ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯ : ಮಂಗಳೂರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದ ಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಸಮಿತಿಯು  ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದ ಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ Read More »

ಇನ್ನು ತಾಲೂಕು ಪಂಚಾಯಿತಿಗಳ ಮೂಲಕ ಗೃಹಲಕ್ಷ್ಮಿ ಹಣ ಪಾವತಿ?

ಕೇಂದ್ರದ ಕಿಸಾನ್‌ ಸಮ್ಮಾನ್‌ ರೀತಿ ವಿತರಿಸಲು ಸರಕಾರದ ಚಿಂತನೆ ಬೆಂಗಳೂರು: ಕಾಂಗ್ರೆಸ್‌ ಸರಕಾರದ ಮಹತ್ವಾಕಾಂಕ್ಷಿ ಕೊಡುಗೆಯಾಗಿರುವ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ವಿತರಣೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾಲೂಕು ಪಂಚಾಯಿತಿಗಳ ಮೂಲಕ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಇಲ್ಲಿಯವರೆಗೆ ರಾಜ್ಯ ಕಾರ್ಯದರ್ಶಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣ ಪಾವತಿಯಾಗುತಿತ್ತು. ಇನ್ನು ಮುಂದೆ ರಾಜ್ಯ ಕಾರ್ಯದರ್ಶಿಯಿಂದ ತಾಲೂಕು ಪಂಚಾಯಿತಿಗೆ ಹಣ ಪಾವತಿ ಆಗಲಿದೆ. ತಾಲೂಕು ಪಂಚಾಯಿತಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ. ಮಹಿಳಾ ಮತ್ತು

ಇನ್ನು ತಾಲೂಕು ಪಂಚಾಯಿತಿಗಳ ಮೂಲಕ ಗೃಹಲಕ್ಷ್ಮಿ ಹಣ ಪಾವತಿ? Read More »

ಗಡಿಯಲ್ಲಿ ಗುಂಡಿನ ಚಕಮಕಿ : ಉಗ್ರರ ಜೊತೆಗಿದ್ದ ಪಾಕ್‌ ಸೈನಿಕರೂ ಫಿನಿಷ್‌

7 ಮಂದಿಯನ್ನು ಹೊಡೆದುರುಳಿಸಿದೆ ಭಾರತೀಯ ಸೇನೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ ನಡೆದು ಭಾರತೀಯ ಸೇನೆ 7 ಪಾಕ್ ನುಸುಳುಕೋರರನ್ನು ಹೊಡೆದುರುಳಿಸಿದೆ. ಉಗ್ರರು ಹಾಗೂ ಯೋಧರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಮೃತ ಉಗ್ರರಲ್ಲಿ 2-3 ಪಾಕಿಸ್ಥಾನಿ ಸೈನಿಕರೂ ಇದ್ದಾರೆ ಎನ್ನಲಾಗಿದೆ. ಫೆಬ್ರವರಿ 4-5ರ ಮಧ್ಯರಾತ್ರಿ ಎಲ್‌ಒಸಿಯಲ್ಲಿ ಪಾಕಿಸ್ಥಾನಿ ನುಸುಳುಕೋರರ ಹೊಂಚುದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತು ಮತ್ತು 2-3 ಪಾಕಿಸ್ಥಾನಿ ಸೇನಾ ಸಿಬ್ಬಂದಿ ಸೇರಿದಂತೆ ಏಳು ಜನರನ್ನು ಗುಂಡಿಕ್ಕಿ ಕೊಂದಿತು

ಗಡಿಯಲ್ಲಿ ಗುಂಡಿನ ಚಕಮಕಿ : ಉಗ್ರರ ಜೊತೆಗಿದ್ದ ಪಾಕ್‌ ಸೈನಿಕರೂ ಫಿನಿಷ್‌ Read More »

