ಸುದ್ದಿ

ಕ್ಲೈಮ್ಯಾಕ್ಸ್‌ ತಲುಪಿದ ಪವರ್‌ ಶೇರಿಂಗ್‌ ಗುದ್ದಾಟ : ಸಿಎಂ, ಡಿಸಿಎಂ ಬಣಗಳಿಂದ ತಂತ್ರಗಾರಿಕೆ

ಕಾಂಗ್ರೆಸ್‌ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಬೆಂಗಳೂರು : ರಾಜ್ಯ ಕಾಂಗ್ರೆಸ್‌ನ ಒಳ ಜಗಳ ಕ್ಲೈಮಾಕ್ಸ್‌ ಹಂತ ತಲುಪಿದ್ದು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿ ಒಬ್ಬರೊಗೊಬ್ಬರು ತಂತ್ರ-ಪ್ರತಿತಂತ್ರ ಹೆಣೆಯತೊಗಿದ್ದಾರೆ. ಈ ನಾಯಕತ್ವ ಬದಲಾವಣೆ ಜಗಳ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದ್ದು, ಬಗೆಹರಿಸಲು ದಾರಿ ಕಾಣದೆ ಅಸಹಾಯಕವಾಗಿ ಕುಳಿತಿದೆ. ಇಷ್ಟು ದಿನ ತೆರೆಮರೆಯಲ್ಲಿ ನಡೆದಿದ್ದ ಗದ್ದುಗೆ ಗುದ್ದಾಟ ತೀವ್ರಗೊಂಡಿದೆ. ಆಡಳಿತ ಪಕ್ಷದ ಮೂಲಗಳ ಪ್ರಕಾರ ಸಿಎಂ ಆಪ್ತ ಬಳಗ ಸಿದ್ದರಾಮಯ್ಯನವರ ಮುಂದುವರಿಕೆಗೆ ಶಾಸಕರ […]

ಕ್ಲೈಮ್ಯಾಕ್ಸ್‌ ತಲುಪಿದ ಪವರ್‌ ಶೇರಿಂಗ್‌ ಗುದ್ದಾಟ : ಸಿಎಂ, ಡಿಸಿಎಂ ಬಣಗಳಿಂದ ತಂತ್ರಗಾರಿಕೆ Read More »

ಸುಳ್ಯ : ಕಾರು ಮೋರಿಗೆ ಗುದ್ದಿ ಮೂವರಿಗೆ ಗಾಯ

ಸುಳ್ಯ : ಕಾರು ರಸ್ತೆ ಬದಿಯ ಮೋರಿಗೆ ಗುದ್ದಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶುಕ್ರವಾರ ಕನಕಮಜಲು ಸಮೀಪ ಕನ್ನಡ್ಕ ಎಂಬಲ್ಲಿ ನಡೆದಿದೆ. ಕಾರು ಚಾಲಕ ಮಂಡೆಕೋಲಿನ ಖಲೀಲ್ ಸಹಿತ ಮೂವರು ಗಾಯಗೊಂಡಿದ್ದಾರೆ. ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಗುದ್ದಿದೆ. ಗಾಯಾಳುಗಳನ್ನು ಕೂಡಲೇ ಆಟೊ ರಿಕ್ಷಾದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.

ಸುಳ್ಯ : ಕಾರು ಮೋರಿಗೆ ಗುದ್ದಿ ಮೂವರಿಗೆ ಗಾಯ Read More »

ಶಾಲೆಯಿಂದ 215 ಮಕ್ಕಳು, 12 ಶಿಕ್ಷಕರನ್ನು ಅಪಹರಿಸಿದ ಬಂಡುಕೋರರು

ನೈಜೀರಿಯಾ : ನೈಜೀರಿಯಾದ ನೈಜರ್ ರಾಜ್ಯದ ಕ್ಯಾಥೋಲಿಕ್ ಶಾಲೆಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿದ್ದಾರೆ. ಅಗ್ವಾರಾ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿರುವ ಪಾಪಿರಿ ಸಮುದಾಯದ ಸೈಂಟ್‌ ಮೇರಿ ಶಾಲೆಯಲ್ಲಿ ಈ ದಾಳಿ ನಡೆದಿದೆ. ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ​​ಪ್ರಕಾರ, ಬಂದೂಕುಧಾರಿಗಳು ಶಾಲೆಗೆ ನುಗ್ಗಿ 215 ಮಕ್ಕಳು ಮತ್ತು ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಭೀತಿ ಮತ್ತು ಭಯದ ವಾತಾವರಣವಿತ್ತು ಎಂದು ನೈಜರ್

