ಸುದ್ದಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾಗವನ್ನು ದೇವರಿಗೆ ಪ್ರೀತಿಯಿಂದ ಬಿಟ್ಟು ಕೊಟ್ಟ ವಾಲ್ಟರ್ ಲೋಬೋ

ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನ ಅಭಿವೃದ್ಧಿ ಹಿನ್ನೆಲೆ ದೇಗುಲಕ್ಕೆ ‌ಸೇರಿದ ಜಮೀನನ್ನು ಮರು ವಶ ಮಾಡಿಕೊಳ್ಳುವ ಕೆಲಸ ನಡೆಯುತ್ತಿದ್ದು, ನೆಲ್ಲಿಕಟ್ಚೆಯ ಅಶ್ವತ್ಥ ಮರದ ಸಮೀಪ ಇದ್ದ ಮನೆಯನ್ನು ಸೌಹಾರ್ಧಯುತವಾಗಿ ‌ತೆರವು ಮಾಡಲಾಗಿದೆ. ಈ ಜಮೀನು ವಾಲ್ಟರ್ ಲೋಬೋ ಎಂಬವರು 60 ವರ್ಷಗಳಿಂದ ಮನೆ ಹೊಂದಿದ್ದು, ಅದನ್ನು ಬಾಡಿಗೆಗೆ ನೀಡುತ್ತಿದ್ದರು. ಸುಮಾರು ಎಂಟರಿಂದ ಹತ್ತು ಸೆಂಟ್ಸ್ ಜಾಗವನ್ನು ವಾಲ್ಟರ್ ಲೋಬೋ ಅವರು ದೇವಸ್ಥಾನಕ್ಕೆ ಪ್ರೀತಿಯಿಂದ ಬಿಟ್ಟುಕೊಟ್ಟಿದ್ದಾರೆ. ಇದರ ಮೌಲ್ಯ ಸುಮಾರು ಒಂದು ಕೋಟಿಗೂ ಅಧಿಕವಾಗಿದ್ದು, […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾಗವನ್ನು ದೇವರಿಗೆ ಪ್ರೀತಿಯಿಂದ ಬಿಟ್ಟು ಕೊಟ್ಟ ವಾಲ್ಟರ್ ಲೋಬೋ Read More »

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರು ಪೊಲೀಸ್ ವಶಕ್ಕೆ

ಮಂಗಳೂರು: MDMA ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕಾ ವೇಯಿಂಗ್ ಬ್ರಿಜ್ ಸಮೀಪ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ ಸಮಯದಲ್ಲಿ ಅಕ್ಕಪಕ್ಕದಲ್ಲಿ ಎರಡು ಕಾರುಗಳು ನಿಂತಿರುವುದು ಕಂಡು ಬಂದಿದೆ. ಒಂದು ಕಾರಿನಲ್ಲಿ ಕಾವು ನಿವಾಸಿ ಜಕರಿಯಾ ಮತ್ತು ಇನ್ನೊಂದು ಕಾರಿನಲ್ಲಿ ಮಿಥುನ್ ಪೂಜಾರಿ ಎಂಬವರು ಇದ್ದರು. ಇವರಿಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟ ಮಾಡಲು ಬಂದಿರುವುದು ತಿಳಿದು ಬಂದಿದೆ. ಆರೋಪಿಗಳನ್ನು ವಶಕ್ಕೆ

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರು ಪೊಲೀಸ್ ವಶಕ್ಕೆ Read More »

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಬೆಳಗಾವಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಚ ಘಟನೆ ಚಿಕ್ಕೋಡಿಯ ಬಂಬಲವಾಡ ಗ್ರಾಮದಲ್ಲಿ ನಡೆದಿದೆ. ಭೂಮಿಕಾ ಮಾಳಂಗಿ(17) ಮೃತ ದುರ್ದೈವಿ. ಇಂದಿನಿಂದ ದ್ವಿತೀಯ ಪಿಯು ಅಂತಿಮ ಪರೀಕ್ಷೆ ಆರಂಭವಾಗಿದ್ದು, ಆಕೆ ಅದಕ್ಕಾಗಿ ಉತ್ತಮ ಸಿದ್ಧತೆ ಸಹ ಮಾಡಿಕೊಂಡಿದ್ದರು. ಇಂದು ಬೆಳಗ್ಗೆಯೂ ಪರೀಕ್ಷೆಗೆ ತೆರಳುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಬೆಳಗ್ಗೆ ಸ್ನಾನ ಮುಗಿಸಿ ಬರುತ್ತಿದ್ದ ಹಾಗೆಯೇ ಆಕೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ Read More »