ದರ್ಬೆಯಲ್ಲಿ ‘ಅವೆನ್ಯೂ ಕಂಪ್ಯೂಟರ್ಸ್’ ನವೀಕೃತಗೊಂಡು ಶುಭಾರಂಭ

ಪುತ್ತೂರು: ದರ್ಬೆಯಲ್ಲಿರುವ ರಿಲಾಯನ್ಸ್ ಡಿಜಿಟಲ್ ಎದುರು ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ‘ಅವೆನ್ಯೂ ಕಂಪ್ಯೂಟರ್ಸ್’ ನವೀಕರಣಗೊಂಡು ಶುಕ್ರವಾರ ಶುಭಾರಂಭಗೊಂಡಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಂಸ್ಥೆಯ ಮಾಲಕರಾದ ಅನಿಲ್ ಕುಮಾರ್ ಒತ್ತೆಮುಂಡೂರು, ಮತ್ತಿತರರು ಉಪಸ್ಥಿತರಿದ್ದರು. ಸಂತೃಪ್ತಿ ಹೋಟೇಲ್

ದರ್ಬೆಯಲ್ಲಿ ‘ಅವೆನ್ಯೂ ಕಂಪ್ಯೂಟರ್ಸ್’ ನವೀಕೃತಗೊಂಡು ಶುಭಾರಂಭ Read More »

ರತನ್‌ ಟಾಟಾ ಆಸ್ತಿಯಲ್ಲಿ ಇದೆ ಮೋಹಿನಿಗೂ ದೊಡ್ಡ ಪಾಲು

ಇಷ್ಟಕ್ಕೂ ಈ ಮೋಹಿನಿ ಯಾರು ಗೊತ್ತೆ? ಮುಂಬಯಿ: ಕಳೆದ ವರ್ಷ ನಿಧನರಾಗಿರುವ ದೇಶದ ಬಹು ಗೌರವಾನ್ವಿತ ಉದ್ಯಮಿ ಟಾಟಾ ಸಮೂಹದ ರತನ್‌ ಟಾಟಾ ತನ್ನ ಆಸ್ತಿಯಲ್ಲಿ ಒಂದು ದೊಡ್ಡ ಪಾಲನ್ನು ಮೋಹಿನಿ ಎಂಬ ವ್ಯಕ್ತಿಗೆ ಕೊಟ್ಟಿದ್ದಾರೆ. ಟಾಟಾ ಬರೆದಿಟ್ಟಿರುವ ಉಯಿಲಿನಲ್ಲಿ ಮೋಹಿನಿ ಎಂಬ ವ್ಯಕ್ತಿಯ ಹೆಸರು ಕಾಣಿಸಿಕೊಂಡ ಬಳಿಕ ಯಾರು ಈ ಮೋಹಿನಿ ಎಂಬ ಕುತೂಹಲ ಕೆರಳಿದೆ. ಈ ಮೋಹಿನಿಗೆ ಟಾಟಾ ಬರೋಬ್ಬರಿ 500 ಕೋಟಿ ಸಂಪತ್ತು ಕೊಟ್ಟಿದ್ದಾರೆ.ಟಾಟಾ ಅವಿವಾಹಿತರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ

ರತನ್‌ ಟಾಟಾ ಆಸ್ತಿಯಲ್ಲಿ ಇದೆ ಮೋಹಿನಿಗೂ ದೊಡ್ಡ ಪಾಲು Read More »

