ಸುದ್ದಿ

ಪಡ್ಡಾಯೂರಿನ ವ್ಯಕ್ತಿ ಮೃತ್ಯು

ಪುತ್ತೂರು: ನೆಹರೂ ನಗರದ ಪಡ್ಡಾಯೂರಿನವರಾದ, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ ದಾಮೋದರ ನೆಲಪ್ಪ ಅವರು ನಿಧನರಾಗಿದ್ದಾರೆ. ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತೀವ್ರವಾಗಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದ ಅವರು ಕುಚುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

ಪಡ್ಡಾಯೂರಿನ ವ್ಯಕ್ತಿ ಮೃತ್ಯು Read More »

ಎಂ‌ಬಿ‌ಎ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ನಗರದ ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರ ಎಂಬಲ್ಲಿ ಎಂಬಿಎ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಕೇರಳ ಮೂಲಕ ಜಗನ್ ಮೋಹನ್(25) ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಗನ್ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಡೆತ್‌ನೋಟ್‌ನಲ್ಲಿ ವಿಡಿಯೋ ಕಾಲ್ ಮೂಲಕ ಟಾರ್ಚರ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದು, ಮೂರು ನಂಬರ್‌ಗಳನ್ನು ‌ಸಹ ಬರೆದಿಟ್ಟಿದ್ದಾನೆ. ಫೇಕ್ ‌ವಿಡಿಯೋ‌ ಕಾಲ್‌ನಲ್ಲಿ ಹಣ ಕಳಕೊಂಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರೆತಿದೆ. 25 ಸಾವಿರ ರೂ.

ಎಂ‌ಬಿ‌ಎ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಮುಡಾ ಹಗರಣ : 22 ಕೋಟಿ ರೂ. ಲಂಚ ನುಂಗಿದ ಮಾಜಿ ಆಯುಕ್ತ

700 ಕೋ. ರೂ. ಮೌಲ್ಯದ 1,095 ನಿವೇಶನಗಳು ಅಕ್ರಮವಾಗಿ ಮಂಜೂರು ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುತ್ತಿಕೊಂಡಿದ್ದ ಮುಡಾ ಹಗರಣದ ಒಂದೊಂದೇ ಭ್ರಷ್ಟಾಚಾರ ಈಗ ಬಯಲಾಗತೊಡಗಿದೆ. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಮುಡಾದ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು ಮತ್ತು ಅದಕ್ಕಾಗಿ 22.47 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ತಿಳಿದುಬಂದಿದೆ. ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್‌ಎ) ಅಡಿಯಲ್ಲಿ ನಡೆಸಲಾದ ತನಿಖೆಯಲ್ಲಿ

ಮುಡಾ ಹಗರಣ : 22 ಕೋಟಿ ರೂ. ಲಂಚ ನುಂಗಿದ ಮಾಜಿ ಆಯುಕ್ತ Read More »

ಕೇಂದ್ರದ ಮಾಜಿ ಸಚಿವ, ಸ್ಪೀಕರ್‌ ಶಿವರಾಜ್‌ ಪಾಟೀಲ್‌ ನಿಧನ

ಗೃಹ ಸಚಿವ, ರಕ್ಷಣಾ ಸಚಿವ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್‌ ಮುಂಬಯಿ: ಕೇಂಧ್ರದ ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಿಧನರಾದರು. ಅವರಿಗೆ 91 ವರ್ಷವಾಗಿತ್ತು. ವಯೋಸಹಜ ಕಾಯಿಲೆಗಳಿಂದ ಉಂಟಾದ ದೀರ್ಘಕಾಲದ ಅನಾರೋಗ್ಯದಿಂದಾಗಿ ಪಾಟೀಲ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಪಾಟೀಲ್ 1980, 1984, 1989, 1991,

ಕೇಂದ್ರದ ಮಾಜಿ ಸಚಿವ, ಸ್ಪೀಕರ್‌ ಶಿವರಾಜ್‌ ಪಾಟೀಲ್‌ ನಿಧನ Read More »

