ಸುದ್ದಿ

ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪ್ರಕರಣ | ಪೋಷಕರನ್ನು ಪತ್ತೆ ಹಚ್ಚಿದ  ಧರ್ಮಸ್ಥಳ ಪೋಲಿಸರು 

ಉಜಿರೆ :  ಸುಮಾರು ದಿನಗಳ ಹಿಂದೆ  ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೋಳುಕೆರೆ ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಮಾಡಿದ್ದಾರೆ. ಕಾಡಿನಲ್ಲಿ ಮಗು ಸಿಕ್ಕಿದ ತಕ್ಷಣ ಗ್ರಾಮದ ಜನರು ಈ ಕುರಿತು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ  ಸಹಕಾರದೊಂದಿಗೆ ಮಗುವಿನ ತಂದೆ ತಾಯಿಯ ವಿವರಗಳು ಲಭಿಸಿದೆ. ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸೆಕ್ಟರ್ ಸಮರ್ಥ ಆರ್. ಗಾಣಿಗೇರಾ ನೇತೃತ್ವದ ತಂಡವು ಮಗುವಿನ ತಂದೆ ರಂಜಿತ್ ಗೌಡನನ್ನು ಎ.2 ರಂದು […]

ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪ್ರಕರಣ | ಪೋಷಕರನ್ನು ಪತ್ತೆ ಹಚ್ಚಿದ  ಧರ್ಮಸ್ಥಳ ಪೋಲಿಸರು  Read More »

ಕ್ರಿಕೆಟರ್‌ ಮೊಹಮ್ಮದ್‌ ಶಮಿ ಅಕ್ಕ, ಬಾವ ನರೇಗಾ ಕೂಲಿ ಕಾರ್ಮಿಕರು!

ಕೋಟಿಗಟ್ಟಲೆ ಸಂಪಾದಿಸುವ ಕ್ರಿಕೆಟ್‌ ಆಟಗಾರನ ಕುಟುಂಬದವರ ಸ್ಥಿತಿ ಹೀಗಿದೆ ನೋಡಿ ಹೊಸದಿಲ್ಲಿ : ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಕ್ರಿಕೆಟ್‌ ಮತ್ತು ಜಾಹೀರಾತು ಮೂಲಗಳಿಂದ ಕೋಟಿಗಟ್ಟಲೆ ಹಣ ಗಳಿಸಿರಬಹುದು. ಆದರೆ ಸರಕಾರಿ ದಾಖಲೆಗಳ ಪ್ರಕಾರ ಅವರ ಅಕ್ಕ, ಬಾವ, ಸೇರಿ ಕೆಲವು ಸಂಬಂಧಿಕರು ಮಾತ್ರ ನರೇಗಾದಡಿ ಕೂಲಿ ಕೆಲಸ ಮಾಡುವ ಕಾರ್ಮಿಕರು! ಮೊಹಮ್ಮದ್ ಶಮಿಯ ಸಹೋದರಿ ಮತ್ತು ಭಾವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಯೋಜನೆಯಲ್ಲಿ ವಂಚನೆ ಎಸಗಿದ್ದಾರೆ

ಕ್ರಿಕೆಟರ್‌ ಮೊಹಮ್ಮದ್‌ ಶಮಿ ಅಕ್ಕ, ಬಾವ ನರೇಗಾ ಕೂಲಿ ಕಾರ್ಮಿಕರು! Read More »

ಮಡಿಕೇರಿ : ಕೊಲೆಯಾಗಿದ್ದ ಮಹಿಳೆ ೫ ವರ್ಷದ ಬಳಿಕ ಹೋಟೆಲಿನಲ್ಲಿ ಗಂಡನ ಕೈಗೆ ಸಿಕ್ಕಿಬಿದ್ದಳು!

