ಸುದ್ದಿ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಬೋಳ್ನಡ್ಕ, ಕೊಂಬಾರುವಿನಲ್ಲಿ ಪ್ರತಿಷ್ಠಾ ವಾರ್ಷಿಕ ಜಾತ್ರೋತ್ಸವ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕೊಂಬಾರು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಬೋಳ್ನಡ್ಕ, ಕೊಂಬಾರುವಿನಲ್ಲಿ ಫೆ.13 ರಿಂದ ಫೆ. 21ರವರೆಗೆ ಪ್ರತಿಷ್ಠಾ ವಾರ್ಷಿಕ ಜಾತ್ರೋತ್ಸವ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಫೆ.13ರಂದು ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ವಾರ್ಷಿಕ ಜಾತ್ರೋತ್ಸವ ನಡೆಯಿತು. ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ಸುಬ್ರಹ್ಮಣ್ಯ ಮಠ ಹಾಗೂ ಪರಮಪೂಜ್ಯ ರಾಜರ್ಷಿ ಡಾ| ಶ್ರೀ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಹಾಗೂ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ […]

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಬೋಳ್ನಡ್ಕ, ಕೊಂಬಾರುವಿನಲ್ಲಿ ಪ್ರತಿಷ್ಠಾ ವಾರ್ಷಿಕ ಜಾತ್ರೋತ್ಸವ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ Read More »

ಮೊಬೈಲ್ ಫೋನ್‍ ಗಾಗಿ ಅಣ್ಣ-ತಂಗಿ ಜಗಳ |  ಬಾವಿಗೆ ಬಿದ್ದು ಅಣ್ಣ-ತಂಗಿಯರ ದುರ್ಮರಣ

ತಮಿಳುನಾಡು: ಮೊಬೈಲ್ ಫೋನ್ ಗಾಗಿ ನಡೆದ ಜಗಳದಲ್ಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಪುದುಕ್ಕೊಟ್ಟೆಯಲ್ಲಿ ನಡೆದಿದೆ. 18 ವರ್ಷದ ಅಣ್ಣ ಹಾಗೂ 11 ವರ್ಷದ ತಂಗಿ ಮಕ್ಕಳು ಸಾವಿಗೀಡಾದ ಸಹೋದರ-ಸಹೋದರಿಯರು ಎಂದು ತಿಳಿದು ಬಂದಿದೆ. ಮನೆಯಲ್ಲಿ ಅಣ್ಣ ಮತ್ತು ತಂಗಿಯ ನಡುವೆ ಸಣ್ಣ ಜಗಳವಾಗಿದೆ. ಈ ವೇಳೆ ಕೋಪಗೊಂಡ ಅಣ್ಣ ತನ್ನ ತಂಗಿಯ ಫೋನ್ ಮುರಿದಿದ್ದಾನೆ. ಬೇಸರಗೊಂಡ ತಂಗಿ ಬಾವಿಗೆ ಹಾರಿದ್ದಾಳೆ. ನಂತರ ತಂಗಿ ಬಾವಿಗೆ ಹಾರಿದ್ದನ್ನು ನೋಡಿ ಕಾಪಾಡಲೆಂದು ಅಣ್ಣನೂ ಬಾವಿಗೆ

ಮೊಬೈಲ್ ಫೋನ್‍ ಗಾಗಿ ಅಣ್ಣ-ತಂಗಿ ಜಗಳ |  ಬಾವಿಗೆ ಬಿದ್ದು ಅಣ್ಣ-ತಂಗಿಯರ ದುರ್ಮರಣ Read More »

119 ಕೆಜಿ ಗಾಂಜಾ, ಕಾರು, ಟೆಂಪೋ ವಶ: ನಾಲ್ವರ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು 119 ಕೆಜಿ ಗಾಂಜಾ ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮೊಹಿಯುದ್ದೀನ್ ಶಬ್ಬೀರ್ (38), ಮಹಾರಾಷ್ಟ್ರದ ಥಾಣೆಯ ಮಹೇಶ್ ದ್ವಾರಕಾನಾಥ್ ಪಾಂಡೆ (30), ಕೇರಳದ ಅಜಯ್ ಕೃಷ್ಣನ್ (30) ಮತ್ತು ಹರಿಯಾಣದ ಜೀವನ್ ಸಿಂಗ್ (35) ಸೆರೆಯಾಗಿರುವ ಆರೋಪಿಗಳು. ಆರೋಪಿಗಳಿಂದ ಆಲ್ಟೋ ಕಾರು ಹಾಗೂ ಟೆಂಪೋ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು

119 ಕೆಜಿ ಗಾಂಜಾ, ಕಾರು, ಟೆಂಪೋ ವಶ: ನಾಲ್ವರ ಬಂಧನ Read More »

ವಿಟ್ಲ ಮೇಗಿನ ಪೇಟೆ ಶಾಲೆಯಲ್ಲಿ ಅಕ್ಷಯ ಕಾಲೇಜಿನ ರಾ.ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವು ದ.ಕ ಜಿ.ಪಂ.ಹಿ.ಪ್ರಾ. ಶಾಲೆ ಮೇಗಿನಪೇಟೆ ವಿಟ್ಲ ಇಲ್ಲಿ ಫೆ.೧೭, ೨೦೨೫ರಂದು ಆರಂಭವಾಯಿತು. ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರು ಉದ್ಘಾಟಿಸಿ , ಶಿಬಿರದಲ್ಲಿನ ಪಾಲ್ಗೊಳ್ಳುವಿಕೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದಲ್ಲದೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಶ್ರೀ ಜಯಂತ ನಡುಬೈಲು ಅಧ್ಯಕ್ಷರು ಅಕ್ಷಯ ಕಾಲೇಜು ಪುತ್ತೂರು ಅವರು

ವಿಟ್ಲ ಮೇಗಿನ ಪೇಟೆ ಶಾಲೆಯಲ್ಲಿ ಅಕ್ಷಯ ಕಾಲೇಜಿನ ರಾ.ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ Read More »

ಆನ್‌ಲೈನ್‌ ಬೆಟ್ಟಿಂಗ್‌ ಚಟ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮೈಸೂರು : ಹಣಕಾಸಿನ ವಿಚಾರದಲ್ಲಿ ಉಂಟಾದ ಕೌಟುಂಬಿಕ ಸಮಸ್ಯೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಮ್ಮನಹಳ್ಳಿಯಲ್ಲಿ ಸೋಮವಾರ ರಾತ್ರಿ ಜೆಸ್ಸಿ ಆ್ಯಂಟೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಹೋದರ ಜೋಬಿ ಆ್ಯಂಟೋನಿ (45) ಹಾಗೂ ಜೋಬಿ ಅವರ ಪತ್ನಿ ಶರ್ಮಿಳಾ (40) ಶವ ವಿಜಯನಗರದ ಸಾರ್ವಜನಿಕ ಕ್ರೀಡಾಂಗಣದ ನೀರಿನ ಟ್ಯಾಂಕ್‌ನ ಏಣಿಯಲ್ಲಿ ಮಂಗಳವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೆಸ್ಸಿ ಆ್ಯಂಟೋನಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಾಡಿದ ವಿಡಿಯೋದಲ್ಲಿ ‘ಜೋಬಿಯಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ತಂಗಿ

ಆನ್‌ಲೈನ್‌ ಬೆಟ್ಟಿಂಗ್‌ ಚಟ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ Read More »

ಸ್ಕ್ಯಾಮ್‌ ಗ್ರೇಸ್‌ ಸರಕಾರದ ನೂರಾರು ಲೂಟಿ ಮಾರ್ಗಗಳು : ಜೆಡಿಎಸ್‌ ಲೇವಡಿ

ಅಬಕಾರಿ ಆದಾಯ ಹೆಚ್ಚಿಸಲು ದಿಲ್ಲಿಯನ್ನೂ ಮೀರಿಸಿದ ಹಗರಣ ಎಂದು ಟೀಕೆ ಬೆಂಗಳೂರು: ಅಬಕಾರಿ ಆದಾಯ ಹೆಚ್ಚಿಸಲು ಅಡ್ಡದಾರಿ ಹಿಡಿದಿರುವ ಸರ್ಕಾರದ ಕ್ರಮವನ್ನು ಜೆಡಿಎಸ್ ತೀಕ್ಷ್ಣವಾಗಿ ಟೀಕಿಸಿದ್ದು, ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು ಎಂದು ಲೇವಡಿ ಮಾಡಿದೆ. ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು. ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಬರಗೆಟ್ಟ ಕಾಂಗ್ರೆಸ್ ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕುತಂತ್ರ ನಡೆಸುತ್ತಿದೆ. ಅಸ್ತಿತ್ವದಲ್ಲೇ ಇಲ್ಲದ ಪರವಾನಿಗೆಗಳ ಮಾರಾಟಕ್ಕೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕಾನೂನು ಬಾಹಿರವಾಗಿ

