ಸುದ್ದಿ

ಮೆಟ್ರೋ ಹಳದಿ ಮಾರ್ಗದ ಮೂಲಕ ಅಂಗಾಂಗ ರವಾನೆ

ಬೆಂಗಳೂರು: ನಮ್ಮ ಮೆಟ್ರೋ ಬಳಸಿ ಶ್ವಾಸಕೋಶ ಮತ್ತು ಹೃದಯವನ್ನು ರವಾನೆ ಮಾಡಿ ಜೀವವೊಂದನ್ನು ಉಳಿಸಲು ಶ್ರಮಿಸಿದ ಮಹತ್ಕಾರ್ಯ ವೈದ್ಯಕೀಯ ಸಿಬ್ಬಂದಿಯಿಂದ ಆಗಿದೆ. ಯಶವಂತಪುರದ ಸ್ಪರ್ಷ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿ ಮತ್ತು ಆಸ್ಟರ್ ಆರ್‌ವಿ ಆಸ್ಪತ್ರೆಗೆ ಅಂಗಾಂಗಗಳನ್ನು ಮೆಟ್ರೋ ಹಳದಿ ಲೈನ್ ಮೂಲಕ ಆಸ್ಪತ್ರೆಯ ಸಿಬ್ಬಂದಿಗಳು ಕೊಂಡೊಯ್ದಿದ್ದಾರೆ. ಎರಡು ಆಸ್ಪತ್ರೆಗಳಿಗೆ ಮೂವತ್ತರಿಂದ ಮೂವತ್ತಮೂರು ಕಿ. ಮೀ. ದೂರ ಇದ್ದು ಮೆಟ್ರೋ ಬಳಸಿ 61 ನಿಮಿಷಗಳಲ್ಲಿ ಅಂಗಾಂಗ ಸಾಗಾಟ ಮಾಡಲಾಗಿದೆ. ಈ ವರೆಗೆ ಕೇವಲ ಆಂಬ್ಯುಲನ್ಸ್ ಮೂಲಕವೇ ಇಂತಹ […]

ಮೆಟ್ರೋ ಹಳದಿ ಮಾರ್ಗದ ಮೂಲಕ ಅಂಗಾಂಗ ರವಾನೆ Read More »

ಕಡಬ ‌ಒಕ್ಕಲಿಗ ಗೌಡ ಸೇವಾ ಸಂಘಕ್ಕೆ‌ 50 ಲಕ್ಷ ರೂ. ದೇಣಿಗೆ ನೀಡಿದ ಡಾ. ಕೆ. ವಿ. ಚಿದಾನಂದ

ಕಡಬ: ತಾಲೂಕಿನ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ‌ನೂತನ ಬೃಹತ್ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣವಾಗುತ್ತಿರುವ ಹಿನ್ನೆಲೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಅವರು ತಮ್ಮ 70 ನೇ ಜನ್ಮದಿನದ ಹಿನ್ನೆಲೆ 50 ಲಕ್ಷ ರೂ. ದೇಣಿಗೆ ನೀಡಿದರು. ಅವರನ್ನು ಕಡು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪರವಾಗಿ ಹೃತ್ಪೂರ್ವಕವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು,

ಕಡಬ ‌ಒಕ್ಕಲಿಗ ಗೌಡ ಸೇವಾ ಸಂಘಕ್ಕೆ‌ 50 ಲಕ್ಷ ರೂ. ದೇಣಿಗೆ ನೀಡಿದ ಡಾ. ಕೆ. ವಿ. ಚಿದಾನಂದ Read More »

ರೇಣುಕಾಸ್ವಾಮಿ ಮರ್ಡರ್ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ನ. 3 ಕ್ಕೆ ಮುಂದೂಡಿದ ಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ ತೂಗುದೀಪ್ ಸೇರಿದಂತೆ ಇನ್ನಿತರರ ವಿರುದ್ಧದ ದೋಷಾರೋಪ ನಿಗದಿಯನ್ನು ನ. 3 ಕ್ಕೆ ನ್ಯಾಯಾಲಯ ಮುಂದೂಡಿದೆ. ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಇಂದೇ ಎಲ್ಲಾ ಆರೋಪಿಗಳ ದೋಷರೋಪ ನಿಗದಿ ಮಾಡುವುದಾಗಿ ನ್ಯಾಯಾಧೀಶರು ಹೇಳಿದ್ದರು. ಆದರೆ ದರ್ಶನ್ ಪರ ವಕೀಲರು ಕಾಲಾವಕಾಶ ಕೋರಿದ್ದು, ದರ್ಶನ್ ಜೊತೆ ಚರ್ಚೆ ನಡೆಸಿ ನೇರವಾಗಿ ಕೋರ್ಟ್‌ಗೆ ಹಾಜರುಪಡಿಸಲು ‌ಮತ್ತೊಂದು ಅವಕಾಶ ಕೇಳಿದ ಕಾರಣ ನ. 3

