ಸುದ್ದಿ

ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಆತ್ಮಹತ್ಯೆ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ, ರೆಂಕೆದಗುತ್ತು ನಿವಾಸಿ ಅಬ್ದುಲ್ ಬಶೀರ್ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ಮೃತದೇಹ ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಆತ್ಮಹತ್ಯೆ Read More »

ಅನಾರೋಗ್ಯದಿಂದ ಖಳನಟ ಹರೀಶ್ ರಾಯ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಹರೀಶ್ ರಾಯ್ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಥೈರಾಯ್ಡ್ ಕ್ಯಾನ್ಸರ್‌‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚಿದ್ದ ಅವರು, ಕೆಜಿಎಫ್ ಚಿತ್ರದಲ್ಲಿನ ಚಾಚಾ ಪಾತ್ರದ ನಟನೆಯ ಬಳಿಕ ಕೆಜಿಎಫ್ ಚಾಚಾ ಎಂದೇ ಪರಿಚಿತರಾಗಿದ್ದರು‌.

ಅನಾರೋಗ್ಯದಿಂದ ಖಳನಟ ಹರೀಶ್ ರಾಯ್ ನಿಧನ Read More »

ಪುತ್ರಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

ಕೋಲಾರ: ಮಗಳನ್ನು ಕೊಂದ ತಂದೆಯೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ನಡೆದಿದೆ. ಐದು ವರ್ಷದ ಪುತ್ರಿ ನಿಹಾರಿಕಾಳನ್ನು ಕೊಂದು ತಂದೆ ಲೋಕೇಶ್ (37) ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಕೌಟುಂಬಿಕ ಕಲಹದಿಂದ ಲೋಕೇಶ್ ಅವರ ಪತ್ನಿ ಮನೆ ಬಿಟ್ಟು ನಾಪತ್ತೆಯಾಗಿದ್ದರು‌. ಇದರಿಂದ ನೊಂದ ಲೋಕೇಶ್ ಪುತ್ರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆ ಬಳಿಕ ಶವವನ್ನು ಕಾರಿನಲ್ಲಿಟ್ಟು ಲೋಕೇಶ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮುಳಬಾಗಿಲು ಗ್ರಾಮಾಂತರ

ಪುತ್ರಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ Read More »

ಆರ್‌ಎಸ್‌ಎಸ್‌ಗೆ ಅಂಕುಶ ಹಾಕಲು ಹೊರಟ ಸರ್ಕಾರಕ್ಕೆ ಮತ್ತೆ ಹಿನ್ನಡೆ

ಸಾರ್ವಜನಿಕ ಸ್ಥಳ ಬಳಕೆ ಅಧಿಸೂಚನೆ ಮೇಲ್ಮನವಿ ಹೈಕೋರ್ಟಿನಲ್ಲಿ ವಜಾ ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘಟನೆಯನ್ನು ನಿಷೇಧಿಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟಿನಲ್ಲಿ ಇಂದು ಮತ್ತೊಂದು ಹಿನ್ನಡೆಯಾಗಿದೆ. ಆರ್​​ಎಸ್​ಎಸ್‌ಗೆ ಅಂಕುಶ ಹಾಕಲು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಕೆಯಾದ ಮೇಲ್ಮನವಿಯನ್ನ ಹೈಕೋರ್ಟ್ ದ್ವಿಸದಸ್ಯ ಪೀಠ ವಜಾಗೊಳಿಸಿ ಏಕಸದಸ್ಯ ಪೀಠದಲ್ಲೇ ಇದನ್ನ ಇತ್ಯರ್ಥ ಮಾಡಿಕೊಳ್ಳಿ ಎಂದು ಧಾರವಾಡದ ವಿಭಾಗೀಯ ಪೀಠ ತಿಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಆರ್​​ಎಸ್​ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ

ಆರ್‌ಎಸ್‌ಎಸ್‌ಗೆ ಅಂಕುಶ ಹಾಕಲು ಹೊರಟ ಸರ್ಕಾರಕ್ಕೆ ಮತ್ತೆ ಹಿನ್ನಡೆ Read More »

ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ. ಸಿ. ಫಾರ್ಮ್‌ನಲ್ಲಿ ಶೌಚಾಲಯ ಉದ್ಘಾಟನೆ