ನಂದಿಹೋದ 46 ವರ್ಷಗಳಿಂದ ಉರಿಯುತ್ತಿದ್ದ ದೀಪ : ಕೆಡುಕಿನ ಭೀತಿಯಲ್ಲಿ ಜನ

ಎಣ್ಣೆ-ಬತ್ತಿ ಇಲ್ಲದೆ ನಿರಂತರವಾಗಿ ನಾಲ್ಕೂವರೆ ದಶಕ ಉರಿಯುತ್ತಿದ್ದ ಮೂರು ದೀಪಗಳು ಕಾರವಾರ: ದೇವಸ್ಥಾನವೊಂದರಲ್ಲಿ ಸುಮಾರು ನಾಲ್ಕೂವರೆ ದಶಕದಿಂದ ಎಣ್ಣೆ ಮತ್ತು ಬತ್ತಿ ಇಲ್ಲದೆ ನಿರಂತರವಾಗಿ ಉರಿಯುತ್ತಿದ್ದ ಮೂರು ದೀಪಗಳು ಹಠಾತ್‌ ನಂದಿಹೋಗಿದ್ದು, ಇದು ಯಾವುದೋ ಕೆಡುಕಿನ ಸೂಚನೆ ಎಂದು ಈ ಊರಿನ ಜನ ಭಯಭೀತರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದದಲ್ಲಿ ಮೂರು ದೀಪಗಳು ಎಣ್ಣೆ ಮತ್ತು ಬತ್ತಿ ಇಲ್ಲದೆ ಸತತ 46 ವರ್ಷಗಳಿಂದ ಹಗಲು-ರಾತ್ರಿ ನಿರಂತರವಾಗಿ ಉರಿಯುತ್ತಿದ್ದವು. ಕೆಲದಿನಗಳ ಹಿಂದೆ ಏಕಾಏಕಿ

ನಂದಿಹೋದ 46 ವರ್ಷಗಳಿಂದ ಉರಿಯುತ್ತಿದ್ದ ದೀಪ : ಕೆಡುಕಿನ ಭೀತಿಯಲ್ಲಿ ಜನ Read More »

ಫೆ. 8ರಂದು ಪುತ್ತೂರು ಕ್ಲಬ್’ನಲ್ಲಿ ಸೌಲಭ್ಯಗಳ ಉದ್ಘಾಟನೆ | ಸಾವಿರ ಆಸನ ಸಾಮರ್ಥ್ಯದ ವಿಶಾಲ ಸಭಾಂಗಣ, 200 ಆಸನ ಸಾಮರ್ಥ್ಯದ ಎಸಿ ಹಾಲ್ | ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಕೋರ್ಟ್ ಮಾದರಿಯ ಸಿಂಥೆಟಿಕ್ ಟೆನಿಸ್ ಕೋರ್ಟ್

ಪುತ್ತೂರು : ಪುತ್ತೂರು ಕ್ಲಬ್’ನಲ್ಲಿ ನಿರ್ಮಾಣಗೊಂಡಿರುವ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಫೆ. 8ರಂದು ಸಂಜೆ 4 ಗಂಟೆಗೆ ಕ್ಲಬ್ ಆವರಣದಲ್ಲಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ. ಕುಟುಂಬ ಹಾಗೂ ಆರೋಗ್ಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಅತಿಥಿಯಾಗಿರುವರು. ಸಂಸದ ಕ್ಯಾ. ಬ್ರಿಜೇಶ್ ಚೌಟಾ ಅವರು ಸಿಂಥೆಟಿಕ್ ಟೆನಿಸ್ ಕೋರ್ಟನ್ನು ಉದ್ಘಾಟಿಸಲಿದ್ದಾರೆ.

ಫೆ. 8ರಂದು ಪುತ್ತೂರು ಕ್ಲಬ್’ನಲ್ಲಿ ಸೌಲಭ್ಯಗಳ ಉದ್ಘಾಟನೆ | ಸಾವಿರ ಆಸನ ಸಾಮರ್ಥ್ಯದ ವಿಶಾಲ ಸಭಾಂಗಣ, 200 ಆಸನ ಸಾಮರ್ಥ್ಯದ ಎಸಿ ಹಾಲ್ | ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಕೋರ್ಟ್ ಮಾದರಿಯ ಸಿಂಥೆಟಿಕ್ ಟೆನಿಸ್ ಕೋರ್ಟ್ Read More »

