ಸುದ್ದಿ

ರಕ್ತ ವರ್ಣದಲ್ಲಿ ಕಾಣಿಸಿದ ಚಂದಿರ

ಪೂರ್ಣ ಖಗ್ರಾಸ ಚಂದ್ರ ಗ್ರಹಣವನ್ನು ಕಣ್ತಂಬಿಕೊಂಡ ಜನ ಬೆಂಗಳೂರು : ಭಾನುವಾರ ರಾತ್ರಿ ನಭೋಮಂಡಲದಲ್ಲಿ ನಡೆದ ರಕ್ತ ಚಂದಿರನ ಚಮತ್ಕಾರವನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಕೊಂಡು ಖುಷಿಪಟ್ಟರು. ಚಂದ್ರ ಭಾನುವಾರ ಅಕ್ಷರಶಃ ಬೆಂಕಿಚೆಂಡಿನಂತೆ ಗೋಚರಿಸಿತು. ಅತ್ಯಂತ ಅಪರೂಪದ, ಸುದೀರ್ಘ 3 ಗಂಟೆಗೂ ಹೆಚ್ಚು ಕಾಲ ರಾಹುಗ್ರಸ್ಥ ಚಂದ್ರ ಗ್ರಹಣ ಗೋಚರಿಸಿತು. ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಇಡೀ ವಿಶ್ವ ಸಾಕ್ಷಿಯಾಯಿತು. ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸಾಲಿನಲ್ಲಿ ಬಂದಿದ್ದ ಈ ನೆರಳು ಬೆಳಕಿನಾಟ ಜನರನ್ನು ನಿಬ್ಬೆರಗುಗೊಳಿಸಿತು. […]

ರಕ್ತ ವರ್ಣದಲ್ಲಿ ಕಾಣಿಸಿದ ಚಂದಿರ Read More »

ಚಕ್ರವರ್ತಿ ಸೂಲಿಬೆಲೆ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನ

ಬೆಂಗಳೂರು : ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರ ಸಾವಿನ ವಿಷಯವನ್ನು ಚಕ್ರವರ್ತಿ ಸೂಲಿಬೆಲೆಯವರು ಸೋಷಿಯಲ್‌ ಮೀಡಿಯಾ ಮೈಲಕ ತಿಳಿಸಿದ್ದಾರೆ. ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್‌ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಆತ್ಮೀಯರಾದ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ಅವರು

ಚಕ್ರವರ್ತಿ ಸೂಲಿಬೆಲೆ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನ Read More »

ಸರಣಿ ಅಪಘಾತ : ಸಾವಿನ ಸಂಖ್ಯೆ 4ಕ್ಕೇರಿಕೆ

ಬೈಕ್‌ನಲ್ಲಿದ್ದ ಎಲ್ಲ ನಾಲ್ವರು ಬಾಲಕರು ಸಾವು ಬೆಂಗಳೂರು: ಚಾಮರಾಜನಗರದ ಗಾಳಿಪುರ ಬೈಪಾಸ್​ನಲ್ಲಿ‌ ಶನಿವಾರ ಮಧ್ಯಾಹ್ನ ಸಂಭವಿಸಿದ ಲಾರಿ, ಕಾರು ಮತ್ತು ದ್ವಿಚಕ್ರ ವಾಹನ ನಡುವಿನ ಸರಣಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ. ಮೆರಾನ್, ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್​ ಮೃತರು. ಸರಣಿ ಅಪಘಾತದಲ್ಲಿ 10 ವರ್ಷದ ಮೆರಾನ್ ನಿನ್ನೆ ಸ್ಥಳದಲ್ಲೇ ಮೃತಪಟ್ಟಿದ್ದ. ಮೂವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ರೆಹಾನ್, ಅದಾನ್

ಸರಣಿ ಅಪಘಾತ : ಸಾವಿನ ಸಂಖ್ಯೆ 4ಕ್ಕೇರಿಕೆ Read More »

ಇಂದು ಚಂದ್ರ ಗ್ರಹಣ : ಬರೋಬ್ಬರಿ 82 ನಿಮಿಷ ಕಡುಕೆಂಪು ಬಣ್ಣದಲ್ಲಿ ಕಂಗೊಳಿಸಲಿರುವ ಚಂದ್ರಮ

ಅಪರೂಪದ ಖಗೋಲ ವಿದ್ಯಮಾನವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಕುತೂಹಲ ಮಂಗಳೂರು : ಇಂದು ರಾತ್ರಿ ಪೂರ್ಣ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದ್ದು, ಈ ಖಗೋಲ ವಿದ್ಯಮಾನವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಖಗೋಲ ಆಸಕ್ತರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇಂದಿನ ಚಂದ್ರ ಗ್ರಹಣದ ವೇಳೆ ಚಂದ್ರ ಬರೋಬ್ಬರಿ 82 ನಿಮಿಷಗಳಷ್ಟು ಹೊತ್ತು ಕಡುಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಚಂದ್ರಗ್ರಹಣವನ್ನು ರಕ್ತಚಂದನ ಗ್ರಹಣ ಎಂದೂ ಕರೆಯುತ್ತಾರೆ. ಇದು ಒಂದು ಅಪರೂಪದ ಖಗೋಲ ವಿದ್ಯಮಾನವಾಗಿದೆ. ಇಷ್ಟು ದೀರ್ಘ ಹೊತ್ತು ಚಂದ್ರ ಕೆಂಬಣ್ಣದಲ್ಲಿ ಕಾಣುವುದು ಬಹಳ

