ಬಾಂಗ್ಲಾದೇಶದ ಅಕ್ರಮ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ

ತೆರವು ಮಾಡಿದ ಬಳಿಕ ಮತ್ತೆ ಬಂದು ನೆಲೆಸಿದ್ದ ವಲಸಿಗರು ಬೆಂಗಳೂರು: ಅಕ್ರಮ ಬಾಂಗ್ಲಾದೇಶದ ವಲಸಿಗರು ನೆಲೆಸಿದ್ದ ಶೆಡ್‌ಗಳು ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿಗಾಹುತಿಯಾದ ಘಟನೆ ಬೆಂಗಳೂರು ಹೊರವಲಯದ ಬೇಗೂರಿನ ಎಳೇನಹಳ್ಳಿಯಳ್ಳಿಯಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ನಡೆದಿದೆ. 5 ಎಕ್ರೆ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶೀಯರನ್ನು ಕೆಲ ದಿನಗಳ ಹಿಂದೆ ಸ್ಥಳದಿಂದ ತೆರವುಗೊಳಿಸಲಾಗಿತ್ತು. ಆದರೆ ರಾತ್ರೋರಾತ್ರಿ ಮತ್ತೆ ವಲಸಿಗರು ಇಲ್ಲಿಗೆ ಆಗಮಿಸಿ ಶೆಡ್‌ ಹಾಕಿದ್ದರು. ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳು ಹೊತ್ತಿ ಉರಿದಿದ್ದು ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿತ್ತು. […]

ಬಾಂಗ್ಲಾದೇಶದ ಅಕ್ರಮ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ Read More »

ಕುಂಬಳೆ ಆರಿಕ್ಕಾಡಿ ಟೊಲ್‌ಗೇಟ್‌ ಧ್ವಂಸಗೈದ ಪ್ರತಿಭಟನೆಕಾರರು

ರಾತ್ರಿ ನಡೆದ ಪ್ರತಿಭಟನೆಯಲ್ಲಿ ಟೋಲ್‌ಗೇಟ್‌ನ ಕ್ಯಾಮರಾ, ಗೇಟ್‌, ಕಚೇರಿ ಧ್ವಂಸ ಕಾಸರಗೋಡು : ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್‌ ವಿರುದ್ಧ ನಡೆಯುತ್ತಿರುವ ಹೋರಾಟ ಹಿಂಸೆಗೆ ತಿರುಗಿದ್ದು, ಪ್ರತಿಭಟನಾಕಾರರು ಬುಧವಾರ ರಾತ್ರಿ ಟೋಲ್‌ಗೇಟ್ ಕ್ಯಾಮರಾ ಹಾಗೂ ಗಾಜುಗಳನ್ನು ಪುಡಿಗೈದಿದ್ದಾರೆ. ಹೋರಾಟಕ್ಕೆ ಬೆಂಬಲವಾಗಿ ಕುಂಬಳೆ ಪೇಟೆಯಿಂದ ಬಂದ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್‌ಗೇಟ್‌ನ ಕ್ಯಾಮರಾಗಳನ್ನು ಧ್ವಂಸಗೊಳಿಸಿದ್ದು, ಕಚೇರಿ ಗಾಜುಗಳನ್ನು ಹಾನಿಗೊಳಿಸಿದ್ದಾರೆ. ವಾಹನಗಳನ್ನು ತಡೆಯುವ ಹ್ಯಾಂಡಲ್‌ಗಳನ್ನು ಕಿತ್ತೆಸೆದಿದ್ದಾರೆ. ಸ್ಕ್ಯಾನರ್‌ಗಳಿಗೆ ಕಪ್ಪು ಸ್ಟಿಕ್ಕರ್ ಅಂಟಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ

ಕುಂಬಳೆ ಆರಿಕ್ಕಾಡಿ ಟೊಲ್‌ಗೇಟ್‌ ಧ್ವಂಸಗೈದ ಪ್ರತಿಭಟನೆಕಾರರು Read More »

ಪೌರಾಯುಕ್ತೆಯನ್ನು ನಿಂದಿಸಿದ ಕಾಂಗ್ರೆಸ್‌ ಮುಖಂಡನ ವಿರುದ್ಧ ಎರಡು ಎಫ್‌ಐಆರ್‌

ಬಿಜೆಪಿ-ಜೆಡಿಎಸ್‌ ಕೈಗೆ ಕಾಂಗ್ರೆಸ್‌ ಟೀಕಿಸಲು ಸಿಕ್ಕಿದ ಹೊಸ ಅಸ್ತ್ರ ಚಿಕ್ಕಬಳ್ಳಾಪುರ : ಶಿಡ್ಲಘಟ್ಟದ ಪೌರಾಯುಕ್ತೆ ಅಮೃತ ಗೌಡ ಹಾಗೂ ಜೆಡಿಎಸ್ ಶಾಸಕರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಈಗ ಎರಡೆರಡು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಬಂಧನದ ಭೀತಿಯಿಂದಾಗಿ ತಲೆಮರೆಸಿಕೊಂಡಿದ್ದಾರೆ. ಜನಪ್ರತಿನಿಧಿ ಅಲ್ಲದಿದ್ದರೂ ಆಡಳಿತದಲ್ಲಿ ಹಸ್ತಕ್ಷೇಪದ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ. ಈ ಪ್ರಕರಣ ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಂಗ್ರೆಸ್‌ ಮೇಲೆ ದಾಳಿ ಮಾಡಲು ಬಿಜೆಪಿಗೆ ಮತ್ತೊಂದು

