ಸುದ್ದಿ

ಕುದ್ಮಾರು ಶಾಲೆ ಎಸ್ ಡಿ ಎಂ ಸಿ ರಚನೆ | ಅಧ್ಯಕ್ಷರಾಗಿ ದೇವರಾಜ್‍ ನೂಜಿ, ಉಪಾಧ್ಯಕ್ಷರಾಗಿ  ನವ್ಯಾ ಅನ್ಯಾಡಿ ಆಯ್ಕೆ

ಕಾಣಿಯೂರು : ಕುದ್ಮಾರು ನ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿಯ ಅಧ್ಯಕ್ಷರಾಗಿ ದೇವರಾಜ್‍ ನೂಜಿ, ಉಪಾಧ್ಯಕ್ಷರಾಗಿ  ನವ್ಯಾ ಅನ್ಯಾಡಿ ಆಯ್ಕೆಯಾಗಿದ್ದಾರೆ. ಕುದ್ಮಾರು ನ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ನಾಗರಿಕ ಸೌಲಭ್ಯ ಸಮಿತಿಯ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಭಾಸ್ಕರ ಪೂಜಾರಿ ಕೊಡಂಗೆಯವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಲೋಹಿತಾಕ್ಷ ಕಡೆಂಜಿಕಟ್ಟ, ಪ್ರವೀಣ್ ಕೆರೆನಾರು, ಹಾಗೂ ಸವಣೂರು ಸಿ.ಆರ್.ಪಿ ಜಯಂತ್ […]

ಕುದ್ಮಾರು ಶಾಲೆ ಎಸ್ ಡಿ ಎಂ ಸಿ ರಚನೆ | ಅಧ್ಯಕ್ಷರಾಗಿ ದೇವರಾಜ್‍ ನೂಜಿ, ಉಪಾಧ್ಯಕ್ಷರಾಗಿ  ನವ್ಯಾ ಅನ್ಯಾಡಿ ಆಯ್ಕೆ Read More »

ದೇಶದಲ್ಲಿ ಮಾಂಸಾಹಾರ ಸೇವನೆ ನಿಷೇಧವಾಗಲಿ : ಅಚ್ಚರಿ ಹೇಳಿಕೆ ನೀಡಿದ ಟಿಎಂಸಿ ಸಂಸದ

ಸಮಾನ ನಾಗರಿಕ ಸಂಹಿತೆ ಜಾರಿ ಪರ ಬ್ಯಾಟ್‌ ಬೀಸಿದ ವಿಪಕ್ಷದ ಪ್ರಮುಖ ನಾಯಕ ಹೊಸದಿಲ್ಲಿ : ದೇಶದಲ್ಲಿ ಗೋಮಾಂಸ ಸೇವನೆ ಮಾತ್ರವಲ್ಲ ಎಲ್ಲ ರೀತಿಯ ಮಾಂಸಾಹಾರವನ್ನು ನಿಷೇಧಿಸಬೇಕು ಎನ್ನುವ ಮೂಲಕ ತೃಣಮೂಲ ಕಾಂಗ್ರೆಸ್‌ ಸಂಸದ, ಹಿರಿಯ ನಟ ಶತ್ರುಘ್ನ ಸಿನ್ಹ ಅಚ್ಚರಿ ಹುಟ್ಟಿಸಿದ್ದಾರೆ. ಅವರ ಪಕ್ಷ ಮತ್ತು ಅದರೊಂದಿಗಿರುವ ಇಂಡಿ ಮಿತ್ರಕೂಟದ ಎಲ್ಲ ಪಕ್ಷಗಳು ಗೋಮಾಂಸ ನಿಷೇಧವನ್ನೇ ವಿರೋಧಿಸುತ್ತಿರುವಾಗ ಸಿನ್ಹ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಇಷ್ಟು ಮಾತ್ರವಲ್ಲದೆ ಉತ್ತರಖಂಡದ ಬಿಜೆಪಿ ಸರಕಾರ ರಾಜ್ಯದಲ್ಲಿ ಸಮಾನ ನಾಗರಿಕ

ದೇಶದಲ್ಲಿ ಮಾಂಸಾಹಾರ ಸೇವನೆ ನಿಷೇಧವಾಗಲಿ : ಅಚ್ಚರಿ ಹೇಳಿಕೆ ನೀಡಿದ ಟಿಎಂಸಿ ಸಂಸದ Read More »

