ಇರಾನ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ : 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ

ಸರ್ವಾಧಿಕಾರಿ ಖಮೇನಿ ವಿರುದ್ಧ ಭುಗಿಲೆದ್ದ ಆಕ್ರೋಶ ; ಮುಲ್ಲಾಗಳು ದೇಶಬಿಟ್ಟು ಹೋಗಲು ಒತ್ತಾಯ ಟೆಹ್ರಾನ್‌: ಇರಾನ್‌ನಲ್ಲಿ ಮುಲ್ಲಾಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇನ್ನಷ್ಟು ಜೋರಾಗಿದೆ. ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಸಣ್ಣಮಟ್ಟದಲ್ಲಿ ಆರಂಭವಾದ ಪ್ರತಿಭಟನೆ ತೀವ್ರಗೊಂಡಿದ್ದು, ಇರಾನ್‌ ಜನರು ಈಗ ಮಸೀದಿಗೆ ಬೆಂಕಿ ಹಾಕುತ್ತಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತದ ವಿರುದ್ಧ ತಿರುಗಿ ಬಿದ್ದ ಪ್ರತಿಭಟನಕಾರರು ಸುಮಾರು 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇಷ್ಟರ ತನಕ ಪ್ರತಿಭಟನೆಗೆ 650ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. […]

ಇರಾನ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ : 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ Read More »

ಶಬರಿಮಲೆಯಲ್ಲಿ ಹೃದಯಾಘಾತದಿಂದ ಉಳ್ಳಾಲದ ಉದ್ಯಮಿ ಸಾವು

ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತವಾಗಿ ಕುಸಿದು ಬಿದ್ದ ಉದ್ಯಮಿ ಮಂಗಳೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲದ ಅಯ್ಯಪ್ಪ ವ್ರತಧಾರಿಯೋರ್ವರು ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದೇಲಂತಬೆಟ್ಟು ನಿವಾಸಿ ಉದ್ಯಮಿ ಚಂದ್ರಹಾಸ್ ಶೆಟ್ಟಿ (55) ಮೃತ ವ್ಯಕ್ತಿ. ಚಂದ್ರಹಾಸ್ ಅವರು ಅಯ್ಯಪ್ಪ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೆಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಸೋಮವಾರ ಬೆಳಗ್ಗೆ ಚಂದ್ರಹಾಸ್ ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ

ಶಬರಿಮಲೆಯಲ್ಲಿ ಹೃದಯಾಘಾತದಿಂದ ಉಳ್ಳಾಲದ ಉದ್ಯಮಿ ಸಾವು Read More »

4 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಉಗಾಂಡದ ಮಹಿಳೆ ಬಂಧನ

ಬೆಂಗಳೂರಿನಿಂದ ಮಂಗಳೂರಿಗೆ ಮಾದಕವಸ್ತು ಪೂರೈಸುತ್ತಿದ್ದ ಜಾಲದ ಪ್ರಮುಖ ಸೂತ್ರಧಾರಿ ಮಹಿಳೆ ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವ್ಯವಸ್ಥಿತ ರೀತಿಯಲ್ಲಿ ಮಾದಕ ದ್ರವ್ಯ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಅವಳಿಂದ ಸುಮಾರು 4 ಕೋ. ರೂ. ಮೌಲ್ಯದ 4 ಕೆಜಿ ಡ್ರಗ್ಸ್‌ ವಸ್ತು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಹೊರವಲಯದ ಜಿಗಾನಿಯಲ್ಲಿ 4 ಕೆಜಿ ಎಂಡಿಎಂಎ ಜೊತೆ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆರೋಪಿಯನ್ನು ಜಲಿಯಾ ಝಲ್ವಾಂಗೊ ಎಂದು ಗುರುತಿಸಲಾಗಿದ್ದು, ವಶಪಡಿಸಿಕೊಂಡ ಅಕ್ರಮ ವಸ್ತುಗಳ ಮೌಲ್ಯ

4 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಉಗಾಂಡದ ಮಹಿಳೆ ಬಂಧನ Read More »