ಬಸ್‌ ಕಂದಕಕ್ಕೆ ಉರುಳಿ ಬಿದ್ದು 9 ಪ್ರಯಾಣಿಕರು ಸಾವು

ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಬಸ್‌ ಹೈದರಾಬಾದ್‌ : ಆಂಧ್ರಪ್ರದೇಶ ಅಲ್ಲೂರು ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಟ್ಟೆಯ ರಾಶಿಯಂತೆ ಬಿದ್ದಿದ್ದವು. ಬೆಳಗಿನ ಜಾವ 5.30ರ ಸಮಯದಲ್ಲಿ ಅಲ್ಲೂರಿನ ತುಳಸಿಪಕಲು ಗ್ರಾಮದ ಬಳಿ ನಡೆದಿದೆ. ಜಿಲ್ಲಾಧಿಕಾರಿಗಳ ಪ್ರಕಾರ, ಬಸ್ಸಿನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್

ಬಸ್‌ ಕಂದಕಕ್ಕೆ ಉರುಳಿ ಬಿದ್ದು 9 ಪ್ರಯಾಣಿಕರು ಸಾವು Read More »

ಉಪ್ಪಿನಂಗಡಿ : ಅಂಗಡಿ ಡ್ರಾಯರ್‌ನಿಂದ 5 ಲ.ರೂ. ಕದ್ದಿದ್ದ ಆರೋಪಿಗಳು ಸೆರೆ

ಉಪ್ಪಿನಂಗಡಿ : ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಕೇಂದ್ರದೊಳಗೆ ಹಾಡಹಗಲೇ ನುಗ್ಗಿ ಡ್ರಾಯರ್‌ನಲ್ಲಿದ್ದ 5 ಲಕ್ಷ ರೂ ಹಾಗೂ ದಾಖಲೆ ಪತ್ರ, ಚೆಕ್‌ಗಳಿದ್ದ ಬ್ಯಾಗ್ ಅನ್ನು ದೋಚಿದ ಪ್ರಕರಣದ ಆರೋಪಿಗಳು ಸೆರೆಯಾಗಿದ್ದಾರೆ. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಈ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26) ಮತ್ತು ಜಂಶೀದ್ (25) ಬಂಧಿತ ಆರೋಪಿಗಳು.

ಉಪ್ಪಿನಂಗಡಿ : ಅಂಗಡಿ ಡ್ರಾಯರ್‌ನಿಂದ 5 ಲ.ರೂ. ಕದ್ದಿದ್ದ ಆರೋಪಿಗಳು ಸೆರೆ Read More »

ಉಪ್ಪಿನಂಗಡಿ: ಕಾರು-ಬೈಕ್‌ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯ

ಉಪ್ಪಿನಂಗಡಿ : ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ರಾತ್ರಿ ನೆಕ್ಕಿಲಾಡಿಯಲ್ಲಿ ನಡೆದಿದೆ. ಮಠ ನಿವಾಸಿ ಬದ್ರುದ್ದೀನ್ ಎಂಬವರು ಗಾಯಗೊಂಡವರು. ಬದ್ರುದ್ದೀನ್ ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸಕ್ಕಿದ್ದರೆನ್ನಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ರಾಂಗ್ ಸೈಡ್‌ನಲ್ಲಿ ಸಾಗುತ್ತಿದ್ದಾಗ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಬದ್ರುದ್ದೀನ್‌ಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಉಪ್ಪಿನಂಗಡಿ: ಕಾರು-ಬೈಕ್‌ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯ Read More »

