ಸೊಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ದಾರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಸವಣೂರು:  ಸೊಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ದಾರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಸುದರ್ಶನ್‍ ನ್ಯಾಕ್ ಕಂಪ, ಗಿರಿಶಂಕರ ಸುಲಾಯ, ಸತೀಶ್‍ ಕುಮಾರ್‍ ಕೆಡೆಂಜಿ, ಅಧ್ಯಕ್ಷರಾಗಿ ಸುಳ್ಯ ಶಾಸಕರಾದ ಕು. ಭಾಗಿರಥಿ ಮುರುಳ್ಯ, ಕಾರ್ಯಧ್ಯಕ್ಷರಾಗಿ ರಾಕೇಶ್‍ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್‍ ಕೆ. ಸವಣೂರು, ಜತೆ ಕಾರ್ಯದರ್ಶಿಯಾಗಿ ತಾರಾನಾಥ ಕಾಯರ್ಗ, ಕೋಶಾಧಿಕಾರಿಯಾಗಿ ವಿಜಯನ್‍  ಸೊಂಪಾಡಿ ಆಯ್ಕೆಯಾದರು.

ಸೊಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ದಾರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ಹೇರ್‌ ಡ್ರೈರ್‌ ಸ್ಫೋಟಗೊಂಡು ಮಹಿಳೆಯ ಎರಡೂ ಕೈ ಛಿದ್ರ

ಆರ್ಡರ್‌ ಮಾಡದಿದ್ದರೂ ಕೊರಿಯರ್‌ನಲ್ಲಿ ಬಂದ ಹೇರ್‌ ಡ್ರೈಯರ್‌ ಬಗ್ಗೆ ಅನುಮಾನ ಬೆಂಗಳೂರು: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಕೇಯಲ್ಲೇ ಸ್ಫೋಟಗೊಂಡು ಮೃತ ಯೋಧರೊಬ್ಬರ ಪತ್ನಿಯ ಎರಡೂ ಕೈಗಳು ತುಂಡಾಗಿರುವ ದಾರುಣ ಘಟನೆ ಬಾಗಲಕೋಟೆಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಯೋಧ ದಿ.ಪಾಪಣ್ಣ ಎಂಬವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು. ಬಸಮ್ಮ ಅವರ ಸ್ನೇಹಿತೆ ಶಶಿಕಲಾ ಎಂಬವರ ಹೆಸರು, ನಂಬರ್ ಇದ್ದ ಪಾರ್ಸಲ್ ಕೊರಿಯರ್‌ನಲ್ಲಿ

ಹೇರ್‌ ಡ್ರೈರ್‌ ಸ್ಫೋಟಗೊಂಡು ಮಹಿಳೆಯ ಎರಡೂ ಕೈ ಛಿದ್ರ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆ ದಿನಾಂಕ ನಡೆಯಿತು. ಸಭೆಯಲ್ಲಿ 2024-25 ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ್ ಆಚಾರ್, ಉಪಾಧ್ಯಕ್ಷರುಗಳಾಗಿ ಕೃಷ್ಣ ಕುಮಾರ್, ಅಶ್ವಿನಿ, ಸುರೇಶ್ ಕುಮಾರ್ ಆಯ್ಕೆಯಾದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್.ಎಂ., ಸಂಚಾಲಕ ರವಿನಾರಾಯಣ, ಶಾಲಾ ಮುಖ್ಯ ಶಿಕ್ಷರು, ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಆಯ್ಕೆಯಾದ ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ Read More »

ನ.21-22 : ವಕ್ಫ್ ಆಸ್ತಿ ಅಕ್ರಮದ ವಿರುದ್ಧ ಬಿಜೆಪಿಯಿಂದ ಮಂಗಳೂರು ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ, ಧರಣಿ | ‘ನಮ್ಮ ಭೂಮಿ-ನಮ್ಮ ಹಕ್ಕು’ ಹೆಸರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪುತ್ತೂರಿನಿಂದ ಒಂದು ಸಾವಿರ ಕಾರ್ಯಕರ್ತರು ಭಾಗಿ : ಸಂಜೀವ ಮಠಂದೂರು

ಪುತ್ತೂರು: ವಕ್ಫ್ ಆಸ್ತಿ ಅಕ್ರಮದ ವಿರುದ್ಧ ಬಿಜೆಪಿ ರಾಜ್ಯಾಧ್ಯಂತ ಬೀದಿಗಿಳಿದು ಹೋರಾಟದ ಜತೆಗೆ ಸವಾಲು ಸ್ವೀಕಾರ ಮಾಡಲಿದ್ದು ನ.21 ಹಾಗೂ 22 ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ತನಕ ಬೃಹತ್‍ ಪ್ರತಿಭಟನೆ ಹಾಗೂ ಧರಣಿ ನಡೆಸಲಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಂಗಳೂರು ಮಿನಿ ವಿಧಾನಸೌಧದ ಎದುರು ‘ನಮ್ಮ ಭೂಮಿ-ನಮ್ಮ ಹಕ್ಕು’ ಎಂಬ ನಾಮಧ್ಯೇಯದೊಂದಿಗೆ ಪ್ರತಿಭಟನೆ ಮಾಡಲಿದ್ದು,