ಉಚಿತ ಡ್ರೋನ್ ಹಾರಾಟ ತರಬೇತಿಯ ಶಿಬಿರಾರ್ಥಿಗಳಿಗೆ DGCA ಪ್ರಮಾಣಪತ್ರ ಪ್ರದಾನ

ಘಟಕೇಸರ್, ಹೈದರಾಬಾದ್: ಇಲ್ಲಿನ TARA UAV Pvt Ltd (TARA Done Academy) ಇದರ ವಿಶಾಲ 10 ಎಕರೆಯ ಸುಸಜ್ಜಿತ ಆವರಣದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಆಯೋಜಿಸಲ್ಪಟ್ಟ 12 ದಿನಗಳ ಉಚಿತ Drone Piloting ಮತ್ತು GIS ತರಬೇತಿ ಸಮಾಪನಗೊಂಡಿತು. ದೆಹಲಿಯ DMI Housing and Finance Pvt Ltd ಇವರು ಪ್ರವರ್ತಿಸಿದ ತರಬೇತಿಯನ್ನು ಹೈದರಾಬಾದ್’ನ TARA UAV Pvt Ltd (TARA Done Academy) ಇದರ Accountable Manager Dr. ಜಿ. ಟಿ. ವಿಜಯ್ ಕುಮಾರ್ ಇವರು

ಉಚಿತ ಡ್ರೋನ್ ಹಾರಾಟ ತರಬೇತಿಯ ಶಿಬಿರಾರ್ಥಿಗಳಿಗೆ DGCA ಪ್ರಮಾಣಪತ್ರ ಪ್ರದಾನ Read More »

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’: ಕೊನೆಯ ಮೂರು ದಿನಗಳಷ್ಟೇ ಬಾಕಿ

ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಡಿ. 15 ರಿಂದ ಜ. 15 ರ ವರೆಗೆ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’ ನಡೆಯುತ್ತಿದ್ದು, ಕೊನೆಯ ಮೂರು ದಿನಗಳಲ್ಲಿ ಈ ಮಹೋತ್ಸವ ಕೊನೆಗೊಳ್ಳಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಈ ಸಂದರ್ಭದಲ್ಲಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ 7000 ರೂ. ವರೆಗೆ ಸಂಸ್ಥೆ ರಿಯಾಯಿತಿ ನೀಡಲಿದೆ. ದುಬಾರಿ ಎಂದು ಖರೀದಿ ಮಾಡಲು ಹಿಂದೇಟು ಹಾಕುವವರಿಗೆ ‌ಕೈಗೆಟುಕುವ ದರದಲ್ಲಿ ವಜ್ರಾಭರಣಗಳು

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’: ಕೊನೆಯ ಮೂರು ದಿನಗಳಷ್ಟೇ ಬಾಕಿ Read More »

ಇಸ್ರೋದ PSLV – C62 ರಾಕೆಟ್‌ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯ

ಬೆಂಗಳೂರು: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಉಡಾವಣೆ ಮಾಡಿದ PSLV – C62 ರಾಕೆಟ್‌ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯಗಳು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ವಿವರವಾದ ವಿಶ್ಲೇಷಣೆಗೆ ಇಸ್ರೋ ವಿಜ್ಞಾನಿಗಳು ಮುಂದಾಗಿದ್ದಾರೆ. ಆರಂಭಿಕ ಹಂತಗಳಲ್ಲಿ ರಾಕೆಟ್ ಯಶಸ್ವಿ ಹಾರಾಟ ನಡೆಸಿದೆ. ಆದರೆ ಮೂರನೇ ಹಂತದ ಕೊನೆಯಲ್ಲಿ ನಿರೀಕ್ಷಿತ ಪಥದಲ್ಲಿ ಹಾರಾಟ ನಡೆದಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಉಡಾವಣೆಯ ನಂತರದ ಟೆಲಿಮೆಟ್ರಿ ಮಾಹಿತಿ ಪರಿಶೀಲನೆ ನಡೆಸಲಾಗುವುದಾಗಿಯೂ

ಇಸ್ರೋದ PSLV – C62 ರಾಕೆಟ್‌ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯ Read More »

ಸಭ್ಯ ಬಟ್ಟೆ ಧರಿಸುವಂತೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ ಪೊಲೀಸರ ವಶಕ್ಕೆ

ಬೆಂಗಳೂರು: ಯುವತಿಯನ್ನು ಕೆಲವು ಯುವಕರು ಚುಡಾಯಿಸುತ್ತಿದ್ದಾಗ, ಅಸಭ್ಯ ಬಟ್ಟೆ ಧರಿಸಿ ರಸ್ತೆಗೆ ಬರಬೇಡಮ್ಮ ಎಂದು ಬುದ್ಧಿ ಹೇಳಿದ ಹೋಂ ಗಾರ್ಡ್ ಮೇಲೆಯೇ ಆಕೆ ಹಲ್ಲೆ ನಡೆಸಿದ ಘಟನೆ ಕೆ. ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು ಆರೋಪಿಯನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮೋಹಿನಿ ಎಂದು ಗುರುತಿಸಲಾಗಿದ್ದು, ಗಾಯಾಳು ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಲಕ್ಷ್ಮೀ ನರಸಮ್ಮ ಹೋಂ ಗಾರ್ಡ್ ಆಗಿ ಕೆಲಸ

