ಸುದ್ದಿ

ಹಾರಾಡಿಯಲ್ಲಿ ಕಲನ 2025

ಪುತ್ತೂರು: ಇಲ್ಲಿನ ಹಾರಾಡಿಯಲ್ಲಿರುವ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಾರಥ್ಯದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಹಯೋಗದೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ‘ಕಲನ 2025’ ವ್ಯವಸ್ಥಿತವಾಗಿ ಉದ್ಘಾಟನೆಗೊಂಡಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಲೋಚನಿಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರು ನೆರವೇರಿಸಿದರು. ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ವಿಜಯಿಗಳಾಗಿ ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು. ಸಭಾಧ್ಯಕ್ಷರು ಮಾತನಾಡಿ ಸರ್ವರ ಸಹಕಾರ ಕೋರಿದರು. ವೇದಿಕೆಯಲ್ಲಿ ತಾಲೂಕು […]

ಹಾರಾಡಿಯಲ್ಲಿ ಕಲನ 2025 Read More »

ಒಂದು ತಿಂಗಳೊಳಗೆ ಕನ್ನಡ ನಾಮಫಲಕ ಅಳಡಿಕೆ ಕಡ್ಡಾಯ : ಸಚಿವ ತಂಗಡಗಿ

ನಿಯಮ ಉಲ್ಲಂಘಿಸಿದರೆ 20 ಸಾವಿರ ರೂ. ದಂಡ ಬೆಳಗಾವಿ: ಕರ್ನಾಟಕಾದ್ಯಂತ ಎಲ್ಲ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಟ್ರಸ್ಟ್ ನಡೆಸುವ ಸಂಸ್ಥೆಗಳು, ಆಸ್ಪತ್ರೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ ಗಳು ಸೇರಿದಂತೆ ಸಲ್ಲ ಸಂಸ್ಥಾಪನೆಗಳಲ್ಲಿ ಒಂದು ತಿಂಗಳೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಆದಷ್ಟೂ ಬೇಗ ರಾಜ್ಯದಲ್ಲಿ ನಿಯಮ ಸಂಪೂರ್ಣ ಅನುಷ್ಠಾನಕ್ಕೆ

ಒಂದು ತಿಂಗಳೊಳಗೆ ಕನ್ನಡ ನಾಮಫಲಕ ಅಳಡಿಕೆ ಕಡ್ಡಾಯ : ಸಚಿವ ತಂಗಡಗಿ Read More »

ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆಯೊಡ್ಡಿದ 13 ವರ್ಷದ ಬಾಲಕಿ!

ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬಂದಿದ್ದ ಬೆದರಿಕೆ ಇ-ಮೇಲ್‌ ಬೆಂಗಳೂರು : ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಬಂದಿದ್ದ ಅನಾಮಧೇಯ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶದ ಮೂಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಕರೆ ಕಳುಹಿಸಿದ ವ್ಯಕ್ತಿಯನ್ನು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದಾರೆ. ಪೊಲೀಸ್ ತನಿಖೆಯ ವೇಳೆ ಈ ಬಾಂಬ್ ಬೆದರಿಕೆ ಇ-ಮೇಲ್ ತಮಿಳುನಾಡಿನ ಮೈಲಾಪುರದ 13 ವರ್ಷದ ಬಾಲಕಿಯಿಂದ ಬಂದಿರುವುದು ಗೊತ್ತಾಗಿದೆ. ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಈ ಇ-ಮೇಲ್

ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆಯೊಡ್ಡಿದ 13 ವರ್ಷದ ಬಾಲಕಿ! Read More »

ಜಾತಕ ತೋರಿಸಲು ಬಂದ ಯುವತಿಯ ಬೆನ್ನುಬಿದ್ದ ಜ್ಯೋತಿಷಿ!

ಮದುವೆಯಾಗುವಂತೆ ಒತ್ತಾಯಿಸಿ ಮಾಟಮಂತ್ರ ಮಾಡಿದ ಜ್ಯೋತಿಷಿಯನ್ನು ಬಂಧಿಸಿದ ಪೊಲೀಸರು ಬೆಳ್ತಂಗಡಿ: ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದ ಜ್ಯೋತಿಷಿಯೊಬ್ಬ ಯುವತಿಗೆ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ್ದಲ್ಲದೆ ಅವರ ಮನೆಗೆ ತೆರಳಿ ವಾಮಾಚಾರ ಮಾಡಿದ್ದು ಈ ಬಗ್ಗೆ ಪೊಲೀಸರಿಗೆ ಮನೆಯವರು ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ. ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ ಶೇಷಾದ್ರಿ ಎಂಬಾತನೇ ಆರೋಪಿ ಜ್ಯೋತಿಷಿಯಾಗಿದ್ದಾನೆ. ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು

ಜಾತಕ ತೋರಿಸಲು ಬಂದ ಯುವತಿಯ ಬೆನ್ನುಬಿದ್ದ ಜ್ಯೋತಿಷಿ! Read More »

ಪಾಕಿಸ್ತಾನದ ವಿವಿಯಲ್ಲಿ ಸಂಸ್ಕೃತ ಕೋರ್ಸ್‌!

