ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ಎಂ.ಪೆರುವಾಯಿ, ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಆಯ್ಕೆ
ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಭಾಸ್ಕರ ಎಂ. ಪೆರುವಾಯಿ, ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಸಂಘದ ಎಲ್ಲಾ 11 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 11 ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಸಾಮಾನ್ಯ ಸ್ನಾನದಿಂದ ಹಾಲಿ ಉಪಾಧ್ಯಕ್ಷ ದಾಮೋದರ ಕುಲಾಲ್, ಹಾಲಿ ನಿರ್ದೇಶಕರಾದ ನಾಗೇಶ್ ಕುಲಾಲ್, ಪದ್ಮ ಕುಮಾರ್ ಎಚ್, ಬಿ.ಎಸ್ ಕುಲಾಲ್, […]