ಸುದ್ದಿ

ಡಾ|| ಡಿ. ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬ: ಅಶಕ್ತ ಕುಟುಂಬಕ್ಕೆ ಧನಸಹಾಯ, ದಿನಬಳಕೆ ‌ಸಾಮಾಗ್ರಿ ವಿತರಣೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಪೆರ್ನೆ ವಲಯದ ಪೆರ್ನೆ- ಅರ್ಬಿ ಎಂಬಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ಬಾಲಕೃಷ್ಣ ಗೌಡ ಮತ್ತು ತಿಮ್ಮಕ್ಕ ದಂಪತಿಯ ಕುಟುಂಬಕ್ಕೆ ಪೆರ್ನೆ ಶೌರ್ಯ ಘಟಕ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ತುರ್ತು ಧನಸಹಾಯ ಮತ್ತು ದಿನ ಬಳಕೆ ಸಾಮಾಗ್ರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸದಸ್ಯ ನವೀನ್ ಕುಮಾರ್ ಪದಬರಿ, […]

ಡಾ|| ಡಿ. ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬ: ಅಶಕ್ತ ಕುಟುಂಬಕ್ಕೆ ಧನಸಹಾಯ, ದಿನಬಳಕೆ ‌ಸಾಮಾಗ್ರಿ ವಿತರಣೆ Read More »

ಶತಕದತ್ತ ಮುನ್ನುಗ್ಗುತ್ತಿರುವ ಟೊಮೆಟೊ ಬೆಲೆ

ದಿಢೀರ್‌ ಏರಿಕೆಯಿಂದ ರೈತರು ಖುಷ್‌; ಗ್ರಾಹಕರು ಕಂಗಾಲು ಮಂಗಳೂರು: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ರೈತರು ಖುಷ್‌ ಆಗಿದ್ದರೆ ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ತಿಂಗಳು 20-30 ರೂ. ಇದ್ದ ಕೆ.ಜಿ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿ ಈಗ ಶತಕದತ್ತ ಮುನ್ನಗ್ಗುತ್ತಿದೆ. ಕಳೆದ 8-10 ದಿನಗಳಲ್ಲಿ ಟೊಮೆಟೊ ಬೆಲೆ ತೀವ್ರ ಏರಿಕೆ ಕಂಡಿದ್ದು, 80ರಿಂದ 90 ರೂ. ತಲುಪಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.

ಶತಕದತ್ತ ಮುನ್ನುಗ್ಗುತ್ತಿರುವ ಟೊಮೆಟೊ ಬೆಲೆ Read More »

ಕುರ್ಚಿ ಕಿತ್ತಾಟದ ನಡುವೆ ಮಾರ್ಮಿಕ ಸಂದೇಶ ಪೋಸ್ಟ್‌ ಮಾಡಿದ ಡಿಕೆಶಿ

ರಾಜಕೀಯಕ್ಕೆ ಹೊಸ ತಿರುವು ನೀಡುತ್ತಾ ಈ ಸಂದೇಶ? ಬೆಂಗಳೂರು : ಮುಖ್ಯಮಂತ್ರಿ ಪಟ್ಟಕ್ಕಾಗಿ ಇನ್ನಿಲ್ಲದಂತೆ ಪ್ರಯತ್ನಪಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಂದು ಪೋಸ್ಟ್‌ ಮಾಡಿರುವ ಸಂದೇಶವೊಂದು ಬಹಳ ಮಾರ್ಮಿಕವಾಗಿದ್ದು, ಅನೇಕ ಕಾರಣಗಳಿಗಾಗಿ ಗಮನ ಸೆಳೆದಿದೆ. ಸಂಚಲನಕ್ಕೂ ಕಾರಣವಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿ.ಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ

ಕುರ್ಚಿ ಕಿತ್ತಾಟದ ನಡುವೆ ಮಾರ್ಮಿಕ ಸಂದೇಶ ಪೋಸ್ಟ್‌ ಮಾಡಿದ ಡಿಕೆಶಿ Read More »

ಕರಾಟೆ: ದೀಪ್ತ ಡಿ.ಕೆ. ಸುಳ್ಯದಲ್ಲಿ ಪ್ರಥಮ, ಮಂಗಳೂರಿನಲ್ಲಿ ದ್ವಿತೀಯ

ಪುತ್ತೂರು: ಸುಳ್ಯದಲ್ಲಿ ನಡೆದ ಇಂಪ್ಯಾಕ್ಟ್ ಆರ್ಟ್ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನಡೆಸಿದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್ 2025ರ ಸ್ಪರ್ಧೆಯಲ್ಲಿ IKMA ಪುತ್ತೂರು ಸಂಸ್ಥೆಯ ವಿದ್ಯಾರ್ಥಿನಿ ಕು. ದೀಪ್ತ ಡಿ.ಕೆ. ಕಟಾ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಹಾಗೆಯೇ ಮಂಗಳೂರಿನ ಫಾ. ಮುಲ್ಲರ್ ಒಳಾಂಗಡ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತ ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್ 2025-26 ರಲ್ಲಿ ಪಾಯಿಂಟ್ ಫೈಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅವರು IKMA