ಸ್ಕ್ಯಾಮ್‌ ಗ್ರೇಸ್‌ ಸರಕಾರದ ನೂರಾರು ಲೂಟಿ ಮಾರ್ಗಗಳು : ಜೆಡಿಎಸ್‌ ಲೇವಡಿ Read More »

ಕಕ್ಕಿಂಜೆ ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ

ಬೆಳ್ತಂಗಡಿ :  ಕಕ್ಕಿಂಜೆ ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹಜ್ಜೆನು ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು  ಸುಮಾರು 10ಮಕ್ಕಳು  ಹೆಜ್ಜೇನುದಾಳಿಯಿಂದ  ಅಸ್ವಸ್ಥರಾಗಿದ್ದು  ,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ,  ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಜ್ಜೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹಜ್ಜೇನು ಕಚ್ಷಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಕ್ಕಿಂಜೆ ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ Read More »

ಫೆ.19 ರಿಂದ ನಗರಸಭೆ ವ್ಯಾಪ್ತಿಯ ಅನಧೀಕೃತ ಫ್ಲೆಕ್ಸ್, ಬಂಟಿಗ್ಸ್, ಬ್ಯಾನರ್ ಗಳ ತೆರವು ಕಾರ್ಯ l ನಗರ ಸಭೆಯಿಂದ ಪ್ರಕಟಣೆ

ಪುತ್ತೂರು : ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಅಳವಡಿಸುವ ಎಲ್ಲ ಜಾಹಿರಾತುದಾರರ ಗಮನಕ್ಕೆ, ಯಾವುದೇ ಜಾಹಿರಾತು ಪ್ಲೆಕ್ಸ್, ಬ್ಯಾನರ್, ಹೋರ್ಡಿಂಗ್, ಬಂಟಿಂಕ್ಸ್, ಪೋಸ್ಟರ್ ಗಳನ್ನು ನಗರಸಭೆ ಅನುಮತಿ ಇಲ್ಲದೇ, ಶುಲ್ಕ ಪಾವತಿಸದೇ ಪ್ರದರ್ಶನ ಮಾಡುವುದು ಕಾನೂನು ಬಾಹಿರವಾಗಿದೆ.  ಅದರಲ್ಲೂ ಅರ್ಜಿ ನೀಡಿ ಶುಲ್ಕ ಪಾವತಿಸದೇ ವಂಚಿಸುವುದು ಅಪರಾಧವಾಗಿದೆ.  ಅರ್ಜಿ ನೀಡಿ, ಪರಿಶೀಲನೆ ನಡೆಸದೆ ಫಲಕ ಅಳವಡಿಸುತ್ತಿದ್ದು, ಕೆಲವು light ಕಂಬ, ಆಕ್ಸಿಡೆಂಟ್ ಜೋನ್, ಪಾದಚಾರಿಗಳು ನಡೆದಾಡುವ ರಸ್ತೆಯಲ್ಲಿ, ಇನ್ನಿತರ ನಿಷೇಧಿತ ಅಳವಡಿಸುವುದರಿಂದ ಸಾರ್ವಜನಿಕರಿಗೆ ವಾಹನಕ್ಕೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ

ಫೆ.19 ರಿಂದ ನಗರಸಭೆ ವ್ಯಾಪ್ತಿಯ ಅನಧೀಕೃತ ಫ್ಲೆಕ್ಸ್, ಬಂಟಿಗ್ಸ್, ಬ್ಯಾನರ್ ಗಳ ತೆರವು ಕಾರ್ಯ l ನಗರ ಸಭೆಯಿಂದ ಪ್ರಕಟಣೆ Read More »

