ಸುದ್ದಿ

ಅಫಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನ ಭೀಕರ ದಾಳಿ : 400ಕ್ಕೂ ಅಧಿಕ ಮಂದಿ ಸಾವು

ಅಫಘಾನಿಸ್ತಾನದ ಇತಿಹಾಸದಲ್ಲೇ ಅತಿದೊಡ್ಡ ದಾಳಿ ; ನೂರಾರು ಮಂದಿಗೆ ಗಾಯ ಕಾಬೂಲ್‌: ಇಲ್ಲಿನ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ಬಾಂಬ್‌ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ. ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. 400 ಮಂದಿ ಸಾವಿಗೀಡಾಗಿದ್ದು, 250 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್ […]

ಅಫಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನ ಭೀಕರ ದಾಳಿ : 400ಕ್ಕೂ ಅಧಿಕ ಮಂದಿ ಸಾವು Read More »

ಇಂದು ಮಂಗಳೂರಿಗೆ ಬರಲಿದೆ 26 ಸಾವಿರ ಟನ್‌ ಎಲ್‌ಪಿಜಿ

ವಾಣಿಜ್ಯ ಸಿಲಿಂಡರ್‌ ಕೊರತೆ ಸಮಸ್ಯೆ ತುಸು ಕಡಿಮೆಯಾಗುವ ನಿರೀಕ್ಷೆ ಮಂಗಳೂರು : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಅಡುಗೆ ಅನಿಲ ಅಭಾವ ಉಂಟಾಗಿ ಜನರು ಪರಿತಪಿಸುತ್ತಿದ್ದಾರೆ. ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳು ಸಿಗದೆ ಹೋಟೆಲ್‌ ಮತ್ತಿತರ ವಾಣಿಜ್ಯ ಚಟುವಟಿಕೆಗಳಿಗೆ ಬಹಳ ಸಮಸ್ಯೆಯಾಗಿದೆ. ಅನೇಕ ಹೋಟೆಲ್‌ಗಳು ಬಂದ್‌ ಆಗಿದ್ದು, ಈ ನಡುವೆ 26,000 ಎಲ್‌ಪಿಜಿ ಹೊತ್ತ ಹಡಗು ಇಂದು ಮಂಗಳೂರು ತಲುಪಲಿದೆ ಎಂಬ ಶುಭ ಸುದ್ದಿ ಬಂದಿದೆ. ಇದರಿಂದ ರಾಜ್ಯದ ಗ್ಯಾಸ್‌ ಸಮಸ್ಯೆ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ. ಇರಾನ್, ಅಮೆರಿಕ, ಇಸ್ರೇಲ್

ಇಂದು ಮಂಗಳೂರಿಗೆ ಬರಲಿದೆ 26 ಸಾವಿರ ಟನ್‌ ಎಲ್‌ಪಿಜಿ Read More »

ಸರ್ಕಾರಿ ಬಸ್‌ ಡಿಕ್ಕಿ ಹೊಡೆದು ಟೆಂಪೊ ಚಾಲಕ ಸಾವು

ಮಂಗಳೂರು : ಕಾರ್ಕಳ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಬಳಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮಿನಿ ಗೂಡ್ಸ್ ಟೆಂಪೊ ಚಾಲಕ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತರನ್ನು ಬಂಟ್ವಾಳದ ಕೆಲಿಂಜೆಯ ಲೆಸ್ಟರ್ ಡೇವಿಡ್ ಡಿ’ಸೋಜಾ (30) ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ಮೂಡುಬಿದಿರೆಯ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್ ಟೆಂಪೋ ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ ) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ

ಸರ್ಕಾರಿ ಬಸ್‌ ಡಿಕ್ಕಿ ಹೊಡೆದು ಟೆಂಪೊ ಚಾಲಕ ಸಾವು Read More »

ಮಂಗಳೂರು : ಜೈಲು ಅಧೀಕ್ಷಕರ ಮೇಲೆ ಕೈದಿಗಳಿಂದ ಹಲ್ಲೆ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕರು ಮತ್ತು ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಮೂವರು ವಿಚಾರಣಾಧೀನ ಕೈದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣಾಧೀನ ಕೈದಿಗಳಾದ ಇಕ್ಬಾಲ್, ಶೆಹರಾಜ್ ಯಾನೆ ಶಾರೂಕ್, ಅಫ್ರೀದ್ ಹಲ್ಲೆಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ. ಮಾ.13ರಂದು ರಾತ್ರಿ ವಿಚಾರಣಾ ಕೈದಿ ಇಕ್ಬಾಲ್ ಎಂಬಾತ ಕಚೇರಿಗೆ ಬಂದು ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಕೈದಿಗಳನ್ನು ತನ್ನ ಕೊಠಡಿಗೆ ಸೇರಿಸಬೇಕು ಎಂದು ಜೋರಾಗಿ ಕೂಗಾಡಿ ಅವಾಚ್ಯವಾಗಿ

