ಸುದ್ದಿ

ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ

ಹೊಸದಿಲ್ಲಿ: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಚುನಾವಣಾ ಆಯೋಗದ (ಇಸಿ) ಸದಸ್ಯರ ನೇಮಕಾತಿ ಕುರಿತ ಹೊಸ ಕಾನೂನಿನಡಿಯಲ್ಲಿ ನೇಮಕಗೊಂಡ ಮೊದಲ ಸಿಇಸಿ ಜ್ಞಾನೇಶ್‌ ಕುಮಾರ್ ಆಗಿದ್ದಾರೆ. ಜ್ಞಾನೇಶ್ ಕುಮಾರ್ ಅಧಿಕಾರಾವಧಿ ಜನವರಿ 26, 2029ರವರೆಗೆ ಇರಲಿದೆ. ಮುಂದಿನ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುವ ಕೆಲವು ದಿನಗಳ ಮೊದಲು ಜ್ಞಾನೇಶ್ ಕುಮಾರ್ ನಿವೃತ್ತರಾಗಲಿದ್ದಾರೆ. 1989ರ ಬ್ಯಾಚ್ ಹರಿಯಾಣ-ಕೇಡರ್ ಭಾರತೀಯ ಆಡಳಿತ ಸೇವೆ […]

ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ Read More »

ಶಾಲೆಗಳಲ್ಲಿ ಚಿಕ್ಕಿ ವಿತರಣೆ ಬಂದ್‌

ಕೊಬ್ಬಿನಂಶ ಹೆಚ್ಚು ಇದೆ ಎಂಬ ಕಾರಣಕ್ಕೆ ವಿತರಣೆ ಸ್ಥಗಿತಗೊಳಿಸಲು ಸರಕಾರದ ಆದೇಶ ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ರೂಪದಲ್ಲಿ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಅಪರ್ಯಾಪ್ತ ಕೊಬ್ಬಿನಾಂಶ (ಅನ್‌ಸ್ಯಾಚುರೇಟೆಡ್ ಫ್ಯಾಟ್) ಹೆಚ್ಚಿಗೆ ಇದ್ದು, ಇದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಚಿಕ್ಕಿಯನ್ನು ಸರಿಯಾಗಿ

ಶಾಲೆಗಳಲ್ಲಿ ಚಿಕ್ಕಿ ವಿತರಣೆ ಬಂದ್‌ Read More »

ಹೃದಯಾಘಾತದಿಂದ ಯುವತಿ ನಿಧನ

ಮಡುಕೋಡಿ: ಗ್ರಾಮದ ನಡ್ತಿರಲ್ಲು ಅರ್ಬು ಮನೆ, ಸುಂದರರವರ ಪುತ್ರಿ ಸುಕನ್ಯಾ (18 ವರ್ಷ ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಂದೆ ಸುಂದರ, ತಾಯಿ ಕುಸುಮ, ಸಹೋದರ ಶ್ರವಣ್ ಕುಮಾರ್, ಸಹೋದರಿ ಧನ್ಯ ಇವರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಯುವತಿ ನಿಧನ Read More »

ರೈಲು ಹಳಿಯ ಕಬ್ಬಿಣ ಹೆಕ್ಕಿದ ಬಾಲಕರಿಗೆ ಹಲ್ಲೆ ಮಾಡಿದ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್

ರೈಲ್ವೇ ಗ್ಯಾಂಗ್‌ಮ್ಯಾನ್ ವಿರುದ್ದ ಪ್ರಕರಣ ದಾಖಲು ಪಡುಬಿದ್ರಿ : ರೈಲು ಹಳಿಯ ಕಬ್ಬಿಣ ಹೆಕ್ಕಿದ ಬಾಲಕರಿಗೆ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ ಹಲ್ಲೆ ನಡೆಸಿರುವ ಘಟನೆ ಫೆ. 17ರಂದು ನಡೆದಿದೆ. ಹಲ್ಲೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಬಗ್ಗೆ ಪೊಲೀಸರಿಗೆ ದೂರಿದ್ದಾರೆ. ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ

ರೈಲು ಹಳಿಯ ಕಬ್ಬಿಣ ಹೆಕ್ಕಿದ ಬಾಲಕರಿಗೆ ಹಲ್ಲೆ ಮಾಡಿದ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ Read More »

