ಸುದ್ದಿ

ಮೆಸ್ಕಾಂ ಕಚೇರಿಯಲ್ಲಿ ಮಾರಾಮಾರಿ : ಎಇ, ಗ್ರಾಹಕರಿಂದ ಪರಸ್ಪರರ ವಿರುದ್ಧ ದೂರು

ಸುಳ್ಯದಲ್ಲಿ ವಿದ್ಯುತ್‌ ಇಲ್ಲದ ವಿಚಾರವಾಗಿ ಗಲಾಟೆ ಸುಳ್ಯ: ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರು ಮತ್ತು ಮೆಸ್ಕಾಂ ಎಇ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಬಗ್ಗೆ ಇತ್ತಂಡಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮೆಸ್ಕಾಂ ಎಇ ಸುಪ್ರೀತ್ ಹಲ್ಲೆ ಮಾಡಿದ್ದಾರೆ ಎಂದು ಗ್ರಾಹಕ ಅಂಬಟಡ್ಕ ನಿವಾಸಿ ಕುಲ್‍ದೀಪ್ ನೀಡಿರುವ ದೂರಿನಲ್ಲಿ ಮಾ.28ರಂದು ಸಂಜೆಯಿಂದ ರವಿವಾರದವರೆಗೆ ಅಂಬೇಟಡ್ಕ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ಇದ್ದುದರಿಂದ ನೆರೆಮನೆಯ ಸಂದೀಪ್ ಅವರ ಜತೆ ಸುಳ್ಯದ ಕೇರ್ಪಳದಲ್ಲಿರುವ ಮೆಸ್ಕಾಂ […]

ಮೆಸ್ಕಾಂ ಕಚೇರಿಯಲ್ಲಿ ಮಾರಾಮಾರಿ : ಎಇ, ಗ್ರಾಹಕರಿಂದ ಪರಸ್ಪರರ ವಿರುದ್ಧ ದೂರು Read More »

ಕಬಕ ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ 2.91 ಕೋಟಿ ರೂ. : ಕ್ಯಾ.ಬ್ರಿಜೇಶ್‌ ಚೌಟ

ಬೃಹತ್ ಶೆಲ್ಟರ್ ನಿರ್ಮಾಣ; 2 ಲಿಫ್ಟ್‌ ಅಳವಡಿಕೆ ಮಂಗಳೂರು: ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು 2.91 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಯೋಜನೆಯಡಿ ಕಬಕ ಪುತ್ತೂರು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.1ರಲ್ಲಿ 2.91ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಪ್ರಸ್ತುತ ಈ ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಕೇವಲ 531 ಚ. ಮೀಟರ್

ಕಬಕ ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ 2.91 ಕೋಟಿ ರೂ. : ಕ್ಯಾ.ಬ್ರಿಜೇಶ್‌ ಚೌಟ Read More »

12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಗೆಳತಿ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಜಿಗಿದ ಯುವಕ ಮಂಗಳೂರು: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಜಿಗಿದು ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಅತ್ತಾವರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಕೋಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಎಂದು ಗುರುತಿಸಲಾಗಿದೆ. ಗೆಳತಿಯೊಬ್ಬಳು ವಾಸವಾಗಿದ್ದ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಯುವಕ, 12ನೇ ಮಹಡಿ ತೆರಳಿ ಅಲ್ಲಿಂದ ಜಿಗಿದಿದ್ದಾನೆ. ಈತ ಅತ್ತಾವರದ ಪಿಜಿಯೊಂದರಲ್ಲಿ ವಾಸವಾಗಿದ್ದ. ನಗರದ ಖಾಸಗಿ ವೈದ್ಯಕೀಯ ಕಾಲೇಜಿನ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಈತ ಸೋಮವಾರ ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ

12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ Read More »

