ಸುದ್ದಿ

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್‌ನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್‌ನ 2025-27ನೇ ಸಾಲಿನ ಅಧ್ಯಕ್ಷರಾಗಿ ನಾಗಾರಾಜ್ ಕೆ.ಎಲ್. ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ. ರಘುವೀರ್ ಕಾಮತ್, ಪಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲು, ಕೋಶಾಧಿಕಾರಿಯಾಗಿ ಲಾವಣ್ಯ ಸುರೇಶ್ ಜ್ಯೋತಿಗುಡ್ಡೆ, ಜತೆಕಾರ್ಯದರ್ಶಿಗಳಾಗಿ ಮಿಥುನ್ ಎ.ಎಸ್. ಮತ್ತು ದಿನೇಶ್ ತುಂಬೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಈಶ್ವರ ಕುಮಾರ್ ಭಟ್, ಸಚ್ಚಿದಾನಂದ ಪ್ರಭು, ರಮೇಶ್, ಮುಸ್ತಾಫ, ವೆಂಕಟ್ರಮಣ ಕಲ್ಲಡ್ಕ, ಮಾಧವ ದರಿಬಾಗಿಲು ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್‌ನ ಪದಾಧಿಕಾರಿಗಳ ಆಯ್ಕೆ Read More »

ಕೆಂಪುಕೋಟೆಯಿಂದ ಬಂಗಾರದ ಕಲಶ ಕದ್ದ ಆರೋಪಿ ಅಂದರ್

ನವದೆಹಲಿ: ಕೆಂಪು ಕೋಟೆಯ ಪರಿಸರದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಕಲಶಗಳನ್ನು ಕದ್ದೊಯ್ದ ಆರೋಪಿಯನ್ನು ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಹಾಪುರ್‌ನ ನಿವಾಸಿ ಭೂಷಣ್ ವರ್ಮಾ ಎಂದು ಗುರುತಿಸಲಾಗಿದೆ. ಭೂಷಣ್ ಜೈನರ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಬಂಗಾರದ ಕಲಶಗಳನ್ನು ಎಗರಿಸಿದ್ದ. ಜೈನ ಅರ್ಚಕನ ವೇಷದಲ್ಲಿ ಬಂದು ಆರೋಪಿ ಈ ಕುಕೃತ್ಯ ಎಸಗಿದ್ದ. ಈ ದೃಶ್ಯ ಸಿಸಿಟಿವಿ ಮತ್ತು ಸಾಮಾಜಿಕ ಜಾಲತಾಣದಲ್ಲೂ ‌ವೈರಲ್ ಆಗಿದೆ.

ಕೆಂಪುಕೋಟೆಯಿಂದ ಬಂಗಾರದ ಕಲಶ ಕದ್ದ ಆರೋಪಿ ಅಂದರ್ Read More »

ಮಾಧ್ಯಮಗಳ ಕೆಮರಾ ಕಂಡು ಓಡಿ ಹೋದ ಧರ್ಮಸ್ಥಳ ಪ್ರಕರಣದ ಜಯಂತ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಇಂದು SIT ವಿಚಾರಣೆಗೆ ಹಾಜರಾಗಿದ್ದ ಜಯಂತ್‌ ಮಾಧ್ಯಮಗಳ ಕೆಮರಾ ಕಂಡು ಬೇರೊಂದು ಕಾಡು ಹಾದಿಯಲ್ಲಿ ಓಡಿ ಹೋದ ಘಟನೆ ನಡೆದಿದೆ. SIT ಅಧಿಕಾರಿಗಳ ಬುಲಾವ್ ಮೇರೆಗೆ ವಿಚಾರಣೆಗೆ ಆಗಮಿಸಿದ್ದ ಜಯಂತ್, ಆ ಬಳಿಕ ಮಾಧ್ಯಮಗಳನ್ನು ಕಂಡು ಕಚೇರಿಯ ಹಿಂದಿನ ದಾರಿಯಲ್ಲಿ ಓಡಿ ಹೋಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ಜಯಂತ್ ಅವರ ಮೇಲೆ ಮತ್ತಷ್ಟು ಅನುಮಾನ ಹುಟ್ಟುವಂತೆ ಮಾಡಿದೆ. ಅವರು ಮಾಧ್ಖಮಗಳನ್ನು ಕಂಡ ತಕ್ಷಣ ಯಾತಕ್ಕಾಗಿ ಓಡಿದ್ದಾರೆ. ಬುರುಡೆ ಷಡ್ಯಂತ್ರದ

