ಸುದ್ದಿ

ಮಲ್ಪೆ ಕಡಲ ತೀರದಲ್ಲಿ ಮೋದಿಯ ಸ್ವಾಗತಕ್ಕೆ ಆಕರ್ಷಕ ಮರಳು ಶಿಲ್ಪ ರಚನೆ

ಇಂದು ಕರಾವಳಿ ಪೂರ್ತಿ ಮೋದಿಮಯ ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಕಲಾವಿದರು ಮೋದಿ ಸ್ವಾಗತಕ್ಕೆ ವಿಶೇಷ ಆಕರ್ಷಕ ಮರಳಿನ ಕಲಾಕೃತಿ ರಚಿಸಿದ್ದಾರೆ. ಸ್ಯಾಂಡ್ ಥೀಮ್ ಕಲಾವಿದರು ಮರಳು ಶಿಲ್ಪ ರಚಿಸಿದ್ದು, ಕಡೆಗೋಲು ಕೃಷ್ಣನ ಜೊತೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ರಚಿಸಲಾಗಿದೆ. ಮರಳಿನ ಚಿತ್ರಕ್ಕೆ ಬಣ್ಣ ಕೊಡಲಾಗಿದೆ. ಕಲಾವಿದ ಹರೀಶ್ ಸಾಗ ಮತ್ತು ತಂಡದವರು ನಿನ್ನೆ ದಿನವಿಡೀ ಪರಿಶ್ರಮ ಪಟ್ಟು ಇದನ್ನು ಮಾಡಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠಕ್ಕೆ […]

ಮಲ್ಪೆ ಕಡಲ ತೀರದಲ್ಲಿ ಮೋದಿಯ ಸ್ವಾಗತಕ್ಕೆ ಆಕರ್ಷಕ ಮರಳು ಶಿಲ್ಪ ರಚನೆ Read More »

ಬಿಜೆಪಿ ಹುದ್ದೆಯಿಂದ ಪುತ್ತಿಲ ಪರಿವಾರದವರಿಗೆ ಕೊಕ್‌

ಪುತ್ತೂರು ರಾಜಕೀಯದಲ್ಲಿ ಕುತೂಹಲ ಕೆರಳಿಸಿದ ದಿಢೀರ್‌ ಬೆಳವಣಿಗೆ ಪುತ್ತೂರು: ಪುತ್ತೂರಿನ ಗ್ರಾಮಾಂತರ ಮತ್ತು ನಗರ ಮಂಡಲಗಳನ್ನು ಐಕ್ಯಗೊಳಿಸಿ ಅಖಂಡ ಪುತ್ತೂರು ಮಂಡಲ ರಚಿಸಿ ನನನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಪುತ್ತೂರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮುಂದಿಟ್ಟಿದ್ದ ಬೇಡಿಕೆಯನ್ನು ಜಿಲ್ಲಾ ಬಿಜೆಪಿ ನಿರಾಕರಿಸಿದ ಬೆನ್ನಲ್ಲೇ, ಇದೀಗ ಪುತ್ತಿಲ ಪರಿವಾರಕ್ಕೆ ಮತ್ತೊಂದು ಶಾಕ್‌ ನೀಡಿದೆ. ಪುತ್ತಿಲ ಪರಿವಾರದಿಂದ ಬಿಜೆಪಿ ಪದಾಧಿಕಾರಿ ಹುದ್ದೆಗೆ ಸ್ಥಳಾಂತರಗೊಂಡಿದ್ದ ಮೂವರನ್ನು ಆ ಹುದ್ದೆಗಳಿಂದ

ಬಿಜೆಪಿ ಹುದ್ದೆಯಿಂದ ಪುತ್ತಿಲ ಪರಿವಾರದವರಿಗೆ ಕೊಕ್‌ Read More »

ಲಂಚ ಸ್ವೀಕರಿಸಿದ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಹೊರಗುತ್ತಿಗೆ ನೌಕರನ ಸಂಬಳ ನೀಡಲು ಲಂಚ ಕೇಳಿದ್ದ ಭ್ರಷ್ಟ ಅಧಿಕಾರಿಗಳು ಮಂಗಳೂರು: ಹೊರಗುತ್ತಿಗೆ ನೌಕರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಮೂವರು ಅಧಿಕಾರಿಗಳನ್ನು ಗುರುವಾರ ಬಂಧಿಸಿದ್ದಾರೆ. ಉಳ್ಳಾಲ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಬಿ.ಕೆ. ರಾಜು ಮತ್ತು ಸರ್ವೆ ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಗಳು. ಬಾಕಿ ಇರುವ ಸಂಬಳದ ಬಿಲ್ ಮಾಡಿಕೊಡಲು

ಲಂಚ ಸ್ವೀಕರಿಸಿದ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ Read More »