ಯುವತಿಯ ಪ್ರಾಣಕ್ಕೆ ಕಂಟಕವಾದ ಜ್ಯೋತಿಷಿಯ ಮಾತು

ಬೆಂಗಳೂರು: ಜ್ಯೋತಿಷಿ ಹೇಳಿದ ಭವಿಷ್ಯವಾಣಿಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕುಂಟೆಯಲ್ಲಿ ನಡೆದಿದೆ. ವಿದ್ಯಾ ಜ್ಯೋತಿ (29) ಎಂಬಾಕೆಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವತಿ. ಆಕೆಗೆ ಜ್ಯೋತಿಷಿ ಅಲ್ಪಾಯುಷಿ ಎಂದು ಭವಿಷ್ಯ ಹೇಳಿದ್ದು, ಇದರಿಂದಾಗಿ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡ ಶಂಕೆ ‌ವ್ಯಕ್ತವಾಗಿದೆ. ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ವರ್ಕ್ ಫ್ರಂ ಹೋಂ ಮಾಡುತ್ತಿದ್ದಳು. ಹೆತ್ತವರು ಸಹ ಮಗಳಿಗಾಗಿ ‌ಎಲ್ಲವನ್ನೂ ಮಾಡಿದ್ದರು. ಅವಳ ಇಷ್ಟದಂತೆ ಆಕೆ ಪ್ರೀತಿಸಿದ ಯುವಕನನ್ನೇ ‌ವಿವಾಹವಾಗುವುದಕ್ಕೂ ಸಮ್ಮತಿ

ಯುವತಿಯ ಪ್ರಾಣಕ್ಕೆ ಕಂಟಕವಾದ ಜ್ಯೋತಿಷಿಯ ಮಾತು Read More »

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ ಕಾರು: 2 ಸಾವು, ಓರ್ವ ಗಂಭೀರ

ಹಾಸನ: ಅತಿ ವೇಗದಿಂದ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಕಲೇಶಪುರದ ಗುಲಗಳಲೆಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಕಾರು ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಮೃತಪಟ್ಟವರು ‌ತಮಿಳುನಾಡು ಮತ್ತು ಕೆಜಿಎಫ್ ಮೂಲದವರೆಂದು ತಿಳಿದು ಬಂದಿದೆ‌. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ ಕಾರು: 2 ಸಾವು, ಓರ್ವ ಗಂಭೀರ Read More »

ಶಾಸಕ ಅಶೋಕ್ ರೈ ವಿರುದ್ಧ ಎಂಎಲ್‌ಸಿ ಕಿಶೋರ್ ಕುಮಾರ್ ಗರಂ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರು ಮಹಿಳಾ ಕಾಲೇಜಿನ ಪ್ರಾಂಶುಪಾಲರ ಅಮಾನತಿಗೆ ಸಂಬಂಧಿಸಿದ ಹಾಗೆ ಶಾಸಕ ರೈ ಅವರನ್ನು ತರಾಟೆಗೆ ತೆಗೆದು ಕೊಂಡಿರುವ ಅವರು, ಕಾಲೇಜಿನ ವಿದ್ಯಾರ್ಥಿನಿಯರು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಆ ಕಾಲೇಜಿನ ಪ್ರಭಾರ ‌ಪ್ರಾಂಶುಪಾಲರನ್ನು ಅಮಾನತು ಮಾಡಿಸಲಾಗಿದೆ ಎಂದು ಹೇಳಿದ್ದಾರೆ. ಮಕ್ಕಳ ಹಿತಾಸಕ್ತಿಗೆ ‌ಸ್ಪಂದಿಸಿದ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಬಲಿಪಶು ಮಾಡುವ ಬದಲು ನಿಯಮಗಳನ್ನು ಮುರಿದ ಗುತ್ತಿಗೆದಾರರ

ಶಾಸಕ ಅಶೋಕ್ ರೈ ವಿರುದ್ಧ ಎಂಎಲ್‌ಸಿ ಕಿಶೋರ್ ಕುಮಾರ್ ಗರಂ Read More »

