ಸುದ್ದಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜು : ಬಿಜೆಪಿ ಆಕ್ರೋಶ

ಗರಿಷ್ಠ ಭದ್ರತೆ ಇರುವ ನಿರ್ಬಂಧಿತ ಪ್ರದೇಶದಲ್ಲಿ ನಮಾಜು ಮಾಡಲು ಅನುಮತಿ ಕೊಟ್ಟದ್ದು ಯಾರು ಎಂದು ಪ್ರಶ್ನೆ ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಾಮೂಹಿಕ ನಮಾಜ್ ನಡೆಯುತ್ತಿದ್ದರೂ ಸಿಬ್ಬಂದಿ ನೋಡುತ್ತಾ ಮೌನವಾಗಿದ್ದರು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ […]

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜು : ಬಿಜೆಪಿ ಆಕ್ರೋಶ Read More »

ವಿಜೃಂಭಣೆಯಿಂದ ಜರುಗಿದ ಬೆಳ್ಳಿರಥ ಸಮರ್ಪಣೆಯ ಪೂರ್ವಭಾವಿ ಪೂಜೆ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯನಿಗೆ ಶ್ರದ್ಧಾಪೂರ್ವಕವಾಗಿ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಇಂದು ಸಮರ್ಪಿಸಲಿರುವ ಅತಿ ಸುಂದರವಾದ 18 ಅಡಿಗಳ ಎತ್ತರದ, ರೂ. ಎರಡು ಕೋಟಿಗೂ ಮಿಕ್ಕಿದ ಮೌಲ್ಯವುಳ್ಳ, ವಾಸ್ತುಶುದ್ಧಿಯುಳ್ಳ ಬೆಳ್ಳಿರಥಕ್ಕೆ ನಿನ್ನೆ ಸಂಜೆ ಗಂಟೆ 6ಕ್ಕೆ ಶುದ್ದಿ ಕಲಶ, ವಾಸ್ತುಪೂಜೆ, ವಾಸ್ತುಬಲಿ ಮತ್ತು ರಾಕ್ಷೋಘ್ನ ಹೋಮಗಳು ಪುರೋಹಿತವರ್ಯರಾದ ಎಡಪಡಿತ್ತಾಯರ ನೇತೃತ್ವದಲ್ಲಿ ನಡೆದವು. ವಿಜಯ ಸಂಕೇಶ್ವರ ಹಾಜರ್ಪೂರ್ವಭಾವಿ ವೈದಿಕ ವಿಧಿಗಳ ಸಂದರ್ಭದಲ್ಲಿ ಪ್ರಖ್ಯಾತ ಪತ್ರಕರ್ತರೂ, ಉದ್ಯಮಿಯವರೂ ಆಗಿರುವ ವಿಜಯ ಸಂಕೇಶ್ವರ ಭೇಟಿ ನೀಡಿ ಡಾ. RPಯವರಿಗೆ ಅಭಿನಂದನೆ

ವಿಜೃಂಭಣೆಯಿಂದ ಜರುಗಿದ ಬೆಳ್ಳಿರಥ ಸಮರ್ಪಣೆಯ ಪೂರ್ವಭಾವಿ ಪೂಜೆ Read More »

ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಕೇಸ್‌

ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರಿಗೆ ಆಟೋರಿಕ್ಷಾ ಚಾಲಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.ಅಪ್ರಾಪ್ತ ಪ್ರಾಯದ ಮಗಳು ಹಾಗೂ ಮತ್ತೊಬ್ಬ ವಿದ್ಯಾರ್ಥಿನಿ ಸ್ಥಳೀಯ ಶಾಲೆಗೆ ಹೋಗುವಾಗ ಕೆಲವು ದಿನಗಳ ಹಿಂದೆ ಅವರು ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ ಎಂದು ಓರ್ವ ಬಾಲಕಿಯ ತಂದೆ ದೂರು ನೀಡಿದ್ದಾರೆ. ಈ ಕಿರುಕುಳ ಮುಂದುವರಿದಿದ್ದು ಅ.8ರಂದು ಬೆಳಗ್ಗೆ ಅದೇ ವ್ಯಕ್ತಿ ಮತ್ತೆ ಆಟೋರಿಕ್ಷಾದಲ್ಲಿ ಬಂದು ಇಬ್ಬರು ಬಾಲಕಿಯರಿಗೆ ಕಿರುಕುಳ

ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಕೇಸ್‌ Read More »