ಪೌರಾಯುಕ್ತೆಯನ್ನು ನಿಂದಿಸಿದ ಕಾಂಗ್ರೆಸ್‌ ಮುಖಂಡನ ವಿರುದ್ಧ ಎರಡು ಎಫ್‌ಐಆರ್‌ Read More »

ಮಂಗಳೂರಿಗೆ ಬೈಪಾಸ್, ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಪ್ರಯತ್ನಕ್ಕೆ ಸಿಕ್ಕಿದ ಯಶಸ್ಸು ಮಂಗಳೂರು : ಮಂಗಳೂರು ಬೈಪಾಸ್ ಮೂಲಕ ಹಾದು ಹೋಗುವ ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ಅಗಲೀಕರಣ ಹಾಗೂ ತಲಪಾಡಿಯಿಂದ ಕುಂದಾಪುರದವರೆಗಿನ ಎನ್‌ಹೆಚ್-66ರ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಆ ಮೂಲಕ ಕರಾವಳಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅವಿರತ ಪರಿಶ್ರಮದಿಂದಾಗಿ ಕರಾವಳಿಯಲ್ಲಿ ಹಾದುಹೋಗುವ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಕ್ಕೆ ಮೊದಲ ಹಂತದ

ಮಂಗಳೂರಿಗೆ ಬೈಪಾಸ್, ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ Read More »

ಶಾಲೆಗಳಲ್ಲಿ ವಾಟರ್‌ ಬೆಲ್‌ ಪದ್ಧತಿ ಅಳವಡಿಸಲು ಆದೇಶ

ಮಕ್ಕಳಿಗೆ ನೀರು ಕುಡಿಯಲು ನೆನಪಿಸುವ ವಾಟರ್‌ ಬೆಲ್‌ ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು ಇನ್ಮುಂದೆ `ವಾಟರ್ ಬೆಲ್’ ಸಮಯ ನಿಗದಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ರಾಜ್ಯದಲ್ಲಿರುವ ಎಲ್.ಕೆ.ಜಿ, ಯು.ಕೆ.ಜಿ ಒಳಗೊಂಡಂತೆ ಸರ್ಕಾರಿ, ಅನುದಾನಿತ

ಶಾಲೆಗಳಲ್ಲಿ ವಾಟರ್‌ ಬೆಲ್‌ ಪದ್ಧತಿ ಅಳವಡಿಸಲು ಆದೇಶ Read More »

ಕಳಪೆ ಬೌಲಿಂಗ್‌, ಫೀಲ್ಡಿಂಗ್‌ನಿಂದ ಸೋತ ಭಾರತ

ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ 7 ವಿಕೆಟ್‌ಗಳ ಅಮೋಘ ಜಯ ರಾಜ್‌ಕೋಟ್‌: ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಡೇರಿಯಲ್‌ ಮಿಚೆಲ್‌ ಮತ್ತು ವಿಲ್‌ ಯಂಗ್‌ ಶತಕದ ಜೊತೆಯಾಟ ನೆರವಿನಿಂದ ಭಾರತದ ವಿರುದ್ಧ ನ್ಯೂಜಿಲೆಂಡ್‌ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ 1-1 ರಲ್ಲಿ ಸಮಬಲಗೊಂಡಿದೆ.ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಭಾರತ ಕೆ.ಎಲ್‌.ರಾಹುಲ್‌ ಅವರ ಶತಕದ ನೆರವಿನಿಂದ 7 ವಿಕೆಟ್‌

ಕಳಪೆ ಬೌಲಿಂಗ್‌, ಫೀಲ್ಡಿಂಗ್‌ನಿಂದ ಸೋತ ಭಾರತ Read More »

ಧನುಪೂಜೆಗೆ ಹೋಗಿದ್ದ ಬಾಲಕ ನಾಪತ್ತೆ ಪ್ರಕರಣ: ಮೃತ ದೇಹ ಕೆರೆಯಲ್ಲಿ ಪತ್ತೆ

ಮಡಂತ್ಯಾರ್: ಬೆಳಗ್ಗೆ ಧನುಪೂಜೆಗೆಂದು ಮನೆಯಿಂದ ದೇವಸ್ಥಾನಕ್ಕೆ ಹೋದ ಬಾಲಕ ನಾಪತ್ತೆ ಪ್ರಕರಣ ದುಃಖಾಂತ್ಯವಾಗಿದ್ದು, ಬಾಲಕನ ಮೃತ ದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಎಂದಿನಂತೆ ಗೆಳೆಯರ ಜೊತೆಗೆ ಧನುಪೂಜೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಸಂಬೋಳ್ಯದ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ 9 ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಮೃತ ದುರ್ದೈವಿ. ಎಂದಿನಂತೆ ಆತನ ಗೆಳೆಯರು ಧನುಪೂಜೆಗೆ ಹೋಗಲು ಆತನಿಗಾಗಿ ಕಾದಿದ್ದು, ಆತ ಬರದೇ ಇದ್ದಾಗ ಅವರು ಪೂಜೆಗೆ ತೆರಳಿದ್ದಾರೆ. ಪೂಜೆ ಯಿಂದ. ಮರಳಿ ಸುಮಂತ್ ಮನೆಗೆ