ಮಹಾಕುಂಭಮೇಳ : ಇಂದು ಪ್ರಧಾನಿ ಮೋದಿ ಪುಣ್ಯಸ್ನಾನ

ಪ್ರಯಾಗ್‌ರಾಜ್‌ : ಮಹಾಕುಂಭಮೇಳದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪುಣ್ಯಸ್ನಾನ ಮಾಡಲಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮುಳುಗೇಳುವ ಸಲುವಾಗಿ ಮೋದಿ ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ.ಮಹಾಕುಂಭಮೇಳಕ್ಕೆ ಆಗಮಿಸುವವರಿಗೆ ಕಲ್ಪಿಸಿರುವ ವ್ಯವಸ್ಥೆಗಳನ್ನು ಪರಿಶೀಲಿಸಲಿರುವ ಪ್ರಧಾನಿ ಬಳಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಧಾನಿ ಜೊತೆಗಿರುತ್ತಾರೆ. ಕೆಲವು ಪ್ರಮುಖ ಅಖಾಡಗಳ ಸಾಧು ಸಂತರೊಂದಿಗೂ ಮೋದಿ ಸಂವಾದ ನಡೆಸಲಿದ್ದಾರೆ.ಬೆಳಗ್ಗೆ 10 ಗಂಟೆಗೆ ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೋದಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಅರೈಲ್‌ಘಾಟ್‌ಗೆ ಆಗಮಿಸಿ ಅಲ್ಲಿಂದ ಬೋಟ್‌ ಮೂಲಕ

ಮಹಾಕುಂಭಮೇಳ : ಇಂದು ಪ್ರಧಾನಿ ಮೋದಿ ಪುಣ್ಯಸ್ನಾನ Read More »

ದಿಲ್ಲಿಯಲ್ಲಿ ಮತದಾನ ಶುರು : ದೇಶಾದ್ಯಂತ ಕುತೂಹಲ ಕೆರಳಿಸಿರುವ ರಾಷ್ಟ್ರ ರಾಜಧಾನಿಯ ಚುನಾವಣೆ

ಹೊಸದಿಲ್ಲಿ : ತೀವ್ರ ಕುತೂಹಲ ಕೆರಳಿಸಿರುವ ದಿಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಎಲ್ಲ 70 ವಿಧಾನಸಭಾ ಕ್ಷೇತ್ರಗಳಿಗೆ ಏಕ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಜನರು ಮೈನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಬೆಳಗ್ಗಿನಿಂದಲೇ ಮತಗಟ್ಟೆಯತ್ತ ಧಾವಿಸಿದ್ದಾರೆ.ಬೆಳಗ್ಗೆ 7 ಗಂಟೆಯಿಂದ ಸಂಜೆ 6.30ರ ವರೆಗೆ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ.ದಿಲ್ಲಿಯಲ್ಲಿ ಕಳೆದ 25 ವರ್ಷಗಳಿಂದ

ದಿಲ್ಲಿಯಲ್ಲಿ ಮತದಾನ ಶುರು : ದೇಶಾದ್ಯಂತ ಕುತೂಹಲ ಕೆರಳಿಸಿರುವ ರಾಷ್ಟ್ರ ರಾಜಧಾನಿಯ ಚುನಾವಣೆ Read More »

ಯಕ್ಷಗಾನದ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ಅಸ್ತಂಗತ

ಹಿರಿಯ ತಲೆಮಾರಿನ ಯಕ್ಷಗಾನದ ಅರ್ಥದಾರಿಗಳಲ್ಲಿ ಅಗ್ರಮಾನ್ಯರೆನಿಸಿದ ಕಲಾವಿದ ಅರ್ಥಧಾರಿ, ನಿವೃತ್ತ ಶಿಕ್ಷಕ ಕಿವಿ ಗಣಪಯ್ಯ  ಅಸೌಖ್ಯದಿಂದ  ನಿಧನರಾಗಿದ್ದಾರೆ.  ಸ್ವಾತಂತ್ರ್ಯ ಪೂರ್ವದಲ್ಲಿ 1933 ಜೂನ್ 5ರಂದು ಜನಿಸಿದ ಅವರು ಸುದೀರ್ಘ 92 ವರ್ಷಗಳ ತುಂಬು ಜೀವನವನ್ನು ನಡೆಸಿದ್ದಾರೆ.  ಅವರು ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳ ಅನೇಕ  ಸರಕಾರಿ ಶಾಲೆಗಳಲ್ಲಿ ಹಿಂದಿ ಪಂಡಿತರಾಗಿ, ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು. ದೇರಾಜೆ, ಶೇಣಿ, ಪೆರ್ಲ, ಸಾಮಗ ಮುಂತಾದ ಹಿರಿಯ ಅರ್ಥದಾರಿಗಳ ಜೊತೆಗೆ ಸರಿಸಾಟಿ ಎನಿಸಿ ಅರ್ಥಗಾರಿಕೆಯಲ್ಲಿ ಮೆರೆದ  ಕೆ.ವಿ.ಗಣಪಯ್ಯನವರು

ಯಕ್ಷಗಾನದ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ಅಸ್ತಂಗತ Read More »

ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ. ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶಂಕು ಎಂಬ

ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ Read More »