ಸಾಂಸ್ಕೃತಿಕ ಪರಂಪರೆಗೆ ಮರುಸಂಪರ್ಕ ಸಾಧಿಸಲು ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಕೆ ಇಸ್ಲಾಮಾಬಾದ್‌: ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ಕೋರ್ಸ್ ಆರಂಭಿಸಿ ಸುದ್ದಿಯಾಗಿದೆ. ಲಾಹೋರ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯ 1947ರ ನಂತರ ಮೊದಲ ಬಾರಿಗೆ ಭಗವದ್ಗೀತೆ ಶ್ಲೋಕ ಮತ್ತು ಮಹಾಭಾರತವನ್ನು ಪರಿಚಯಿಸಿದ್ದು ನಾಲ್ಕು ಕೋರ್ಸ್ ಪ್ರಾರಂಭಿಸಿದೆ. ವಿಶ್ವವಿದ್ಯಾಲಯ ಮೂರು ತಿಂಗಳ ಹಿಂದೆ ವಾರಾಂತ್ಯದಲ್ಲಿ ಸಂಸ್ಕೃತ ಕಾರ್ಯಾಗಾರ ಯೋಜಿಸಿತ್ತು. ಈ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳಿಂದ ಮತ್ತು ವಿದ್ವಾಂಸರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಪೂರ್ಣ ಪ್ರಮಾಣದ ಕೋರ್ಸ್‌ ಆರಂಭಿಸಿದೆ. ಈ

ಪಾಕಿಸ್ತಾನದ ವಿವಿಯಲ್ಲಿ ಸಂಸ್ಕೃತ ಕೋರ್ಸ್‌! Read More »

ಸುಳ್ಯ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸಾವು

ಸುಳ್ಯ : ಮೈಸೂರಿನ ಮಳವಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪ ನಾಯ್ಕ ಎಂಬವರ ಪುತ್ರ ದೀಕ್ಷಿತ್ (25) ಮೃತಪಟ್ಟವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ದೀಕ್ಷಿತ್ ಬೆಂಗಳೂರಿನಿಂದ ಕಂದಡ್ಕದ ಕಲ್ಟಾರಿನ ತನ್ನ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರ ಗಾಯಗೊಂಡ ದೀಕ್ಷಿತ್‌ರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ

ಸುಳ್ಯ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸಾವು Read More »

ನರೇಗಾ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ

ಕೆಲಸದ ದಿನ, ಕೂಲಿ ಹೆಚ್ಚಳ ನವದೆಹಲಿ: ಸರ್ಕಾರದ ಬಡವರ ಪರವಾದ ಮಹತ್ವದ ಯೋಜನೆಯಾಗಿರುವ ನರೇಗಾದ ಹೆಸರು ಇನ್ನು ಬದಲಾಗಲಿದೆ. ಈ ಯೋಜನೆಗೆ ಹಲಕವು ಬದಲಾವಣೆಗಳೊಂದಿಗೆ ʻಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆʼ ಎಂದು ಹೆಸರಿಡಲು ಕೇಂದ್ರ ಸರ್ಕಾರ ಅನುಮೋದಿಸಿದೆ. ನರೇಗಾಕ್ಕೆ ʻಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆʼಯಾಗಿ ಮರು ನಾಮಕರಣ ಮಾಡಿಈ ಯೋಜನೆ ಅಡಿಯಲ್ಲಿ ಕನಿಷ್ಠ ಉದ್ಯೋಗ ದಿನಗಳ ಸಂಖ್ಯೆಯನ್ನು ಸರ್ಕಾರ 125 ದಿನಗಳಿಗೆ ಹೆಚ್ಚಿಸಿದೆ. ಅಲ್ಲದೆ ಕನಿಷ್ಠ ವೇತನ ದಿನಕ್ಕೆ 240 ರೂ.ಗೆ ಪರಿಷ್ಕರಿಸಲಾಗಿದೆ. ಇದಲ್ಲದೆ

ನರೇಗಾ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ Read More »