ಕರಾಟೆ: ದೀಪ್ತ ಡಿ.ಕೆ. ಸುಳ್ಯದಲ್ಲಿ ಪ್ರಥಮ, ಮಂಗಳೂರಿನಲ್ಲಿ ದ್ವಿತೀಯ Read More »

ಶ್ವೇತಭವನದ ಬಳಿಯೇ ಸೈನಿಕರ ಮೇಲೆ ಉಗ್ರನಿಂದ ದಾಳಿ

ಇದು ಭಯೋತ್ಪಾದನಾ ಕೃತ್ಯ ಎಂದು ಘೋಷಿಸಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನದ ಬಳಿಯೇ ಇಬ್ಬರು ಸೈನಿಕರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಅಮೆರಿಕಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಇಬ್ಬರು ರಾಷ್ಟ್ರೀಯ ಗಾರ್ಡ್ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ದಾಳಿ ನಡೆಸಿದಾತ ಅಫಘಾನಿಸ್ಥಾನ ಮೂಲದ ಭಯೋತ್ಪಾದಕ ಎನ್ನಲಾಗಿದೆ. ಗಾಯಗೊಂಡ ಇಬ್ಬರು ಸೈನಿಕರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಭಯೋತ್ಪಾದನಾ ಕೃತ್ಯ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಅಧ್ಯಕ್ಷ

ಶ್ವೇತಭವನದ ಬಳಿಯೇ ಸೈನಿಕರ ಮೇಲೆ ಉಗ್ರನಿಂದ ದಾಳಿ Read More »

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೈಲಿನಲ್ಲೇ ಕೊಲೆ?

ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ಕೊಲೆ ಮಾಡಿಸಿದ್ದಾರೆ ಎಂದು ವರದಿ ಇಸ್ಲಾಮಾಬಾದ್: ಭ್ರಷ್ಟಾಚಾರದ ಆರೋಪದಡಿ ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲೇ ನಿಗೂಢವಾಗಿ ಕೊಲೆಮಾಡಲಾಗಿದೆ ಎಂಬ ಸುದ್ದಿಯೊಂದು ನಿನ್ನೆಯಿಂದೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಫಘಾನಿಸ್ಥಾನದ ಮಾಧ್ಯಮಗಳಲ್ಲಿ ಇಮ್ರಾನ್‌ ಖಾನ್‌ ಕೊಲೆಯಾಗಿರುವ ಸುದ್ದಿ ಪ್ರಕಟವಾಗಿದೆ ಎನ್ನಲಾಗುತ್ತಿದೆ. ಪಾಕ್‌ನ ಸೇನಾ ದಂಡನಾಯಕ ಅಸೀಮ್‌ ಮುನೀರ್‌ ಅವರೇ ಈ ಕೊಲೆಯನ್ನು ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಇಮ್ರಾನ್‌ ಕೊಲೆ ಸುದ್ದಿ ಪಾಕಿಸ್ತಾನದ ಸಾಮಾಜಿಕ ವಲಯದಲ್ಲಿ ಭಾರೀ ಸಂಚಲನ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೈಲಿನಲ್ಲೇ ಕೊಲೆ? Read More »

ಹಾಂಕಾಂಗ್‌ ಗಗನಚುಂಬಿ ಕಟ್ಟಡಗಳಲ್ಲಿ ಭೀಕರ ಬೆಂಕಿ ದುರಂತ : 44 ಮಂದಿ ಸಜೀವ ದಹನ

7 ಬಹುಮಹಡಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ; 279 ಮಂದಿ ನಾಪತ್ತೆ ಹಾಂಕಾಂಗ್‍: ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯಲ್ಲಿ ಹಲವು ಗಗನಚುಂಬಿ ಕಟ್ಟಡಗಳಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 44 ಮಂದಿ ಸಜೀವ ದಹನವಾಗಿದ್ದು, 270ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಬೆಂಕಿ ಆಕಸ್ಮಿಕಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅನೇಕ ಗಗನಚುಂಬಿ ಕಟ್ಟಡಗಳಿರುವ ಬೃಹತ್‌ ವಸತಿ ಸಮುಚ್ಚಯದಲ್ಲಿ ಬುಧವಾರ ಈ ಭೀಕರ ದುರಂತ ಸಂಭವಿಸಿದ್ದು, ಕನಿಷ್ಠ 7 ಗಗನಚುಂಬಿ ಕಟ್ಟಡಗಳು ಬೆಂಕಿಯಿಂದ ಸಂಪೂರ್ಣ ನಾಶವಾಗಿವೆ. ರಕ್ಷಣಾ ಕಾರ್ಯ