ಇಂದು ಚಂದ್ರ ಗ್ರಹಣ : ಬರೋಬ್ಬರಿ 82 ನಿಮಿಷ ಕಡುಕೆಂಪು ಬಣ್ಣದಲ್ಲಿ ಕಂಗೊಳಿಸಲಿರುವ ಚಂದ್ರಮ Read More »

ಪರೀಕ್ಷೆ ಬರೆಯಲು ಹೆಲಿಕಾಪ್ಟರ್‌ನಲ್ಲಿ ಬಂದ ವಿದ್ಯಾರ್ಥಿಗಳು!

ಮಳೆಯಿಂದ ರಸ್ತೆ ಬಂದ್‌ ಆದ ಕಾರಣ ಬಾಡಿಗೆ ಹೆಲಿಕಾಪ್ಟರ್‌ ಪ್ರಯಾಣ ಉತ್ತರಾಖಂಡ: ಉತ್ತರ ಭಾರತಾದ್ಯಂತ ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿದ್ದು, ಅನೇಕ ಅನಾಹುತಗಳನ್ನು ಸೃಷ್ಟಿಸಿದೆ. ಉತ್ತರಾಖಂಡದಲ್ಲಿ ಭೂಕುಸಿತ, ರಸ್ತೆ ಬಂದ್ ಮತ್ತಿತರ ಅನಾಹುತಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಪಿಥೋರ್​ಗಢದ ಪರೀಕ್ಷಾ ಕೇಂದ್ರದಲ್ಲಿ ಬಿ.ಇಡಿ ಪರೀಕ್ಷೆ ನಿಗದಿಯಾಗಿತ್ತು. ಯಾವ ಕಾರಣಕ್ಕೂ ಈ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ನಾಲ್ವರು ವಿದ್ಯಾರ್ಥಿಗಳು ಖಾಸಗಿ ಹೆಲಿಕಾಪ್ಟರ್‌ ಬಾಡಿಗೆಗೆ ಪಡೆದು ಪರೀಕ್ಷಾ ಕೇಂದ್ರಕ್ಕೆ ಬಂದಿರುವುದು ಈಗ ಸುದ್ದಿಯಾಗಿದೆ. ಮಳೆಯಿಂದಾಗಿ ಉತ್ತರಾಖಂಡದಲ್ಲಿ

ಪರೀಕ್ಷೆ ಬರೆಯಲು ಹೆಲಿಕಾಪ್ಟರ್‌ನಲ್ಲಿ ಬಂದ ವಿದ್ಯಾರ್ಥಿಗಳು! Read More »

ಬುರುಡೆ ಕೇಸ್‌ಗೆ ಮತ್ತೆ ಟ್ವಿಸ್ಟ್‌ : ವಿಠಲ ಗೌಡ ಜೊತೆ ರಾತ್ರಿಯೇ ಸ್ಥಳ ಮಹಜರು

ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದು ಕೊಟ್ಟದ್ದು ವಿಠಲ ಗೌಡ ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅಂತಿಮವಾಗಿ ಬುರುಡೆ ತಂದುಕೊಟ್ಟದ್ದು ಸೌಜನ್ಯಾಳ ಮಾವ ವಿಠಲ ಗೌಡ ಎನ್ನುವ ವಿಚಾರ ಬಯಲಾಗಿದ್ದು, ಹೀಗಾಗಿ ನಿನ್ನೆ ರಾತ್ರಿಯೇ ಎಸ್‌ಐಟಿ ತಂಡ ವಿಠಲ ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದೆ. ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು

ಬುರುಡೆ ಕೇಸ್‌ಗೆ ಮತ್ತೆ ಟ್ವಿಸ್ಟ್‌ : ವಿಠಲ ಗೌಡ ಜೊತೆ ರಾತ್ರಿಯೇ ಸ್ಥಳ ಮಹಜರು Read More »

ಹಿಂದೂಗಳ ಸಂಖ್ಯೆ ಹೆಚ್ಚಾಗದಿದ್ದರೆ ಭಾರತ ಇನ್ನೊಂದು ಪಾಕಿಸ್ತಾನ ಆಗಲಿದೆ : ಕಲ್ಲಡ್ಕ ಪ್ರಭಾಕರ ಭಟ್‌

ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿಯನ್ನು ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕಳವಳ ಮಂಗಳೂರು : ಹಿಂದೂಗಳ ಸಂಖ್ಯೆ ಹೆಚ್ಚಾಗದೆ ಇದ್ದರೆ ಭಾರತ ಮತ್ತೊಂದು ಪಾಕಿಸ್ತಾನ ಆಗಲಿದೆ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿ ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಂಕಲ್ಪವನ್ನು ಸಂಘ ಪರಿವಾರ ಮಾಡುತ್ತಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಕೆಲಸ ಅದೇ ಆಗಿದೆ ಎಂದಿದ್ದಾರೆ.