3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು

ಮಂಗಳೂರು : ಸುಮಾರು ಮೂರು ದಶಕಗಳ ಬಳಿಕ , ಅಳಿವಿನಂಚಿನ ಅತ್ಯಂತ ಅಪರೂಪದ ಕಡಲಾಮೆ ಒಲೀವ್ ರಿಡ್ಲೆ ಹೊರವಲಯದ ಸಸಿಹಿತ್ಲು ಬೀಚ್‌ ನಲ್ಲಿ ಕಂಡುಬಂದಿದೆ. ಈ ಕಡಲಾಮೆಗಳು ಕಡಲಲ್ಲಿ ಮೊಟ್ಟೆ ಇಟ್ಟಿದ್ದು ಕಂಡುಬಂದಿದೆ. ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ಕಡಲಾಮೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರು ವಿಶೇಷ ನಿಗಾ ವಹಿಸಿದ್ದಾರೆ. ಮಂಗಳೂರಿನ ಸುತ್ತ ಮುತ್ತ ಸುಮಾರು 12 ಕಡೆ ಈ ಹಿಂದೆ ಆಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಮಂಗಳೂರಿನ ಕಡಲ ತಡಿಯ ತಣ್ಣೀರು

3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು Read More »

ಕಳಿಯ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯಿತಿನ ಗ್ರಂಥಾಲಯ ಸಲಹಾ ಸಮಿತಿಯ ಮೊದಲ ಸಭೆಯು ಫೆ. 3ರಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವಾಕರ ಮೆದಿನರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಪಂಚಾಯತ್ ಕಾರ್ಯದರ್ಶಿ ಕುಂಞ ಕೆ ಅವರು ಸ್ವಾಗತಿಸಿ ಸಭೆಯನ್ನು ಉದ್ದೇಶಸಿ ಮಾತನಾಡಿದರು. ಗ್ರಂಥಾಲಯದ ಮೇಲ್ವಿಚಾರಕರಾದ ಪ್ರಮೀಳಾ.ಪಿ ಗ್ರಂಥಾಲಯದಲ್ಲಿರುವ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಡೆಯುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದ್ದು, ಗ್ರಂಥಾಲಯಕ್ಕೆ ಮೇಜುಗಳ ವ್ಯವಸ್ಥೆ, ಪುಸ್ತಕಗಳನ್ನು ಜೋಡಿಸಿ ಇಡಲು ಕವಾಟುಗಳು, ಪ್ರಿಂಟರ್, ಕಂಪ್ಯೂಟರ್ ದುರಸ್ತಿ  ಆಗಬೇಕೆಂದು ಸಭೆಯ

ಕಳಿಯ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ Read More »

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಪುನರಾಯ್ಕೆ, ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆ

ಪುತ್ತೂರು : ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಜ.25ರಂದು ಚುನಾವಣೆ ನಡೆದಿತ್ತು. ಸಾಮಾನ್ಯ ಮೀಸಲು ಸ್ಥಾನದಿಂದ ಬ್ಯಾಂಕಿನ ಹಾಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಚಂದ್ರಶೇಖರ ರಾವ್ ಬಪ್ಪಳಿಗೆ, ಸುದೇಂದ್ರ ಪ್ರಭು, ರಾಜು ಶೆಟ್ಟಿ, ಶ್ರೀಧರ ಗೌಡ ರಣಜಾಲು, ಶ್ರೀಧರ ಪಟ್ಲ, ರಾಮಚಂದ್ರ ಕಾಮತ್, ಮಹಿಳಾ ಮೀಸಲು ಸ್ಥಾನದಿಂದ ವೀಣಾ, ಸೀಮಾ,

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಪುನರಾಯ್ಕೆ, ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆ Read More »

180ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿ ಸೆರೆ

ನಟಿಯನ್ನು ಪ್ರೀತಿಸಿ 3 ಕೋ.ರೂ. ಮನೆ ಗಿಫ್ಟ್‌ ಕೊಟ್ಟಿದ್ದ ಬೆಂಗಳೂರು : ದೇಶಾದ್ಯಂತ 180ಕ್ಕೂ ಹೆಚ್ಚು ಕಳ್ಳತನ ನಡೆಸಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಈ ಕುಖ್ಯಾತ ಕಳ್ಳ. ಈತ ಕದ್ದ ಹಣದಿಂದಲೇ ತನ್ನ ಪ್ರೇಯಸಿಗೆ ಸುಮಾರು 3 ಕೋ. ರೂ. ಬೆಲೆಬಾಳುವ ಮನೆ ಕಟ್ಟಿಸಿಕೊಟ್ಟಿದ್ದಾನಂತೆ. ಈತನ ಪ್ರೇಯಸಿ ಅಂತಿಂಥವಳಲ್ಲ ಖ್ಯಾತ ನಟಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿ ಮಗುವಿದ್ದರೂ ಬೇರೆ

180ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿ ಸೆರೆ Read More »

error: Content is protected !!
Scroll to Top