ಬೆಲೆಬಾಳುವ ಪಾರ್ಸಲನ್ನು ಅಪರಿಚಿತ ವ್ಯಕ್ತಿಯ ಕೈಗೊಪ್ಪಿಸಿದ ಫಾಲ್ಗುಣಿ ಬಸ್ ಡ್ರೈವರ್

ವಿಟ್ಲ : ಖಾಸಗಿ ಬಸ್‌ನಲ್ಲಿ ಹಾಕಿದ ಬೆಲೆಬಾಳುವ ಪಾರ್ಸೆಲ್‌ವೊಂದನ್ನು ಅಪರಿಚಿತರು ಬಸ್ ಡ್ರೈವರ್ ಬಳಿ ಕೇಳಿ ಕೊಂಡೊಯ್ದ ಘಟನೆ ವಿಟ್ಲದಲ್ಲಿ ನಡೆದಿದೆ. ಫೆ 13 ರಂದು ಬಿಸಿ ರೋಡಿನಿಂದ 12:45 ಕ್ಕೆ ಹೊರಡುವ ಫಾಲ್ಗುಣಿ (KA 20 AC 0719) ಬಸ್ಸಲ್ಲಿ ಬಿ ಸಿ ರೋಡ್ ಏಜೆಂಟ್ ಆದ ಭಾಸ್ಕರ್ ನ ಮುಖಾಂತರ ಸಂತೋಷ್ ಕೆಲಿಂಜ ಎಂಬವರ 15000 ಬೆಲೆಬಾಳುವ ಒಂದು ಪಾರ್ಸೆಲ್ ಕೆಲಿಂಜಕ್ಕೆ ಕಳುಹಿಸಲಾಗಿತ್ತು 1.15 ಕ್ಕೆ ಮುಟ್ಟಬೇಕಾದ ಬಸ್ 1.05 ಕ್ಕೆ ಕೆಲಿಂಜ ಮಾರ್ಗದಲ್ಲಿ

ಬೆಲೆಬಾಳುವ ಪಾರ್ಸಲನ್ನು ಅಪರಿಚಿತ ವ್ಯಕ್ತಿಯ ಕೈಗೊಪ್ಪಿಸಿದ ಫಾಲ್ಗುಣಿ ಬಸ್ ಡ್ರೈವರ್ Read More »

ವಿಟ್ಲ ಶ್ರೀ ಭಗವಾನ್ ಚಂದ್ರನಾಥ ಸ್ವಾಮಿ ಪ್ರತಿಷ್ಠಾ ಮಹೋತ್ಸವ | ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮತ್ತು  ಶೌರ್ಯ ವಿಪತ್ತು ಘಟಕದಿಂದ  ಸೇವಾಕಾರ್ಯ

ವಿಟ್ಲ : ಮೇಗಿನಪೇಟೆ ಚಂದ್ರ ಸ್ವಾಮೀ ಬಸದಿಯಲ್ಲಿ ನಡೆದ ಪಂಚ ಕಲ್ಯಾಣ ಮಹೋತ್ಸವ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮತ್ತು  ಶೌರ್ಯ ವಿಪತ್ತು ಘಟಕದಿಂದ  ಸೇವಾಕಾರ್ಯ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕೇಪು,ಮಾಣಿ ವಲಯದ ಸೇವಪ್ರಾತಿನಿಧಿಗಳು, ಸಿ ಎಸ್  ಸಿ ಸೇವಾದಾರರು, ಶೌರ್ಯ ತಂಡದ ಸದಸ್ಯರು, ಹಾಗೂ ಒಕ್ಕೂಟದ ಪದಾಧಿಕಾರಿಗಳು  ಒಟ್ಟು ಸೇರಿ  5 ನೇ  ದಿನದ ಕಾರ್ಯಕ್ರಮಕ್ಕೆ ಪೂರಕವಾಗಿ ಕೆಲಸ ಕಾರ್ಯ ವನ್ನು ನೆರವೇರಿಸಿದ್ದಾರೆ.

