ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌

ರಶ್ಮಿಕಾ ಮಂದಣ್ಣ ಬೆಳೆದು ಬಂದ ದಾರಿ ನಿಜಕ್ಕೂ ವಿಸ್ಮಯ ಇಂದು ಇಡೀ ಭಾರತದ ಸಿನೆಮಾ ಇಂಡಸ್ಟ್ರಿ ಆಕೆಯ ಸೌಂದರ್ಯ ಮತ್ತು ಪ್ರತಿಭೆಗೆ ಬೆರಗಾಗಿದೆ. ಆಕೆಯನ್ನು ಸಿನೆಮಾ ಪಂಡಿತರು ಭಾರತದ ಕೃಶ್‌ ಎಂದು ಕರೆಯಲು ಆರಂಭಿಸಿದ್ದಾರೆ. ಆಕೆ ಇಂದು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿ ಎಂದು ಕರೆಯಲ್ಪಟ್ಟಿದ್ದಾರೆ. ಭಾರತದ ಹೆಚ್ಚಿನ ಸೂಪರ್‌ಸ್ಟಾರ್ ನಟರ ಜೊತೆ ಆಕೆ ನಟಿಸಿ ಆಗಿದೆ. ದಕ್ಷಿಣ ಭಾರತದ ಒಬ್ಬ ನಟಿ ಅಮಿತಾಬ್, ಸಲ್ಮಾನ್ ಖಾನ್ ಮೊದಲಾದ ಮಹಾನ್ ನಟರ ಸಿನೆಮಾದಲ್ಲಿ […]

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌ Read More »

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್‍ ಟ್ರಸ್ಟ್ ನಿಂದ “ನೆರಳು” ಮನೆ ಹಸ್ತಾಂತರ | ವಿವಿಧ ಚಾರಿಟೇಬಲ್‍ ಟ್ರಸ್ಟ್, ಸಹಕರಿಸಿದವರಿಗೆ ಸನ್ಮಾನ, ಗೌರವಾರ್ಪಣೆ

ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್‍ ಟ್ರಸ್ಟ್ ಕರ್ನಾಟಕದ ವತಿಯಿಂದ ಬಡ ರೇವತಿ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿಕೊಟ್ಟ ನೂತನ ಮನೆ “ನೆರಳು” ಇದರ ಹಸ್ತಾಂತರ ಸಮಾರಂಭ ಹಾಗೂ ಸೇವಾ ಸಾಧಕರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ ಭಾನುವಾರ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಠಾಣಾ ಇನ್‍ ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಜೀವನದಲ್ಲಿ ಸಹಾಯ ಮಾಡುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪ್ರೀತಿಯಿಂದ, ಆದರತೆಯಿಂದ ದಾನ ಮಾಡಿದರೆ ಅದು ನಿಜವಾದ ಸಮಾಜ ಸೇವೆ.

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್‍ ಟ್ರಸ್ಟ್ ನಿಂದ “ನೆರಳು” ಮನೆ ಹಸ್ತಾಂತರ | ವಿವಿಧ ಚಾರಿಟೇಬಲ್‍ ಟ್ರಸ್ಟ್, ಸಹಕರಿಸಿದವರಿಗೆ ಸನ್ಮಾನ, ಗೌರವಾರ್ಪಣೆ Read More »

ವಿವೇಕಾನಂದ ಶಿಶುಮಂದಿರದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯ ಆರಂಭ

ಪುತ್ತೂರು: ಪುತ್ತೂರು ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದಲ್ಲಿ ದೇವಾಲಯಗಳ ಸಂವರ್ಧನ ಸಮಿತಿ ವತಿಯಿಂದ  ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯನ್ನು, ಶುಕ್ರವಾರ ಆರಂಭಿಸಲಾಯಿತು ಕೃಷ್ಣವೇಣಿ ಪ್ರಸಾದ್ ಮುಳಿಯ ಹಿಂದೂ ಧಾರ್ಮಿಕ ಶಿಕ್ಷಣದ ಉದ್ದೇಶ ಮತ್ತು ಅದರ ವಿಶೇಷತೆಗಳನ್ನು ತಿಳಿಸಿದರು. ಬಳಿಕ ಶ್ಲೋಕವೊಂದರ ಅರ್ಥ, ದೈನಂದಿನ ಜೀವನದಲ್ಲಿ ಆಚಾರ – ವಿಚಾರಗಳು ವೈಜ್ಞಾನಿಕ ತಳಹದಿ ಮೇಲೆ  ಪರಂಪರಾಗತವಾಗಿ ಹೇಗೆ ರೂಪುಗೊಂಡಿವೆ ಎಂಬುದನ್ನು ವಿವರಿಸಿ, ಭಜನೆ ನಡೆಸಿಕೊಟ್ಟರು. ಶಂಕರಿ ಶರ್ಮ ಕನ್ನಡದ ಭಗವದ್ಗೀತೆ ಎನಿಸಿಕೊಂಡಿರುವ ಡಿ.ವಿ.ಜಿ.ಯವರ ಕಗ್ಗವೊಂದನ್ನು ಪ್ರಸ್ತುತಪಡಿಸಿದರು. ಮುಂದೆ, ಅದರ ಅರ್ಥವನ್ನು