ಮಾಧ್ಯಮಗಳ ಕೆಮರಾ ಕಂಡು ಓಡಿ ಹೋದ ಧರ್ಮಸ್ಥಳ ಪ್ರಕರಣದ ಜಯಂತ Read More »

ಕಲ್ಲು ತೂರಾಟದ ಬಳಿಕ ಮಂಡ್ಯ ಉದ್ವಿಗ್ನ : ಹಿಂದೂಗಳಿಂದ ಬೃಹತ್‌ ಪ್ರತಿಭಟನೆ

ಲಾಠಿ ಚಾರ್ಜ್‌ ಮಾಡಿ ಪ್ರತಿಭಟನೆಕಾರರನ್ನು ಚದುರಿಸಿದ ಪೊಲೀಸರು ಬೆಂಗಳೂರು: ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟನಡೆದ ಬಳಿಕ ಮಂಡ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.ಕಲ್ಲು ತೂರಾಟ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಮಸೀದಿ ಮುಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ಉಂಟಾಗಿದ್ದು, ಈ ವೇಳೆ ಮತ್ತೆ ಕಲ್ಲು ತೂರಲಾಗಿದೆ. ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಮದ್ದೂರು ಪಟ್ಟಣದ ರಾಮ್‌ ರಹೀಂ ನಗರಕ್ಕೆ ಹೊಂದಿಕೊಂಡಿರುವ ಚನ್ನೇಗೌಡ ಬಡಾವಣೆಯಲ್ಲಿ

ಕಲ್ಲು ತೂರಾಟದ ಬಳಿಕ ಮಂಡ್ಯ ಉದ್ವಿಗ್ನ : ಹಿಂದೂಗಳಿಂದ ಬೃಹತ್‌ ಪ್ರತಿಭಟನೆ Read More »

ಸಿದ್ದರಾಮಯ್ಯ ಹಾಡಿ ಹೊಗಳಿದ ಶಾಂತಿದೂತರಿಂದಲೇ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ : ಸಿ.ಟಿ.ರವಿ ಆಕ್ರೋಶ

ಇನ್ನೆಷ್ಟು ದಿನ ಮತಗಳಿಕೆಗಾಗಿ ಸುಳ್ಳಿನ ಭರಾಟೆ ಎಂದು ಪ್ರಶ್ನಿಸಿದ ರವಿ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನದ ಹಿಂದೆಯಷ್ಟೇ ಹಾಡಿ ಹೊಗಳಿದ ಶಾಂತಿದೂತರು ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪರಿಷತ್‌ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿರುವ ಸಿ.ಟಿ.ರವಿ, ಮಾನ್ಯ ಮುಖ್ಯಮಂತ್ರಿಗಳೇ ನೀವು ಎರಡು ದಿನದ ಹಿಂದೆ ಹಾಡಿ ಹೊಗಳಿದ “ಶಾಂತಿದೂತರು” ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾಗರದಲ್ಲಿ

ಸಿದ್ದರಾಮಯ್ಯ ಹಾಡಿ ಹೊಗಳಿದ ಶಾಂತಿದೂತರಿಂದಲೇ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ : ಸಿ.ಟಿ.ರವಿ ಆಕ್ರೋಶ Read More »

