ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಬಂಗಾರಪ್ಪ ಕೆಂಡಾಮಂಡಲ

ಆನ್‌ಲೈನ್‌ ಅಭಿಪ್ರಾಯ ಸಂಗ್ರಹ ವೇಳೆ ಸಚಿವರನ್ನು ಕೆಣಕಿದ ವಿದ್ಯಾರ್ಥಿ ಬೆಂಗಳೂರು : ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಓರ್ವ ವಿದ್ಯಾರ್ಥಿ ಸಚಿವ ಮಧು ಬಂಗಾರಪ್ಪ ಎದುರೇ ಹೇಳಿದ್ದು, ಇದರಿಂದ ಕೆಂಡಾಮಂಡಲವಾದ ಮಧು ಬಂಗಾರಪ್ಪ ಆ ವಿದ್ಯಾರ್ಥಿಯನ್ನು ಹುಡುಕಿ ಕ್ರಮ ಕೈಗೊಳ್ಳಬೇಖೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ ಘಟನೆ ನಡೆದಿದೆ.ಬುಧವಾರ ವಿಧಾನಸೌಧದಲ್ಲಿ ನೀಟ್​ ಕೋಚಿಂಗ್​ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಉದ್ಘಾಟನೆ ಮುಗಿದು ಆನ್‌ಲೈನ್‌ನಲ್ಲಿ ಸಂವಾದ ನಡೆಸುವಾಗ ಓರ್ವ ವಿದ್ಯಾರ್ಥಿ ಶಿಕ್ಷಣ ಸಚಿವ […]

ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಬಂಗಾರಪ್ಪ ಕೆಂಡಾಮಂಡಲ Read More »

ಶೇಖಮಲೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆ ಎಂಬಲ್ಲಿ ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ನೆಲಕ್ಕುರುಳಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಶೇಖಮಲೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ Read More »

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌

ಎರಡು ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿದ್ದ ಬಂದಿದ್ದ ಅಧಿಕಾರಿಯ ಮನೆಗೆ ದಾಳಿ ಮಂಗಳೂರು: ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಅದರಂತೆ ಮಂಗಳೂರಿನಲ್ಲಿ ಓರ್ವ ಅಧಿಕಾರಿಯ ಮನೆ ಮೇಲೂ ದಾಳಿಯಾಗಿದೆ.ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಬೆಳಗ್ಗೆ ದಾಳಿ ನಡೆಸಿ ಶಾಕ್‌ ನೀಡಲಾಗಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಲೋಕಾಯುಕ್ತ ಎಸ್‌ಪಿ ನಟರಾಜ್ ನೇತೃತ್ವದಲ್ಲಿ ಏಕಕಾಲದಲ್ಲಿ ಅಧಿಕಾರಿಗಳ ತಂಡ ಮಂಗಳೂರಿನ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌ Read More »

ಅಬಕಾರಿ ಹಗರಣ : ಸಚಿವ ತಿಮ್ಮಾಪುರ ತಲೆದಂಡ?

ಅಧಿವೇಶನದಲ್ಲಿ ಮುಜುಗರದಿಂದ ಪಾರಾಗಲು ಸಚಿವರನ್ನು ಕೈಬಿಡುವ ಕುರಿತು ಚಿಂತನೆ ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಮದ್ಯ ವ್ಯಾಪಾರಿಗಳು ಗಂಭೀರ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವ ಕುರಿತು ಚಿಂತನೆ ನಡೆಯುತ್ತಿದೆ. ಅಬಕಾರಿ ಇಲಾಖೆಯ ಭ್ರಷ್ಟಾಚಾರ ಇತ್ತೀಚೆಗೆ ಬಹಳ ಸದ್ದು ಮಾಡಿದೆ. ಮದ್ಯ ವ್ಯಾಪಾರಿಗಳು ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಿಗೆ ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ

ಅಬಕಾರಿ ಹಗರಣ : ಸಚಿವ ತಿಮ್ಮಾಪುರ ತಲೆದಂಡ? Read More »