ಧನುಪೂಜೆಗೆ ಹೋಗಿದ್ದ ಬಾಲಕ ನಾಪತ್ತೆ ಪ್ರಕರಣ: ಮೃತ ದೇಹ ಕೆರೆಯಲ್ಲಿ ಪತ್ತೆ Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಇಂದು ರಜೆ ನಾಳೆ

ಜ.15ರಂದು ಸರ್ಕಾರಿ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಘೋಷಿಸಲಾದ ಸರ್ಕಾರಿ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಜನವರಿ 15ರಂದು ರಜೆ ನೀಡಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಜಿಲ್ಲೆಯಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದ್ದು, ಜನವರಿ 15ರಂದು ಸರ್ಕಾರಿ ರಜೆ ನಿಗದಿಪಡಿಸಿರುವುದಕ್ಕೆ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಸ್ಪೀಕರ್ ಯು.ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ವಿಷಯವನ್ನು ಸರ್ಕಾರದ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಇಂದು ರಜೆ ನಾಳೆ Read More »

ವಿಷಪ್ರಾಶನ ಮಾಡಿ 500 ಬೀದಿನಾಯಿಗಳ ಹತ್ಯೆ

ಚುನಾವಣೆ ಸಮಯದಲ್ಲಿ ನೀಡಿದ ಭರವಸೆ ಈಡೇರಿಸಲು ನಾಯಿಗಳನ್ನು ಕೊಂದು ಹಾಕಿದ ದೂರು ದಾಖಲು ಹೈದರಾಬಾದ್: ತೆಲಂಗಾಣದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಯ ಆರೋಪಗಳು ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಕಳೆದ ಒಂದು ವಾರದಲ್ಲಿ 500 ನಾಯಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ. ಕಾಮರೆಡ್ಡಿ ಜಿಲ್ಲೆಯ ಭವಾನಿಪೇಟ್, ಪಲ್ವಂಚ, ಫರೀದ್‌ಪೇಟ್, ವಾಡಿ ಮತ್ತು ಬಂಡರಾಮೇಶ್ವರಪಲ್ಲಿ ಸೇರಿದಂತೆ ಹಳ್ಳಿಗಳಲ್ಲಿ ಬೀದಿನಾಯಿಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗಿದೆ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತ ಅದುಲಪುರಂ ಗೌತಮ್ (35) ಜನವರಿ 12ರಂದು

ವಿಷಪ್ರಾಶನ ಮಾಡಿ 500 ಬೀದಿನಾಯಿಗಳ ಹತ್ಯೆ Read More »

ಧನು ಪೂಜೆಗೆಂದು ತೆರಳಿದ ಬಾಲಕ ನಾಪತ್ತೆ

ಮಡಂತ್ಯಾರು: ಬೆಳಗ್ಗೆ ಧನು ಪೂಜೆಗೆಂದು ಹೋದ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಒಡಿಲ್ನಾಳ ಗ್ರಾಮದ ಸಂಭೋಳ್ಯದಲ್ಲಿ ನಡೆದಿದೆ. ಸುಮಂತ್ (16) ಎಂಬವನೇ ನಾಪತ್ತೆಯಾದ ವಿದ್ಯಾರ್ಥಿ. ಪ್ರತಿದಿನವೂ ಗೆಳೆಯರ ಜೊತೆಗೆ ಹೋಗುತ್ತಿದ್ದ ಬಾಲಕ ಇಂದು ಬಂದಿಲ್ಲ ಎನ್ನುವ ಮಾಹಿತಿ ಸ್ನೇಹಿತರಿಂದ ದೊರೆತಿದ್ದು, ಈ ವೇಳೆ ನಾಪತ್ತೆಯಾಗಿರುವ ವಿಚಾರ ತಿಳಿದಿದೆ. ತೋಟದ ಬದಿಯ ಪ್ರದೇಶದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಚಿರತೆಗಳು ಓಡಾಡುತ್ತಿವೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಬಾಲಕ ನಾಪತ್ತೆಗೆ ಸಂಬಂಧಿಸಿದ ಹಾಗೆ ಅನುಮಾನ ವ್ಯಕ್ತವಾಗಿದೆ. ಬೆಳ್ತಂಗಡಿ

ಧನು ಪೂಜೆಗೆಂದು ತೆರಳಿದ ಬಾಲಕ ನಾಪತ್ತೆ Read More »

error: Content is protected !!
Scroll to Top