ಕಡಬ: ಕೆ. ಸಿ. ಪಾರ್ಮ್ ಕೊಯಿಲ ಶಾಲೆಯಲ್ಲಿ ಗ್ರಾಮ ಪಂಚಾಯತ್‌ನ ನರೇಗಾ ಯೋಜನೆಯ ಅಡಿಯಲ್ಲಿ ಶೌಚಾಲಯ ಉದ್ಘಾಟನೆಯನ್ನು SRK ladders ನ ಕೇಶವ ಅಮೈ ಮಾಡಿದರು. ಬಳಿಕ ಮಾತಾಡಿದ ಅವರು, ಶಾಲೆಯ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶೌಚಾಲಯವನ್ನು ನಿರ್ಮಾಣ ಮಾಡುವುದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಾಗೆಯೇ ಶಾಲಾ ಅಭಿವೃದ್ಧಿಗೆ ನನ್ನ ಬೆಂಬಲ ಯಾವಾಗಲು ಇರುತ್ತದೆ ಎಂದು ಹೇಳಿದರು. ಈ ಸoದರ್ಭದಲ್ಲಿ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಚಂದ್ರ ಶೇಖರ್ ಮತ್ತು ಪಂಚಾಯತ್‌ನ ಅಧ್ಯಕ್ಷರು ಕಾರ್ಯದರ್ಶಿ ಪಿಡಿಒ,

ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ. ಸಿ. ಫಾರ್ಮ್‌ನಲ್ಲಿ ಶೌಚಾಲಯ ಉದ್ಘಾಟನೆ Read More »

ಪೊಲೀಸ್‌ ಠಾಣೆಯಲ್ಲಿ ಒಂದು ತಿಂಗಳಿಂದ ನಿಂತಿದ್ದ ಕಾರಿನಲ್ಲಿ ಕೋಟಿಗಟ್ಟಲೆ ಹಣ, ಚಿನ್ನ ಪತ್ತೆ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಳ್ಳಲಾಗಿದ್ದ ಕಾರು ಚಿಕ್ಕಮಗಳೂರು : ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ವಶಪಡಿಸಿಕೊಂಡು ಪೊಲೀಸ್‌ ಠಾಣೆಯಲ್ಲಿ ಇಟ್ಟಿದ್ದ ಕಾರಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಒಡವೆ ಮತ್ತು ಹಣ ಪತ್ತೆಯಾಗಿರುವ ಘಟನೆ ಕೊಪ್ಪದಲ್ಲಿ ನಡೆದಿದೆ. ವಿಶೇಷವೆಂದರೆ ಈ ಕಾರು ಒಂದು ತಿಂಗಳಿಂದ ಪೊಲೀಸ್‌ ಠಾಣೆಯ ಆವರಣದಲ್ಲಿತ್ತು. ಮಾಜಿ ಶಿಕ್ಷಣ ‌ಸಚಿವ ದಿ.ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗನ್ನು ಸಾಂಗ್ಲಿ ಪೊಲೀಸರ ನೆರವಿನಿಂದ ಕೊಪ್ಪದ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಎಸ್ಕೇಪ್​ ಆಗಲು

ಪೊಲೀಸ್‌ ಠಾಣೆಯಲ್ಲಿ ಒಂದು ತಿಂಗಳಿಂದ ನಿಂತಿದ್ದ ಕಾರಿನಲ್ಲಿ ಕೋಟಿಗಟ್ಟಲೆ ಹಣ, ಚಿನ್ನ ಪತ್ತೆ Read More »

ರಾಹುಲ್‌ ಗಾಂಧಿ ತೋರಿಸಿದ್ದು ಬ್ರಝಿಲ್‌ ರೂಪದರ್ಶಿಯ ಹಳೆಯ ಫೋಟೊ!

ಹರಿಯಾಣದಲ್ಲಿ ಮತ ಕಳ್ಳತನ ಆರೋಪಕ್ಕೆ ಬಳಸಿದ್ದ ಫೊಟೊ ನವದೆಹಲಿ : ನಿನ್ನೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹರಿಯಾಣದಲ್ಲಿ ಭಾರಿ ಪ್ರಮಾಣದ ಮತಕಳ್ಳತನವಾಗಿದೆ ಎಂದು ಆರೋಪಿಸಲು ಬಳಸಿಕೊಂಡಿದ್ದ ಯುವತಿಯ ಫೋಟೊ ಬ್ರಝಿಲ್‌ನ ಮೋಡೆಲ್‌ ಒಬ್ಬರ ಹಳೆಯ ಫೋಟೊ ಎನ್ನುವುದು ಬಹಿರಂಗವಾಗಿದೆ.ಬ್ರಝಿಲ್‌ನ ರೂಪದರ್ಶಿ ಲಾರಿಸ್ಸಾ ಎಂಬವರ ಫೋಟೊ ಇದು ಎನ್ನುವುದು ಖಾಸಗಿ ವಾಹಿನಿಗಳು ನಡೆಸಿದ ತನಿಖೆಯಿಂದ ಗೊತ್ತಾಗಿದೆ. ಸ್ವತಹ ಲಾರಿಸ್ಸಾ ಈ ವಿಚಿತ್ರ ವಿದ್ಯಮಾನಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಬಿಜೆಪಿ ಚುನಾವಣಾ