ಮಂಗಳೂರು : ಜೈಲು ಅಧೀಕ್ಷಕರ ಮೇಲೆ ಕೈದಿಗಳಿಂದ ಹಲ್ಲೆ Read More »

ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಬಾಲಕಿ ಸಾವು; ಇಬ್ಬರಿಗೆ ಗಾಯ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಲ್ಲೇರಿ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 5 ವರ್ಷ ಪ್ರಾಯದ ಬಾಲಕಿ ಮೃತಪಟ್ಟು ಇತರ ಇಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ತಣ್ಣಿರುಪಂತ ಗ್ರಾಮದ ಕೊಡಂಗೆ ಮನೆ ನಿವಾಸಿ ಇಸ್ಮಾಯಿಲ್ ಎಂಬವರು ತನ್ನ ಮಗಳು ಸಾಜಿರಾ ಮತ್ತು ಮೊಮ್ಮಗಳು ಸುಹೈರಾಳನ್ನು ಕುಳ್ಳಿರಿಸಿಕೊಂಡು ಕಲ್ಲೇರಿಯಿಂದ ಕುಪ್ಪೆಟ್ಟಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ವೇಣೂರು ಮೂಲದ ಶಿವಪ್ರಸಾದ್ ಎಂಬವರು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಸುಹೈರಾ ಮತ್ತಾಕೆಯ ತಾಯಿ ಸಾಜಿರಾ

ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಬಾಲಕಿ ಸಾವು; ಇಬ್ಬರಿಗೆ ಗಾಯ Read More »

ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆ

ಗಂಡನನ್ನು ಅರೆಸ್ಟ್‌ ಮಾಡಿ ಬಿಡುಗಡೆ ಮಾಡಲು ಲೈಂಗಿಕ ಪೀಡನೆ ಎಂದು ಗಂಭೀರ ಆರೋಪ ಮಂಗಳೂರು: ಮೂಡುಬಿದಿರೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಗೃಹಿಣಿಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಭಾರಿ ಸಂಚಲನವುಂಟು ಮಾಡಿದೆ. ಮಹಿಳೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೊಲೀಸ್‌ ಅಧಿಕಾರಿಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಸಂದರ್ಶನದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಕಾರ್ಯಕರ್ತರಾಗಿದ್ದ ತನ್ನ ಗಂಡನನ್ನು ಅರೆಸ್ಟ್‌ ಮಾಡಿ ಬಿಡುಗಡೆ ಮಾಡಬೇಕಿದ್ದರೆ ನನ್ನ ಜೊತೆ ಸಹಕರಿಸು ಎಂದು ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ.

ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆ Read More »

ಆಸ್ತಿಗಾಗಿ ಅಣ್ಣನನ್ನೇ ಕೊಂದ ಪಾಪಿ ಪೊಲೀಸ್ ವಶಕ್ಕೆ

ವಿಜಯನಗರ: ಆಸ್ತಿಗಾಗಿ ‌ತಮ್ಮನೇ ತನ್ನ ಅಣ್ಣನನ್ನು ‌ಸಂಬಂಧಿಯೊಬ್ಬನ ಸಹಾಯದಿಂದ ಕೊಲೆ‌ ಮಾಡಿರುವ ಘಟನೆ ಹರಪ್ಪನಹಳ್ಳಿಯಲ್ಲಿ ‌ನಡೆದಿದೆ. ಕೊಲೆಯಾದವನನ್ನು ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್(26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪತ್ರಿಗೌಡ (24) ಮತ್ತು ಅವನ ಸಂಬಂಧಿ ನಾರಪ್ಪ (29) ಎಂದು ಗುರುತಿಸಲಾಗಿದೆ. ಪತ್ರಿಗೌಡ‌ನಿಗೆ ವಿಪರೀತ ಕುಡಿಯುವ ಚಟ ಇತ್ತು. ಆತ ಅಸ್ತಿಗಾಗಿ ಕೆಲ ಸಮಯದಿಂದ ತನ್ನ ತಾಯಿಯ ಜೊತೆಗೆ ಜಗಳವಾಡುತ್ತಿದ್ದ. ಹಾಗೆಯೇ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವುದಾಗಿಯೂ ಜಗಳವಾಡಿದ್ದ. ಆ ಬಳಿಕ ಸಂಪೂರ್ಣ ಆಸ್ತಿ ತನಗೇ ಸೇರಬೇಕು ಎನ್ನುವ ಉದ್ದೇಶದಿಂದ ಅಣ್ಣನನ್ನು