ನ.21-22 : ವಕ್ಫ್ ಆಸ್ತಿ ಅಕ್ರಮದ ವಿರುದ್ಧ ಬಿಜೆಪಿಯಿಂದ ಮಂಗಳೂರು ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ, ಧರಣಿ | ‘ನಮ್ಮ ಭೂಮಿ-ನಮ್ಮ ಹಕ್ಕು’ ಹೆಸರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪುತ್ತೂರಿನಿಂದ ಒಂದು ಸಾವಿರ ಕಾರ್ಯಕರ್ತರು ಭಾಗಿ : ಸಂಜೀವ ಮಠಂದೂರು Read More »

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ

ಮೂರು ವರ್ಷಗಳಿಂದ ಕೇರಳದ ಜೈಲಿನಲ್ಲಿದ್ದಾಳೆ ವಿಕ್ರಂ ಗೌಡ ಪ್ರೀತಿಸಿ ಮದುವೆಯಾದ ನಕ್ಸಲ್‌ ಯುವತಿ ಕಾರ್ಕಳ : ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ನಕ್ಸಲ್‌ ನಾಯಕ ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ಆಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾಳೆ. ನಕ್ಸಲ್‌ ಸಂಘಟನೆಯಲ್ಲೇ ಇದ್ದ ಸಾವಿತ್ರಿ (38) ಎಂಬ ಯುವತಿಯನ್ನು ಪ್ರೀತಿಸಿ ವಿಕ್ರಂ ಗೌಡ ಮದುವೆಯಾಗಿದ್ದ. ಇಬ್ಬರೂ ಅನೇಕ ವರ್ಷ ಮಾವೋವಾದಿ ಚಟುವಟಿಕೆಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈಕೆಯೂ ವಿಕ್ರಂ ಗೌಡನ ಊರಿನವಳೇ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿಗಳು ಇಲ್ಲ.ಸಾವಿತ್ರಿ

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ Read More »

ನ.22 : ನವಿಕೃತ ಕಛೇರಿ ಉದ್ಘಾಟನೆ,  ಸದಸ್ಯ ಬೆಳೆಗಾರರ ಸಭೆ

ಪುತ್ತೂರು  : ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿಯ  ಪುತ್ತೂರು ಶಾಖೆಯ ನವಿಕೃತ ಕಛೇರಿ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ ನ.22 ರಂದು  ಮಹಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಮದ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕಾರಿಣಿ ಸದಸ್ಯ  ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಲಿದ್ದಾರೆ.    ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ  ಎ.ಕಿಶೋರ್‍ ಕುಮಾರ್‍ ಕೊಡ್ಗಿಅಧ್ಯಕ್ಷತೆ ವಹಿಸಲಿದ್ದಾರೆ.  ಕ್ಯಾಂಪ್ಕೋ ಉಪಾಧ್ಯಕ್ಷ  ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ  ಡಾ.ಬಿ.ವಿ.

ನ.22 : ನವಿಕೃತ ಕಛೇರಿ ಉದ್ಘಾಟನೆ,  ಸದಸ್ಯ ಬೆಳೆಗಾರರ ಸಭೆ Read More »

ಮನೆಯಿಂದ ಹೊರಹೋದ ಯುವತಿ ನಾಪತ್ತೆ

ಉಡುಪಿ: ಮನೆಯಿಂದ ಹೊರಗೆ ಹೋದ ಯುವತಿಯೊಬ್ಬರು ಮನೆಗೆ ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ನಗರದ ಗುಂಡಿಬೈಲಿನ ಫ್ಲಾಟ್ ಒಂದರಲ್ಲಿ ವಾಸವಿದ್ದ ಮೋನಿಕಾ ಬಿ.ಎಸ್. (24) ನಾಪತ್ತೆಯಾದ ಯುವತಿ ನ.14ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸ ಬಹುದು ಎಂದು ಪೊಲೀಸ್ ಠಾಣಾ

ಮನೆಯಿಂದ ಹೊರಹೋದ ಯುವತಿ ನಾಪತ್ತೆ Read More »