ಸ್ಪೀಕರ್‌ ಖಾದರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ

ಡಾಕ್ಟರ್‌ ಆಗುವ ಕನಸು ನನಸಾಯಿತು ಎಂದು ಖುಷಿಪಟ್ಟ ಖಾದರ್‌ ಬೆಂಗಳೂರು: ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಖಾದರ್‌, ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸ್ವೀಕರಿಸಿರುವುದು ಸಾಕಷ್ಟು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯಿಂದ ಗೌರವದ ಜೊತೆಗೆ ಜವಾಬ್ದಾರಿ ಕೂಡ

ಸ್ಪೀಕರ್‌ ಖಾದರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ Read More »

ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ

ಕನ್ನಡದಲ್ಲೇ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡ ಪ್ರಧಾನಿ ಉಡುಪಿ : ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶ್ರೀಕೃಷ್ಣ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ಇದಕ್ಕೂ ಮೊದಲು ಉಡುಪಿಯಲ್ಲಿ ರೋಡ್‌ಶೋ ನಡೆಯಲಿದೆ. ಜನರು ಮುಂಜಾನೆಯಿಂದಲೇ ಉಡುಪಿಯತ್ತ ಹೋಗಲಾರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಉಡುಪಿಯ ಭೇಟಿಗೆ ಕಾತರರಾಗಿದ್ದು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ ಎಂದು

ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ Read More »

15 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದ ಪಾಪಿಗಳು

ಬೆಂಗಳೂರು: ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದ ಘಟನೆ ರಾಜ್ಯ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಕವನ ಎಂಬ ಬಾಲಕಿಯೇ ಮೃತ ದುರ್ದೈವಿ. ಬೆಂಗಳೂರು ದಕ್ಷಿಣ ಜಿಲ್ಲೆಯ ಬೋಳಾರೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬಾಲಕಿ ಕವನ ನಿನ್ನೆ ಮಧ್ಯಾಹ್ನ ಬಹಿರ್ದೆಸೆಗೆ ಎಂದು ತೆರಳಿದ್ದಳು. ಆದರೆ ಸಂಜೆಯಾದರೂ ಆಕೆ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆ ಹುಡುಕಾಟ ನಡೆಸಿದಾಗ ಆಕೆಯ ಮೃತದೇಹ ಪತ್ತೆಯಾಗಿದೆ. ಬಾಲಕಿಗೆ ತಾಯಿ ಇಲ್ಲವಾಗಿದ್ದು, ಸಾವಿತ್ರಮ್ಮ ಎಂಬವರ ಜೊತೆ ವಾಸವಿದ್ದಳು. ಬಾಲಕಿಯ ತಂದೆ

15 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದ ಪಾಪಿಗಳು Read More »

ಮಂಗಳೂರು ಯಕ್ಷಾoಗಣ ತಾಳಮದ್ದಳೆ ಸಪ್ತಾಹ : ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ತಂಡದಿಂದ ಶಲ್ಯ ಪರ್ವ

ಕರ್ನಾಟಕ ಯಕ್ಷ ಭಾರತಿ ಪುತ್ತೂರು (ರಿ ) ಪುತ್ತೂರು ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯಕ್ಷಾಂಗಣ ಮಂಗಳೂರು ಸಹಯೋಗದಲ್ಲಿ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ತೆರಗಿದ 13ನೇ ವರ್ಷದ ತಾಳಮದ್ದಳೆ ಸಪ್ತಾಹದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ (ರಿ) ತಂಡದಿಂದ ಶಲ್ಯ ಪರ್ವ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸಂತೋಷ್ ಕುಮಾರ್ ಹರಿಹರ ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ಶ್ರೀಪತಿ

ಮಂಗಳೂರು ಯಕ್ಷಾoಗಣ ತಾಳಮದ್ದಳೆ ಸಪ್ತಾಹ : ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ತಂಡದಿಂದ ಶಲ್ಯ ಪರ್ವ Read More »

