ಸುದ್ದಿ

ರಂಗಭೂಮಿ ಕಲಾವಿದ ವಿಠಲ ಪೂಜಾರಿ ಅತಿಕಾರಬೈಲು ಆತ್ಮಹತ್ಯೆಗೆ ಶರಣು

ವಿಟ್ಲ : ನಾಟಕ ಕಲಾವಿದರಾದ  ವಿಠಲ ಪೂಜಾರಿ (49) ಅತಿಕಾರಬೈಲು ಮನೆಯ ಹಟ್ಟಿಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಯುವಕೇಸರಿ ಅತಿಕಾರಬೈಲು ಅಧ್ಯಕ್ಷರಾಗಿ, ನಾಟಕ ಕಲಾವಿದರು ಮತ್ತು ಬಿಲ್ಲವ ಸಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಚಂದಳಿಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಊರಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಂಗಭೂಮಿ ಕಲಾವಿದ ವಿಠಲ ಪೂಜಾರಿ ಅತಿಕಾರಬೈಲು ಆತ್ಮಹತ್ಯೆಗೆ ಶರಣು Read More »

ಹಿಂದು ಹೆಸರಿನಲ್ಲಿ ಯುವತಿಗೆ ವಂಚನೆ | ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ತೋರಿಸಿ ಯುವತಿಗೆ ಬೆದರಿಕೆ

ಮಧ್ಯಪ್ರದೇಶದ : ಮುಸ್ಲಿಂ ವ್ಯಕ್ತಿಯೋರ್ವ ಪ್ರದೀಪ್ ಸೋಲಂಕಿ ಎಂದು ಹಿಂದೂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದು ಮಾತ್ರವಲ್ಲದೆ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ. ಮೊಕ್ಸಿನ್ ಎಂಬ ಮುಸ್ಲಿಂ ಯುವಕ ತನ್ನ ಹೆಸರನ್ನು ಪ್ರದೀಪ್ ಎಂದು ಬದಲಾಯಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದಾನೆ. ಈತ  ಪ್ರದೀಪ್ ಸೋಲಂಕಿ ಎಂದು ಹೇಳಿಕೊಂಡು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆರೋಪಿ ಮೂರು ವರ್ಷಗಳಿಂದ ಆಕೆಗೆ ಲೈಂಗಿಕವಾಗಿ ಶೋಷಿಸುತ್ತಿದ್ದ. ಸಂತ್ರಸ್ತೆ ಕುಟುಂಬ ಸಮೇತ ಪೊಲೀಸ್ ಠಾಣೆಗೆ

ಹಿಂದು ಹೆಸರಿನಲ್ಲಿ ಯುವತಿಗೆ ವಂಚನೆ | ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ತೋರಿಸಿ ಯುವತಿಗೆ ಬೆದರಿಕೆ Read More »

ಕಾಂಗ್ರೆಸ್‌ ಸೇರುವ ಉದ್ದೇಶವಿಲ್ಲ : ಪ್ರತಾಪ್‌ ಸಿಂಹ

ಸಿದ್ದರಾಮಯ್ಯ ಪರವಾಗಿ ಮಾತನಾಡಿದ ವದಂತಿಗಳಿಗೆ ಸ್ಪಷ್ಟೀಕರಣ ಮೈಸೂರು: ಕಾಂಗ್ರೆಸ್‌ ಸೇರುವ ಉದ್ದೇಶ ಖಂಡಿತ ತನಗೆ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವ ಪ್ರಸ್ತಾವದ ಕುರಿತು ಇತ್ತೀಚೆಗೆ ಪ್ರತಾಪ್‌ ಸಿಂಹ ಹೇಳಿದ ಮಾತೊಂದು ಅವರು ಕಾಂಗ್ರೆಸ್‌ ಸೇರುವ ಬಗ್ಗೆ ವದಂತಿ ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಅಸವರು ಸ್ಪಷ್ಟೀಕರಣ ನೀಡಿದ್ದಾರೆ.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ವಂಚಿತರಾದ ಬಳಿಕ ಪ್ರತಾಪ ಸಿಂಹ ನಡೆಗಳು ತುಸು ನಿಗೂಢವಾಗಿವೆ. ಈ ಹಿನ್ನೆಲೆಯಲ್ಲಿ ಪ್ರತಾಪ್‌

ಕಾಂಗ್ರೆಸ್‌ ಸೇರುವ ಉದ್ದೇಶವಿಲ್ಲ : ಪ್ರತಾಪ್‌ ಸಿಂಹ Read More »

ಮನೆಗಳಿಗೆ ಕಿಟಿಕಿಗಳಿಡುವುದನ್ನು ನಿಷೇಧಿಸಿದ ಸರಕಾರ!