ಸಭ್ಯ ಬಟ್ಟೆ ಧರಿಸುವಂತೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ ಪೊಲೀಸರ ವಶಕ್ಕೆ Read More »

ಆರು ವರ್ಷದ ಬಾಲಕಿಯರ ಕಿಡ್ನಾಪ್, ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರು ಹೇಳಿದ್ದೇನು ಗೊತ್ತಾ?

ಬೆಂಗಳೂರು: ಆರು ವರ್ಷದ ವಲಸೆ ಬಾಲಕಿಯ ಕಿಡ್ನಾಪ್ ಮತ್ತು ಕೊಲೆ ಪ್ರಕರಣ ವೈಟ್‌ ಫೀಲ್ಡ್ ನಲ್ಲಿ ನಡೆದಿದ್ದು, ಈ ಪ್ರಕರಣದ ಬಗ್ಗೆ ಮತ್ತೊಂದು ಶಾಕಿಂಗ್ ಹೇಳಿಕೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಹತ್ಯೆ ನಡೆಸುವುದಕ್ಕೂ ಮುನ್ನ ಆರೋಪಿ ಯೂಸುಫ್ ಮೀರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಆರೋಪಿಯನ್ನು ಹೆಚ್ಚುವರಿ 10 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಸ್ಕ್ರ್ಯಾಪ್ ಸಂಗ್ರಹಿಸುವ ಕೆಲಸ

ಆರು ವರ್ಷದ ಬಾಲಕಿಯರ ಕಿಡ್ನಾಪ್, ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರು ಹೇಳಿದ್ದೇನು ಗೊತ್ತಾ? Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕುಡಿಯುವ ಶುದ್ಧ ನೀರಿನ ಘಟಕದ ಉದ್ಘಾಟನೆ

ಉಪ್ಪಿನಂಗಡಿ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧರ್ಮದರ್ಶಿಯವರು ಸೇವಾ ರೂಪದಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಡಾ. ಯೋಗಿಂದ್ರ ಭಟ್ ಉಳಿ ಉದ್ಘಾಟಿಸಿ, ಶುಭ ಹಾರೈಸಿದರು. ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ, ದೇವಸ್ಥಾನದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಪ್ರಶಾಂತ ಪೈ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅರ್ಚಕ ಗುರುಪ್ರಸಾದ ನೂರಿತ್ತಾಯ, ವಾಣಿ ಶಿಕ್ಷಣ ಸಂಸ್ಥೆಯ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕುಡಿಯುವ ಶುದ್ಧ ನೀರಿನ ಘಟಕದ ಉದ್ಘಾಟನೆ Read More »

ಕಡಬ: ಮನೆಯಂಗಳದಿಂದ ನಾಯಿಯನ್ನು ಹೊತ್ತೊಯ್ದ ಚಿರತೆ

ಬೃಹತ್‌ ಗಾತ್ರದ ಚಿರತೆಯ ಓಡಾಟ ಸಿಸಿಟಿವಿಯಲ್ಲಿ ಸೆರೆ ಕಡಬ : ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಮ ನೂಜಿಲ ಅವರ ಮನೆಯಂಗಳಕ್ಕೆ ಜ.7ರಂದು ಬಂದ ಬೃಹತ್ ಗಾತ್ರದ ಚಿರತೆಯೊಂದು ಸಾಕುನಾಯಿಯನ್ನು ಹೊತ್ತೊಯ್ದಿದೆ. ಪಂಜ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟ ಎಡಮಂಗಲ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜ.7ರಂದು ಸುಮ ನೂಜಿಲ ಅವರ ಕುಟುಂಬದವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಸಾಯಂಕಾಲ ಸುಮಾರು 7 ಗಂಟೆಯ ಹೊತ್ತಿಗೆ

ಕಡಬ: ಮನೆಯಂಗಳದಿಂದ ನಾಯಿಯನ್ನು ಹೊತ್ತೊಯ್ದ ಚಿರತೆ Read More »

error: Content is protected !!
Scroll to Top