ಮನೆ ಅಂಗಳಕ್ಕೆ ನುಗ್ಗಿದ ಆಂಬುಲೆನ್ಸ್

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ನೆಕ್ಕಿಲಾಡಿಯಲ್ಲಿ ನಡೆದಿದೆ. ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಅಂಬ್ಯುಲೆನ್ಸ್ , ವನಸುಮ ನರ್ಸರಿ ರಸ್ತೆಯಲ್ಲಿರುವ  ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ ಮನೆಯ ಅವರಣ ಗೋಡೆಗೆ ಹಾನಿಯಾಗಿದ್ದು, ಆ್ಯಂಬುಲೆನ್ಸ್ ಮನೆಯ ಗೋಡೆಗೆ ಢಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಸಂದರ್ಭ ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು,  ಅಪಾಯದಿಂದ ಪಾರಾಗಿದ್ದಾರೆ.

ಮನೆ ಅಂಗಳಕ್ಕೆ ನುಗ್ಗಿದ ಆಂಬುಲೆನ್ಸ್ Read More »

ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾದ ಸೋನಿಯಾ – ಸೊರೊಸ್‌ ಕಂಪನಿ ನಂಟಿನ ಆರೋಪ

ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ವಿಚಾರದ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಪಟ್ಟು ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್‌ ಅದಾನಿ ನಂಟಿನ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಸೋನಿಯಾ ಗಾಂಧಿ ಮತ್ತು ಅಮೆರಿಕದ ವಿವಾದಾತ್ಮಕ ಉದ್ಯಮಿ ಜಾರ್ಜ್ ಸೊರೊಸ್ ಒಡೆತನದ ಸಂಸ್ಥೆಗಳ ಜೊತೆಗಿರುವ ನಂಟನ್ನು ಬಹಿರಂಗಗೊಳಿಸಿ ತಿರುಗೇಟು ನೀಡಿದ್ದು, ಈ ವಿಚಾರ ಈಗ ರಾಷ್ಟ್ರ ರಾಜಕಾರಣದಲ್ಲಿ ಬಹಳ ಚರ್ಚೆಗೀಡಾಗುತ್ತಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಂಟು ಬಹಳ ಗಂಭೀರ ವಿಚಾರ ಎಂದು

ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾದ ಸೋನಿಯಾ – ಸೊರೊಸ್‌ ಕಂಪನಿ ನಂಟಿನ ಆರೋಪ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಸದಸ್ಯರಿಗೆ  ಲಾಭಾಂಶ  ವಿತರಣೆ

ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಸದಸ್ಯರಿಗೆ  ಲಾಭಾಂಶ  ವಿತರಣೆ ಮಾಡಲಾಯಿತು. ಪೆರ್ನೆ ವಲಯದ  ಪೆರಾಜೆ ನೇರಳಕಟ್ಟೆ ಒಕ್ಕೂಟಗಳ  ಗಜಾನನ ಪ್ರಗತಿ ಬಂಧು ಸಂಘ, ಸ್ವರ್ಣ ನಿಧಿ ಪ್ರಗತಿ  ಬಂಧು ಸಂಘ ದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಲಾಭಾಂಶ  ವಿತರಿಸಲಾಗಿದೆ. ಪೆರ್ನೆ ವಲಯ ಮೇಲ್ವಿಚಾರಕರಾದ  ಶಾರದಾ, ಸೇವಾಪ್ರತಿನಿಧಿ ರಮ್ಲತ್ ವಿತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಸದಸ್ಯರಿಗೆ  ಲಾಭಾಂಶ  ವಿತರಣೆ Read More »

40ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ : ಬೆಚ್ಚಿಬಿದ್ದ ರಾಜಧಾನಿ

ಹುಸಿ ಬೆದರಿಕೆ ಕಳುಹಿಸಿ ಕಾಟ ಕೊಡುತ್ತಿರುವವರಿಗೆ ಶೋಧ ಹೊಸದಿಲ್ಲಿ: ದಿಲ್ಲಿಯ 40ಕ್ಕೂ ಅಧಿಕ ಖಾಸಗಿ ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಇ-ಮೇಲ್‌ ಮೂಲಕ ಬಾಂಬಿಟ್ಟಿರುವ ಕುರಿತು ಬಂದಿದ್ದ ಬೆದರಿಕೆ ಸಂದೇಶ ತಾಸುಗಳಷ್ಟು ಹೊತ್ತು ಆತಂಕಕ್ಕೆ ಕಾರಣವಾಯಿತು. ಪೊಲೀಸರು ಬಾಂಬ್‌ ನಿಷ್ಕ್ರಿಯ ತಂಡದೊಂದಿಗೆ ಶಾಲೆಯಿಂದ ಶಾಲೆಗೆ ಅಲೆದಾಡಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೇಳಿದ ಬಳಿಕ ಪರಿಸ್ಥಿತಿ ನಿರಾಳವಾಯಿತು.40ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ. ಇನ್ನು ಮುಂದೆ ಬೆದರಿಕೆ ಬರಬಾರದು ಎಂದಾದರೆ 30 ಸಾವಿರ ಡಾಲರ್

40ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ : ಬೆಚ್ಚಿಬಿದ್ದ ರಾಜಧಾನಿ Read More »

ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ: ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು

ಪುತ್ತೂರು: ನಾವು ಉಪ್ಪಿನಂಗಡಿಯಿಂದ ವಿಟ್ಲ ಐಟಿಐ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದೇವೆ, ನಮಗೆ ಬೊಳುವಾರಿನಿಂದ ವಿಟ್ಲ ಎಂದು ಬಸ್ ಪಾಸ್ ಕೊಟ್ಟಿದ್ದಾರೆ. ಮನೆಯಿಂದ ಕಾಲೇಜಿಗೆ ಬರುವಾಗ ನಾವು ಬೊಳುವಾರಿನ ಇಳಿಯಬೇಕು ಕಾಲೇಜು ಮುಗಿಸಿ ಬರುವಾಗಲೂ ನಾವು ಬೊಳುವಾರಿನಲ್ಲೇ ಇಳಿಯಬೇಕು. ಬೊಳುವಾರಿನಲ್ಲಿ ಇಳಿದರೆ ನಮಗೆ ಬಸ್ ಸಿಗುವುದಿಲ್ಲ ನಮಗೆ ಬಸ್ ಸ್ಟ್ಯಾಂಡ್ ವರೆಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ವಿಟ್ಲ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲಿ ಸಿದ್ದಾರೆ. ವಿಟ್ಲದ ಐಟಿಐ ಕಾಲೇಜಿನಲ್ಲಿ ಕಾಮಗಾರಿ

ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ: ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು Read More »

ಹೂವಿನ ವ್ಯಾಪರಿ ಕೆ. ಸೀತಾರಾಮ ಗೌಡ ನಿಧನ

ಪುತ್ತೂರು: ಪುತ್ತೂರು ವಿನಾಯಕ ಪ್ಲವರ್ಸ್ ಮಾಲಕ ಕೆ. ಸೀತಾರಾಮ ಗೌಡ (52 , ಡಿ. 8ರಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.   ದರ್ಬೆ ಪರ್ಲಡ್ಕ ನಿವಾಸಿಯಾಗಿದ್ದು, ಸುಮಾರು 30 ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿಯ ದ್ವಾರದಲ್ಲಿ ಹೂವಿನ ಅಂಗಡಿಯಿಟ್ಟು ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಹೇಮಾವತಿ, ಮಕ್ಕಳಾದ ಅಂಕಿತಾ, ಯಕ್ಷಿತಾ ಅವರನ್ನು ಅಗಲಿದ್ದಾರೆ.

ಹೂವಿನ ವ್ಯಾಪರಿ ಕೆ. ಸೀತಾರಾಮ ಗೌಡ ನಿಧನ Read More »

ಜೋಕಾಲಿಯ ಹಗ್ಗ ಸಿಲುಕಿ ಬಾಲಕಿ ಮೃತ್ಯು

ವಿಟ್ಲ : ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ (8) ಜೋಕಾಲಿಗೆ ಬಲಿಯಾದ ಬಾಲಕಿ, ಶೇರಾ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆಗೆ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿದ ದುರಂತ ಸಂಭವಿಸಿದೆ

ಜೋಕಾಲಿಯ ಹಗ್ಗ ಸಿಲುಕಿ ಬಾಲಕಿ ಮೃತ್ಯು Read More »