ರಾಹುಲ್‌ ಗಾಂಧಿ ತೋರಿಸಿದ್ದು ಬ್ರಝಿಲ್‌ ರೂಪದರ್ಶಿಯ ಹಳೆಯ ಫೋಟೊ! Read More »

ಗಮ್ಯಸ್ಥಾನ ತಲುಪಿದ ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ

ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥವು ಕೋಟೇಶ್ವರದಿಂದ ಮೆರವಣಿಗೆಯ ಮೂಲಕ ನವೆಂಬರ್ 4ರಂದು ಹೊರಟಿದ್ದು ನಿನ್ನೆ ನವೆಂಬರ್ 5ಕ್ಕೆ ತನ್ನ ಗಮ್ಯಸ್ಥಾನವಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ತಲುಪಿತು. ಕಟೀಲ್ ಮತ್ತು ಮುರುಳ್ಯ ಭಾಗಿನಿನ್ನೆ ಪೂರ್ವಾಹ್ನ ಸುಳ್ಯದ ಕೆವಿಜಿ ಸರ್ಕಲ್ ಬಳಿ ಬೆಳ್ಳಿರಥದ ಭವ್ಯ ಮೆರವಣಿಗೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ

ಗಮ್ಯಸ್ಥಾನ ತಲುಪಿದ ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ Read More »

ಪಿಯುಸಿ ಮಕ್ಕಳಿಗೂ ಬಿಸಿಯೂಟ ನೀಡಲು ಚಿಂತನೆ

ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಕ್ರಮ ಬೆಂಗಳೂರು: ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದೂಟ ಕಾರ್ಯಕ್ರಮವನ್ನು ಪಿಯುಸಿ ತನಕ ವಿಸ್ತರಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಪಿಯುಸಿ ಮಕ್ಕಳಿಗೂ ಮಧ್ಯಾಹ್ನ ಬಿಸಿಯೂಟ ನೀಡುವ ಬಗ್ಗೆ ಇಲಾಖೆಗಳ ನಡುವೆ ಸಾಧಕ ಬಾಧಕ ಚರ್ಚೆ ನಡೆಯುತ್ತಿದೆ. ಸದ್ಯ ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ನಿತ್ಯ ಬಿಸಿಯೂಟ ನೀಡಲಾಗುತ್ತಿದೆ. ಬಿಸಿಯೂಟವನ್ನು ಸರ್ಕಾರಿ, ಅನುದಾನಿತ ಪಿಯು ಕಾಲೇಜುವರೆಗೂ ವಿಸ್ತರಣೆ ಮಾಡುವ ಸಾಧ್ಯತೆ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಬಿಸಿಯೂಟ ಕಾರ್ಯಕ್ರಮವನ್ನು ಪ್ರಥಮ

ಪಿಯುಸಿ ಮಕ್ಕಳಿಗೂ ಬಿಸಿಯೂಟ ನೀಡಲು ಚಿಂತನೆ Read More »

1 ಗಂಟೆಯಲ್ಲಿ 20 ಮತ ಹಾಕುವುದು ಸಾಧ್ಯನಾ? : ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ವ್ಯಂಗ್ಯ

ಕಾಂಗ್ರೆಸ್‌ ನಾಯಕ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕೆ ನವದೆಹಲಿ: ಹರಿಯಾಣದಲ್ಲಿ ವೋಟ್‌ ಚೋರಿ ನಡೆದಿದೆ ಎಂಬ ರಾಹುಲ್‌ ಗಾಂಧಿ ಆರೋಪವನ್ನು ಬಿಜೆಪಿ ವ್ಯಂಗ್ಯ ಮಾಡಿದೆ. ಯಾರಾದ್ರೂ ಒಂದು ಗಂಟೆಯಲ್ಲಿ 20 ಹಾಕುವುದಕ್ಕೆ ಸಾಧ್ಯವಾ ಎಂದು ಬಿಜೆಪಿ ಪ್ರಶ್ನಿಸಿದೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ, ಹರಿಯಾಣದಲ್ಲಿ ದೊಡ್ಡ ಪ್ರಮಾಣದ ಮತದಾರರ ವಂಚನೆ ನಡೆದಿದೆ. ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ಎಂದು ಆರೋಪಿಸಿದ್ದರು. ಅದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಭಾರತ

1 ಗಂಟೆಯಲ್ಲಿ 20 ಮತ ಹಾಕುವುದು ಸಾಧ್ಯನಾ? : ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ವ್ಯಂಗ್ಯ Read More »

error: Content is protected !!
Scroll to Top