ಶಾಲೆಯಿಂದ 215 ಮಕ್ಕಳು, 12 ಶಿಕ್ಷಕರನ್ನು ಅಪಹರಿಸಿದ ಬಂಡುಕೋರರು Read More »

ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ನಿರ್ವಹಣೆ ಎನ್‌ಎಚ್‌ಎಐಗೆ ಹಸ್ತಾಂತರಿಸಲು ಸಮ್ಮತಿ

ಪ್ರತಿವರ್ಷ ಗುಂಡಿಬಿದ್ದು ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದ ಹೆದ್ದಾರಿ ಮಂಗಳೂರು : ನವಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿ.ಸಿ.ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅನುಮೋದನೆ ನೀಡಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮಂಗಳೂರಿನ ಅತ್ಯಂತ ನಿರ್ಣಾಯಕ ರಸ್ತೆ ಕಾರಿಡಾರ್‌ಗಳಲ್ಲಿ ಒಂದಾದ ಸುರತ್ಕಲ್-ನಂತೂರು-ಬಿ.ಸಿ.ರೋಡ್ ಹೆದ್ದಾರಿಯ ಸಮರ್ಪಕ ನಿರ್ವಹಣೆ ಮತ್ತು ಸುಧಾರಣೆಗೆ ಕಾಯಕಲ್ಪ ದೊರೆತಿದೆ.

ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ನಿರ್ವಹಣೆ ಎನ್‌ಎಚ್‌ಎಐಗೆ ಹಸ್ತಾಂತರಿಸಲು ಸಮ್ಮತಿ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ: ಲಕ್ಷ ದೀಪೋತ್ಸವ ಸಂಪನ್ನ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ. 19 ರಂದು ರಾತ್ರಿ ಲಕ್ಷ ದೀಪೋತ್ಸವ ನಡೆಯಿತು. ದೇಗುಲದ ಗೋಪುರದಿಂದ ಕಾಶಿಕಟ್ಟೆಯವರೆಗೆ ಹಣತೆಗಳನ್ನು ಬೆಳಗಲಾಯಿತು. ರಥಬೀದಿಯು ದೀಪಗಳ ಬೆಳಕಿನಲ್ಲಿ ದಿವ್ಯವಾಗಿ ಕಂಗೊಳಿಸಿತು. ದೇವಸ್ಥಾನ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಥಬೀದಿ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್ ರಸ್ತೆ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷಾಂತರ ಹಣತೆಗಳನ್ನು ಬೆಳಗಿಸಲಾಯಿತು. ಮಹಾಪೂಜೆಯ ಬಳಿಕ ಹೊರಾಂಗಣ ಉತ್ಸವ ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ: ಲಕ್ಷ ದೀಪೋತ್ಸವ ಸಂಪನ್ನ Read More »

ಮಾದಕ ದ್ರವ್ಯ ಸೇವನೆ: ಮಹಮ್ಮದ್ ಅನೀಸ್ ಪೊಲೀಸರ ಬಲೆಗೆ

ಪುತ್ತೂರು: ಯುವಕನೊಬ್ಬನನ್ನು ಮಾದಕ ದ್ರವ್ಯ ಸೇವನೆ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಮ್ಮಿಂಜೆ ಮರೀಲ್ ನಿವಾಸಿ ಮಹಮ್ಮದ್ ಅನೀಸ್ (29) ಎಂಬಾತನೇ ಆರೋಪಿ. ಪುತ್ತೂರು ನಗರ ಪೊಲೀಸ್ ಸಿಬ್ಬಂದಿ ರೌಂಡ್ಸ್‌ನಲ್ಲಿದ್ದ ಸಂದರ್ಭದಲ್ಲಿ ದರ್ಬೆ ಸಮೀಪ ಅನುಚಿತವಾಗಿ ವರ್ತಿಸುತ್ತಿದ್ದ ಅನೀಸ್ ಪೊಲೀಸರನ್ನು ಕಂಡೊಡನೆ ಓಡಿ ಹೋಗಲು ಯತ್ನಿಸಿದ್ದಾನೆ. ಆತನನ್ನು ಹಿಡಿದು ಪ್ರಶ್ನೆ ಮಾಡಿದಾಗ ಆತ ಅಮಲಿನಲ್ಲಿರುವುದು ಕಂಡುಬಂತು. ಅದರಂತೆ ಆತನನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಕರೆದೊಯ್ದು ಪರೀಕ್ಷೆ ನಡೆಸಿದಾಗ ಆತ ಅಮಲು ಪದಾರ್ಥ ಸೇವನೆ ಮಾಡಿರುವುದು ದೃಢಪಟ್ಟಿದೆ.