ಹುಷಾರ್‌! ಇಡೀ ಮೊಬೈಲನ್ನೇ ಹ್ಯಾಕ್‌ ಮಾಡಿ ಹಣ ಎಗರಿಸುತ್ತಾರೆ

ಎಪಿಕೆ ಮಾದರಿಯ ಫೈಲ್ ಕಳುಹಿಸಿ ಮಂಗಳೂರಿನ ವ್ಯಕ್ತಿಗೆ ವಂಚನೆ ಮಂಗಳೂರು : ಪೊಲೀಸರು ಚಾಪೆ ಕೆಳಗೆ ತೂರಿದರೆ ಸೈಬರ್‌ ವಂಚಕರು ರಂಗೋಲಿ ಕೆಳಗೆ ತೂರುವ ಕಲೆಯನ್ನು ಕರಗತಮಾಡಿಕೊಳ್ಳುತ್ತಿದ್ದಾರೆ. ಇಷ್ಟರ ತನಕ ಮೊಬೈಲ್‌ನಲ್ಲಿರುವ ಕೆಲವು appಗಳನ್ನು ಹ್ಯಾಕ್‌ ಮಾಡಿ ಬ್ಯಾಂಕ್‌ ಖಾತೆಗಳಲ್ಲಿರುವ ಹಣ ಲಪಟಾಯಿಸುತ್ತಿದ್ದ ವಂಚಕರು ಈಗ ಇಡೀ ಮೊಬೈಲನ್ನೇ ಹ್ಯಾಕ್‌ ಮಾಡುವ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಇಂಥ ಪ್ರಕರಣವೊಂದು ನಡೆದಿದ್ದು, ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ವಾಟ್ಸಪ್‌ಗೆ ನಕಲಿ ಎಪಿಕೆ ಮಾದರಿಯ

ಹುಷಾರ್‌! ಇಡೀ ಮೊಬೈಲನ್ನೇ ಹ್ಯಾಕ್‌ ಮಾಡಿ ಹಣ ಎಗರಿಸುತ್ತಾರೆ Read More »

ಬನ್ನೆಂಗಳದ ಸಮೃದ್ಧಿ ನಿವಾಸದಲ್ಲಿ ಭಾನುಮತಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 56ನೇ ತಾಳಮದ್ಧಳೆ ಭಾನುಮತಿ ಕಲ್ಯಾಣ  ಬನ್ನೆಂಗಳ ಸಮೃದ್ಧಿ ನಿವಾಸದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್. ಬಿ,ನಿತೀಶ್ ಕುಮಾರ್. ವೈ, ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್, ಗುಡ್ಡಪ್ಪ ಬಲ್ಯ (ಬಾಹ್ಲಿಕ ರಾಜ ), ಶ್ಶ್ರುತಿ  ವಿಸ್ಮಿತ್ (ವನಚರರು, ಮಂತ್ರಿ

ಬನ್ನೆಂಗಳದ ಸಮೃದ್ಧಿ ನಿವಾಸದಲ್ಲಿ ಭಾನುಮತಿ ಕಲ್ಯಾಣ ತಾಳಮದ್ದಳೆ Read More »

ಇಂದಿನಿಂದ ಚಳಿಗಾಲದ ಅಧಿವೇಶನ : ವಿಪಕ್ಷದ ಬತ್ತಳಿಕೆಯಲ್ಲಿದೆ ಹಲವು ಅಸ್ತ್ರ

ಮೊದಲ ದಿನವೇ ಕೋಲಾಹಲದ ನಿರೀಕ್ಷೆ ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ದಗೊಂಡಿವೆ. ಮುಡಾ, ವಾಲ್ಮೀಕಿ ನಿಗಮ, ವಕ್ಫ್‌ನಿಂದ ರೈತರ ಭೂ ಕಬಳಿಕೆ ವಿವಾದ, ಬಾಣಂತಿಯರ ಸಾವು ಪ್ರಕರಣ ಹೀಗೆ ಹಲವು ಅಸ್ತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ವಿರೋಧ ಪಕ್ಷದವರು ಸಜ್ಜಾಗಿದ್ದಾರೆ. ಬಿಜೆಪಿ ಅಸ್ತ್ರಗಳಿಗೆ ಕಾಂಗ್ರೆಸ್ ಕೊರೊನ ಅಸ್ತ್ರ ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನು ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ. ಬಿಜೆಪಿ ವಕ್ಫ್

ಇಂದಿನಿಂದ ಚಳಿಗಾಲದ ಅಧಿವೇಶನ : ವಿಪಕ್ಷದ ಬತ್ತಳಿಕೆಯಲ್ಲಿದೆ ಹಲವು ಅಸ್ತ್ರ Read More »

error: Content is protected !!
Scroll to Top