ಬೆಳಗಾವಿಯಲ್ಲೂ ಮುಂದುವರಿದ ಕುರ್ಚಿ ಕಿತ್ತಾಟ : ಆಪ್ತರಿಗೆ ಡಿನ್ನರ್‌ ಮೀಟಿಂಗ್‌

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರಿಂದ ಆಪ್ತರಿಗೆ ಪ್ರತ್ಯೇಕವಾಗಿ ಭೋಜನ ಕೂಟ ಬೆಳಗಾವಿ : ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌ ಆಯಿತು, ಈಗ ಡಿನ್ನರ್‌ ಪಾಲಿಟಿಕ್ಸ್‌ ಸರದಿ. ಎಷ್ಟೇ ತೇಪೆ ಹಾಕಿದರೂ ಕಾಂಗ್ರೆಸ್‌ನ ಕುರ್ಚಿ ಕಿತ್ತಾಟ ಶಮನವಾಗುತ್ತಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ಶೀತಲ ಸಮರವೂ ಜೋರಾಗಿದೆ. ಸಿದ್ದರಾಮಯ್ಯ ಆಪ್ತರು ನಡೆಸಿದ ಡಿನ್ನರ್ ಸಭೆಯ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಗುರುವಾರ ರಾತ್ರಿ ಆಪ್ತರಿಗಾಗಿ ವಿಶೇಷ ಡಿನ್ನರ್ ಮೀಟಿಂಗ್ ಆಯೋಜಿಸಿದ್ದಾರೆ. ಬೆಳಗಾವಿ ಹೊರವಲಯದಲ್ಲಿರುವ

ಬೆಳಗಾವಿಯಲ್ಲೂ ಮುಂದುವರಿದ ಕುರ್ಚಿ ಕಿತ್ತಾಟ : ಆಪ್ತರಿಗೆ ಡಿನ್ನರ್‌ ಮೀಟಿಂಗ್‌ Read More »

ನಾಯಕರಿಬ್ಬರ ಸತತ ವೈಫಲ್ಯ, ದುಬಾರಿಯಾದ ಬೌಲಿಂಗ್‌

ಎರಡನೇ ಟಿ20 ಪಂದ್ಯದಲ್ಲಿ 51 ರನ್‌ಗಳಿಂದ ಹೀನಾಯವಾಗಿ ಸೋತ ಟೀಂ ಇಂಡಿಯಾ ಚಂಡೀಗಢ: ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್‌ಗಳಿಂದ ಸೋತಿದೆ. ಟೀಂ ಇಂಡಿಯಾದ ಅಗ್ರ ಕ್ರಮಾಂಕ, ವಿಶೇಷವಾಗಿ ನಾಯಕ ಸೂರ್ಯಕುಮಾರ್ ಮತ್ತು ಉಪನಾಯಕ ಶುಭ್​ಮನ್ ಗಿಲ್ ಅವರ ಕಳಪೆ ಪ್ರದರ್ಶನ ಮತ್ತು ಆರ್ಷದೀಪ್‌ ಸಿಂಗ್‌ ದುಬಾರಿ ಬೌಲಿಂಗ್‌ ಸೋಲಿಗೆ ಪ್ರಮುಖ ಕಾರಣ. ಕಟಕ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 101 ರನ್​ಗಳಿಂದ ಸೋಲಿಸಿದ್ದ ಟೀಂ

ನಾಯಕರಿಬ್ಬರ ಸತತ ವೈಫಲ್ಯ, ದುಬಾರಿಯಾದ ಬೌಲಿಂಗ್‌ Read More »

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರನ್ನು ಪ್ರಶ್ನಿಸಿದ MLC ಕಿಶೋರ್ ಕುಮಾರ್

ಪುತ್ತೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ, ಮನೆಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಕುರಿತಾಗಿ ಗೃಹಸಚಿವರನ್ನು ಕಠಿಣವಾಗಿ ಪ್ರಶ್ನಿಸಿದರು. ಅವರ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದ್ದು, ಅವರು ನೀಡಿದ ಅಧಿಕೃತ ಅಂಕಿಅಂಶಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುವಂತಿವೆ. MLC ಕಿಶೋರ್ ಪತ್ರಿಕೆಗೆ ಪ್ರತಿಕ್ರಿಯೆ ನೀಡುತ್ತಾ ಅಂಕಿ ಅಂಶಗಳ ಮೇಲೆಯೂ ಬೆಳಕು ಚೆಲ್ಲಿದ್ದು, ಕಳೆದ ಮೂರು ವರ್ಷಗಳ ಅಂಕಿಅಂಶವೇ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರನ್ನು ಪ್ರಶ್ನಿಸಿದ MLC ಕಿಶೋರ್ ಕುಮಾರ್ Read More »

error: Content is protected !!
Scroll to Top