ಕಾರು – ಬೈಕ್ ಢಿಕ್ಕಿ: ದಂಪತಿ ಸ್ಥಳದಲ್ಲೇ ಸಾವು

ಹುಣಸೂರು: ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಾರಾಯಣಪುರದ ಬಳಿ ನಡೆದಿದೆ. ಬೀರನಹಳ್ಳಿಯ ನಂಜುಂಡಸ್ವಾಮಿ(52) ಮತ್ತು ನೇತ್ರಾವತಿ(46) ಎಂಬವರೇ ಮೃತ ದುರ್ದೈವಿಗಳು. ಈ ದಂಪತಿ ಸಂಬಂಧಿಕರ ಸಾವಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ‌. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಢಿಕ್ಕಿಯಾದ ರಭಸಕ್ಕೆ ದಂಪತಿಯ ತಲೆ, ಕೈ ಕಾಲುಗಳಿಗೆ ‌ಗಂಭೀರ ಪ್ರಮಾಣದ ಗಾಯಗಳಾಗಿ ಅವರು ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಕೆ. ಆರ್. ನಗರ ಪೊಲೀಸರು ಪ್ರಕರಣ

ಕಾರು – ಬೈಕ್ ಢಿಕ್ಕಿ: ದಂಪತಿ ಸ್ಥಳದಲ್ಲೇ ಸಾವು Read More »

ಗೋ ಹತ್ಯೆ, ಮಾಂಸ ಮಾರಾಟ: ಆರೋಪಿಯ ಮನೆ ಸೀಜ್

ಉಪ್ಪಿನಂಗಡಿ: ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಉಪ್ಪಿನಂಗಡಿಯ ಬಾರ್ಯದ ಹೊಸವಕ್ಲು ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ ಗೋಮಾಂಸ ವಶಕ್ಕೆ ಪಡೆದ ಪೊಲೀಸರು ಆರೋಪಿಯ ಮನೆಯನ್ನು ಜಪ್ತಿ ಮಾಡಿದ್ದಾರೆ. ಅಕ್ರಮ ಗೋ ಹತ್ಯೆ, ಮಾರಾಟದ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಆರೋಪಿಗಳು ಮನೆಯಿಂದ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. ಪರಿಶೀಲನೆ ವೇಳೆ ಗೋಮಾಂಸ‌ವನ್ನು ಪ್ಯಾಕೆಟ್‌ಗಳಾಗಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಹಾಗೆಯೇ ಸಮೀಪದಲ್ಲೇ ಇದ್ದ ಆಟೋ ರಿಕ್ಷಾದಲ್ಲಿಯೂ

ಗೋ ಹತ್ಯೆ, ಮಾಂಸ ಮಾರಾಟ: ಆರೋಪಿಯ ಮನೆ ಸೀಜ್ Read More »

ಮಾಂಸಕ್ಕಾಗಿ ಅಕ್ರಮ ಗೋ ಸಾಗಾಟ: ವಾಹನ ಜಪ್ತಿ

ಬಂಟ್ವಾಳ: ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಗೋ ಸಾಗಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹಿಂಸಾತ್ಮಕ ರೀತಿಯಲ್ಲಿ ಎರಡು ದನಗಳನ್ನು ತುಂಬಿದ್ದ ವಾಹನವೊಂದು ರಸ್ತೆ ಬದಿ ಪತ್ತೆಯಾಗಿದೆ‌. ವಾಹನದ ಚಾಲಕ ಮಂಡ್ಯ ಜಿಲ್ಲೆಯ ನವೀನ್ ಮತ್ತು ಚೇತನ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದು, ಆ ಗೋವುಗಳನ್ನು ಚೆನ್ನರಾಯಪಟ್ಟಣದ ಶಂಕರ್ ಎಂಬಾತ ಸಾಲೆತ್ತೂರಿನ ಶಾಫಿಗೆ ಮಾರಾಟ

ಮಾಂಸಕ್ಕಾಗಿ ಅಕ್ರಮ ಗೋ ಸಾಗಾಟ: ವಾಹನ ಜಪ್ತಿ Read More »

ವಿದ್ಯಾರ್ಥಿಗಳ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಆಟವಾಡುತ್ತಿದೆ: ಎಚ್‌ಡಿ‌ಕೆ

ವಿಜಯಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರ ಮಾತ್ರ ಅದನ್ನು ಭರ್ತಿ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿರುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಕೆಲಸಗಳಿಂದಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆದರೆ ಇದರಿಂದಾಗಿ ಹೊರೆಯಾಗುತ್ತಿದೆ ಎನ್ನುವುದು ಸದ್ಯ ಈಗಲಾದರೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗಾದರೂ

ವಿದ್ಯಾರ್ಥಿಗಳ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಆಟವಾಡುತ್ತಿದೆ: ಎಚ್‌ಡಿ‌ಕೆ Read More »

error: Content is protected !!
Scroll to Top