ವಿಟ್ಲದ ಮನೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ವಿಟ್ಲ: ಕನ್ಯಾನದ ಪಂಜಿಗದ್ದೆ ದೇಲಂತಬೆಟ್ಟು ಎಂಬಲ್ಲಿಯ ಮನೆಯೊಂದರಲ್ಲಿ ವ್ಯಕ್ತಿಯೋರ್ವರ ಶವ ಮನೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೌರಿಸ್ ಎಂಬವರ ಮನೆಯಲ್ಲಿ ಕೆಲಸದ ಮಾಡುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದು ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾವಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದು ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಟ್ಲದ ಮನೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಪಿಯುಸಿ ವಿದ್ಯಾರ್ಥಿಗಳಿಗೆ ಸರಕಾರದಿಂದಲೇ ನೀಟ್‌ ಟ್ಯೂಷನ್‌

ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್‌ ಕೊಡಿಸಲು ಪ್ರಯತ್ನ ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೀಟ್ ಕೋಚಿಂಗ್ ಪಡೆಯಲು ಟ್ಯೂಷನ್ ಸೆಂಟರ್​​ಗೆ ಹೋಗಿ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಿಲ್ಲ. ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ಪೂರ್ತಿ ಮಾಡಲು ಸರ್ಕಾರವೇ ನೀಟ್‌ ಕೋಚಿಂಗ್‌ ನೀಡಲಿದೆ. ಪಿಯುಸಿಯ 25 ಸಾವಿರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ತರಬೇತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಉಚಿತ CET, NEET, JEE, ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಶಿಕ್ಷಣ ಸಚಿವ

ಪಿಯುಸಿ ವಿದ್ಯಾರ್ಥಿಗಳಿಗೆ ಸರಕಾರದಿಂದಲೇ ನೀಟ್‌ ಟ್ಯೂಷನ್‌ Read More »

ಬಿಪಿಎಲ್‌ ಕಾರ್ಡ್‌ ರದ್ದು ಮಾಡದಂತೆ ಸಿದ್ದರಾಮಯ್ಯ ಆದೇಶ

ಈಗಾಗಲೇ ರದ್ದಾಗಿರುವ ಕಾರ್ಡ್‌ಗಳನ್ನು ಸರಿಮಾಡಿಕೊಡಲು ಸೂಚನೆ ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವ ವಿಚಾರ ತೀವ್ರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಬಿಪಿಎಲ್‌ ಕಾರ್ಡ್‌ ರದ್ದು ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ.ಸುಮಾರು 11 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿರುವ ಸರಕಾರದ ಕ್ರಮದ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಯಾರೊಬ್ಬರ ಬಿಪಿಎಲ್​ ಕಾರ್ಡ್​​ ರದ್ದು ಮಾಡದಂತೆ ಆಹಾರ

ಬಿಪಿಎಲ್‌ ಕಾರ್ಡ್‌ ರದ್ದು ಮಾಡದಂತೆ ಸಿದ್ದರಾಮಯ್ಯ ಆದೇಶ Read More »

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಇಡಿ.ಅಶ್ವಿನ್ ಎಲ್. ಶೆಟ್ಟಿ ಯವರಿಗೆ ಯುಡೊ(YUDO) ಪ್ರಶಸ್ತಿ

ಪುತ್ತೂರು: 1.S.S Science and Technology University ಜಯಚಾಮರಾಜೇಂದ್ರ ಕಾಲೇಜು ಆಫ್‌ ಇಂಜಿನಿಯರಿಂಗ್ ಮೈಸೂರು ಸಂಸ್ಥೆಯ “POLYMER SCIENCE AND TECHNOLOGY” ವಿಭಾಗದ ವತಿಯಿಂದ ನ.16ರಂದು YUDO ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಂಬೈ ಪ್ರಾಯೋಜಕತ್ವದಲ್ಲಿ “YUDO Best Polymer Technocrat Award 2024” ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮೈಸೂರಿನ ಜೆಎಸ್‍ ಎಸ್‍ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಯುನಿವರ್ಸಿಟಿಯಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸಿ ಈ ಸಂಸ್ಥೆಯು ಸತತ