ಸೀರೆ ಬೈಕ್ ಟಯರ್‌ಗೆ ‌ಸುತ್ತಿ ರಸ್ತೆಗೆಸೆಯಲ್ಪಟ್ಟ ಮಹಿಳೆ

ಮಂಗಳೂರು: ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಸೀರೆ ಟಯರ್‌ಗೆ ಸುತ್ತಿದ ಪರಿಣಾಮ ಮಹಿಳೆ ರಸ್ತೆಗೆ ಎಸೆಯಲ್ಪಟ್ಟ ಘಟನೆ ಸುರತ್ಕಲ್‌ನ ಕಾನ ಎಂಬಲ್ಲಿ ನಡೆದಿದೆ. ಮಹಿಳೆ ತಮ್ಮ ಪುತ್ರನ ಜೊತೆಗೆ ಬೈಕಿನಲ್ಲಿ ಹೋಗುತ್ತಿದ್ದರು. ಅವರ ಸೀರೆ ಟಯರ್‌ಗೆ ಸುತ್ತಿದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬಸ್‌ ಒಂದರ ಚಾಲಕ ಮೊಯ್ದಿ ಎಂಬವರು ಬಸ್ಸು ನಿಲ್ಲಿಸಿ, ರಸ್ತೆಗೆಸೆಯಲ್ಪಟ್ಟ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವುದಕ್ಕೆ ನೆರವಾಗಿದ್ದು, ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೀರೆ ಬೈಕ್ ಟಯರ್‌ಗೆ ‌ಸುತ್ತಿ ರಸ್ತೆಗೆಸೆಯಲ್ಪಟ್ಟ ಮಹಿಳೆ Read More »

ಪತಿ ಮತ್ತು ಪತಿ ಮನೆಯವರಿಂದ ವರದಕ್ಷಿಣೆ ಕಿರುಕುಳ: ನಾಲೆಗೆ ಹಾರಿದ ಮಹಿಳೆ

ಶಿವಮೊಗ್ಗ: ವರದಕ್ಷಿಣೆ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬರು ಭದ್ರಾ ಬಲದಂಡೆ ನಾಲೆಗೆ ಹಾರಿದ ಘಟನೆ ನಡೆದಿದೆ. ಗಂಡ ಮತ್ತು ಆತನ ಮನೆಯವರಿಂದ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದ ಮಹಿಳೆ ನಾಲೆಗೆ ಹಾರಿರುವುದಾಗಿದೆ. ಘಟನೆ ನಡೆದು ಮೂರು ದಿನಗಳಾಗಿದ್ದರೂ ನಾಲೆಗೆ ಹಾರಿದ ಮಹಿಳೆ ಪತ್ತೆಯಾಗಿಲ್ಲ. ನಾಲೆಗೆ ಹಾರಿದ ಮಹಿಳೆಯನ್ನು ಲತಾ ಎಂದು ಗುರುತಿಸಲಾಗಿದೆ. ಈ ವಿಷಯ ತಿಳಿದು ಪತಿ ಗುರುರಾಜ್ ತನ್ನ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ. ಗುರುರಾಜ್ ಸರ್ಕಾರಿ ಕೆಲಸದಲ್ಲಿದ್ದ. ಆತನಿಗೆ ಮದುವೆಯ ಸಮಯದಲ್ಲಿ ಭರ್ಜರಿ ವರದಕ್ಷಿಣೆ

ಪತಿ ಮತ್ತು ಪತಿ ಮನೆಯವರಿಂದ ವರದಕ್ಷಿಣೆ ಕಿರುಕುಳ: ನಾಲೆಗೆ ಹಾರಿದ ಮಹಿಳೆ Read More »

ಹೃದಯಾಘಾತದಿಂದ ಪುತ್ತೂರಿನ ಯುವಕ ಬೆಂಗಳೂರಿನಲ್ಲಿ ನಿಧನ

ಪುತ್ತೂರು: ಪಡ್ನೂರು ಪಂಜಿಗುಡ್ಡೆಯ ನಿವಾಸಿ ಯುವಕನೊಬ್ಬ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಕೆನರಾ ಬ್ಯಾಂಕಿನ ಪುತ್ತೂರು ಶಾಖೆಯ ಸಿಬ್ಬಂದಿ ತನಿಯಪ್ಪ ನಾಯ್ಕ್ ಎಂಬವರ ಪುತ್ರ ಗುರುರಾಜ್ (22) ಎಂಬವರೇ ‌ಮೃತ ದುರ್ದೈವಿ. ಗುರುರಾಜ್ ಬೆಂಗಳೂರಿನ ಕಿಸ್ಕೋ ಕಂಪನಿಯಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಿ.ಜಿ. ಯಲ್ಲಿ ವಾಸವಿದ್ದರು. ರಾತ್ರಿ ಪಾಳಿಯಲ್ಲಿ ‌ಕೆಲಸ‌ ಮಾಡುತ್ತಿದ್ದ ಅವರು ಕೆಲಸಕ್ಕೆ ಹೊರಡುವ ಮೊದಲು ಬಾತ್ ರೂಂ‌ಗೆ ಹೋಗಿದ್ದಾರೆ. ಅದೇ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಆದರೆ ರೂಮ್‌ನಲ್ಲಿ ಯಾರೂ ಇರದೇ

ಹೃದಯಾಘಾತದಿಂದ ಪುತ್ತೂರಿನ ಯುವಕ ಬೆಂಗಳೂರಿನಲ್ಲಿ ನಿಧನ Read More »

error: Content is protected !!
Scroll to Top