ಹಾಂಕಾಂಗ್‌ ಗಗನಚುಂಬಿ ಕಟ್ಟಡಗಳಲ್ಲಿ ಭೀಕರ ಬೆಂಕಿ ದುರಂತ : 44 ಮಂದಿ ಸಜೀವ ದಹನ Read More »

ಧರ್ಮಸ್ಥಳದಲ್ಲಿ ಭಕ್ತರ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಕಳ್ಳಿಯರ ಬಂಧನ

ಭಕ್ತರ ಸೋಗಿನಲ್ಲಿ ಬಂದು ಚಿನ್ನಾಭರಣ ಎಗರಿಸುತ್ತಿದ್ದ ತಾಯಿ-ಮಗಳು ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಸುಮಾರು 5.32 ಲಕ್ಷ ರೂ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ 2ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬೀಬಿಜಾನ್ (59) ಮತ್ತು ಮಗಳು ಮಸಾಭಿ ಅಲಿಯಾಸ್‌ ಆರತಿ (34) ಸೆರೆಯಾದ ಕಳ್ಳಿಯರು. ಆಂಧ್ರ ಪ್ರದೇಶದ ನೆಲ್ಲೂರು ನಿವಾಸಿ ಜೆ.ಲತಾ ಅವರು ಕುಟುಂಬ

ಧರ್ಮಸ್ಥಳದಲ್ಲಿ ಭಕ್ತರ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಕಳ್ಳಿಯರ ಬಂಧನ Read More »

ಪತ್ನಿ ಜೊತೆ ಮೊಬೈಲ್ ಸಂಪರ್ಕದಲ್ಲಿದ್ದ ಸ್ನೇಹಿತ: ಗ್ಯಾರೇಜ್ ಮಾಲೀಕ ಆತ್ಮಹತ್ಯೆ

ಕಡಬ: ಪತ್ನಿ ತನ್ನ ಗೆಳೆಯನ ಜೊತೆ ಮೊಬೈಲ್ ಸಂಪರ್ಕದಲ್ಲಿ ಇದ್ದಾಳೆಂದು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದ ಗ್ಯಾರೇಜ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಕುಟ್ರುಪ್ಪಾಡಿ ನಿವಾಸಿ ರಾಕೇಶ್(36) ಎಂಬವರೇ ಮೃತ ದುರ್ದೈವಿ. ರಾಕೇಶ್ ಅವರು ಕಳಾರದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ಹೊಂದಿದ್ದರು. ರಾಕೇಶ್ ಅವರ ಪತ್ನಿಯ ಜೊತೆಗೆ ಅವರ ಸ್ನೇಹಿತ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ವಿಷಯ ಅವರ ಗಮನಕ್ಕೆ ಬಂದಿತ್ತು. ಈ ವಿಚಾರವಾಗಿ ತೀವ್ರವಾಗಿ ನೊಂದಿದ್ದ ಅವರು ಅಮಲು ಪದಾರ್ಥದ ಜೊತೆಗೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಪತ್ನಿ ಜೊತೆ ಮೊಬೈಲ್ ಸಂಪರ್ಕದಲ್ಲಿದ್ದ ಸ್ನೇಹಿತ: ಗ್ಯಾರೇಜ್ ಮಾಲೀಕ ಆತ್ಮಹತ್ಯೆ Read More »

ಪೋಕ್ಸೋ ಪ್ರಕರಣ: ಮುರುಘಾಶ್ರೀ ನಿರ್ದೋಷಿ ಎಂದ ಕೋರ್ಟ್

ಬೆಂಗಳೂರು: ಮುರುಘಾ ಮಠದ ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪಿತ್ತಿದೆ. 2022ರ ಆಗಸ್ಟ್ 26 ರಂದು ಮೈಸೂರಿನ (Mysuru) ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 ವರ್ಷಗಳ ಸುದೀರ್ಘ ತನಿಖೆ ಬಳಿಕ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್‌ ಅವರಿದ್ದ ಪೀಠ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಮೊದಲ ಪ್ರಕರಣ ಖುಲಾಸೆಯಾಗಿದೆ. ಚಿತ್ರದುರ್ಗದ

ಪೋಕ್ಸೋ ಪ್ರಕರಣ: ಮುರುಘಾಶ್ರೀ ನಿರ್ದೋಷಿ ಎಂದ ಕೋರ್ಟ್ Read More »

error: Content is protected !!
Scroll to Top