ಮಂಗಳೂರು : ಆನ್‌ಲೈನ್‌ ಹೂಡಿಕೆ ನೆಪದಲ್ಲಿ 1.14 ಕೋ. ರೂ. ವಂಚನೆ

ವಾಟ್ಸಪ್‌ ಗ್ರೂಪ್‌ ನಂಬಿ ಜೀವಮಾನದ ಉಳಿತಾಯವನ್ನು ಕಳೆದುಕೊಂಡ ವ್ಯಕ್ತಿ ಮಂಗಳೂರು: ಆನ್‌ಲೈನ್‌ ಮೂಲಕ ಹೂಡಿಕೆ ಮಾಡಿದರೆ ಭಾರಿ ಲಾಭ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 1.14 ಕೋ. ರೂ. ವಂಚಿಸಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ದೂರುದಾರ ತನ್ನ ಜೀವಮಾನದ ಉಳಿತಾಯವನ್ನೆಲ್ಲ ವಂಚಕರ ಕೈಗಿತ್ತು ಈಗ ಪರಿತಪಿಸುತ್ತಿದ್ದಾರೆ. ಜು.14ರಂದು ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಸ್ಟಾಕ್‌ ಎಕ್ಸ್‌ಚೇಂಜ್‌ ಎಂಬ ವಾಟ್ಸಪ್‌ ಗ್ರೂಪ್‌ಗೆ ಸೇರಿಸಿ ಷೇರುಗಳಲ್ಲಿ ಆನ್‌ಲೈನ್‌ ಮೂಲಕ ಹೂಡಿಕೆ ಮಾಡಿದೆ ಭಾರಿ ಲಾಭ ಗಳಿಸಬಹುದು ಎಂದು ಹೇಳಿದ್ದ. ನಂತರ

ಮಂಗಳೂರು : ಆನ್‌ಲೈನ್‌ ಹೂಡಿಕೆ ನೆಪದಲ್ಲಿ 1.14 ಕೋ. ರೂ. ವಂಚನೆ Read More »

ಮಲ್ಲಿಗೆ ಮುಡಿದದ್ದಕ್ಕೆ 1 ಲ.ರೂ. ದಂಡ ತೆತ್ತ ನಟಿ!

ಸಿಡ್ನಿ: ದಕ್ಷಿಣ ಭಾರತದ ಜನಪ್ರಿಯ ನಟಿ ನವ್ಯಾ ನಾಯರ್‌ ಮಲ್ಲಿಗೆ ಮುಡಿದ ಕಾರಣಕ್ಕೆ 1 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ದಂಡದ ರೂಪದಲ್ಲಿ ತೆರಬೇಕಾಗಿ ಬಂದಿದೆ. ಆದರೆ ದಂಡ ಹಾಕಿರುವುದು ಭಾರತದಲ್ಲಿ ಅಲ್ಲ, ಬದಲಾಗಿದೆ ಆಸ್ಟ್ರೇಲಿಯಲ್ಲಿ. ಇತ್ತೀಚೆಗೆ ಆಸ್ಟ್ರೇಲಿಯದ ಮಲಯಾಳಂ ಸಂಘಟನೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನವ್ಯಾ ನಾಯರ್‌ ಹೋಗಿದ್ದರು. ಮೆಲ್ಬೋರ್ನ್ ಏರ್‌ಪೋರ್ಟ್‌ಗೆ ಬಂದಿಳಿದ ನಟಿ ನವ್ಯಾ ನಾಯರ್‌ಗೆ ಅಲ್ಲಿನ ಅಧಿಕಾರಿಗಳು 1.14 ಲ.ರೂ. ದಂಡ ಹಾಕಿದ್ದಾರೆ. ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಓಣಂ

ಮಲ್ಲಿಗೆ ಮುಡಿದದ್ದಕ್ಕೆ 1 ಲ.ರೂ. ದಂಡ ತೆತ್ತ ನಟಿ! Read More »