ರೇಣುಕಾಸ್ವಾಮಿ ಮರ್ಡರ್ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ನ. 3 ಕ್ಕೆ ಮುಂದೂಡಿದ ಕೋರ್ಟ್ Read More »

ಶರಣ್ ಪಂಪ್ವೆಲ್ ಬಂಧನ: ಪೊಲೀಸರ ಮೇಲೆ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಮಂಗಳೂರು: RSS ಮುಖಂಡರೊಬ್ಬರ ಭಾಷಣದ ತುಣುಕು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಅದನ್ನು ಹಂಚಿಕೊಂಡ ಆರೋಪದಲ್ಲಿ ‌ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶರಣ್ ಪಂಪ್ವೆಲ್ ಬಂಧನದ ಬೆನ್ನಲ್ಲೇ ಪೊಲೀಸ್ ಠಾಣೆಗೆ ಆಗಮಿಸಿದ ಶಾಸಕ ವೇದವ್ಯಾಸ ಕಾಮತ್ ಪ್ರಕರಣದ ಮಾಹಿತಿ ನೀಡಲು ತಡ ಮಾಡಿದ ಪೊಲೀಸರ ಮೇಲೆ ಗರಂ ಆದ ಘಟನೆ ನಡೆದಿದೆ. ಪಂಪ್ವೆಲ್ ಬಂಧನ ಪ್ರಕರಣದ ಮಾಹಿತಿ ಪಡೆಯಲು ಠಾಣೆಗೆ ಬಂದಿದ್ದ ಕಾಮತ್ ಅವರಿಗೆ ಪೊಲೀಸರು ಸರಿಯಾದ

ಶರಣ್ ಪಂಪ್ವೆಲ್ ಬಂಧನ: ಪೊಲೀಸರ ಮೇಲೆ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ Read More »

ಕರ್ನಾಟಕ ರಾಜ್ಯೋತ್ಸವ ಆಚರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಏನಂದ್ರು ಗೊತ್ತಾ?

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ 700 ಮಕ್ಕಳ ಜೊತೆಗೆ ಒಟ್ಟು 1,700 ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳನ್ನು ‌ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಪರಿಶೀಲನೆ ನಡೆಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಇದು ನಾನು ಸಚಿವನಾದ ಮೇಲೆ ನಡೆಯುತ್ತಿರುವ ಮೂರನೇ ಕಾರ್ಯಕ್ರಮ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಿನ್ನವಾಗಿ

ಕರ್ನಾಟಕ ರಾಜ್ಯೋತ್ಸವ ಆಚರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಏನಂದ್ರು ಗೊತ್ತಾ? Read More »

ಧರ್ಮಸ್ಥಳ ವಿಚಾರದಲ್ಲಿ ವ್ಯಕ್ತಿ, ಕುಟುಂಬ, ಸಂಸ್ಥೆಗೆ ಭಾರಿ ಹಾನಿ : ಡಿಕೆಶಿ

ಬಿಜೆಪಿ ಆಂತರಿಕ ಕಲಹವೇ ಕಾರಣ ಎಂದ ಉಪಮುಖ್ಯಮಂತ್ರಿ ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳು, ಮಾತುಗಳು ನಿಮ್ಮ (ಮಾಧ್ಯಮಗಳ) ಮುಂದಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ವ್ಯಕ್ತಿ, ಕುಟುಂಬ ಮತ್ತು ಸಂಸ್ಥೆಗೆ ಎಷ್ಟು ಹಾನಿ ಮಾಡಬೇಕೋ ಅದನ್ನು ಈಗಾಗಲೇ ಮಾಡಲಾಗಿದೆ.

ಧರ್ಮಸ್ಥಳ ವಿಚಾರದಲ್ಲಿ ವ್ಯಕ್ತಿ, ಕುಟುಂಬ, ಸಂಸ್ಥೆಗೆ ಭಾರಿ ಹಾನಿ : ಡಿಕೆಶಿ Read More »

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿರುವುದು ಪಿಎಫ್‌ಐ : ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನಿಷೇಧಿಸಲ್ಪಟ್ಟಿದ್ದರೂ ಕರಾವಳಿಯಲ್ಲಿ ಈಗಲೂ ಪಿಎಫ್‌ಐ ಗುಪ್ತವಾಗಿ ಸಕ್ರಿಯ ಎಂದು ಮಾಹಿತಿ ಮಂಗಳೂರು: ಮಂಗಳೂರಿನ ಬಜ್ಬೆ ಬಳಿ ಕಳೆದ ಮೇ 1ರಂದು ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಇದೀಗ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಈ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶಗಳನ್ನು ಎನ್ಐಎ ಉಲ್ಲೇಖಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ನಿಷೇಧಗೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಸದಸ್ಯರ ಕೈವಾಡ