ವಿವೇಕಾನಂದ ಶಿಶುಮಂದಿರದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯ ಆರಂಭ Read More »

ಡಿ.20-21 : ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಬಿಡುಗಡೆ

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಯ್ಯಪ್ಪ ಸೇವಾ ಸಮಿತಿ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ಹಿರಿತನದಲ್ಲಿ ಡಿ.20-ಡಿ.21ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಭಾನುವಾರ ಶ್ರೀ ಕೌಡಿಚ್ಚಾರು ಶ್ರೀ ಕೃಷ್ಣ ಸಭಾಭವನದಲ್ಲಿ ಬಿಡುಗಡೆಗೊಂಡಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ  ವಾಸು ಪೂಜಾರಿ ಗುಂಡ್ಯಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ,ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಈ ಬಾರಿ ಅಯ್ಯಪ್ಪ ದೀಪೋತ್ಸವ ನಡೆಯುತ್ತಿರುವುದು ಸಂತಸದ ವಿಚಾರ.ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿ

ಡಿ.20-21 : ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಬಿಡುಗಡೆ Read More »

ಮುಳಿಯ ಸಂಸ್ಥಾಪಕರ ದಿನದ ಆಂಗವಾಗಿ ಗ್ರಾಹಕರು ಖರೀದಿಸಿದ ಪ್ರತೀ ಗ್ರಾಂ ಚಿನ್ನದಲ್ಲಿ 50 ರೂ. ಸಾಮಾಜಿಕ ಉದ್ದೇಶಕ್ಕೆ | ‘ಮುಳಿಯರ-ಅಳಿಯದ ನೆನಪು’ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನದ ಅಂಗವಾಗಿ ಗ್ರಾಹಕರು ಖರೀದಿಸಿದ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂಪಾಯಿಯನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸುವ ಕಾರ್ಯಕ್ಕೆ ಮುಂದಾಗಿದೆ. ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರಾದ ದಿ. ಮುಳಿಯ ಕೇಶವ ಭಟ್ಟ ಅವರು ಜನಿಸಿ 127 ವರ್ಷಗಳಾಗಿದ್ದು, ಇದರ ಅಂಗವಾಗಿ ‘ಮುಳಿಯರ – ಅಳಿಯದ ನೆನಪು’ ಕಾರ್ಯಕ್ರಮವನ್ನು ಡಿ.7, 8, 9ರಂದು ಹಾಕಿಕೊಳ್ಳಲಾಗಿದೆ. ಇದರ ಅಂಗವಾಗಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸದೆ, ಅವರು ಖರೀದಿಸುವ ಚಿನ್ನದ ಗ್ರಾಂ ಲೆಕ್ಕದಲ್ಲಿ ೫೦ ರೂ

ಮುಳಿಯ ಸಂಸ್ಥಾಪಕರ ದಿನದ ಆಂಗವಾಗಿ ಗ್ರಾಹಕರು ಖರೀದಿಸಿದ ಪ್ರತೀ ಗ್ರಾಂ ಚಿನ್ನದಲ್ಲಿ 50 ರೂ. ಸಾಮಾಜಿಕ ಉದ್ದೇಶಕ್ಕೆ | ‘ಮುಳಿಯರ-ಅಳಿಯದ ನೆನಪು’ ಕಾರ್ಯಕ್ರಮಕ್ಕೆ ಚಾಲನೆ Read More »

ಉಳ್ಳಾಲ : ಮನೆಯಲ್ಲಿ ಸಿಲಿಂಡರ್‌ ಸ್ಫೋಟ; ತಾಯಿ ಮೂವರು ಮಕ್ಕಳು ಗಂಭೀರ

ಗ್ಯಾಸ್‌ ಸೋರಿಕೆಯಾಗಿ ಸ್ಫೋಟಿಸಿದ ಸಿಲಿಂಡರ್‌, ಹಾರಿಹೋದ ಛಾವಣಿ ಮಂಗಳೂರು : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಮನೆಯೊಳಗೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಗ್ಯಾಸ್ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ಬಿರುಸಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಮಲಗಿದ್ದ ಮಂಚ ಸುಟ್ಟು ಕರಕಲಾಗಿದೆ.ತಾಯಿ ಖುಬ್ರಾ (40) ಹಾಗೂ ಮೂವರು ಮಕ್ಕಳಾದ ಮೆಹದಿ (15), ಮಝಿಯಾ (13), ಮಾಯಿದಾ (11) ಘಟನೆಯಲ್ಲಿ ತೀವ್ರ ಗಾಯಗೊಂಡವರು.