ದಾಸವಾಳ ಹೂವು ನುಂಗಿ ಮಗು ಸಾವು

ಮೈಸೂರು: ಒಣಗಿದ ದಾಸವಾಳ ಹೂ ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹೊಸಿಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳದ ಹೂವನ್ನು ಆರೂವರೆ ತಿಂಗಳ ಮಗು ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದೆ. ದೊಡ್ಡಹೆಜ್ಜೂರಿನ ಸುದರ್ಶನ್-ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿ ಗೌಡ ಸಾವನ್ನಪ್ಪಿದ ಮಗು. ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಿಯಿ ಗೌಡ ಮನೆಯ ಹೊಸಲಿಗೆ ಪೂಜೆಗೆ ಇಟ್ಟಿದ್ದ ದಾಸವಾಳದ ಹೂವಿನ ತುಂಡನ್ನು ಬಾಯಿಗೆ

ದಾಸವಾಳ ಹೂವು ನುಂಗಿ ಮಗು ಸಾವು Read More »

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್‌ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಮಾರ್ಚ್ 26ರಂದು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷಯ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದ ಶ್ರೀಮತಿ ಕಲಾವತಿ ಜಯಂತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ Read More »

ಲಾರಿ-ಬೈಕ್‌ ಡಿಕ್ಕಿ : ನವದಂಪತಿ ಸಾವು

ಶಿವಮೊಗ್ಗ : ಲಾರಿಗೆ ಬೈಕ್​ ಡಿಕ್ಕಿಯಾಗಿ ನವದಂಪತಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್​ಪಿ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಬಾಬು(30) ಮತ್ತು ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಳ ತುಂಬಿದ್ದ ಲಾರಿ ಶಿವಮೊಗ್ಗ ತರೀಕೆರೆ ಮಾರ್ಗವಾಗಿ ಹೊರಟಿದ್ದು,

ಲಾರಿ-ಬೈಕ್‌ ಡಿಕ್ಕಿ : ನವದಂಪತಿ ಸಾವು Read More »

ರೌಡಿಶೀಟರ್‌ ಆರಿಫ್‌ ಕೊಲೆ ಕೃತ್ಯ: ಆರೋಪಿಗಳ ಗುರುತು ಪತ್ತೆ

ತನಿಖೆ ಸಿಸಿಬಿ ಎಸಿಪಿ ತಂಡಕ್ಕೆ ವರ್ಗಾವಣೆ ಮಂಗಳೂರು: ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ನಡೆದ ರೌಡಿಶೀಟರ್‌ ಆರಿಫ್ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಎಸಿಪಿ ತಂಡಕ್ಕೆ ವರ್ಗಾಯಿಸಲಾಗಿದೆ. ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಭಾಗಿಯಾಗಿರುವುದನ್ನು ಗುರುತಿಸಲಾಗಿದ್ದು, ಆರೋಪಿಗಳು ನಿರಂತರವಾಗಿ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ, ತನಿಖಾ ತಂಡಗಳಿಗೆ ಅವರನ್ನು ತಕ್ಷಣವೇ ಬಂಧಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ತನಿಖೆಯ ಸಮಯದಲ್ಲಿ ನಮ್ಮ ತಂಡಗಳು ಸಂಪೂರ್ಣ ಸಂಚು ಮತ್ತು ಘಟನೆಗಳ ಸರಣಿಯನ್ನು

ರೌಡಿಶೀಟರ್‌ ಆರಿಫ್‌ ಕೊಲೆ ಕೃತ್ಯ: ಆರೋಪಿಗಳ ಗುರುತು ಪತ್ತೆ Read More »

