಿ: ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಅಯ್ಯಪ್ಪ ವ್ರತಧಾರಿ ಸಾವನ್ನಪ್ಪುವುದರೊಂದಿಗೆ ಈ ಅವಘಡದಲ್ಲಿ ಮಡಿದವರ ಸಂಖ್ಯೆ ಐದಕ್ಕೇರಿದೆ. ಶಂಕರ್ ಚವ್ಹಾಣ್ ​(29) ಮೃತ ಅಯ್ಯಪ್ಪ ವ್ರತಧಾರಿ. ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಶಂಕರ್ ಚವ್ಹಾಣ್ ಮೊದಲ ಬಾರಿ ಅಯ್ಯಪ್ಪ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್​ 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ 9 ಅಯ್ಯಪ್ಪ ವ್ರತಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಶಂಕರ್​

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು Read More »

ಕ್ರೈಸ್ತರ 19 ಮನೆಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು

ಕ್ರಿಸ್‌ಮಸ್‌ ಪ್ರಾರ್ಥನೆಗಾಗಿ ಚರ್ಚ್‌ಗೆ ಹೋದ ವೇಳೆ ದುಷ್ಕೃತ್ಯ ಢಾಕಾ: ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆದು ಮಧ್ಯಂತರ ಸರ್ಕಾರ ಬಂದ ಬಳಿಕ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದ ಮುಸ್ಲಿಂ ಮೂಲಭೂತವಾದಿಗಳು ಈಗ ಕ್ರೈಸ್ತ ಸಮುದಾಯದವರನ್ನೂ ಗುರಿ ಮಾಡಿಕೊಂಡಿದ್ದಾರೆ. ಚಿತ್ತಗಾಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿ ಲೂಟಿಗೈದಿದ್ದಾರೆ. ಬಂದರ್ಬನ್ ಜಿಲ್ಲೆಯ ನೋಟುನ್ ತೊಂಗ್‌ಹಿರಿ ತ್ರಿಪುರಾ ಪರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಎರಡು ಮನೆಗಳು

ಕ್ರೈಸ್ತರ 19 ಮನೆಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು Read More »

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು

ದೇವಸ್ಥಾನದಲ್ಲಿ ಸಂಭವಿಸಿದ ದುರಂತಕ್ಕೆ 4 ಬಲಿ, ಐವರ ಸ್ಥಿತಿ ಚಿಂತಾಜನಕ ಹುಬ್ಬಳ್ಳಿ: ದೇವಸ್ಥಾನವೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಗಾಯಗೊಂಡಿದ್ದ ಶಬರಿಮಲೆ ವ್ರತಧಾರಿಗಳ ಪೈಕಿ ಇನ್ನೋರ್ವ ಕೊನೆಯುಸಿರೆಳೆಯುವುದರೊಂದಿಗೆ ಈ ದುರ್ಘಟನೆಯಲ್ಲಿ ಸಾವಿಗೀಡಾದ ವ್ರತಧಾರಿಗಳ ಸಂಖ್ಯೆ ನಾಲ್ಕಕ್ಕೇರಿದೆ. ಚಿಕಿತ್ಸೆಗೆ ಸ್ಪಂದಿಸದೆ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾರೆ. ಮೃತ ಯುವಕನನ್ನು ಲಿಂಗರಾಜ ಬೀರನೂರ (19) ಎಂದು ಗುರುತಿಸಲಾಗಿದೆ. ಡಿ.22ರಂದು ರಾತ್ರಿ ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೊನಿಯಲ್ಲಿರುವ ಸಣ್ಣ ದೇವಸ್ಥಾನವೊಂದರಲ್ಲಿ ಸಿಲಿಂಡರ್ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಂಭೀರಗೊಂಡಿದ್ದರು. ಇವರ ಪೈಕಿ

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು Read More »

ಉಪ್ಪಳದಲ್ಲಿ 50 ಲಕ್ಷ ರೂ. ದರೋಡೆಗೈದ ಪ್ರಮುಖ ಆರೋಪಿ ಬಂಧನ

ಉಪ್ಪಳ: ಎಟಿಎಂ ಗೆ ಹಣ ತುಂಬಿಸಲೆಂದು ನಿಂತಿದ್ದ ವಾಹನದಿಂದ 50 ಲಕ್ಷ ರೂಗಳನ್ನು ಹಾಡುಹಗಲೇ ಅಪಹರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೋಲೀಸ್‌ ವರಿಷ್ಠರ ನಿರ್ದೇನದಂತೆ ವೇಷಪಲ್ಲಟಗೈದು ತನಿಖಾ ನಿರತರಾದ ಪೋಲಿಸ್ ತಂಡ ಆರೋಪಿಯನ್ನು ಬಂಧಿಸಿದ್ದು, ತಮಿಳುನಾಡು ತೃಚ್ಛಿ ರಾಂಜೀನಗರ ತಿರುಟ್ಟಾಗ್ರಾಮದ ಕಾರ್ವಣ್ರನ್ (28) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಕಳೆದ 2024 ಮಾರ್ಚ್ ತಿಂಗಳಲ್ಲಿ ಪ್ರಧಾನ ಆರೋಪಿ ಕಾರ್ವಣ್ರನ್ ತಮಿಳುನಾಡಿನ ತನ್ನೂರಿಗೆ ತಲುಪಿದ್ದಾನೆಂಬ ಸುಳಿವಿನ ಹಿನ್ನೆಲೆಯಲ್ಲಿ ವೇಷ ಮರೆಸಿ ತೆರಳಿದ ಪೋಲೀಸರು ಸಾಹಸಿಕವಾಗಿ ಸಿನಿಮೀಯ ರೀತಿಯಲ್ಲಿ

ಉಪ್ಪಳದಲ್ಲಿ 50 ಲಕ್ಷ ರೂ. ದರೋಡೆಗೈದ ಪ್ರಮುಖ ಆರೋಪಿ ಬಂಧನ Read More »

error: Content is protected !!
Scroll to Top