ಪಡಿತರ ಪಡೆಯಲು ಬಂದು ಖೆಡ್ಡಾಕ್ಕೆ ಬಿದ್ದ ವಿಕ್ರಮ್‌ ಗೌಡ

ಮೂರುದಿನಗಳಿಂದ ಹೊಂಚು ಹಾಕಿ ಕುಳಿತಿದ್ದ ಎನ್‌ಎನ್‌ಎಫ್‌ ಪಡೆ ಕಾರ್ಕಳ : ಹೆಬ್ರಿಯ ಕಬ್ಬಿನಾಲೆ ಸಮೀಪ ಪೀತಬೈಲು ಎಂಬಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ (44) ಹತನಾಗಿದ್ದಾನೆ. ಈ ಕಾರ್ಯಾಚರಣೆಯ ಒಂದೊಂದೇ ಮಾಹಿತಿ ಈಗ ಬಹಿರಂಗವಾಗುತ್ತಿದೆ. ನಕ್ಸಲರು ಪೀತಬೈಲಿನಲ್ಲಿರುವ ಮನೆಗಳಿಗೆ ಪಡಿತರ ಮತ್ತು ಹಣ ಪಡೆಯಲು ಬಂದು ಪೊಲೀಸರು ರಚಿಸಿದ್ದ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ನಕ್ಸಲರ ಓಡಾಟ ಮರಳಿ ಶುರುವಾಗಿರುವ ಕುರಿತು ನಕ್ಸಲ್‌ ನಿಗ್ರಹ ಪಡೆಗೆ ಖಚಿತ ಸುಳಿವು

ಪಡಿತರ ಪಡೆಯಲು ಬಂದು ಖೆಡ್ಡಾಕ್ಕೆ ಬಿದ್ದ ವಿಕ್ರಮ್‌ ಗೌಡ Read More »

ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ವಾರ್ಷಿಕ  ಧ್ಯಾನ ಕೂಟ

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದಿವ್ಯ ಚೇತನಾ ಅಸೋಸಿಯೇಶನ್ ವತಿಯಿಂದ ದಿವ್ಯ ಚೇತನ ಚಾಪೆಲ್‌ ಕಾಲೇಜಿನ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಒಂದು ದಿನದ ‘ದೇವರನ್ನು ಹುಡುಕು”.ಎಂಬ ವಿಷಯದ ಮೇಲೆ ವಾರ್ಷಿಕ ಧ್ಯಾನ ಕೂಟ ನಡೆಯಿತು. ಪಾಪ ನಿವೇದನೆ, ಭಗವಂತನೊಂದಿಗಿನ ಸಂಬಂಧ, ದೇವರೊಂದಿಗಿನ ಜೀವನ, ಯುವಕರ ಪ್ರಲೋಭನೆಗಳನ್ನು ನಿಭಾಯಿಸುವುದು ಮತ್ತು ಪವಿತ್ರಾತ್ಮದ ಶಕ್ತಿಯ ಕುರಿತು ಸೆಷನ್‌ಗಳನ್ನು ಖ್ಯಾತ ಬೋಧಕ ರೆ.ಫಾ.ರಾನ್ಸನ್ ಪಿಂಟೋ ನಡೆಸಿಕೊಟ್ಟರು. ಆಧ್ಯಾತ್ಮಿಕ ತಳಹದಿಗಳನ್ನು ಮತ್ತು ಸಾಮುದಾಯಿಕ ಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಸೆಷನ್‌ಗಳು ಸ್ವಯಂ-ಪ್ರತಿಬಿಂಬದ ಮೇಲೆ

ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ವಾರ್ಷಿಕ  ಧ್ಯಾನ ಕೂಟ Read More »

ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪಿಯು ಫೆಸ್ಟ್ “ಅಟೆರ್ನಸ್-2024” ಯಶಸ್ವಿ ಸಮಾಪನ | ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್, ಸುಳ್ಯ ಎನ್‌ಎಂಸಿ ರನ್ನರ್ಸ್

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು  ಪದವಿ ಪೂರ್ವ(ಪಿಯು) ಕಾಲೇಜುಗಳ ಫೆಸ್ಟ್-ಅಟೆರ್ನಸ್-2024 ಅಕ್ಷಯ ಕಾಲೇಜಿನಲ್ಲಿ ಉದ್ಘಾಟನೆಗೊಂಡು ಯಶಸ್ವಿಯಾಗಿ ಸಮಾಪನಗೊಂಡಿತು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್ ಎನಿಸಿಕೊಂಡಿದ್ದು, ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸ್ಪರ್ಧೆಗಳಾದ ಗ್ರೂಪ್ ಸಿಂಗಿಂಗ್, ಸೋಲೊ ಸಿಂಗಿಂಗ್, ಸೋಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್, ಮೊಡೆಲ್ ಪ್ರೆಸೆಂಟೇಶನ್, ಜಾಹಿರಾತು, ಪಾಟ್ ಡೆಕೋರೇಶನ್, ಬೆಂಕಿಯಿಲ್ಲದ ಅಡುಗೆ,

ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪಿಯು ಫೆಸ್ಟ್ “ಅಟೆರ್ನಸ್-2024” ಯಶಸ್ವಿ ಸಮಾಪನ | ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್, ಸುಳ್ಯ ಎನ್‌ಎಂಸಿ ರನ್ನರ್ಸ್ Read More »

error: Content is protected !!
Scroll to Top