ಪುತ್ತೂರಿಗೆ ಮತ್ತೊಂದು ರೈಲು ಯೋಜನೆ| ಹಾರಾಡಿ ರೈಲ್ವೆ ಮೇಲ್ಸೇತುವೆ ಮರು ನಿರ್ಮಾಣಕ್ಕೆ 8 ಕೋಟಿ ರೂ. ಪ್ರಸ್ತಾವಣೆ | ಪುತ್ತೂರು- ಉಪ್ಪಿನಂಗಡಿ ಮಧ್ಯೆ ಬಾಕಿಯಾಗಿರುವ ಚತುಷ್ಪಥ ಕಾಮಗಾರಿ ಮತ್ತೆ ಆರಂಭ

ಪುತ್ತೂರು  :  ಪುತ್ತೂರು- ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು- ಉಪ್ಪಿನಂಗಡಿ ಮಧ್ಯೆ ಬಾಕಿಯಾಗಿರುವ ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡಿದೆ. ಪುತ್ತೂರು- ಉಪ್ಪಿನಂಗಡಿ ಕಾಮಗಾರಿ ಮಧ್ಯೆಯೇ ಹೆದ್ದಾರಿಯಲ್ಲಿ ಬರುವ ಹಾರಾಡಿ ರೈಲ್ವೆ ಮೇಲ್ಸೇತುವೆಯನ್ನು ಹೊಸದಾಗಿ ಮರು ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅಂತಿಮವಾಗಲಿದೆ.  ಹಾರಾಡಿ ರೈಲ್ವೆ ಮೇಲ್ಸೇತುವೆ ಮರು ನಿರ್ಮಾಣಕ್ಕೆ ಸುಮಾರು 8 ಕೋಟಿ ರೂ. ಮೊತ್ತವನ್ನು ಅಂದಾಜಿಸಲಾಗಿದೆ.  ಬಳಿಕ ಪುತ್ತೂರು ನಗರದ ಬೊಳುವಾರಿನ ಆಂಜನೇಯ ಮಂತ್ರಾಲಯದ ಬಳಿಯಿಂದ ಚತುಷ್ಪಥ ಕಾಮಗಾರಿ ಆರಂಭವಾಗಲಿದೆ.  ರೈಲ್ವೆ ಯೋಜನೆ ಬೊಳುವಾರು ಬಳಿಯ

ಪುತ್ತೂರಿಗೆ ಮತ್ತೊಂದು ರೈಲು ಯೋಜನೆ| ಹಾರಾಡಿ ರೈಲ್ವೆ ಮೇಲ್ಸೇತುವೆ ಮರು ನಿರ್ಮಾಣಕ್ಕೆ 8 ಕೋಟಿ ರೂ. ಪ್ರಸ್ತಾವಣೆ | ಪುತ್ತೂರು- ಉಪ್ಪಿನಂಗಡಿ ಮಧ್ಯೆ ಬಾಕಿಯಾಗಿರುವ ಚತುಷ್ಪಥ ಕಾಮಗಾರಿ ಮತ್ತೆ ಆರಂಭ Read More »

ಕುಡಿಯುವ ನೀರಿನಲ್ಲಿ ಕಾರು ತೊಳೆದರೆ 5 ಸಾವಿರ ರೂ. ದಂಡ!

ಜಲಕ್ಷಾಮ ಎದುರಿಸಲು ನೀರಿನ ಮಿತ ಬಳಕಗೆ ಸೂಚನೆ ಬೆಂಗಳೂರು: ಬೆಂಗಳೂರಿನಲ್ಲಿ ಕುಡಿಯುವ ನೀರಿನಲ್ಲಿ ಕಾರು ತೊಳೆದರೆ ಬರೋಬ್ಬರಿ 5 ಸಾವಿರ ರೂ. ದಂಡ ಬೀಳಲಿದೆ. ಈ ಬಾರಿ ಬೇಸಿಗೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಸೇರಿದಂತೆ ಹಲವು ಮಹತ್ವದ ಸೂಚನೆಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶನ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು

ಕುಡಿಯುವ ನೀರಿನಲ್ಲಿ ಕಾರು ತೊಳೆದರೆ 5 ಸಾವಿರ ರೂ. ದಂಡ! Read More »

error: Content is protected !!
Scroll to Top