ಹಿಂದೂಗಳ ಸಂಖ್ಯೆ ಹೆಚ್ಚಾಗದಿದ್ದರೆ ಭಾರತ ಇನ್ನೊಂದು ಪಾಕಿಸ್ತಾನ ಆಗಲಿದೆ : ಕಲ್ಲಡ್ಕ ಪ್ರಭಾಕರ ಭಟ್‌ Read More »

ಸೆ. 7: ಪುತ್ತೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ ಆಚರಣೆ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ) ಪುತ್ತೂರು ವತಿಯಿಂದ ಬ್ರಹ್ಮಶ್ರೀ ‌ನಾರಾಯಣ ಗುರುಸ್ವಾಮಿ ಅವರ 171 ನೇ ಜನ್ಮ ದಿನಾಚರಣೆ ಸೆ. 7 ರಂದು ಪುತ್ತೂರಿನ ಬ್ರಹ್ಮಶ್ರೀ ‌ನಾರಾಯಣ ಗುರುಸ್ವಾಮಿ ಕಲಾಮಂದಿರದಲ್ಲಿ ನಡೆಯಲಿದೆ. ಗಣ ಹೋಮ, ಗುರು ಪೂಜೆ, ಭಜನೆ, ಸಭಾ ಕಾರ್ಯಕ್ರಮ ನಡೆಯಲಿದ್ದು, ಭಗೀರಥ ಜಿ. (ಅಧ್ಯಕ್ಷರು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ), ಸದಾನಂದ ಪೂಜಾರಿ (ಅಧ್ಯಕ್ಷರು ಸಂಸ್ಥಾಪಕರು, ನಂದಾದೀಪ ಫೌಂಡೇಶನ್ ಮತ್ತು ಬಿಲ್ಲವ ಬ್ರಿಗ್ರೇಡ್ (ರಿ.) ಕೇಂದ್ರಿಯ ಮಂಡಳಿ

ಸೆ. 7: ಪುತ್ತೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ ಆಚರಣೆ Read More »

ಆಪರೇಷನ್ ಸಿಂಧೂರ್ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?

ನವದೆಹಲಿ: ಪಾಕ್ ವಿರುದ್ಧ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್ ಸಿಂಧೂರ್ ಕೇವಲ 3 ದಿನಕ್ಕೆ ಮುಗಿದಿರುವುದಲ್ಲ. ಧೀರ್ಘ ಕಾಲ ಮುಂದುವರೆದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಮೀರಿ ಎಲ್ಲವನ್ನೂ ನಮಗೆ ಹಂಚಿಕೊಳ್ಳಲು ಅಸಾಧ್ಯ ಎಂದಿದ್ದಾರೆ. ಈ ಕಾರ್ಯಾಚರಣೆಯ ಪರಿಣಾಮಗಳನ್ನು ಈಗಲೇ ಹೇಳುವುದು ಕಷ್ಟ. ಪಾಕ್ ಪ್ರೇರಿತ ಉಗ್ರರು ಗಡಿ ಪ್ರದೇಶದಲ್ಲಿ ದೇಶದೊಳಕ್ಕೆ ನುಗ್ಗಲು ಚಟುವಟಿಕೆಗಳನ್ನು ಇನ್ನೂ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆ

ಆಪರೇಷನ್ ಸಿಂಧೂರ್ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ? Read More »

ಧರ್ಮಸ್ಥಳ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್ ಸಂಸದನ ಹೆಸರು?

ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಮತ್ತೊಂದು ಮಹತ್ವದ ಟ್ವಿಸ್ಟ್ ದೊರೆತಿದೆ. ಕೇರಳ ರಾಜ್ಯದ ಕಮ್ಯುನಿಸ್ಟ್ ಪಕ್ಷದ ಸಂಸದನನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿತ್ತು. ಸಂಸದ ಸಂತೋಷ್ ಕುಮಾರ್ ಅವರನ್ನು ಆರೋಪಿ ಚೆನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಭೇಟಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದ ತನಿಖೆ 25% ಗಳಷ್ಟು ಮಾತ್ರವೇ ಪೂರ್ಣವಾಗಿದ್ದು, ಇದು ಮತ್ತಷ್ಟು ಆಳವಾಗಿ, ಇನ್ನಷ್ಟು ದಿನಗಳ ವರೆಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್ ಸಂಸದನ ಹೆಸರು? Read More »

error: Content is protected !!
Scroll to Top