ಹೋಟೆಲ್‌ಗಳ ಫ್ಯೂಯಲ್ ಸರ್ಚಾರ್ಜ್‌ಗೆ ಬ್ರೇಕ್‌

ಬಿಲ್‌ನಲ್ಲಿ ಎಲ್‌ಪಿಜಿ ಚಾರ್ಜ್ ಸೇರಿಸುವಂತಿಲ್ಲ ಬೆಂಗಳೂರು : ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇತ್ತೀಚೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿದ್ದ ಎಲ್‌ಪಿಜಿ ಫೀಸ್ ಅಥವಾ ‘ಫ್ಯೂಯಲ್ ಸರ್‌ಚಾರ್ಜ್’ (ಇಂಧನ ಶುಲ್ಕ)ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಬ್ರೇಕ್ ಹಾಕಿದೆ. ಅಡುಗೆ ಅನಿಲದ ಬಿಕ್ಕಟ್ಟಿನ ನೆಪವೊಡ್ಡಿ ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬೆಂಗಳೂರಿನ ಹಲವು ಹೋಟೆಲ್‌ಗಳು ಮೆನು ಬೆಲೆ ಮತ್ತು ತೆರಿಗೆಗಳ ಹೊರತಾಗಿ, ‘ಎಲ್‌ಪಿಜಿ ಚಾರ್ಜ್’ ಹೆಸರಿನಲ್ಲಿ ಪ್ರತ್ಯೇಕ ಶುಲ್ಕವನ್ನು ಬಿಲ್‌ನಲ್ಲಿ

ಹೋಟೆಲ್‌ಗಳ ಫ್ಯೂಯಲ್ ಸರ್ಚಾರ್ಜ್‌ಗೆ ಬ್ರೇಕ್‌ Read More »

ತಮಿಳುನಾಡು, ಅಸ್ಸಾಂ ಮತದಾರರಿಗೆ ಭರಪೂರ ಕೊಡುಗೆ

ಫ್ರಿಜ್‌, ವಾಷಿಂಗ್‌ ಮಷಿನ್‌ ದುರಸ್ತಿಗೆ 8 ಸಾವಿರ ರೂ, ತಿಂಗಳಿಗೆ 2 ಸಾವಿರ ರೂ. ಗ್ಯಾರಂಟಿ ಮೊತ್ತ ಘೋಷಿಸಿದ ಡಿಎಂಕೆ, ಕಾಂಗ್ರೆಸ್‌ ನವದೆಹಲಿ: ವಿಧಾನಸಭೆ ಚುನಾವಣೆ ಗೆಲ್ಲುವ ಸಲುವಾಗಿ ಡಿಎಂಕೆ ಮತ್ತು ಕಾಂಗ್ರೆಸ್‌ ಮತ್ತೆ ಉಚಿತ ಕೊಡುಗೆಗಳ ಮೊರೆ ಹೋಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತರೂಢ ಡಿಎಂಕೆ ಭಾನುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಧಿಕಾರ ಉಳಿಸಿಕೊಳ್ಳಲು ಮಹಿಳೆಯರಿಗೆ ತಿಂಗಳಿಗೆ 2,000 ರೂ. ಸೇರಿದಂತೆ ಭರಪೂರ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.

ತಮಿಳುನಾಡು, ಅಸ್ಸಾಂ ಮತದಾರರಿಗೆ ಭರಪೂರ ಕೊಡುಗೆ Read More »

ಸೀಮೆಎಣ್ಣೆ ವಿತರಣೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಗ್ಯಾಸ್‌ ಅಭಾವದ ಹಿನ್ನೆಲೆಯಲ್ಲಿ ಸೀಮೆಏಣ್ಣೆ ವಿತರಿಸಲು ಪೆಟ್ರೋಲ್‌ ಪಂಪ್‌ಗಳಿಗೆ ಅನುಮತಿ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಅಡುಗೆ ಅನಿಲ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಣೆ ಮಾಡುವ ನಿಯಮವನ್ನು ಸಡಿಲಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ, ಮನೆಗಳಿಗೆ (ಅಡುಗೆ ಮತ್ತು ದೀಪಗಳ ಬಳಕೆಗೆ) ಅಗತ್ಯವಾದ ಇಂಧನ ತಲುಪಿಸಲು ಈ ನಿರ್ಧಾರ ತೆಗೆದುಕೊಂಡಿದೆ. ಮಾರ್ಚ್ 29ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್

ಸೀಮೆಎಣ್ಣೆ ವಿತರಣೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ Read More »

error: Content is protected !!
Scroll to Top