ಗಣೇಶ ಮೆರವಣಿಗೆ ಮೇಲೆ ಅನ್ಯಕೋಮಿನವರಿಂದ ಕಲ್ಲು ತೂರಾಟ : 8 ಮಂದಿಗೆ ಗಾಯ

ಲೈಟ್‌ ಆಫ್‌ ಮಾಡಿ ಕಲ್ಲು, ದೊಣ್ಣೆಗಳನ್ನು ಎಸೆದಿದ್ದಾರೆ ಎಂದು ಆರೋಪ ಬೆಂಗಳೂರು: ಮಂಡ್ಯದ ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಭಾನುವಾರ ರಾತ್ರಿ ಗಣಪತಿ ವಿಗ್ರಹ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯಕೋಮಿನವರು ನಡೆಸಿದ ಕಲ್ಲು ತೂರಾಟದಲ್ಲಿ ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಮಸೀದಿಯೊಳಗಿಂದ ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದಾರೆ. ಗಣಪತಿ ಮೆರವಣಿಗೆ ಮಸೀದಿ ಮುಂದೆ ಶಾಮತಿಯುತವಾಗಿ ಸಾಗುತ್ತಿರುವಾಗ ಏಕಾಏಕಿ ಕಲ್ಲು ತೂರಾಟ ಮಾಡಲಾಗಿದೆ. ದಿಢೀರ್ ಮಸೀದಿಯ ಲೈಟ್​ ಆಫ್​ ಮಾಡಿ ಕಲ್ಲು ಹಾಗೂ

ಗಣೇಶ ಮೆರವಣಿಗೆ ಮೇಲೆ ಅನ್ಯಕೋಮಿನವರಿಂದ ಕಲ್ಲು ತೂರಾಟ : 8 ಮಂದಿಗೆ ಗಾಯ Read More »

ದ್ವಿಚಕ್ರ ವಾಹನದಲ್ಲಿ ಬಾಲಕರ ಟ್ರಿಪ್ಪಲ್‌ ರೈಡ್‌ : ತಂದೆಗೆ 27,500 ರೂ. ದಂಡ

ಮಂಗಳೂರು: ದ್ವಿಚಕ್ರ ವಾಹನದಲ್ಲಿ ಟ್ರಿಪ್ಪಲ್ ರೈಡ್ ಸಂಚಾರ ಮಾಡಿದ ಪ್ರಕರಣದಲ್ಲಿ ಸವಾರನ ತಂದೆಗೆ ನ್ಯಾಯಾಲಯ ಬರೋಬ್ಬರಿ 27,500 ರೂ. ದಂಡ ವಿಧಿಸಿದೆ. ಬಜಪೆಯಲ್ಲಿ ಮೂವರು ಅಪ್ರಾಪ್ತರು ಹೆಲ್ಮೆಟ್‌ ಕೂಡ ಧರಿಸದೆ ದ್ವಿಚಕ್ರ ವಾಹನದಲ್ಲಿ ಟ್ರಿಪ್ಪಲ್‌ ರೈಡ್‌ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಜ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸಿಬ್ಬಂದಿಯೊಂದಿಗೆ ಆ.28ರಂದು ಸಾಯಂಕಾಲ ಸಮಯಕ್ಕೆ ಬಜ್ಪೆ ಪೇಟೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಒಂದು ದ್ವಿಚಕ್ರ ವಾಹನದಲ್ಲಿ ಮೂವರು ಅಪ್ರಾಪ್ತರು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ವಾಹನ ಸಹಿತ

ದ್ವಿಚಕ್ರ ವಾಹನದಲ್ಲಿ ಬಾಲಕರ ಟ್ರಿಪ್ಪಲ್‌ ರೈಡ್‌ : ತಂದೆಗೆ 27,500 ರೂ. ದಂಡ Read More »

ಅಜಾನ್‌ ಧ್ವನಿ ಹೆಚ್ಚಳ : ದೂರು ದಾಖಲು

ಅನುಮತಿ ಪಡೆಯದೆ ಧ್ವನಿವರ್ಧಕ ಬಳಕೆ ಎಂದು ಆರೋಪ ಬಂಟ್ವಾಳ: ಅಜಾನ್ ಧ್ವನಿ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿರುವ ಧಾರ್ಮಿಕ ಶಿಕ್ಷಣದ ಕಟ್ಟಡವೊಂದರಲ್ಲಿ ಇತ್ತೀಚಿಗೆ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರದಲ್ಲಿ ಅನುಮತಿ ಪಡೆಯದೆ ಧ್ವನಿವರ್ಧಕ ಅಳವಡಿಸಿಕೊಂಡು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧ್ವನಿಯಲ್ಲಿ ದಿನಕ್ಕೆ 5 ಬಾರಿ ಅಜಾನ್ ಕೂಗಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿರುವ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಜಾನ್‌ ಧ್ವನಿ ಹೆಚ್ಚಳ : ದೂರು ದಾಖಲು Read More »

error: Content is protected !!
Scroll to Top