ಪತ್ನಿಯನ್ನು ಸಾಯಿಸಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಗಂಡನಿಗೆ ಶಾಕ್ ಮಡಿಕೇರಿ : ಐದು ವರ್ಷದ ಹಿಂದೆ ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಹೆಂಡತಿ ಹೋಟೆಲೊಂದರಲ್ಲಿ ಪ್ರಿಯಕರನ ಜೊತೆ ಗಂಡನ ಕೈಗೆ ಸಿಕ್ಕಿಬಿದ್ದ ಸಿನಿಮಾ ಮಾದರಿ ಘಟನೆಯೊಂದು ಮಡಿಕೇರಿಯಲ್ಲಿ ಸಂಭವಿಸಿದೆ. ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಈ ಕೊಲೆ ಪ್ರಕರಣ ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾದಂತೆ ಅನಾವರಣಗೊಂಡಿದೆ. ತಾನು ಮಾಡದ ಕೊಲೆಗಾಗಿ ಗಂಡ ಎರಡು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಪೊಲೀಸರು ಮಲ್ಲಿಗೆ

ಮಡಿಕೇರಿ : ಕೊಲೆಯಾಗಿದ್ದ ಮಹಿಳೆ ೫ ವರ್ಷದ ಬಳಿಕ ಹೋಟೆಲಿನಲ್ಲಿ ಗಂಡನ ಕೈಗೆ ಸಿಕ್ಕಿಬಿದ್ದಳು! Read More »

ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ : ಇಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ

ಎರಡನೇ ದಿನ ಪ್ರವೇಶಿಸಿದ ಅಹೋರಾತ್ರಿ ಧರಣಿ ಬೆಂಗಳೂರು: ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್‌ ಸರಕಾರದ ಬಿಜೆಪಿ ಬೆಂಗಳುರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಧ್ಯಾಹ್ನಕ್ಕೆ ಅಹೋರಾತ್ರಿ ಹೋರಾಟ ಕೊನೆಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಇಂದು ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ. ಸಿಎಂ ಮನೆ ಮುತ್ತಿಗೆ ಯತ್ನ ಹಾಗೂ ರಸ್ತೆ ತಡೆಗೆ ಬಿಜೆಪಿ ನಿರ್ಧರಿಸಿದೆ. ಫ್ರೀಡಂ ಪಾರ್ಕ್ ಇರುವ ಶೇಷಾದ್ರಿ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಜೆಪಿ ನಾಯಕರು ಬಿಸಿ ಮುಟ್ಟಿಸಲಿದ್ದಾರೆ.

ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ : ಇಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ Read More »

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಿ ರಥಯಾತ್ರೆ

ಪುತ್ತೂರು : ಉಡುಪಿ ಪೇಜಾವರ ಅಧೋಕ್ಷಜ ಮಠ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪೆರಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಭಕ್ತಿ ಸಿದ್ದಾಂತೋತ್ಸವ- ರಾಮೋತ್ಸವದ ಪ್ರಯುಕ್ತ ಏ.2 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಿ ರಥಯಾತ್ರೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿಯಿಂದ ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರು ಹಾಗು ವಿ.ಹಿಂ.ಪ. ಪ್ರಮುಖರು ಭಕ್ತಿ ರಥಯಾತ್ರೆಯನ್ನು ಸ್ವಾಗತಿಸಿದರು. ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯರು ಭಕ್ತಿ ರಥಕ್ಕೆ ಪೂಜೆಯನ್ನು

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಿ ರಥಯಾತ್ರೆ Read More »

ಅಣ್ಣನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ

ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಕೃತ್ಯ ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಅತ್ಯಾಚಾರ ನಡೆದಿದೆ. ಬುಧವಾರ ಮಧ್ಯರಾತ್ರಿ ಕೆ.ಆರ್​ ಪುರಂ ರೈಲ್ವೆ ಸ್ಟೇಷನ್​ನಿಂದ ಅಣ್ಣನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಹಾರದ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಯುವತಿಯ ಅಣ್ಣನ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಮಾದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಆಕೆಯನ್ನು ಕರೆದುಕೊಂಡು ಹೋಗಲು ದೊಡ್ಡಮ್ಮನ ಮಗ ಬಂದಿದ್ದರು.ಅಲ್ಲಿಂದ ಅವರು

ಅಣ್ಣನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ Read More »

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ

ಮಧ್ಯರಾತ್ರಿವರೆಗೂ ನಡೆದ ಬಿರುಸಿನ ಚರ್ಚೆ; ರಾತ್ರಿ 1.15ಕ್ಕೆ ಮತದಾನ ನವದೆಹಲಿ: ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್​ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಸದನವು ವಿರೋಧ ಪಕ್ಷದ ಎಲ್ಲ ತಿದ್ದುಪಡಿಗಳನ್ನು ಧ್ವನಿಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15ಕ್ಕೆ ಮತದಾನ