ಮಾದಕ ದ್ರವ್ಯ ಸೇವನೆ: ಮಹಮ್ಮದ್ ಅನೀಸ್ ಪೊಲೀಸರ ಬಲೆಗೆ Read More »

ಧರ್ಮಸ್ಥಳ: ಲಕ್ಷ ದೀಪೋತ್ಸವ ಸಂಪನ್ನ

ಬೆಳ್ತಂಗಡಿ: ಐದು ದಿನಗಳ ಕಾಲ ನಡೆದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಲಕ್ಷ ದೀಪೋತ್ಸವವು ಬುಧವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವದ ಜೊತೆಗೆ ಸಂಪನ್ನಗೊಂಡಿತು. ಧರ್ಮಸ್ಥಳದ ಲಕ್ಷಾಂತರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು. ಹಾಗೆಯೇ ಗುರುವಾರ ಸಂಜೆ ವೇಳೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣ ಪೂಜೆ ನೆರವೇರಿತು.

ಧರ್ಮಸ್ಥಳ: ಲಕ್ಷ ದೀಪೋತ್ಸವ ಸಂಪನ್ನ Read More »

ಉಡುಪಿಯಲ್ಲೂ ಪತ್ತೆಯಾದರು ಪಾಕ್‌ ಬೇಹುಗಾರರು

ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಸೆರೆ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ತಾಂತ್ರಿಕ ಮಾಹಿತಿ ಪಾಕ್‌ಗೆ ರವಾನೆ ಉಡುಪಿ : ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಬಂಧಿಸಲಾಗಿದೆ. ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂದು ಗುರುತಿಸಲಾಗಿದೆ. ಇವರು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಬ್ಬರೂ ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್

ಉಡುಪಿಯಲ್ಲೂ ಪತ್ತೆಯಾದರು ಪಾಕ್‌ ಬೇಹುಗಾರರು Read More »

ಕುಸಿದು ಬಿದ್ದು ವ್ಯಕ್ತಿ ಸಾವು: ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಪುತ್ರಿಯಿಂದ ದೂರು

ಪುತ್ತೂರು: ಇಡ್ಕಿದು ನಿವಾಸಿ ಹರೀಶ್ ಎಂಬವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದು, ಈ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮೃತರ ಪುತ್ರಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ತಮ್ಮ ಮನೆಯ ಶೌಚಾಲಯಕ್ಕೆ ಹೋಗಿ ಹೊರಬಂದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ಕುಸಿದು ಬಿದ್ದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅದಾಗಲೇ ಅವರು ಮೃಪಟ್ಟಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಸಂಜೆಯ ವೇಳೆ ಈ ಸಾವಿನ ಬಗ್ಗೆ ಸಂದೇಹ

ಕುಸಿದು ಬಿದ್ದು ವ್ಯಕ್ತಿ ಸಾವು: ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಪುತ್ರಿಯಿಂದ ದೂರು Read More »

ಪತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪತ್ನಿ ಪೊಲೀಸ್‌ ಕಸ್ಟಡಿಗೆ

ಬಿ.ಸಿ.ರೋಡ್‌ ಬಟ್ಟೆ ಮಳಿಗೆಯಲ್ಲಿ ಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪತ್ನಿ ಬಂಟ್ವಾಳ : ಬಿ.ಸಿ.ರೋಡ್‌ನಲ್ಲಿ ಗ್ರಾಹಕಳಂತೆ ಸೋಗುಹಾಕಿ ಬುರ್ಖಾ ಧರಿಸಿಕೊಂಡು ಬಂದು ಕ್ಯಾಶ್‌ ಕೌಂಟರ್‌ನಲ್ಲಿ ಕುಳಿತಿದ್ದ ಅಂಗಡಿಯ ಮಾಲೀಕ ತನ್ನ ಪತಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪತ್ನಿ ಜ್ಯೋತಿ ಕೆ.ಟಿ.ಯನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೊಪ್ಪಿಸಿದೆ. ಆಕೆ ಪತಿ ಕೃಷ್ಣಕುಮಾರ್ ಸೋಮಯಾಜಿ ಅವರ ತಲೆ, ಎದೆ ಮತ್ತು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಳು. ಸೋಮಯಾಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿ.ಸಿ.ರೋಡ್‌ನ ಸೋಮಯಾಜಿ ಟೆಕ್ಸ್‌ಟೈಲ್ಸ್‌ನ ಮಾಲೀಕರಾದ ಕೃಷ್ಣಕುಮಾರ್ ನವೆಂಬರ್ 19ರಂದು

ಪತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪತ್ನಿ ಪೊಲೀಸ್‌ ಕಸ್ಟಡಿಗೆ Read More »

error: Content is protected !!
Scroll to Top