ಸುದ್ದಿ

ಬಾಲಕಿ ಮೇಲೆ ಅತ್ಯಾಚಾರ: ಒಂದೇ ದಿನದಲ್ಲಿ ಆರೋಪಿ ಬಂಧನ

ತುಮಕೂರು: ವಿಳಾಸ ಕೇಳಿಕೊಂಡು ಬಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿರುವ‌ ಘಟನೆ ಗುಬ್ಬಿ ಗ್ರಾಮದಲ್ಲಿ ನಡೆದಿದೆ. ಶನಿವಾರದಂದು ಶಾಲೆಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಬಾಲಕಿಯ ‌ಬಳಿ ಆರೋಪಿ ವಿಳಾಸ ಕೇಳಿದ್ದಾನೆ. ಆಕೆ ಆತ ಹೇಳಿದ ವಿಳಾಸದ ರಸ್ತೆ ತೋರಿಸಲು ಹೋಗಿದ್ದಾಳೆ. ಈ ಸಮಯ ನಿರ್ಜನ ಪ್ರದೇಶವೊಂದರಲ್ಲಿ ಆಕೆಯ ಮೇಲೆ ಕಾಮುಕ ಅತ್ಯಾಚಾರ ನಡೆಸಿರುವುದಾಗಿದೆ. ಬಾಲಕಿ ಮನೆಗೆ ಓಡಿ ಹೋಗಿ ಈ ಸಂಗತಿಯನ್ನು ತಿಳಿಸಿದ್ದಾಳೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದ್ದು, […]

ಬಾಲಕಿ ಮೇಲೆ ಅತ್ಯಾಚಾರ: ಒಂದೇ ದಿನದಲ್ಲಿ ಆರೋಪಿ ಬಂಧನ Read More »

ಪಾಲಿಶ್ ಹೆಸರಲ್ಲಿ ಚಿನ್ನವನ್ನು ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸ್ ವಶಕ್ಕೆ

ವೇಣೂರು: ಬಂಗಾರದ ಒಡವೆಗಳಿಗೆ ಪಾಲಿಶ್ ಮಾಡುವ ಮತ್ತು ತೊಳೆದು ಕೊಡುವುದಾಗಿ ನಂಬಿಸಿ ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಫೆ. 10 ರಂದು ಕಾಶಿಪಟ್ಣದ ಪಾಣಿಲಾಜೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನ ತೊಳೆದು, ಪಾಲಿಶ್ ಮಾಡುವುದಾಗಿ ಹೇಳಿ ರಾಸಾಯನಿಕದ ಮೂಲಕ ಚಿನ್ನವನ್ನು ಕರಗಿಸಿ ಮನೆಮಂದಿಗೆ ವಂಚಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಬಿಹಾರ ಮೂಲದ ಚಂದನ್ (30) ಎಂಬಾತ ಸೆರೆಯಾಗಿದ್ದಾನೆ. ಆತನನ್ನು

ಪಾಲಿಶ್ ಹೆಸರಲ್ಲಿ ಚಿನ್ನವನ್ನು ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸ್ ವಶಕ್ಕೆ Read More »

ಪ್ರೇಯಸಿಯನ್ನು ಕಾಣಲು ಬುರ್ಖಾ ‌ತೊಟ್ಟು ಬಂದ ಅಪ್ರಾಪ್ತ: ಪೊಲೀಸರಿಗೊಪ್ಪಿಸಿದ ‌ಸ್ಥಳೀಯರು

ಸಾಗರ: ಬುರ್ಖಾ ‌ಧರಿಸಿ‌ ಪ್ರೇಯಸಿಯನ್ನು ಕಾಣಲು ಬಂದ ಅಪ್ರಾಪ್ತ ಯುವಕನನ್ನು ‌ಕಂಡು ಅನುಮಾನಗೊಂಡ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜನ್ನತ್ ‌ನಗರದಲ್ಲಿ ನಡೆದಿದೆ. ತ್ಯಾಗರ್ತಿಯ ಯುವಕ ತನ್ನ ಪ್ರೇಮಿಯನ್ನು ‌ಕಾಣಲು ಬುರ್ಖಾ ಧರಿಸಿ ಬಂದಿದ್ದ. ಆದರೆ ಈತನ ನಡೆ ಕಂಡ ಸ್ಥಳೀಯರು ಈತ ಮಕ್ಕಳ ಕಳ್ಳ ಆಗಿರಬೇಕು ಎಂದು ತಿಳಿದು, ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್‌ ವಿಚಾರಣೆ ವೇಳೆಗೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಒಟ್ಟಿನಲ್ಲಿ ರಹಸ್ಯವಾಗಿ ಪ್ರೇಯಸಿಯ ಭೇಟಿಗೆ ಬಂದು, ಪೊಲೀಸರ ವಶಕ್ಕೆ