ಫೆ. 9: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ಚುನಾವಣೆ

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಆಡಳಿತ ಮಂಡಳಿಯ ನಿರ್ದೇಶಕರುಗಳ ಚುನಾವಣೆ ಫೆ. 9ರಂದು ನಡೆಯಲಿದೆ. ಸಹಕಾರ ಭಾರತಿಯ ಬೆಂಬಲಿತ ಅಭ್ಯರ್ಥಿಯಾಗಿ ಒಟ್ಟು 17 ಅಭ್ಯರ್ಥಿಗಳು ಕಣಕಿಳಿಯಲಿದ್ದಾರೆ. ಈ ಪೈಕಿ ಸಾಮಾನ್ಯ ಕ್ಷೇತ್ರದಿಂದ 11 ಅಭ್ಯರ್ಥಿಗಳು, ಮಹಿಳಾ ಮೀಸಲಾತಿಯಿಂದ 2 ಅಭ್ಯರ್ಥಿಗಳು, ಹಿಂದುಳಿದ  ‘ ಎ ‘ ವರ್ಗದಿಂದ 1 ಅಭ್ಯರ್ಥಿ, ಹಿಂದುಳಿದ ‘ ಬಿ ‘ ವರ್ಗದಿಂದ 1 ಅಭ್ಯರ್ಥಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ ದಿಂದ 1

ಫೆ. 9: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ಚುನಾವಣೆ Read More »

ಕಾಡಿನಲ್ಲಿ ಹೂತಿಟ್ಟಿದ್ದ ಬಂದೂಕು, ಮದ್ದುಗುಂಡುಗಳು ಪತ್ತೆ

ಶರಣಾಗಿರುವ ನಕ್ಸಲ್‌ ರವೀಂದ್ರನ ಬಂದೂಕು ಎಂಬ ಶಂಕೆ ಕಾರ್ಕಳ: ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮದ ತಿರುಗುಣಿಬೈಲು ಸಮೀಪ ಅರಣ್ಯದಲ್ಲಿ ಎಸ್.ಬಿ.ಎ.ಎಲ್ ಬಂದೂಕೊಂದು ಪತ್ತೆಯಾಗಿದ್ದು, ಇದು ಶರಣಾಗತ ನಕ್ಸಲ್ ರವೀಂದ್ರನಿಗೆ ಸೇರಿದ ಬಂದೂಕು ಎನ್ನಲಾಗಿದೆ. ಮಣ್ಣಿನಡಿಯಲ್ಲಿ ಹೂತಿಟ್ಟಿದ್ದ ಬಂದೂಕು ಹಾಗೂ ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂದೂಕು ಹಾಗೂ ಜೀವಂತ ಗುಂಡುಗಳು ಅಪರಿಚಿತರದ್ದು ಎಂದು ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರು ನಕ್ಸಲರು ಶರಣಾದಾಗ ಸಿಕ್ಕ ಬಂದೂಕಿಗಳಿಗೂ ಪೊಲೀಸರು ಅಪರಿಚಿತರದ್ದು ಎಂದು ಹಣೆಪಟ್ಟಿ ಕಟ್ಟಿದ್ದರು. ಶರಣಾದ ನಕ್ಸಲರನ್ನು ಕಾನೂನಿನ

ಕಾಡಿನಲ್ಲಿ ಹೂತಿಟ್ಟಿದ್ದ ಬಂದೂಕು, ಮದ್ದುಗುಂಡುಗಳು ಪತ್ತೆ Read More »

ಇಂದು ಹೈಕೋರ್ಟಿನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ ಭವಿಷ್ಯ ನಿರ್ಧಾರ

ಮುಡಾ ಹಗರಣ, ಪೋಕ್ಸೊ ಕೇಸ್‌ ತೀರ್ಪಿಗೆ ಕ್ಷಣಗಣನೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲಿಗೆ ಇಂದು ನ್ಯಾಯಾಲಯದ ವಿಚಾರಣೆ ನಿರ್ಣಾಯಕವಾಗಲಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಪೋಕ್ಸೊ ಕೇಸಿನಲ್ಲಿ ಯಡಿಯೂರಪ್ಪ ಕುರಿತಾದ ತೀರ್ಪು ಇಂದು ಪ್ರಕಟವಾಗಲಿದೆ.ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್ ಶುಕ್ರವಾರ ಆದೇಶ ಪ್ರಕಟಿಸಲಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ

ಇಂದು ಹೈಕೋರ್ಟಿನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ ಭವಿಷ್ಯ ನಿರ್ಧಾರ Read More »

error: Content is protected !!
Scroll to Top