ಉಳ್ಳಾಲ : ಮನೆಯಲ್ಲಿ ಸಿಲಿಂಡರ್‌ ಸ್ಫೋಟ; ತಾಯಿ ಮೂವರು ಮಕ್ಕಳು ಗಂಭೀರ Read More »

ಹಣ ವಂಚನೆ ಪ್ರಕರಣ | ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು: ಹಣ ಹೂಡಿಕೆಯ ಯೋಜನೆಯ ಮೂಲಕ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ  ಕಳೆದ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದ ಸಕಾರ ನಿವಾಸಿ ಸೋಮೇಶ್ವರ (38) ಬಂಧಿತ ಆರೋಪಿ. ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡೆ ನಿವಾಸಿ ಗಣೇಶ್ ಅವರು ಕುಶಾಲನಗರದಲ್ಲಿ ಹಿಂದುಸಿನ್ ಇಸ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಲ್ಲಿ ಪ್ರತಿನಿಧಿಯಾಗಿರುವ ಸಂದರ್ಭ ಅವರು ಆರೋಪಿ

ಹಣ ವಂಚನೆ ಪ್ರಕರಣ | ತಲೆಮರೆಸಿಕೊಂಡಿದ್ದ ಆರೋಪಿ ಬಂಧನ Read More »

ಅಡಿಲೇಡ್‌ ಟೆಸ್ಟ್‌ : ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ 19 ರನ್‌ ಗುರಿ, ಮೂರೇ ದಿನಕ್ಕೆ ಆಟ ಫಿನಿಷ್‌ ಅಡಿಲೇಡ್​​: ಇಲ್ಲಿನ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​​ನಲ್ಲಿ ಭಾರತ ತಂಡವು ಕೇವಲ 175 ರನ್​​ಗಳಿಗೆ ಆಲೌಟ್ ಆಗಿದೆ. ಈ ಆಲೌಟ್​​ನೊಂದಿಗೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​​ನಲ್ಲಿ ಕೇವಲ 19 ರನ್​ಗಳ ಸುಲಭ ಗುರಿ ಪಡೆದುಕೊಂಡು, 10 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್

ಅಡಿಲೇಡ್‌ ಟೆಸ್ಟ್‌ : ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ  ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,  ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ 10ನೇ ತರಗತಿಯ ವೈಷ್ಣವಿ ಪೈ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 9ನೇ ತರಗತಿಯ ನಿಲಿಷ್ಕಾ ಚಿತ್ರಕಲೆಯಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ  ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ Read More »

ದ.ಕ., ಕೊಡಗು ಗೌಡ ಸಮಾಜದಿಂದ ಸ್ನೇಹ ಮಿಲನ, ಷಷ್ಟ್ಯಾಬ್ದಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ | ಬೆಂಗಳೂರು ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ

ಕೊಡಗು: ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ ಸಮಾಜ ಬೆಂಗಳೂರು ವತಿಯಿಂದ ಸ್ನೇಹಮಿಲನ ಷಷ್ಟ್ಯಾಬ್ಧಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಮಾಜದ ಮಾಜಿ  ಅಧ್ಯಕ್ಷರು, ಮಹಿಳಾ ಹಾಗೂ ಯುವ ಘಟಕದ ಮಾಜಿ ಅಧ್ಯಕ್ಷರು ಗಳಿಗೆ, ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮವರು ಸಂಘಟಿತರಾಗಬೇಕು, ಅರೆಭಾಷೆ ಮಾತಾಡುತ್ತಾ ಭಾಷೆಯನ್ನು ಬೆಳೆಸಬೇಕು.

ದ.ಕ., ಕೊಡಗು ಗೌಡ ಸಮಾಜದಿಂದ ಸ್ನೇಹ ಮಿಲನ, ಷಷ್ಟ್ಯಾಬ್ದಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ | ಬೆಂಗಳೂರು ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ Read More »

error: Content is protected !!
Scroll to Top