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ Read More »

ಬೈಕ್‌ ಟ್ಯಾಕ್ಸಿ ಸೇವೆ 6 ವಾರದಲ್ಲಿ ಸ್ಥಗಿತ : ಹೈಕೋರ್ಟ್‌ ಆದೇಶ

ನಿಯಮ ಇಲ್ಲದೆ ಬೈಕ್‌ ಟ್ಯಾಕ್ಸಿ ಓಡಾಡುವಂತಿಲ್ಲ ಎಂದ ನ್ಯಾಯಾಲಯ ಬೆಂಗಳೂರು: ಬೆಂಗಳೂರಿನಲ್ಲಿ ಬಹಳ ಜನಪ್ರಿಯವಾಗಿರುವ ಬೈಕಜ್‌ ಟ್ಯಾಕ್ಸಿ ಸೇವೆಯನ್ನು 6 ವಾರಗಳಲ್ಲಿ ಸ್ಥಗಿತಗೊಳಿಸಲು ಹೈಕೋರ್ಟ್‌ ಆದೇಶಿಸಿದೆ. ಓಲಾ, ಉಬರ್ ಕಂಪನಿಗಳು ಬೆಂಗಳೂರು ಸೇರಿ ಕೆಲವು ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿವೆ.2022ರಲ್ಲಿ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ

ಬೈಕ್‌ ಟ್ಯಾಕ್ಸಿ ಸೇವೆ 6 ವಾರದಲ್ಲಿ ಸ್ಥಗಿತ : ಹೈಕೋರ್ಟ್‌ ಆದೇಶ Read More »

ಮುಂಡಾಜೆಯಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ

ಮುಂಡಾಜೆ : ಗ್ರಾಮದ ಕೊಟ್ಟೂಟ್ಟುವಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಇಂದು ಬೆಳಗ್ಗೆ  ನಡೆಯಿತು. ಘಟನೆಯಿಂದ ಸುಮಾರು ಒಂದೂವರೆ ಎಕರೆಯಷ್ಟು ಸ್ಥಳ ಸುಟ್ಟೋಗಿದೆ.  ಸ್ಥಳೀಯ ಪರಿಸರದಲ್ಲಿ ಮನೆಗಳಿದ್ದು,  ಜನರಲ್ಲಿ ಆತಂಕಕ್ಕೆ ಗುರಿಯಾಗಿದೆ. ಗ್ರಾಮ ಪಂಚಾಯತ್‍ ಅಧ್ಯಕ್ಷ ಗಣೇಶ ಬಂಗೇರ , ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ಮನೆಗಳತ್ತ ಹರಡದಂತೆ ಮುನ್ನೆಚ್ಚರಿಕೆ ವಹಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದೆ ಬೆಂಕಿಯನ್ನು ನಂದಿಸಲು  ನೀರಿನ ಟ್ಯಾಂಕ‌ರ್ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಬಳಿಕ

ಮುಂಡಾಜೆಯಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ Read More »

ಬೈಕ್‍ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ  ಮಹಿಳೆ

ಉಡುಪಿ : ರಸ್ತೆಯಲ್ಲಿ ನಡೆದುಕೊಂಡು ಹೋದ ಮಹಿಳೆಯೋರ್ವಳಿಗೆ ಬೈಕ್‍ ಸವಾರ ಡಿಕ್ಕಿಹೊಡೆದು, ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಮೃತ ಮಹಿಳೆ ಮೇರಿವಾಜ್ ಮಿಯಾರು ನಿವಾಸಿಯಾಗಿದ್ದು ರಸ್ತೆ ಬದಿ ನಡೆದುಕೊಂಡು ಬರುತ್ತಿರುವಾಗಲೇ ಹಿ೦ಬದಿಯಿ೦ದ ವೇಗವಾಗಿ ಬಂದ ಬೈಕ್ ಸವಾರ ಸಂತೋಷ್ ಎಂಬವರು ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಮಹಿಳೆ ಕೆಲ ದೂರ ಹೋಗಿ ಬಿದ್ದಿದ್ದು ಅಪಘಾತದ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸಂತೋಷ್ ಕೂಡ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ

ಬೈಕ್‍ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ  ಮಹಿಳೆ Read More »

error: Content is protected !!
Scroll to Top