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿರುವುದು ಪಿಎಫ್‌ಐ : ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ Read More »

ಕಾಡಾನೆಯ ದಾಳಿಗೆ ಸಿಲುಕಿ ಇಬ್ಬರು ಸಾವು

ಸೊಪ್ಪು ತರಲು ಹೋದವರ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಸಲಗ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ ಕಾಡಾನೆಯ ಮಾರಕ ದಾಳಿಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ. ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಲೂಕಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಸಾರ ಸಮೀಪ ಈ ಘಟನೆ ನಡೆದಿದೆ. ಮೃತಪಟ್ಟ ಇಬ್ಬರು ದುರ್ದೈವಿಗಳು ಹಸುವಿನ ಕೊಟ್ಟಿಗೆಗೆ ಸೊಪ್ಪು ತರುವುದಕ್ಕಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಈ

ಕಾಡಾನೆಯ ದಾಳಿಗೆ ಸಿಲುಕಿ ಇಬ್ಬರು ಸಾವು Read More »

ಇಡೀ ಕುಟುಂಬ ಆತ್ಮಹತ್ಯೆ ಯತ್ನ : ಇಬ್ಬರು ಸಾವು

ಪುರೋಹಿತ ಕುಟುಂಬದ ಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಪೌರೋಹಿತ್ಯ ಮಾಡ್ಕೊಂಡಿದ್ದ ಕುಟುಂಬವೊಂದರ ಎಲ್ಲ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಬ್ರಾಹ್ಮಣ ಸಮುದಾಯದ ಕುಮಾರಪ್ಪ ಎಂಬವರ ಕುಟುಂಬ ಗುರುವಾರ ಆತ್ಮಹತ್ಯೆಗೆ ಯತ್ನಿಸಿರುವುದು ಇಡೀ ಗ್ರಾಮದ ಜನತೆಯನ್ನು ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ದೇವರ ಪೂಜೆ ಮಾಡಿಕೊಂಡು ಇದ್ದ ಕುಟುಂಬದಲ್ಲಿ ಏಕಾಏಕಿ ಅದೇನಾಯಿತೋ ಗೊತ್ತಿಲ್ಲ,

ಇಡೀ ಕುಟುಂಬ ಆತ್ಮಹತ್ಯೆ ಯತ್ನ : ಇಬ್ಬರು ಸಾವು Read More »

ಆಂಬುಲೆನ್ಸ್‌ಗೆ ಸೈಡ್‌ ಕೊಡದ ಸ್ಕೂಟರ್‌ ಸವಾರ ಸೆರೆ

ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ ಸತಾಯಿಸಿದ್ದ ಸವಾರ ಬಂಟ್ವಾಳ : ಬಿಸಿಲೆ ಘಾಟ್‌ನಲ್ಲಿ ಗುರುವಾರ ಮಿನಿಬಸ್‌ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ನ ಸಂಚಾರಕ್ಕೆ ತಡೆಯೊಡ್ಡಿದ ಸ್ಕೂಟರ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸ್ಕೂಟರ್ ಸವಾರ ಅಡ್ಡಿಪಡಿಸಿದ ಘಟನೆ ಬಿ.ಸಿ. ರೋಡಿನಲ್ಲಿ ನಡೆದಿದೆ. ಆಂಬುಲೆನ್ಸ್‌ ಹಾರ್ನ್‌ ಮೊಳಗಿಸುತ್ತಿದ್ದರೂ ಸ್ಕೂಟರ್‌ ಸವಾರ ಕೇರ್‌ ಮಾಡದೆ ಉದ್ದೇಶಪೂರ್ವಕವಾಗಿ ಅಡ್ಡಾದಿಡ್ಡಿ ಸ್ಕೂಟರ್‌ ಚಲಾಯಿಸುತ್ತಾ ಆಂಬುಲೆನ್ಸ್‌ಗೆ ಸೈಡ್‌ ಕೊಡದೆ ಸತಾಯಿಸಿದ ವಿಡಿಯೋ ಸೋಷಿಯಲ್‌

ಆಂಬುಲೆನ್ಸ್‌ಗೆ ಸೈಡ್‌ ಕೊಡದ ಸ್ಕೂಟರ್‌ ಸವಾರ ಸೆರೆ Read More »

error: Content is protected !!
Scroll to Top