ಸುದ್ದಿ

ಪಾಕಿಸ್ತಾನ ವಾಯುದಾಳಿಗೆ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು

ಕದನ ವಿರಾಮ ಇರುವಾಗಲೇ ದಾಳಿ-ತ್ರಿಕೋನ ಸರಣಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ ಎಸಿಬಿ ಕಾಬೂಲ್: ಪಾಕಿಸ್ತಾನದ ಗಡಿಯಲ್ಲಿರುವ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಮೂವರು ಆಫ್ಘನ್ ಕ್ರಿಕೆಟಿಗರು ಸೇರಿದಂತೆ ಕನಿಷ್ಠ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಉಭಯ ದೇಶಗಳ ನಡುವೆ ಈಗಾಗಲೇ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ. ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪ್ರಕಾರ, ಮುಂದಿನ ತಿಂಗಳು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಆಟಗಾರರು ಉರ್ಗುನ್‌ನಿಂದ ಪಕ್ತಿಕಾ […]

ಪಾಕಿಸ್ತಾನ ವಾಯುದಾಳಿಗೆ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು Read More »

ಹೂಡಿಕೆ ನೆಪದಲ್ಲಿ ಕೋಟ್ಯಂತರ ರೂ. ವಂಚನೆ : ಗಂಡ-ಹೆಂಡತಿ ಸೆರೆ

ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ಗಳಿಸಿಕೊಡುತ್ತೇವೆ ಎಂದು ನಂಬಿಸಿ ಕಿನ್ನಿಗೋಳಿ ಪರಿಸರದ ಪರಿಚಯಸ್ಥ ಜನರಿಗೆ ಕೋಟಿಗಟ್ಟಲೆ ರೂಪಾಯಿ ವಂಚಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಿನ್ನಿಗೋಳಿ ಸಮೀಪದ ಕವತ್ತಾರಿನ ರಿಚರ್ಡ್‌ ಡಿಸೋಜ ಮತ್ತು ಅವನ ಹೆಂಡತಿ ರಶ್ಮಿ ರೀಟಾ ಪಿಂಟೊ ಸೆರೆಯಾಗಿರುವ ಆರೋಪಿಗಳು. ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ಸಾರ್ವಜನಿಕರಿಗೆ ಹೂಡಿಕೆ ನೆಪದಲ್ಲಿ ಸುಮಾರು 1.5 ಕೋ. ರೂ. ವಂಚಿಸಿದ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಸುಮಾರು ಒಂದೂವರೆ ವರ್ಷದಿಂದ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದರು. ಮೂಲ್ಕಿ

ಹೂಡಿಕೆ ನೆಪದಲ್ಲಿ ಕೋಟ್ಯಂತರ ರೂ. ವಂಚನೆ : ಗಂಡ-ಹೆಂಡತಿ ಸೆರೆ Read More »

116 ಕೆಜಿ ಗಾಂಜಾ ವಶ : ಆರೋಪಿ ಸೆರೆ

ಮಂಗಳೂರೂ: ಕರ್ನಾಟಕ-ಕೇರಳ ಗಡಿಭಾಗವಾದ ಮಂಜೇಶ್ವರದ ವರ್ಕಾಡಿ ಸುಳ್ಯಮೆಯಿಂದ ಸುಮಾರು 116 ಕಿಲೋ ಗಾಂಜಾ ವಶ ಪಡಿಸಿಕೊಂಡಿರುವ ಮಂಜೇಶ್ವರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರು ಜಯಪುರ ಹೋಬಳಿಯ ಸಿದ್ದೇಗೌಡ (25) ಬಂಧಿತ ಆರೋಪಿ. ಸುಳ್ಯಮೆಯ ಮನೆಯ ಶೆಡ್‌ನಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ಅಕ್ಟೋಬರ್ 8ರಂದು ರಾತ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಮಿನಿ ಟೆಂಪೋ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರಿಗೆ ವಾಹನ ಚಾಲಕ ಸಿದ್ದೇಗೌಡನ ಮಾಹಿತಿ ಲಭಿಸಿತ್ತು. ತನಿಖೆಯನ್ನು ಮೈಸೂರಿಗೆ ವಿಸ್ತರಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

116 ಕೆಜಿ ಗಾಂಜಾ ವಶ : ಆರೋಪಿ ಸೆರೆ Read More »

ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಮುಷ್ಕರ : ಗುತ್ತಿಗೆದಾರರ ಎಚ್ಚರ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮತ್ತೆ ಕಮಿಷನ್‌ ಆರೋಪ ಮಾಡಿದ ಗುತ್ತಿಗೆದಾರರು ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಈಗ ತಾನೇ ಕಮಿಷನ್‌ ಬಲೆಯಲ್ಲಿ ಸಿಕ್ಕಿಬಿದ್ದಿದೆ. ಗುತ್ತಿಗೆದಾರರು ಸರ್ಕಾರದ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಮುಷ್ಕರ ಹೂಡುವುದಾಗಿ ಎಚ್ಚರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಸಮಸ್ಯೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಆದರೆ ಇನ್ನೂ ಬಾಕಿ ಬಿಡುಗಡೆ ಮಾಡಿಲ್ಲ

ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಮುಷ್ಕರ : ಗುತ್ತಿಗೆದಾರರ ಎಚ್ಚರ Read More »

ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಮಾಡುವುದನ್ನು ನಿಷೇಧಿಸಲು ಯತ್ನಾಳ ಪತ್ರ

ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಮುಖ್ಯಮಂತ್ರಿಗೆ ಬರೆದ ಪತ್ರ ಬೆಂಗಳೂರು : ಸರ್ಕಾರದ ಅನುಮತಿ ಪಡೆದುಕೊಳ್ಳದೆ ಸಾರ್ವಜನಿಕ ರಸ್ತೆ ಹಾಗೂ ಸರ್ಕಾರಿ ಆವರಣಗಳಲ್ಲಿ ನಡೆಯುವ ನಮಾಜ್‌ಗೆ ಬ್ರೇಕ್​ ಹಾಕುವಂತೆ ಆಗ್ರಹಿಸಿ ಸರ್ಕಾರಕ್ಕೆ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ ಬರೆದಿರುವ ಪತ್ರ ಸಂಚಲನ ಸೃಷ್ಟಿಸಿದೆ. ಸರ್ಕಾರಿ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಸಂಬಂಧ ರೆಗ್ಯುಲೇಷನ್ ಆಫ್ ಯೂಸ್

ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಮಾಡುವುದನ್ನು ನಿಷೇಧಿಸಲು ಯತ್ನಾಳ ಪತ್ರ Read More »

ಯಾವುದೇ ಖಾಸಗಿ ಸಂಸ್ಥೆಗಳು ಸರ್ಕಾರಿ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ: ಸಿ. ಎಂ. ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಖಾಸಗಿ ಸಂಸ್ಥೆಗಳು ಕಾರ್ಯಕ್ರಮ ನಡೆಸುವ ಹಾಗಿಲ್ಲ. ಈ ನಿಯಮ ಕೇವಲ RSS ಗೆ ಮಾತ್ರ ಅನ್ವಯವಲ್ಲ, ಎಲ್ಲಾ ಖಾಸಗಿ ಸಂಸ್ಥೆಗಳಿಗೂ ಅನ್ವಯ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟದ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳ ಮೂಲಕವೂ ಸ್ಪಷ್ಟನೆ ನೀಡಿ ಪೋಸ್ಟ್ ಮಾಡಿದ್ದಾರೆ. ಸರ್ಕಾರಿ ಶಾಲಾ – ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಹಾಗೂ ಇತರೆ ಸ್ಥಳಗಳನ್ನು ಯಾವುದೇ ಖಾಸಗಿ ಸಂಘ

ಯಾವುದೇ ಖಾಸಗಿ ಸಂಸ್ಥೆಗಳು ಸರ್ಕಾರಿ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ: ಸಿ. ಎಂ. ಸಿದ್ದರಾಮಯ್ಯ Read More »

ಪ್ರಿಯಾಂಕ್ ಖರ್ಗೆ‌ಗೆ ಬೆದರಿಕೆ ಒಡ್ಡಿದ ವ್ಯಕ್ತಿ ಅರೆಸ್ಟ್: ಜಿ. ಪರಮೇಶ್ವರ್

ತುಮಕೂರು: RSS ನಿಷೇಧಕ್ಕೆ ಮನವಿ ಮಾಡಿ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದ್ದು, ಖರ್ಗೆ‌ಗೆ ಭದ್ರತೆ ನೀಡಲಾಗಿದೆ ಎಂದು ಗೃಹ ಸಚಿವ ಡಾ‌. ಜಿ. ಪರಮೇಶ್ವರ್ ಹೇಳಿದ್ದಾರೆ. ಖರ್ಗೆ ಗೆ ಬೆದರಿಕೆ ಒಡ್ಡಿದ ಪ್ರಕರಣದ ಹಿಂದೆ ಯಾರಾದರೂ ಇದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಖಾಸಗಿಯವರು ಸರ್ಕಾರಿ ಅಥವಾ ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಕಡ್ಡಾಯ. ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಖಾಸಗಿಯವರು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು

ಪ್ರಿಯಾಂಕ್ ಖರ್ಗೆ‌ಗೆ ಬೆದರಿಕೆ ಒಡ್ಡಿದ ವ್ಯಕ್ತಿ ಅರೆಸ್ಟ್: ಜಿ. ಪರಮೇಶ್ವರ್ Read More »

ಉಪರಾಷ್ಟ್ರಪತಿ ಸಿ.ಪಿ. ರಾಧಕೃಷ್ಣನ್ ನಿವಾಸಕ್ಕೆ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ ಕರೆ

ನವದೆಹಲಿ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈ ನಿವಾಸಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಒಡ್ಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಬಾಂಬ್ ಇರಿಸಲಾಗಿದೆ ಎಂದು ಕರೆ ಮಾಡಿ ತಿಳಿಸಿದ್ದು, ಇದರಿಂದ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ವಿಷಯ ತಿಳಿಯುತ್ತಿದ್ದ ಹಾಗೆಯೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಕೃಷ್ಣನ್ ನಿವಾಸಕ್ಕೆ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ ಕರೆ Read More »

ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಬದುಕಿಗೆ ಕಾಲಿಟ್ಟ ಗಾಯಕಿ ಸುಹಾನಾ – ನಿತಿನ್

ಬೆಂಗಳೂರು: ಗಾಯಕಿ ಸುಹಾನಾ ಸೈಯದ್ ಅವರು ತಮ್ಮ ಬಹುಕಾಲದ ಸ್ನೇಹಿತ ನಿತಿನ್ ಶಿವಾಂಶ್ ಅವರ ಜೊತೆಗೆ ಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ರೀತಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟರು. ಕನಕಪುರದ ಖಾಸಗಿ ರೆಸಾರ್ಟ್ ಒಂದರಲ್ಲಿ ಈ ಕಾರ್ಯಕ್ರಮ ನಡೆಯಿತು. ಸಾಗರ ಮೂಲದವರಾದ ‌ಸುಹಾನ ಅವರು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಸರಿಗಮಪ ದಲ್ಲಿ ಸ್ಪರ್ಧಿಸಿದ್ದು, ತಮ್ಮ ಸ್ವರ ಮಾಧುರ್ಯದ ಮೂಲಕವೇ ಜನರಿಗೆ ಪರಿಚಿತರಾದವರು. ನಿತೀಶ್ ಅವರು ರಂಗ ಭೂಮಿ, ಸಿನಿ ಕಲಾವಿದರಾಗಿದ್ದು ಇವರಿಬ್ಬರದು 16 ವರ್ಷಗಳ

ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಬದುಕಿಗೆ ಕಾಲಿಟ್ಟ ಗಾಯಕಿ ಸುಹಾನಾ – ನಿತಿನ್ Read More »

ತಲಕಾವೇರಿಯಲ್ಲಿ ‌ಪವಿತ್ರ ಕಾವೇರಿ ತೀರ್ಥೋದ್ಭವ

ಮಡಿಕೇರಿ: ಇಂದು ಮಧ್ಯಾಹ್ನ 1.44 ರ ಶುಭ ಮುಹೂರ್ತದಲ್ಲಿ ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ನಡೆಯಿತು. ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ಕಾಣಿಸಿಕೊಂಡು ಭಕ್ತರನ್ನು ಅನುಗ್ರಹಿಸಿದಳು. ಈ ಪುಣ್ಯ ಕಾರ್ಯಕ್ಕೆ ಸಂಸದ ಯದುವೀರ ಕೃಷ್ಣದತ್ತ ಒಡೆಯರ್, ಸಿ ಎಂ ಕಾನೂನು ಸಲಹೆಗಾರ ಮತ್ತು ಶಾಸಕ ಎ. ಎಸ್. ಪೊನ್ನಣ್ಣ ಸೇರಿದಂತೆ ಇನ್ನೂ ಹಲವು ಗಣ್ಯರು ಸಾಕ್ಷಿಗಳಾದರು.

ತಲಕಾವೇರಿಯಲ್ಲಿ ‌ಪವಿತ್ರ ಕಾವೇರಿ ತೀರ್ಥೋದ್ಭವ Read More »

error: Content is protected !!
Scroll to Top