ಎಂಟು ವರ್ಷದ ಹಿಂದೆ ಕಾಣೆಯಾದ ವಿದ್ಯಾರ್ಥಿಯ ಪತ್ತೆಗೆ ಮನವಿ

ಉಳ್ಳಾಲದ ಕಾಲೇಜಿನಿಂದ ನಾಪತ್ತೆಯಾದ ವಿದ್ಯಾರ್ಥಿ ಮಂಗಳೂರು: ಸುಮಾರು ಎಂಟು ವರ್ಷದ ಹಿಂದೆ ಕಾಣೆಯಾಗಿರುವ ನಗರದ ಕಾಲೇಜೊಂದರ ವಿದ್ಯಾರ್ಥಿಯ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಂದ ಮನವಿ ಮಾಡಿದ್ದಾರೆ. 18-04-2018ರಂದು ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪಿ.ಎ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್‌ ಅವರು ಕೊಣಾಜೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಕಾಸರಗೋಡು ಪಚ್ಚಕಾಡ್‌ನ ಸಲೀಂ ಕೆ.ಎಂ ಎಂಬವರ ಪುತ್ರ ಮೊಹಮ್ಮದ್ ಶಾಮೀಲ್ (21) 17-04-2018ರಂದು ಬೆಳಗ್ಗೆ 11.34ಕ್ಕೆ ಕಾಲೇಜಿನ ಪಾರ್ಕಿಂಗ್

ಎಂಟು ವರ್ಷದ ಹಿಂದೆ ಕಾಣೆಯಾದ ವಿದ್ಯಾರ್ಥಿಯ ಪತ್ತೆಗೆ ಮನವಿ Read More »

ಡಿಕೆಶಿಗಿಲ್ಲ ಕುರ್ಚಿ : ಬಿಜೆಪಿಯ ಎಐ ವಿಡಿಯೋ ವೈರಲ್‌

ಕಾಂಗ್ರೆಸ್‌ಗೆ ಮುಜುಗರ ತಂದ ವಿಡಿಯೋ ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ನಡೆಯುತ್ತಿರುವ ಕುರ್ಚಿ ಕಿತ್ತಾಟದ ಹಿನ್ನೆಲೆಯಲ್ಲಿ ಬಿಜೆಪಿ ಭಾನುವಾರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಎಕ್ಸ್‌ನಲ್ಲಿ ಬಿಡುಗಡೆಗೊಳಿಸಿದ ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಯಾರಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿ ಕಾಂಗ್ರೆಸ್ಸನ್ನು ಮುಜುಗರಕ್ಕೀಡುಮಾಡಿದೆ. ಡಿ.ಕೆ ಶಿವಕುಮಾರ್ ಅವರಿಗೆ ‘ನೋ ಚೇರ್ ನವೆಂಬರ್’ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಕರ್ನಾಟಕ ಎಐ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ

ಡಿಕೆಶಿಗಿಲ್ಲ ಕುರ್ಚಿ : ಬಿಜೆಪಿಯ ಎಐ ವಿಡಿಯೋ ವೈರಲ್‌ Read More »

ಜಾತಿ ಗಣತಿ : ಇಂದು ಆನ್‌ಲೈನ್‌ ಸಮೀಕ್ಷೆ ಮುಕ್ತಾಯ

6.13 ಕೋಟಿ ಜನರ ಸಮೀಕ್ಷೆ ಪೂರ್ಣ ಬೆಂಗಳೂರು : ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಆನ್‍ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸೋಮವಾರ(ನ.10) ಕೊನೆಯ ದಿನವಾಗಿದೆ. ಇದುವರೆಗೆ 6.13 ಕೋಟಿ ಜನರ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗ ಸೇರಿ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22ರಿಂದ ಆರಂಭಿಸಲಾಗಿತ್ತು. ಅ.31ರವರೆಗೆ ಸಮೀಕ್ಷಾದಾರರನ್ನು ನೇಮಕ ಮಾಡಿ,

ಜಾತಿ ಗಣತಿ : ಇಂದು ಆನ್‌ಲೈನ್‌ ಸಮೀಕ್ಷೆ ಮುಕ್ತಾಯ Read More »

ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಗೆ ದತ್ತಿ ನಿಧಿಯ ಕೊಡುಗೆ

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾ ಭಾರತಿ ಶೈಕ್ಷಣಿಕ ಸಹ ಮಿಲನ 2025 ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರಗಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಹಾಪೋಷಕರಾದ ಆನೆಗುಂದಿ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ಸಂಸ್ಥೆಗೆ ರೂಪಾಯಿ ಒಂದುವರೆ ಲಕ್ಷದ ದತ್ತಿನಿಧಿಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಪೂಜ್ಯ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಇದರ

ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಗೆ ದತ್ತಿ ನಿಧಿಯ ಕೊಡುಗೆ Read More »