ಪ್ರೇಯಸಿಯನ್ನು ಕಾಣಲು ಬುರ್ಖಾ ‌ತೊಟ್ಟು ಬಂದ ಅಪ್ರಾಪ್ತ: ಪೊಲೀಸರಿಗೊಪ್ಪಿಸಿದ ‌ಸ್ಥಳೀಯರು Read More »

ಪಿಯುಸಿ ವಿದ್ಯಾರ್ಥಿನಿಯನ್ನು ಬಲಿ ಪಡೆದ ಕಾಡಾನೆ

ಮಡಿಕೇರಿ: ಕಾಡಾನೆಯ ದಾಳಿಗೆ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಬೆಟ್ಟತ್ತೂರಿನಲ್ಲಿ ‌ನಡೆದಿದೆ. ಪೂಜಾ(17) ಎಂಬಾಕೆಯೇ ಮೃತ ದುರ್ದೈವಿ. ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಎಂದು ತಿಳಿದು ಬಂದಿದೆ. ಫೆ. 28 ರಂದು ಕಾಲೇಜು ಮುಗಿಸಿ ಬೆಟ್ಟತ್ತೂರಿನ ತನ್ನ ಮನೆಯ ಸಮೀಪ ಬಸ್ಸಿನಿಂದ ಇಳಿದಿದ್ದಳು. ಆ ಬಳಿಕ ಆಕೆಯನ್ನು ಕಾಡಾನೆ ದಾಳಿ ನಡೆಸಿ ಕೊಂದಿದೆ ಎಂದು ಹೇಳಲಾಗಿದೆ. ಪ್ರಕರಣ ನಡೆದ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಇಂತಹ

ಪಿಯುಸಿ ವಿದ್ಯಾರ್ಥಿನಿಯನ್ನು ಬಲಿ ಪಡೆದ ಕಾಡಾನೆ Read More »

ನಾಳೆ ಚಂದ್ರ ಗ್ರಹಣ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

ಧರ್ಮಸ್ಥಳ: ಮಂಗಳವಾರ ಚಂದ್ರ ಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಸೇರಿದಂತೆ ಕರಾವಳಿಯ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ಪೂಜೆಯ ಸಮಯದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1.30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1.30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ

ನಾಳೆ ಚಂದ್ರ ಗ್ರಹಣ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ Read More »

ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ದಾಳಿಗೊಳಗಾಗಿದ್ದ ವಾಯುನೆಲೆ ಇಸ್ಲಾಮಾಬಾದ್ : ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತ ದಾಳಿ ಮಾಡಿದ್ದ ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಇದೀಗ ಅಫಘಾನಿಸ್ತಾನ ಕೂಡ ದಾಳಿ ಮಾಡಿ ಭಾರಿ ಹಾನಿ ಎಸಗಿದೆ. ಭಾರತ ನಡೆಸಿದ ದಾಳಿಯಿಂದ ಕುಸಿದು ಬಿದ್ದು, ಬಳಿಕ ಎದ್ದು ನಿಂತಿದ್ದ ಪಾಕಿಸ್ತಾನದ ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಅಫ್ಘಾನಿಸ್ತಾನದಿಂದ ವಾಯುದಾಳಿ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಭಾರತವು ಇದೇ ವಾಯುನೆಲೆ ಮೇಲೆ ದಾಳಿ

ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ Read More »

ಶ್ರೀ ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥ ಪುತ್ತೂರಿಗೆ – ಪುತ್ತೂರಿನ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ನೇತೃತ್ವ

ಪುತ್ತೂರು: LIVE ALL SERVE ALL – HELP EVERY BIT NEVER ಎಂಬ ಧ್ಯೇಯದೊಂದಿಗೆ ಭಕ್ತಿಯ ಸಿಂಚನದ ಮೂಲಕ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡು ಬರುತ್ತಿರುವ ಶ್ರೀ ಸಾಯಿ ಸೇವಾ ಬಳಗದ ವತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ ಜನ್ಮಶತಮಾನೋತ್ಸವದ ಆಚರಣೆಯ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥ ಪುತ್ತೂರಿಗೆ ಆಗಮಿಸಲಿದೆ. ಪುತ್ತೂರಿನ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 8ರಂದು ಅಪರಾಹ್ನ 2.30ಕ್ಕೆ ಕೌಡಿಚ್ಚಾರಿನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ