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಇಡಿ.ಅಶ್ವಿನ್ ಎಲ್. ಶೆಟ್ಟಿ ಯವರಿಗೆ ಯುಡೊ(YUDO) ಪ್ರಶಸ್ತಿ Read More »

ಇನೋವಾಕ್ಕೆ ಡಿಕ್ಕಿ ಹೊಡೆದ ಇನ್ಸುಲೇಟರ್ | ಇನೋವಾ ಪ್ರಯಾಣಿಕರಿಗೆ ಗಾಯ

ಉಡುಪಿ: ಇನೋವಾಕ್ಕೆ ಇನ್ಸುಲೇಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಪ್ರಯಾಣಿಕರು ಗಂಭೀರ  ಗಾಯಗೊಂಡ ಘಟನೆ ಕುಂಭಾಸಿಯಲ್ಲಿ ಇಂದು ನಡೆದಿದೆ. ಇನೋವಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಲ್ಲೂರಿನಿಂದ  ಉಡುಪಿಗೆ ಹೋಗುವ ಸಂದರ್ಭ ಘಟನೆ ನಡೆದಿದ್ದು,  ಇನ್ಸುಲೇಟರ್ ಪಲ್ಟಿಯಾಗಿದ್ದು, ಇನೋವಾ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಇನೋವಾಕ್ಕೆ ಡಿಕ್ಕಿ ಹೊಡೆದ ಇನ್ಸುಲೇಟರ್ | ಇನೋವಾ ಪ್ರಯಾಣಿಕರಿಗೆ ಗಾಯ Read More »

ಸರಕಾರದಿಂದಲೇ ನಮಗೆ ನೇರವಾಗಿ ಸಂಬಳ ಸಿಗುವಂತಾಗಲಿ | ಘನತ್ಯಾಜ್ಯ ಘಟಕ ಸಿಬ್ಬಂದಿಗಳಿಂದ ಶಾಸಕ ಅಶೋಕ್ ರೈ ಗೆ ಮನವಿ

ಪುತ್ತೂರು: ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸರಕಾರದಿಂದಲೇ ನೇರವಾಗಿ ಸಂಬಳ ಸಿಗುವಂತೆ ಮಾಡಬೇಕು, ಈ ಬಗ್ಗೆ ಸಚಿವರು, ಸರಕಾರದ ಜೊತೆ ಮಾತುಕತೆ ನಡೆಸಬೇಕು ಎಂದು ಘನತ್ಯಾಜ್ಯ ಘಟಕದ ಸಿಬ್ಬಂದಿಗಳು ಪುತ್ತೂರು ಶಾಸಕ ಅಶೋಕ್ ರೈಗಳಿಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆ ಸಂಜೀವಿನಿಯಡಿಯಲ್ಲಿ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ದಿಶೆಯಲ್ಲಿ ಆರಂಭಗೊಂಡ ಘನತ್ಯಾಜ್ಯ ಘಟಕದ ಮಹಿಳಾ ಸಿಬ್ಬಂದಿ ಮಹಿಳಾ ಚಾಲಕರು ಹಾಗೂ ನಿರ್ವಾಹಕರಾಗಿ ಆಯ್ಕೆಗೊಂಡು ಸುಮಾರು ವರ್ಷಗಳಿಂದ ಗ್ರಾಮ

ಸರಕಾರದಿಂದಲೇ ನಮಗೆ ನೇರವಾಗಿ ಸಂಬಳ ಸಿಗುವಂತಾಗಲಿ | ಘನತ್ಯಾಜ್ಯ ಘಟಕ ಸಿಬ್ಬಂದಿಗಳಿಂದ ಶಾಸಕ ಅಶೋಕ್ ರೈ ಗೆ ಮನವಿ Read More »

error: Content is protected !!
Scroll to Top