ಕಿಟಿಕಿ ಇದ್ದರೆ ಗೋಡೆ ಕಟ್ಟಿ ಮುಚ್ಚಬೇಕು ಕಾಬೂಲ್‌ : ಅಫಘಾನಿಸ್ಥಾನದ ತಾಲಿಬಾನ್‌ ಆಡಳಿತ ಮನೆಗಳಿಗೆ ಕಿಟಿಕಿ ಅಳವಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಹೊಸದಾಗಿ ನಿರ್ಮಿಸುವ ಮನೆಗಳಿಗೆ ಕಿಟಿಕಿ ಅಳವಡಿಸಲೇ ಬಾರದು. ಈಗಾಗಲೇ ನಿರ್ಮಿಸಿರುವ ಮನೆಗಳ ಕಿಟಿಕಿಗಳನ್ನು ಮುಚ್ಚಬೇಕೆಂದು ತಾಲಿಬಾನ್‌ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಮನೆಗಳಿಗೆ ಕಿಟಿಕಿಗಳಿದ್ದರೆ ಪಡಸಾಲೆ, ಅಡುಗೆಕೋಣೆ, ಹಿತ್ತಿಲು ಇತ್ಯಾದಿ ಮನೆಯ ಒಳಗಿನ ಕೋಣೆಗಳು ಹೊರಗಿನವರಿಗೆ ಕಾಣುತ್ತವೆ. ಮನೆಯ ಸ್ತ್ರೀಯರು ಓಡಾಡುವ ಮನೆಯೊಳಗಿನ ಈ ಸ್ಥಳಗಳು ಪರರ ಕಣ್ಣಿಗೆ ಕಾಣದಿರಲು ಮನೆಗಳಿಗೆ ಕಿಟಿಕಿಗಳು ಇರಲೇಬಾರದು ಎಂದು

ಮನೆಗಳಿಗೆ ಕಿಟಿಕಿಗಳಿಡುವುದನ್ನು ನಿಷೇಧಿಸಿದ ಸರಕಾರ! Read More »

ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌

ಹ್ಯಾಪಿ ನ್ಯೂ ಇಯರ್‌ ಸಂದೇಶ ಕಳುಹಿಸಿ ಹಣ ಲಪಟಾಯಿಸುವ ತಂತ್ರ ಬೆಂಗಳೂರು : ಅಮಾಯಕ ಜನರ ಬ್ಯಾಂಕ್‌ ಖಾತೆಗಳಿಂದ ಹಣ ಲಪಟಾಯಿಸಲು ನಾನಾ ತಂತ್ರಗಳನ್ನು ಬಳಸುತ್ತಿರುವ ಸೈಬರ್‌ ಕಳ್ಳರು ಈಗ ಕಂಡುಕೊಂಡಿರುವ ಹೊಸ ತಂತ್ರ ಹೊಸ ವರ್ಷದ ಶುಭಾಶಯ. ಹೊಸ ವರ್ಷವನ್ನು ಗಮನದಲ್ಲಿಟ್ಟುಕೊಂಡ ವಂಚಕರು ಈಗ ಜನರ ಖಾತೆಯನ್ನು ಖಾಲಿ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ವಾಟ್ಸಪ್‌, ಫೇಸ್‌ಬುಕ್‌ ಅಥವಾ ಟಿಲಿಗ್ರಾಂನಂಥ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಹೊಸ ವರ್ಷದ ಶುಭಾಶಯದ ಗ್ರೀಟಿಂಗ್‌ ಕಳುಹಿಸುತ್ತಾರೆ. ಇದನ್ನು ತೆರೆದ ಕೂಡಲೇ

ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌ Read More »

ಹೊಸ ವರ್ಷಾಚರಣೆ ವಿರುದ್ಧ ಮುಸ್ಲಿಂ ಜಮಾತ್‌ ಫತ್ವಾ

ಯುವಕ-ಯುವತಿಯರು ಹೊಸ ವರ್ಷದ ನೆಪದಲ್ಲಿ ಮೋಜು ಮಾಡದಂತೆ ಸೂಚನೆ ಹೊಸದಿಲ್ಲಿ: ಇಡೀ ಜಗತ್ತು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದರೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಮುಸ್ಲಿಮರು ಹೊಸವರ್ಷಾಚರಣೆ ಸಂಭ್ರಮ ಮಾಡಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೊಸ ವರ್ಷಾಚರಣೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿರುವುದರಿಂದ ನೈಜ ಮುಸ್ಲಿಮರು ಇಂಥ ಸಂಭ್ರಮಗಳಲ್ಲಿ ಭಾಗಿಯಾಗಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಮುಸ್ಲಿಮರು ಹೊಸವರ್ಷಾಚರಣೆಯ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುವ ಬದಲು ತಮ್ಮ ನಂಬಿಕೆಗೆ