ಶ್ರೀ ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥ ಪುತ್ತೂರಿಗೆ – ಪುತ್ತೂರಿನ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ನೇತೃತ್ವ Read More »

80 ಲ.ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ : ಇಬ್ಬರು ಮಹಿಳೆಯರ ಸಹಿತ ಮೂವರ ಸೆರೆ

ಮಂಗಳೂರು ವಿಮಾನ ನಿಲ್ದಾಣ ಮೂಲಕ ವಿದೇಶಿ ಕರೆನ್ಸಿ ಸಾಗಿಸಲು ಯತ್ನ ಮಂಗಳೂರು : ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗುತ್ತಿದ್ದ ವೇಳೆ ವಶಪಡಿಸಿಕೊಂಡು ಕೇರಳ ಮೂಲದ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ರೆವೆನ್ಯೂ ಇಂಟಲಿಜೆನ್ಸ್ ನಿರ್ದೇಶನಾಲಯ (ಡಿಆರ್‌ಐ) ಮಂಗಳೂರು ಘಟಕ ತಿಳಿಸಿದೆ. ಫೆ.27ರಂದು ವಿಮಾನ ನಿಲ್ದಾಣದ ನಿರ್ಗಮನ ಹಾಲ್‌ನಲ್ಲಿ ಒಬ್ಬ ಪುರುಷ ಮತ್ತು ಇಬ್ಬರು ಮಹಿಳಾ ಪ್ರಯಾಣಿಕರು ಅಬುಧಾಬಿಗೆ ಪ್ರಯಾಣಿಸಲು

80 ಲ.ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ : ಇಬ್ಬರು ಮಹಿಳೆಯರ ಸಹಿತ ಮೂವರ ಸೆರೆ Read More »

ಒಂದು ಹೊಡೆತಕ್ಕೆ 40 ಇರಾನ್‌ ನಾಯಕರು ಸಾವು

ಯುದ್ಧ ನಿರೀಕ್ಷೆಗಿಂತಲೂ ವೇಗವಾಗಿ ಯಶಸ್ಸು ಪಡೆಯುತ್ತಿದೆ ಎಂದು ಬಣ್ಣಿಸಿದ ಟ್ರಂಪ್‌ ವಾಷಿಂಗ್ಟನ್‌: ಅಮೆರಿಕದ ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇರಾನ್‌ ಮೇಲೆ ನಡೆಯುತ್ತಿರುವ ಅಮೆರಿಕ – ಇಸ್ರೇಲ್‌ ಜಂಟಿ ದಾಳಿ ಕುರಿತು ಮಾತನಾಡಿದ ಅವರು, ಈ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಮತ್ತು ನಿರೀಕ್ಷೆಗಿಂತ ವೇಗವಾಗಿ ಮುಂದುವರಿದಿದೆ ಎಂದು ಬಣ್ಣಿಸಿದ್ದಾರೆ. ನಿಜಕ್ಕೂ ನಾವು ಪಡೆಯುತ್ತಿರುವ ಯಶಸ್ಸು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದೇ ಹೊಡೆತದಲ್ಲಿ 48 ಇರಾನ್‌ನ ನಾಯಕರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ

ಒಂದು ಹೊಡೆತಕ್ಕೆ 40 ಇರಾನ್‌ ನಾಯಕರು ಸಾವು Read More »

ನೆತನ್ಯಾಹುಗೆ ಮೋದಿ ಕರೆ : ಯುದ್ಧ ನಿಲ್ಲಿಸಲು ಮನವಿ

ಯುದ್ಧದಿಂದಾಗಿ ಜಾಗತಿಕವಾಗಿ ಆತಂಕ ಸೃಷ್ಟಿ ಎಂದು ಮನವರಿಕೆ ಮಾಡಿದ ಮೋದಿ ನವದೆಹಲಿ : ಇರಾನ್‌-ಇಸ್ರೇಲ್‌, ಅಮೆರಿಕ ಯುದ್ಧದಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಕುರಿತು ಚರ್ಚಿಸಿದರು ಯುದ್ಧ ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಭಾರತ ಪುನರುಚ್ಚರಿಸಿರುವುದಾಗಿ ಮೋದಿ ತಿಳಿಸಿದ್ದಾರೆ. ಇಸ್ರೇಲ್‌-ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್‌ ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆ ಪ್ರಾದೇಶಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದಾಗಿ ಪ್ರಧಾನಿ

ನೆತನ್ಯಾಹುಗೆ ಮೋದಿ ಕರೆ : ಯುದ್ಧ ನಿಲ್ಲಿಸಲು ಮನವಿ Read More »

error: Content is protected !!
Scroll to Top