ಆಸ್ತಿಗಾಗಿ ಅಣ್ಣನನ್ನೇ ಕೊಂದ ಪಾಪಿ ಪೊಲೀಸ್ ವಶಕ್ಕೆ Read More »

ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ : ಆತಂಕದಲ್ಲಿ ‌ಸ್ಥಳೀಯರು

ಕಟಪಾಡಿ: ಗ್ಯಾಸ್‌ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಕಟಪಾಡಿ ಸಮೀಪ ನ್ಯಾಷನಲ್ ಹೈವೇ 66 ರಲ್ಲಿ ನಡೆದಿದೆ. ಕಟಪಾಡಿ ಜಂಕ್ಷನ್ ಸಮೀಪ ನಡೆದಿರುವ ಈ ಘಟನೆಯಿಂದ ಸಾರ್ವಜನಿಕರಲ್ಲಿ ಗ್ಯಾಸ್ ಸೋರಿಕೆಯ ಭೀತಿ ಎದುರಾಗಿದೆ. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನೆಯ ಕಾರಣಕ್ಕೆ ಹೆದ್ದಾರಿಯಲ್ಲಿ ವಾಹನಗಳು ಸಹ ಸಾಲುಗಟ್ಟಿ ‌ನಿಂತಿವೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕಾಪು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ : ಆತಂಕದಲ್ಲಿ ‌ಸ್ಥಳೀಯರು Read More »

ದುಬೈ ವಿಮಾನ ನಿಲ್ದಾಣಕ್ಕೆ ಇರಾನ್‌ ಡ್ರೋನ್‌ ದಾಳಿ : ವಿಮಾನ ಸಂಚಾರ ರದ್ದು

ಇಂಧನ ಟ್ಯಾಂಕ್‌ಗೆ ಡ್ರೋನ್‌ ಬಡಿದು ಬೆಂಕಿ ದುಬೈ: ಇರಾನ್ ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ಇಂಧನ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿತು. ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿವೆ. ಬೆಂಕಿಯನ್ನು ನಂದಿಸಲು ದುಬೈ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸಲಾಗಿದೆ. ಸುತ್ತಮುತ್ತ ಸುರಕ್ಷತಾ ಕ್ರಮಗಳನ್ನು ಸಕ್ರಿಯಗೊಳಿಸಿರುವುದರಿಂದ ಯಾವುದೇ ಜೀವಹಾನಿ

ದುಬೈ ವಿಮಾನ ನಿಲ್ದಾಣಕ್ಕೆ ಇರಾನ್‌ ಡ್ರೋನ್‌ ದಾಳಿ : ವಿಮಾನ ಸಂಚಾರ ರದ್ದು Read More »

ಕರೆಂಟ್ ಕಂಬಕ್ಕೆ ಗುದ್ದಿದ ಬಸ್: ಅದೃಷ್ಟವಶಾತ್ ತಪ್ಪಿದ ಅನಾಹುತ

ಚಿಕ್ಕಮಗಳೂರು: ಖಾಸಗಿ ಬಸ್ ಒಂದು ಕರೆಂಟ್ ಕಂಬಕ್ಕೆ ಗುದ್ದಿದ್ದು, ಯಾವುದೇ ದೊಡ್ಡ ಮಟ್ಟದ ಅನಾಹುತ ನಡೆಯದೇ‌ ಪವಾಡಸದೃಶ ಪಾರಾದ ಘಟನೆ ಎನ್. ಆರ್. ಪುರ ತಾಲೂಕಿನ ಸಂಗಮೇಶ್ವರಪೇಟೆಯ ಬಳಿ ನಡೆದಿದೆ. ಎದುರಿಗೆ ಬಂದ ವಾಹನವೊಂದಕ್ಕೆ ದಾರಿ ನೀಡಲು ಖಾಸಗಿ ಬಸ್ಸಿನ ಚಾಲಕರು ಮುಂದಾಗಿದ್ದಾರೆ. ಆದರೆ ಮಳೆಯ ಕಾರಣದಿಂದ ಜಾರುತ್ತಿದ್ದ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಢಿಕ್ಕಿಯಾದ ರಭಸಕ್ಕೆ ಕಂಬ ಹಲ್ಲಿನ ಮೇಲೆಯೇ ಮುರಿದು ಬಿದ್ದಿದೆ. ವಿದ್ಯುತ್ ಸಂಪರ್ಕ ತಕ್ಷಣ ಕಡಿತವಾದ ‌ಕಾರಣದಿಂದ ಭಾರೀ

ಕರೆಂಟ್ ಕಂಬಕ್ಕೆ ಗುದ್ದಿದ ಬಸ್: ಅದೃಷ್ಟವಶಾತ್ ತಪ್ಪಿದ ಅನಾಹುತ Read More »

error: Content is protected !!
Scroll to Top