ಸರಕಾರಿ ಶಾಲೆಗಳು ಜೀವನ ರೂಪಿಸುವ ದೇಗುಲ – ಭಾಸ್ಕರ ಕೋಡಿಂಬಾಳ

ಸರಕಾರಿ ಶಾಲೆಗಳು ಜೀವನ ರೂಪಿಸುವ ದೇಗುಲವಾಗಿದೆ. ಪ್ರಾಥಮಿಕ ಶಿಕ್ಷಣ ಮುಗಿದು ವರ್ಗಾವಣೆ ಪತ್ರ ಪಡೆದು ಮೇಲ್ಪಂಕ್ತಿಗೆ ಹೋದರೂ ನಾವು ಕಲಿತ ನಮ್ಮೂರ ಶಾಲೆಯನ್ನು ಮರೆಯಲಾಗುವುದಿಲ್ಲ. ಚಿನ್ನಕ್ಕಾದರೂ ಬೆಲೆ ಕಟ್ಟ ಬಹುದು ಆದರೆ ನಾವು ಕಲಿತ ಶಾಲೆಗೆ ಬೆಲೆ ಕಟ್ಟಲಾಗದು.ಅದು ಅಮೂಲ್ಯವಾದುದು ಎಂದು ಹಿರಿಯ ನ್ಯಾಯವಾದಿ ನೋಟರಿ ಭಾಸ್ಕರ ಕೋಡಿಂಬಾಳ ನುಡಿದರು. ಅವರು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಆಯೋಜಿಸಲಾದ ಪಿಎಂಶ್ರೀ ಸಡಗರ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನದ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಎಂಬ

ಸರಕಾರಿ ಶಾಲೆಗಳು ಜೀವನ ರೂಪಿಸುವ ದೇಗುಲ – ಭಾಸ್ಕರ ಕೋಡಿಂಬಾಳ Read More »

KRGಗೆ ಅರೆಭಾಷೆ ಫೆಲೋಶಿಪ್

ಮಡಿಕೇರಿ: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಷ್ಠಿತ “ಅಕಾಡೆಮಿ ಪ್ರಶಸ್ತಿ’ಗೆ KRG ಎಂದೇ ಜನಮಾನಸದಲ್ಲಿ ಪ್ರತೀತಿ ಪಡೆದಿರುವ ನಿವೃತ್ತ ಪ್ರಾಂಶುಪಾಲ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೆ. ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಅರೆಭಾಷೆ ನಿಘಂಟುವಿನ ಕರ್ತೃಅರೆಭಾಷೆಯ ಪದಕೋಶವೊಂದನ್ನು ರಚಿಸುವ ಮೂಲಕ ಅರೆಭಾಷೆಯ ಅಸ್ಮಿತೆ ಮತ್ತು ಅಸ್ತಿತ್ವಗಳಿಗೆ ಗಣನೀಯ ಕೊಡುಗೆಯೊಂದನ್ನು ನೀಡಿದವರು ಕೆ.ಆರ್. ಜಿ. ಜೊತೆಗೆ ‘ಸಾಧನಾ ಶೃಂಗ” ಎಂಬ ಕೃತಿಯನ್ನು ರಚಿಸಿ ಅದರಲ್ಲಿ

KRGಗೆ ಅರೆಭಾಷೆ ಫೆಲೋಶಿಪ್ Read More »

ಕಬ್ಬಿಗೆ 3,300 ರೂ. ನಿಗದಿ ಮಾಡಿರುವ ಸರ್ಕಾರದ ನಿಲುವು ಸಮ್ಮತವಲ್ಲ: ರೈತರಿಂದ ಧರಣಿ

ಬೆಳಗಾವಿ: ಕಬ್ಬಿಗೆ 3,300 ರೂ. ಬೆಲೆ ನಿಗದಿ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ಮುಧೋಳ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುವ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನಿಸಿದ್ದಾರೆ. ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಸಾವಿರಾರು ರೈತರು ಸೇರಿ ಸರ್ಕಾರದ ವಿರುದ್ಧ ಧರಣಿ ಮಾಡಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಬೆಲೆ ತಮಗೆ ಸಾಲುವುದಿಲ್ಲ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ. ಕಬ್ಬು ಟನ್‌ಗೆ 3,500 ರೂ. ಇರಲೇಬೇಕು ಎಂದು ಆಗ್ರಹಿಸಿದ್ದಾರೆ.

ಕಬ್ಬಿಗೆ 3,300 ರೂ. ನಿಗದಿ ಮಾಡಿರುವ ಸರ್ಕಾರದ ನಿಲುವು ಸಮ್ಮತವಲ್ಲ: ರೈತರಿಂದ ಧರಣಿ Read More »

error: Content is protected !!
Scroll to Top