ವಿಟ್ಲ ಶ್ರೀ ಭಗವಾನ್ ಚಂದ್ರನಾಥ ಸ್ವಾಮಿ ಪ್ರತಿಷ್ಠಾ ಮಹೋತ್ಸವ | ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮತ್ತು  ಶೌರ್ಯ ವಿಪತ್ತು ಘಟಕದಿಂದ  ಸೇವಾಕಾರ್ಯ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ | ತೆಂಗಿನಮರ  ಬಿದ್ದು ದೇವಸ್ಥಾನದ ಕಾರ್ಮಿಕನಿಗೆ ಗಂಭೀರ ಗಾಯ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ತೆಂಗಿನಮರ ಬಿದ್ದರಿಂದ ಕಾರ್ಮಿಕರೊಬ್ಬರಿಗೆ ಗಂಭೀರ  ಗಾಯ ಉಂಟಾಗಿದೆ. ದೇವಸ್ಥಾನದ ನಿತ್ಯ ಕಾರ್ಮಿಕನಾಗಿದ್ದರು ಎಂದು ತಿಳಿದುಬಂದಿದೆ. ದೇವಳದ ಪುಷ್ಕರಣಿ ಸಮೀಪ ಅವಘಡ ನಡೆದಿದ್ದು, ರವಿ (35) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ತಕ್ಷಣ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ | ತೆಂಗಿನಮರ  ಬಿದ್ದು ದೇವಸ್ಥಾನದ ಕಾರ್ಮಿಕನಿಗೆ ಗಂಭೀರ ಗಾಯ Read More »

ಅನ್ನಭಾಗ್ಯದ ದುಡ್ಡೂ ಬಂದಿಲ್ಲ, ಗೃಹಲಕ್ಷ್ಮಿ ಹಣವೂ ಜಮೆಯಾಗಿಲ್ಲ…

ಕೆಲವು ತಿಂಗಳಿಂದ ಸ್ಥಗಿತಗೊಂಡಿರುವ ಗ್ಯಾರಂಟಿಗಳು ಬೆಂಗಳೂರು: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಘೋಷಿಸಿದ ಎರಡು ಮಹತ್ವಾಕಾಂಕ್ಷಿ ಗ್ಯಾರಂಟಿಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೀಡುತ್ತಿದ್ದ ಹಣ ಕೆಲ ತಿಂಗಳಿಂದ ಸ್ಥಗಿತಗೊಂಡಿದ್ದು, ಜನ ಗೊಂದಲದಲ್ಲಿದ್ದಾರೆ.ಅನ್ಯಭಾಗ್ಯದಡಿ ಬಿಪಿಎಲ್‌ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣ 5 ತಿಂಗಳಿನಿಂದ ಸ್ಥಗಿತಗೊಂಡಿದ್ದರೆ ಗೃಹಲಕ್ಷ್ಮಿ ಹಣ 3 ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ.ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ

ಅನ್ನಭಾಗ್ಯದ ದುಡ್ಡೂ ಬಂದಿಲ್ಲ, ಗೃಹಲಕ್ಷ್ಮಿ ಹಣವೂ ಜಮೆಯಾಗಿಲ್ಲ… Read More »

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ  ಮೃತ್ಯು

ಬೆಳ್ತಂಗಡಿ : ಹೃದಯಾಘಾತದಿಂದ ಪದವಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ತೋಟತ್ತಾಡಿ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟವರು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಜಯರಾಮ (19) ಎಂದು ತಿಳಿದು ಬಂದಿದೆ. ಇಂದು(ಫೆ.17) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ  ಮೃತ್ಯು Read More »

ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ | ಇಬ್ಬರ ಬಂಧನ

ಗುರುವಾಯನಕೆರೆ : ಶಕ್ತಿನಗರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರಿಗೆ ದನದ ಮಾಂಸ ಕತ್ತರಿಸುತ್ತಿದ್ದ ಇಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ದಾಳಿ ವೇಳೆ ದನದ ಮಾಂಸ ಮತ್ತು ಪುಟ್ಟ ಕರು ಪತ್ತೆಯಾಗಿದ್ದು, ಪೊಲೀಸರ ಕಣ್ಣು ತಪ್ಪಿಸಲು ರಾತ್ರಿಯ ಬದಲು ಹಗಲಿನಲ್ಲಿ ಕಾರ್ಯಾಚರಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ ಅನ್ವ‌ರ್ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದು, ವಿಷಯ ತಿಳಿದು ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.

ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ | ಇಬ್ಬರ ಬಂಧನ Read More »

error: Content is protected !!
Scroll to Top