ಮತಗಳ್ಳತನ ಪ್ರಕರಣ : ಮಾಜಿ ಶಾಸಕ ಸೇರಿ 7 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನವಾದ ಆರೋಪ ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಕೃತ್ಯದಲ್ಲಿ ಪ್ರಭಾವಿ ನಾಯಕನ ಪಾತ್ರ ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಎಸ್‌ಐಟಿ ತಂಡ ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಚಾರ್ಜ್‌ಶೀಟ್ ಸಲ್ಲಿಸಿದೆ. ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ

ಮತಗಳ್ಳತನ ಪ್ರಕರಣ : ಮಾಜಿ ಶಾಸಕ ಸೇರಿ 7 ಮಂದಿ ವಿರುದ್ಧ ಚಾರ್ಜ್‌ಶೀಟ್‌ Read More »

ನ್ಯಾಯಾಧೀಶರ ಪದಚ್ಯುತಿಗೆ ಸಹಿ ಹಾಕಿದ ಕರ್ನಾಟಕ ಕಾಂಗ್ರೆಸ್‌ ಸಂಸದರ ವಿರುದ್ಧ ಆಕ್ರೋಶ

ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿದ ನ್ಯಾಯಾಧೀಶರ ಪದಚ್ಯುತಿಗೆ ಕಾಂಗ್ರೆಸ್‌ ಯತ್ನ ಬೆಂಗಳೂರು: ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಸ್ವಾಮಿನಾಥನ್ ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ಸಂವಿಧಾನದ 124ನೇ ವಿಧಿಯೊಂದಿಗೆ 217ನೇ ವಿಧಿಯ ಅಡಿಯಲ್ಲಿ ಲೋಕಸಭೆಯಲ್ಲಿ ನಿರ್ಣಯ ಮಂಡಿಸಲಾಗಿದ್ದು, ಜಡ್ಜ್​​​ ಸ್ವಾಮಿನಾಥನ್ ಪದಚ್ಯುತಿಗೆ ಮಹಾಭಿಯೋಗ ನೋಟೀಸ್‌ ನೀಡಲಾಗಿದೆ. ಈ ನೋಟೀಸ್‌ಗೆ ಕರ್ನಾಟಕದ ಕಾಂಗ್ರೆಸ್ ಸಂಸದರಾದ ಶ್ರೇಯಸ್ ಪಟೇಲ್ (ಹಾಸನ), ಪ್ರಭಾ ಮಲ್ಲಿಕಾರ್ಜುನ (ದಾವಣಗೆರೆ)

ನ್ಯಾಯಾಧೀಶರ ಪದಚ್ಯುತಿಗೆ ಸಹಿ ಹಾಕಿದ ಕರ್ನಾಟಕ ಕಾಂಗ್ರೆಸ್‌ ಸಂಸದರ ವಿರುದ್ಧ ಆಕ್ರೋಶ Read More »

ಔತಣಕೂಟ ವಿವಾದ: ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಬೆಳಗಾವಿ: ಶಾಸಕರ ಜೊತೆಗೆ ನಗರದ ಹೊರವಲಯದಲ್ಲಿ ಔತಣಕೂಟ ನಡೆಸಿದ ವಿವಾದಕ್ಕೆ ಸಂಬಂಧಿಸಿದ ಹಾಗೆ ಡಿಸಿಎಂ ‌ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಸ್ಥಳೀಯರು ಮತ್ತು ಪಕ್ಷದವರು ಪ್ರೀತಿಯಿಂದ ಆಹ್ವಾನಿಸಿದ ಕಾರಣಕ್ಕೆ ಔತಣಕೂಟದಲ್ಲಿ ಭಾಗವಹಿಸಿರುವುದಾಗಿ ಅವರು ತಿಳಿಸಿದ್ದಾರೆ. ಪ್ರತಿನಿತ್ಯ ಸ್ಥಳೀಯರು ಅಥವಾ ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಾರೆ. ಪ್ರೀತಿಯಿಂದ ಕರೆದಾಗ ಬೇಡ ಎನ್ನಲು ಆಗುವುದಿಲ್ಲ. ಆ ಕಾರಣಕ್ಕೆ ಒಂದೊಂದು ದಿನ ಒಂದೊಂದು ಕಡೆಗೆ ಔತಣಕ್ಕೆ ಹೋಗುತ್ತೇವೆ. ಇದು ಯಾವ ಔತಣ ಕೂಟವೂ ಅಲ್ಲ, ಏನೂ ಅಲ್ಲ ಎಂದು

ಔತಣಕೂಟ ವಿವಾದ: ಡಿ.ಕೆ. ಶಿವಕುಮಾರ್ ಹೇಳಿದ್ದೇನು? Read More »

error: Content is protected !!
Scroll to Top