ಹೊಸ ವರ್ಷಾಚರಣೆ ವಿರುದ್ಧ ಮುಸ್ಲಿಂ ಜಮಾತ್‌ ಫತ್ವಾ Read More »

ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ವಾಪಸ್‌

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಒಪ್ಪಿದ ಸರಕಾರ ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಸಾರಿಗೆ ‌ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ. ಡಿ.31ರ ಮಧ್ಯರಾತ್ರಿಯಿಂದ ತೊಡಗಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಸಾರಿಗೆ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿತ್ತು. ಆದರೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ‌ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ.

ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ವಾಪಸ್‌ Read More »

ದಕ್ಷಿಣ ಕೊರಿಯಾ ವಿಮಾನ ದುರಂತ : 179 ಮಂದಿ ಸಾವು?

ಯಾರೂ ಬದುಕುಳಿದಿಲ್ಲ ಎಂದ ಅಧಿಕಾರಿಗಳು ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ಅವಘಡದಲ್ಲಿ 179 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಮಾತ್ರ ಜೀವ ಸಹಿತ ರಕ್ಷಿಸಲು ಸಾಧ್ಯವಾಗಿದ್ದು, ಉಳಿದ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.175 ಪ್ರಯಾಣಿಕರು ಮತ್ತು 6 ವೈಮಾನಿಕ ಸಿಬ್ಬಂದಿಯಿದ್ದ ವಿಮಾನ ಇಂದು ಬೆಳಗ್ಗೆ 9.05ಕ್ಕೆ (ಅಲ್ಲಿನ ಕಾಲಮಾನ) ಲ್ಯಾಂಡಿಂಗ್‌ ಗಿಯರ್‌

ದಕ್ಷಿಣ ಕೊರಿಯಾ ವಿಮಾನ ದುರಂತ : 179 ಮಂದಿ ಸಾವು? Read More »

ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಉರಿ ಬೌಲಿಂಗ್‌ : 147 ವರ್ಷದ ಟೆಸ್ಟ್‌ ದಾಖಲೆ ಪತನ

20ಕ್ಕಿಂತ ಕಡಿಮೆ ಅವರೇಜ್​ನಲ್ಲಿ 200 ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಬೌಲರ್ ಮೆಲ್ಬೋರ್ನ್‌: ಇಲ್ಲಿನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್​ನಲ್ಲಿ 474 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 369 ರನ್​ ಪೇರಿಸಿದೆ. ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ಕಬಳಿಸಿದ್ದ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ, ದ್ವಿತೀಯ ಇನಿಂಗ್ಸ್​ನಲ್ಲಿ ಮತ್ತೆ 4 ವಿಕೆಟ್ ಉರುಳಿಸಿದ್ದಾರೆ. ಈ 8 ವಿಕೆಟ್​ಗಳೊಂದಿಗೆ

ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಉರಿ ಬೌಲಿಂಗ್‌ : 147 ವರ್ಷದ ಟೆಸ್ಟ್‌ ದಾಖಲೆ ಪತನ Read More »

ಲ್ಯಾಂಡಿಂಗ್‌ ಆಗುತ್ತಿದ್ದ ವಿಮಾನ ಅಪಘಾತ : 62 ಮಂದಿ ಸಾವು

ಲ್ಯಾಂಡಿಂಗ್‌ ಗೇರ್‌ ವಿಫಲಗೊಂಡು ತಡೆಗೋಡೆಗೆ ಡಿಕ್ಕಿ ಹೊಡೆದ ವಿಮಾನ ಸಿಯೋಲ್‌ : ದಕ್ಷಿಣ ಕೊರಿಯಾದಲ್ಲಿ 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಯಿದ್ದ ವಿಮಾನವೊಂದು ಪತನಗೊಂಡಿದ್ದು, ಇದುವರೆಗೆ 62 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ವಿಮಾನ ಸಂಪೂರ್ಣ ನಾಶವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಕ್ಷಿಣ ಕೊರಿಯಾದ ನಗರವಾದ ಮುವಾನ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನ ಲ್ಯಾಂಡಿಂಗ್ ಆಗುವಾಗ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಕಳೆದ ವಾರ ಕಜಾಕಿಸ್ಥಾನದ ಅಕ್ಟೌ

ಲ್ಯಾಂಡಿಂಗ್‌ ಆಗುತ್ತಿದ್ದ ವಿಮಾನ ಅಪಘಾತ : 62 ಮಂದಿ ಸಾವು Read More »

error: Content is protected !!
Scroll to Top